Monday, December 31, 2018

🔥ಹೊಸ ವರ್ಷಾಚರಣೆ ವೇಳೆ ಸಿಲಿಂಡರ್ ಸ್ಫೋಟ: ಏಳು ಮಂದಿಗೆ ಗಾಯ

      ಜನಜಾಗೃತಿ ಸುದ್ಧಿವಾಹಿನಿ

            01 jan 2019

ತುಮಕೂರು: ಹೊಸ ವರ್ಷಾಚರಣೆ ವೇಳೆ ಲೂರ್ದ್ ಮಾತಾ ಚರ್ಚ್​ನಲ್ಲಿ ಸಿಲಿಂಡರ್ ಸ್ಫೋಟಗೊಂಡು 7 ಮಂದಿ ಗಾಯಗೊಂಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

ಬಿದಿರುಮೆಳೆ ತೋಟದ ಮರಿಯಾದಾಸ್, ಥಾಮಸ್, ಸುದೀಪ್ (13), ಕಿರಣಬಾಬು, ಅಂಟನಿ ಫ್ರಾನ್ಸಿಸ್, ರವಿ, ಶಾಂತಿನಗರ ಡಿಪೋ ನಿವಾಸಿ ಶಾಯಿದ್​​(12)ಗೆ ಗಾಯಾಳುಗಳಿ.

ಇನ್ನು ಕಿರಣಬಾಬು ಮತ್ತು ಮರಿಯಾದಾಸ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಮ್ಮ ಚಾನಲ್ ಗೆ ಭೇಟಿ ನೀಡಿ subscribe ಮಾಡಿ Youtube.com/c/janajagrutiTVNews

ಫೇಸ್ಬುಕ್ ನಲ್ಲಿ ಬೆಂಬಲಿಸಲು ಕ್ಲಿಕ್ ಮಾಡಿ https://www.facebook.com/%E0%B2%9C%E0%B2%A8%E0%B2%9C%E0%B2%BE%E0%B2%97%E0%B3%83%E0%B2%A4%E0%B2%BF-%E0%B2%B8%E0%B3%81%E0%B2%A6%E0%B3%8D%E0%B2%A7%E0%B2%BF%E0%B2%B5%E0%B2%BE%E0%B2%B9%E0%B2%BF%E0%B2%A8%E0%B2%BF-474624809612940/

ಭೀಮಾ-ಕೋರೇಗಾಂವ್‌: ಇಂದು 201ನೇ ವರ್ಷಾಚರಣೆ; ಬಿಗಿ ಭದ್ರತೆ

      ಜನಜಾಗೃತಿ ಸುದ್ದಿವಾಹಿನಿ

     01 jan 2019


ಪುಣೆ: ಕೋರೇಗಾಂವ್‌ - ಭೀಮಾ ಐತಿಹಾಸಿಕ ಕದನದ 201ನೇ ವರ್ಷಾಚರಣೆ ಇಂದಿಲ್ಲಿ ನಡೆಯಲಿದ್ದು ಸುಮಾರು ಐದು ಲಕ್ಷ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಭೀಮಾ ಕೋರೇಗಾಂವ್‌ 201ನೇ ವರ್ಷಾಚರಣೆ ಪ್ರಯುಕ್ತ ಸಮಾವೇಶಗೊಳ್ಳವ ಜನರು ಮಹಾರಾಷ್ಟ್ರದ ಪುಣೆ ಜಿಲ್ಲೆಯ ಪೆರ್ಣೆ ಗ್ರಾಮಕ್ಕೆ ಸಮೀಪದ ಜಯ ಸ್ತಂಭಕ್ಕೆ 

ಭೇಟಿ ನೀಡಲಿದ್ದಾರೆ.

ಕಳೆದ ವರ್ಷ ನಡೆದಿದ್ದ ಕಾರ್ಯಕ್ರಮದ ವೇಳೆ ಓರ್ವ ಮೃತಪಟ್ಟು ಇತರ ಅನೇಕರು ಗಾಯಗೊಂಡಿದ್ದ ಹಿನ್ನೆಲೆಯಲ್ಲಿ ಭಾರೀ ಭದ್ರತೆಯನ್ನು ಈ ಬಾರಿ ಆಯೋಜಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ದೊಂಬಿ ನಿಗ್ರಹ ದಳದ ಮೂರು ತಂಡಗಳು ಮತ್ತು ಬಾಂಬ್‌ ವಿಲೇವಾರಿ ದಳದ ತಂಡಗಳನ್ನು ಈ ಬಾರಿ ಮುನ್ನೆಚ್ಚರಿಕೆಯ ಕ್ರಮವಾಗಿ ನಿಯೋಜಿಸಲಾಗಿದೆ.

ಐದು ಸಾವಿರ ಪೊಲೀಸರು, ರಾಜ್ಯ ಮೀಸಲು ಪೊಲೀಸ್‌ ಪಡೆಯ 12 ತಂಡಗಳು, 1,000 ಹೋಮ್‌ ಗಾರ್ಡ್‌ ಸಿಬಂದಿಗಳು ಮತ್ತು 500 ಪರಿಸ್ಥಿತಿ-ಉಸ್ತುವಾರಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ವರದಿಗಳು ತಿಳಿಸಿವೆ.ನಿನ್ನೆ ಸೋಮವಾರ ಮಹಾರಾಷ್ಟ್ರದ ವಿವಿಧ ಭಾಗಗಳಿಂದ 18,000 ಕ್ಕೂ ಅಧಿಕ ಸಂದರ್ಶಕರು ಇಲ್ಲಿಗೆ ಬಂದಿದ್ದಾರೆ.

ನಮ್ಮ ಚಾನಲ್ ಗೆ ಭೇಟಿ ನೀಡಲು ಕ್ಲಿಕ್ ಮಾಡಿ subscribe ಮಾಡಲು ಮರಿಯದಿರಿ Youtube.com/c/janajagrutiTVNew

ಫೇಸ್ಬುಕ್ ನಲ್ಲಿ ಬೆಂಬಲಿಸಲು ಕ್ಲಿಕ್ ಮಾಡಿ https://www.facebook.com/%E0%B2%9C%E0%B2%A8%E0%B2%9C%E0%B2%BE%E0%B2%97%E0%B3%83%E0%B2%A4%E0%B2%BF-%E0%B2%B8%E0%B3%81%E0%B2%A6%E0%B3%8D%E0%B2%A7%E0%B2%BF%E0%B2%B5%E0%B2%BE%E0%B2%B9%E0%B2%BF%E0%B2%A8%E0%B2%BF-474624809612940/

ಬಾಲಿವುಡ್ ಪ್ರಸಿದ್ಧ ನಟ ಖಾದರ್ ಖಾನ್ ಇನ್ನಿಲ್ಲ!

      ಜನಜಾಗೃತಿ ಸುದ್ಧಿವಾಹಿನಿ

     01 jan 2019


ಮುಂಬೈ: ಹೊಸ ವರ್ಷದ ಆರಂಭದಲ್ಲೇ ಬಾಲಿವುಡ್‌ನಲ್ಲಿ ಸೂತಕದ ಛಾಯೆ ಮನೆ ಮಾಡಿದೆ. ಮೆದುಳು ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ಬಾಲಿವುಡ್‌ನ ಮೇರು ನಟ ಖಾದರ್ ಖಾನ್ ತಮ್ಮ 81 ನೆ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ನಟನ ಸಾವಿನ ಸುದ್ದಿಯನ್ನು ಅವರ ಪುತ್ರ ಸರ್ಫರಾಜ್ ಖಚಿತಪಡಿಸಿದ್ದಾರೆ.

ಕಾದರ್ ಪ್ರೊಗ್ರೆಸಿವ್ ಸುಪ್ರಾನ್ಯೂಕ್ಲಿಯರ್ ಪಾಲ್ಸೀ ಎಂಬ ಕಾಯಿಲೆಯಿಂದ ಬಳಲುತ್ತಿದ್ದ ಖಾದರ್ ಖಾನ್, ಕೊನೆಯ ಬಾರಿ 2015ರಲ್ಲಿ ತೆರೆ ಕಂಡ 'ದಿಮಾಗ್ ಕಾ ದಹೀ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ದೀರ್ಘ ಸಮಯದಿಂದ ಅವರು ಕೆನಡಾದಲ್ಲಿರುವ ತಮ್ಮ ಮಗ ಸರ್ಫರಾಜ್ ಹಾಗೂ ಸೊಸೆ ಶಾಹಿಸ್ತಾರೊಂದಿಗಿದ್ದರು. ನಾಲ್ಕು ದಿನಗಳ ಹಿಂದಷ್ಟೇ ಖಾದರ್ ಖಾನ್ ಮಗ ತಂದೆಯ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಮೆದುಳು ನಿಷ್ಕ್ರಿಯಗೊಂಡಿರುವುದಾಗಿ ತಿಳಿಸಿದ್ದರು.

300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಕಾದರ್ ಸಂವಾದ ಲೇಖನಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ತನ್ನ ಆಕರ್ಷಕ ಧ್ವನಿ ಹಾಗೂ ಅದ್ಭುತ ಕಾಮಿಕ್ ಟೈಮಿಂಗ್ ಗೆ ಸುಪ್ರಸಿದ್ಧರಾಗಿರುವ ಕಾದರ್ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ.

90ರ ದಶಕದಲ್ಲಿ ನಟ ಗೋವಿಂದಾ ಹಾಗೂ ಖಾದರ್ ಖಾನ್ ಜೋಡಿಯನ್ನು ಹಿಟ್ ಫಾರ್ಮುಲಾ ಎಂದೇ ಕರೆಯಲಾಗುತ್ತಿತ್ತು. ಇವರಿಬ್ಬರೂ ದೂಲ್ಹೇ ರಾಜಾ, ಕುಲೀ ನಂಬರ್ 1, ರಾಜಾ ಬಾಬೂ ಹಾಗೂ ಆಂಖೆ ಯಂತಹ ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ್ದಾರೆ.

ನಮ್ಮ ಚಾನಲ್ ಗೆ ಭೇಟಿ ನೀಡಿ subscribe ಮಾಡಿ Youtube.com/c/janajagrutiTVNews

ಫೇಸ್ಬುಕ್ ನಲ್ಲಿ ಬೆಂಬಲಿಸಲು https://www.facebook.com/%E0%B2%9C%E0%B2%A8%E0%B2%9C%E0%B2%BE%E0%B2%97%E0%B3%83%E0%B2%A4%E0%B2%BF-%E0%B2%B8%E0%B3%81%E0%B2%A6%E0%B3%8D%E0%B2%A7%E0%B2%BF%E0%B2%B5%E0%B2%BE%E0%B2%B9%E0%B2%BF%E0%B2%A8%E0%B2%BF-474624809612940/

ಜೀವ ಪಣಕ್ಕಿಟ್ಟು ರೈಲಿನ ಚೈನ್‌ ಬಿಡಿಸಿದ ಗಾರ್ಡ್‌!

     ಜನಜಾಗೃತಿ ಸುದ್ಧಿವಾಹಿನಿ

ಜನಜಾಗೃತಿ ಸುದ್ಧಿವಾಹಿನಿಯ ಓದುಗರಿಗೆ ಹಾಗೂ ಸಮಸ್ಥ ವೀಕ್ಷಕರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು 01 jan 2019


ಹುಬ್ಬಳ್ಳಿ: ಶ್ರೀರಂಗಪಟ್ಟಣ ರೈಲ್ವೆ ಸೇತುವೆ ಮೇಲೆ ಕಿಡಿಗೇಡಿಯೊಬ್ಬ ಅಲರಾಂ ಚೈನ್‌ ಎಳೆದಿದ್ದರಿಂದ ರೈಲೊಂದು ನಿಂತ ಘಟನೆ ನಡೆದಿದೆ. ಆದರೆ ರೈಲಿನ ಗಾರ್ಡ್‌ ಎನ್‌.ವಿಷ್ಣುಮೂರ್ತಿ ಎಂಬುವರು ಜೀವದ ಹಂಗು ತೊರೆದು ಈ ಅಪಾಯಕಾರಿ ಸೇತುವೆ ಮೇಲೆ ನಡೆದೇ ಹೋಗಿ ಬೋಗಿಗಳ ನಡುವೆ ಸಿಲುಕಿದ್ದ ಅಲರಾಂ ಚೈನನ್ನು ನಾಜೂಕಾಗಿ ಬಿಡಿಸಿದ್ದಾರೆ.

ಅತ್ಯಂತ ಕ್ಲಿಷ್ಟಕರ ಹಾಗೂ ಜೀವಕ್ಕೆ ಎರವಾಗುವ ಸಾಧ್ಯತೆ ಇದ್ದ ಗಾರ್ಡ್‌ ಅವರ 'ಸಾಹಸ'ವನ್ನು ಪ್ರಯಾಣಿಕರು ವಿಡಿಯೋ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ವಿಷ್ಣುಮೂರ್ತಿ ಅವರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಭಾರಿ ಪ್ರಶಂಸೆ ವ್ಯಕ್ತವಾಗಿದ್ದು, ರೈಲ್ವೆ ಇಲಾಖೆ ಕೂಡ ಅವರನ್ನು ಸನ್ಮಾನಿಸಿದೆ. ಡಿ.26ರಂದು ಚಾಮರಾಜನಗರ- ತಿರುಪತಿ ರೈಲು ಸಂಚರಿಸುತ್ತಿದ್ದಾಗ ಈ ಘಟನೆ ನಡೆದಿದ್ದು, ಸಾಹಸ ಮೆರೆದ ವಿಷ್ಣುಮೂರ್ತಿ ಅವರಿಗೆ 5000 ರು.

ನಗದು ಬಹುಮಾನ ಹಾಗೂ ಪ್ರಶಂಸಾ ಪತ್ರ ನೀಡಲಾಗಿದೆ. ಚೈನು ಎಳೆದವನನ್ನು ಬಂಧಿಸಲಾಗಿದೆ.

ಆಗಿದ್ದೇನು?: ಈ ಘಟನೆ ನಡೆದಿದ್ದು ಕಳೆದ ಡಿಸೆಂಬರ್‌ 26ರಂದು. ಅಂದು ಯಾರೋ ರೈಲಿನ ಅಲರಾಂ ಚೈನನ್ನು ಎಳೆದ ಪರಿಣಾಮ ಚಾಮರಾಜ ನಗರ-ತಿರುಪತಿ ರೈಲು (ಸಂಖ್ಯೆ 16219) ಶ್ರೀರಂಗಪಟ್ಟಣ ಮೇಲ್ಸೇತುವೆ ಮೇಲೆ ನಿಂತುಬಿಟ್ಟಿದೆ.

ಅಲರಾಂ ಚೈನನ್ನು ಯಾರಾದರೂ ಎಳೆದರೆ ಚೈನು ಬೋಗಿಗಳ ಮಧ್ಯೆ ಸಿಲುಕಿ ರೈಲು ನಿಲ್ಲುತ್ತದೆ. ಆಗ ಅದನ್ನು ರೈಲು ಸಿಬ್ಬಂದಿ ಬಿಡಿಸುವುದು ವಾಡಿಕೆ. ಆದರೆ ರೈಲು ಈ ಅಪಾಯಕಾರಿ ಬ್ರಿಜ್‌ ಮೇಲೆ ನಿಂತಿದ್ದರಿಂದ ಅದನ್ನು ಬಿಡಿಸುವುದು ಹೇಗೆ ಎಂಬ ಚಿಂತೆ ರೈಲು ಸಿಬ್ಬಂದಿಗೆ ಎದುರಾಗಿದೆ. ಆದಾಗ್ಯೂ ಇದನ್ನು ಲೆಕ್ಕಿಸದ ರೈಲಿನ ಗಾರ್ಡ್‌ ವಿಷ್ಣುಮೂರ್ತಿ ಅವರು, ಆಪದ್ಬಾಂಧವನಂತೆ ಜೀವದ ಹಂಗನ್ನು ತೊರೆದು ಸೇತುವೆ ಮೇಲೆ ನಡೆದುಕೊಂಡು ಹೋಗಿ ಬೋಗಿಗೆ ಸಿಲುಕಿದ್ದ ಚೈನ್‌ ಬಿಡಿಸಿದ್ದಾರೆ. ಕೇವಲ 10 ನಿಮಿಷದಲ್ಲಿ ಈ ಕೆಲಸ ಪೂರ್ಣಗೊಳಿಸಿದ್ದಾರೆ.

ಬಳಿಕ ಚೈನು ಎಳೆದವರು ಯಾರೆಂದು ವಿಚಾರಿಸಿದಾಗ ವಿನಾಕಾರಣ ಕಿಡಿಗೇಡಿಯೊಬ್ಬ ಈ ಕೃತ್ಯ ಎಸಗಿದ್ದು ಪತ್ತೆಯಾಗಿದೆ. ಆಗ ಆ ಪುಂಡನನ್ನು ಬಂಧಿಸಿ ಪೊಲೀಸ್‌ ವಶಕ್ಕೆ ಒಪ್ಪಿಸಲಾಗಿದೆ.

ಪ್ರಶಂಸೆ, ಸನ್ಮಾನ: ವಿಷ್ಣುಮೂರ್ತಿ ಅವರ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಭಾರಿ ಪ್ರಶಂಸೆ ವ್ಯಕ್ತವಾಗಿದ್ದು, ರೈಲ್ವೆ ಇಲಾಖೆ ಕೂಡ ಗುರುತಿಸಿದೆ. ಹುಬ್ಬಳ್ಳಿ ರೈಲ್‌ ಸೌಧದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ನೈಋುತ್ಯ ರೈಲ್ವೆ ವಲಯದ ಮಹಾಪ್ರಧಾನ ವ್ಯವಸ್ಥಾಪಕ ಅಜಯಕುಮಾರ ಸಿಂಗ್‌ ಅವರು ವಿಷ್ಣುಮೂರ್ತಿ ಅವರಿಗೆ ನಗದು ಬಹುಮಾನ ಹಾಗೂ ಪ್ರಶಂಸಾ ಪತ್ರ ಪ್ರದಾನ ಮಾಡಿದರು.

ಕಾನ್‌ಸ್ಟೇಬಲ್‌ ಆಗಿದ್ದ ಮೂರ್ತಿ!: ವಿಷ್ಣುಮೂರ್ತಿ 1988ರಲ್ಲಿ ಈಶಾನ್ಯ ಗಡಿ ರೈಲ್ವೆ ಲೋಡಿಂಗ್‌ ವಿಭಾಗದಲ್ಲಿ ಆರ್‌ಪಿಎಫ್‌ ಕಾನಸ್ಟೇಬಲ್‌ ಆಗಿ ಸೇರಿದ್ದರು. 1998ರಲ್ಲಿ ತಮಿಳುನಾಡಿನ ತಿರುಚನಾಪಳ್ಳಿಯ 5ನೆಯ ಬಟಾಲಿಯನ್‌ಗೆ ಹೆಡ್‌ಕಾನಸ್ಟೇಬಲ್‌ ಆಗಿ ಬಡ್ತಿ ಹೊಂದಿ, 2004ರಲ್ಲಿ ನೈಋುತ್ಯ ರೈಲ್ವೆ ವಲಯದ ಬೆಂಗಳೂರು ವಿಭಾಗದಲ್ಲಿ ಹಿರಿಯ ವಾಣಿಜ್ಯ ಗುಮಾಸ್ತರಾದರು. 2010ರಿಂದ ಬೆಂಗಳೂರು ವಿಭಾಗದ ಹಿರಿಯ ಪ್ರಯಾಣಿಕ ರೈಲ್ವೆ ಗಾರ್ಡ್‌ ಆಗಿ ಪದೋನ್ನತಿ ಹೊಂದಿದರುಎಂದು ನೈಋುತ್ಯ ರೈಲ್ವೆ ವಲಯದ ಪ್ರಕಟಣೆ ತಿಳಿಸಿದೆ.

ನಮ್ಮ ಚಾನಲ್ ಗೆ ಭೇಟಿ ನೀಡಿ subscribe ಮಾಡಿ ನಿಮ್ಮ ಈ ಚಾನಲ್ ಗೆ ಬೆಂಬಲಿಸಿ Youtube.com/c/janajagrutiTVNews

ಫೇಸ್ಬುಕ್ ನಲ್ಲಿ ಬೆಂಬಲಿಸಲು ಕ್ಲಿಕ್ ಮಾಡಿ https://www.facebook.com/%E0%B2%9C%E0%B2%A8%E0%B2%9C%E0%B2%BE%E0%B2%97%E0%B3%83%E0%B2%A4%E0%B2%BF-%E0%B2%B8%E0%B3%81%E0%B2%A6%E0%B3%8D%E0%B2%A7%E0%B2%BF%E0%B2%B5%E0%B2%BE%E0%B2%B9%E0%B2%BF%E0%B2%A8%E0%B2%BF-474624809612940/

1984 ಸಿಖ್ ವಿರೋಧಿ ದಂಗೆ ಕೇಸ್; ಮಾಂಡೋಲಿ ಜೈಲು ಸೇರಿದ ಸಜ್ಜನ್ ಕುಮಾರ್

ಜನಜಾಗೃತಿ ಸುದ್ಧಿವಾಹಿನಿ


ನವದೆಹಲಿ: 1984ರ ಸಿಖ್ ವಿರೋಧಿ ದಂಗೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿರುವ ಕಾಂಗ್ರೆಸ್ ಮುಖಂಡ ಸಜ್ಜನ್ ಕುಮಾರ್ ಸೋಮವಾರ ಕಾರ್ಕಾಡೂಮಾ ನ್ಯಾಯಾಲಯಕ್ಕೆ ಶರಣಾಗಿದ್ದಾರೆ. ಸಜ್ಜನ್ ಕುಮಾರ್ ಗೆ ಈಶಾನ್ಯ ದೆಹಲಿಯ ಮಾಂಡೋಲಿ ಜೈಲಿಗೆ ಕರೆದೊಯ್ಯುವಂತೆ ಕೋರ್ಟ್ ನಿರ್ದೇಶನ ನೀಡಿದೆ.

1984ರ ಸಿಖ್ ವಿರೋಧಿ ದಂಗೆ ಪ್ರಕರಣದಲ್ಲಿ ಸಜ್ಜನ್ ಕುಮಾರ್ ಅವರನ್ನು ವಿಚಾರಣಾಧೀನ ಕೋರ್ಟ್ ಖುಲಾಸೆಗೊಳಿಸಿ ನೀಡಿದ್ದ ತೀರ್ಪನ್ನು ದೆಹಲಿ ಹೈಕೋರ್ಟ್ ರದ್ದು ಮಾಡಿ ಜೀವಾವಧಿ ಶಿಕ್ಷೆ ಹಾಗೂ 5 ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿತ್ತು.

ದೆಹಲಿ ಹೈಕೋರ್ಟ್ ನೀಡಿರುವ ತೀರ್ಪನ್ನು ಪ್ರಶ್ನಿಸಿ ಸಜ್ಜನ್ ಕುಮಾರ್ ಈಗಾಗಲೇ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಅದರ ವಿಚಾರಣೆ ಬಾಕಿ ಇದೆ. ಸಜ್ಜನ್ ಅವರನ್ನು ಕೋರ್ಟ್ ಮಾಂಡೋಲಿ ಜೈಲಿಗೆ ಕಳುಹಿಸುವಂತೆ ಆದೇಶಿಸಿದೆ.

ಅಷ್ಟೇ ಅಲ್ಲ ಭದ್ರತೆಯ ದೃಷ್ಟಿಯಿಂದ ಪ್ರತ್ಯೇಕ ವಾಹನದಲ್ಲಿ ಅವರನ್ನು ಕರೆದೊಯ್ಯುವಂತೆ ಸೂಚನೆ ನೀಡಿರುವುದಾಗಿ ಸಜ್ಜನ್ ಪರ ವಕೀಲರು ಮಾಧ್ಯಮದವರಿಗೆ ತಿಳಿಸಿದ್ದಾರೆ.

ನಮ್ಮ ಚಾನಲ್ ಗೆ ಭೇಟಿ ನೀಡಿ subscribe ಮಾಡಿ Youtube.com/c/janajagrutiTVNews

ಫೇಸ್ಬುಕ್ ನಲ್ಲಿ ಬೆಂಬಲಿಸಲು ಭೇಟಿ ನೀಡಿ https://www.facebook.com/%E0%B2%9C%E0%B2%A8%E0%B2%9C%E0%B2%BE%E0%B2%97%E0%B3%83%E0%B2%A4%E0%B2%BF-%E0%B2%B8%E0%B3%81%E0%B2%A6%E0%B3%8D%E0%B2%A7%E0%B2%BF%E0%B2%B5%E0%B2%BE%E0%B2%B9%E0%B2%BF%E0%B2%A8%E0%B2%BF-474624809612940/

Sunday, December 30, 2018

ಮೋದಿಗೆ ತಿರುಗೇಟು

ಜನಜಾಗೃತಿ ಸುದ್ಧಿವಾಹಿನಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಸಾಲಮನ್ನಾ ಕುರಿತು ದಾರಿ ತಪ್ಪಿಸುವ ಹೇಳಿಕೆ ನೀಡುತ್ತಿರುವುದು ದೌರ್ಭಾಗ್ಯ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಕರ್ನಾಟಕ ರಾಜ್ಯದ ರೈತರ ಸಾಲಮನ್ನಾ ಕುರಿತು ಪ್ರಧಾನ ಮಂತ್ರಿಯವರ ಹೇಳಿಕೆ ರಾಜ್ಯದ ರೈತರೂ ಸೇರಿ ಇಡೀ ದೇಶದ ಜನರ ದಾರಿ ತಪ್ಪಿಸುವಂತಿದೆ. ಇಂತಹ ಹೇಳಿಕೆ ಅತ್ಯಂತ ದುರದೃಷ್ಟಕರ ಹಾಗೂ ದೇಶದ ದೌರ್ಭಾಗ್ಯ ಎಂದು ಸಿಎಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿಗಳ ಕಚೇರಿ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಕರ್ನಾಟಕ ಸರ್ಕಾರ ಸಾರ್ವಜನಿಕರ ಮತ್ತು ತೆರಿಗೆದಾರರ ಹಣ ಪೋಲಾಗದಂತೆ, ಅತಿ ಎಚ್ಚರಿಕೆಯಿಂದ ಈ ಯೋಜನೆಯನ್ನು ಜಾರಿಗೊಳಿಸಿ ಅರ್ಹ ರೈತರಿಗೆ ಹಣ ಸೇರುವಂತೆ ಮಾಡುತ್ತಿದೆ. ಪ್ರತಿಯೊಬ್ಬ ಅರ್ಹ ರೈತನಿಗೆ ಈ ಯೋಜನೆಯ ಲಾಭ ದೊರೆಯುತ್ತದೆ ಎನ್ನುವುದಕ್ಕೆ ಖಾತ್ರಿ ಇದೆ.

ರಾಜ್ಯದಲ್ಲಿ ಜಾರಿಗೆ ತಂದಿರುವ ಈ ವಿನೂತನ ಮಾದರಿಯನ್ನು ಅಳವಡಿಸಿಕೊಳ್ಳುವ ಬಗ್ಗೆ ಇತರ ರಾಜ್ಯಗಳೂ ಮುಂದೆ ಬಂದಿವೆ. ಆಧಾರ್‌ ಮತ್ತು ಭೂ ದಾಖಲಾತಿಗಳ ಡಿಜಿಟಲ್‌ ದೃಢೀಕರಣ ಮತ್ತು ಪಡಿತರ ಚೀಟಿ ಇವುಗಳಿಂದ ಕೂಡಿರುವ ಮನ್ನಾ ಪ್ರಕ್ರಿಯೆ ವ್ಯವಸ್ಥೆಯು ಅತ್ಯಂತ ಸುರಕ್ಷಿತ ಮತ್ತು ದುರುಪಯೋಗಕ್ಕೆ ಆಸ್ಪದ ನೀಡುವುದಿಲ್ಲ. ಅರ್ಹ ರೈತರ ಖಾತೆಗೆ ಹಣ ಜಮೆಗೊಳ್ಳುತ್ತದೆ ಎಂದು ಸಿಎಂ ಹೇಳಿದ್ದಾರೆ.

60 ಸಾವಿರ ರೈತರಿಗೆ ಪ್ರಯೋಜನ

ಈವರೆಗೆ ಸುಮಾರು 60 ಸಾವಿರ ರೈತರ 350 ಕೋಟಿ ರೂ. ಸಾಲ ಮನ್ನಾದ ಮೊತ್ತವನ್ನು ನೇರವಾಗಿ ಅವರ ಖಾತೆಗೆ ಜಮೆ ಮಾಡಲಾಗಿದೆ. ಮುಂದಿನ ವಾರದಲ್ಲಿ ಇನ್ನೂ 1 ಲಕ್ಷ ರೈತರಿಗೆ 400 ಕೋಟಿ ರೂ.ಗಳನ್ನು ಜಮೆ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.

ವಾಣಿಜ್ಯ ಬ್ಯಾಂಕುಗಳಲ್ಲಿ ಬೆಳೆ ಸಾಲ ಪಡೆದ ಸುಮಾರು 21 ಲಕ್ಷ ರೈತರಲ್ಲಿ ಕೇವಲ 10 ದಿನಗಳಲ್ಲಿ 8.5 ಲಕ್ಷ ರೈತರು ತಮ್ಮ ಆಧಾರ್‌, ರೇಷನ್‌ ಕಾರ್ಡ್‌ ಹಾಗೂ ಪಹಣಿಯ ಮಾಹಿತಿಗಳನ್ನು ಒದಗಿಸಿದ್ದಾರೆ. ಈ ಪ್ರಕ್ರಿಯೆ 2019ರ ಜನವರಿ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ. ಈ ಅವಧಿಯೊಳಗೆ ಎಲ್ಲ ಅರ್ಹ ರೈತರನ್ನು ನೋಂದಾಯಿಸಲಾಗುವುದು. ವಾಸ್ತವ ಅಂಶಗಳು ಕಣ್ಣು ಮುಂದೆಯೇ ಇವೆ. ಹೀಗಿದ್ದರೂ ಪ್ರಧಾನಿ ಹುದ್ದೆಯಲ್ಲಿರುವವರು ಜವಾಬ್ದಾರಿ ಮರೆತು ಇಂತಹ ಹೇಳಿಕೆ ನೀಡಿದ್ದು ಸರಿಯಲ್ಲ ಎಂದು ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

ನಮ್ಮ ಚಾನಲ್ ಗೆ ಭೇಟಿ ನೀಡಿ subscribe ಮಾಡಿ Youtube.com/c/janajagrutiTVNews

ಫೇಸ್ಬುಕ್ ನಲ್ಲಿ ಬೆಂಬಲಿಸಲು ಕ್ಲಿಕ್ ಮಾಡಿ https://www.facebook.com/%E0%B2%9C%E0%B2%A8%E0%B2%9C%E0%B2%BE%E0%B2%97%E0%B3%83%E0%B2%A4%E0%B2%BF-%E0%B2%B8%E0%B3%81%E0%B2%A6%E0%B3%8D%E0%B2%A7%E0%B2%BF%E0%B2%B5%E0%B2%BE%E0%B2%B9%E0%B2%BF%E0%B2%A8%E0%B2%BF-474624809612940/

ಬಿಜೆಪಿಯ ದಲಿತ ವೋಟ್‌ ಬ್ಯಾಂಕ್ ಕುಸಿತ: ಆಂತರಿಕ ಸಮೀಕ್ಷೆಯಿಂದ ಬಹಿರಂಗ

     ಜನಜಾಗೃತಿ ಸುದ್ಧಿವಾಹಿನಿ

ಹೊಸದಿಲ್ಲಿ: ಪಂಚರಾಜ್ಯಗಳ ಚುನಾವಣೆಯಲ್ಲಿ ಹೀನಾಯವಾಗಿ ಸೋತ ಬಿಜೆಪಿಗೆ ಮತ್ತೊಂದು ಆಘಾತಕಾರಿ ಸುದ್ದಿ ಎದುರಾಗಿದೆ. ಪಕ್ಷದ ದಲಿತ ವೋಟ್‌ ಬ್ಯಾಂಕ್ ಕುಸಿಯುತ್ತಿದೆ ಎಂಬ ಅಂಶ, ಬಿಜೆಪಿಯ ಆಂತರಿಕ ಸಮೀಕ್ಷೆಯಿಂದ ತಿಳಿದುಬಂದಿದ್ದು, ಪಕ್ಷದ ಮುಖಂಡರನ್ನು ಚಿಂತೆಗೀಡು ಮಾಡಿದೆ. 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಇದರ ಪರಿಣಾಮ ಏನಾಗುತ್ತದೆ ಎಂಬ ಆತಂಕ ಬಿಜೆಪಿಯಲ್ಲಿ ಮನೆಮಾಡಿದೆ.


ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನದ ಮೀಸಲು ಕ್ಷೇತ್ರಗಳಲ್ಲಿ ನಡೆಸಿದ ಸಾಧನೆಯ ಆಂತರಿಕ ಮೌಲ್ಯಮಾಪನದಲ್ಲಿ ಈ ಆಘಾತಕಾರಿ ಅಂಶ ತಿಳಿದುಬಂದಿದೆ. ವಿಧಾನಸಭಾ ಚುನಾವಣೆಯ ಫಲಿತಾಂಶದ ಆಧಾರದಲ್ಲಿ ಇಡೀ ಲೋಕಸಭಾ ಕ್ಷೇತ್ರದ ಮತಗಳನ್ನು ಲೆಕ್ಕ ಹಾಕಿದರೆ, ಮಧ್ಯಪ್ರದೇಶದಲ್ಲಿ ಬಿಜೆಪಿ 10 ಮೀಸಲು ಕ್ಷೇತ್ರಗಳ ಪೈಕಿ 8 ಕ್ಷೇತ್ರಗಳನ್ನು ಕಳೆದುಕೊಳ್ಳಲಿದೆ.


ಛತ್ತೀಸ್‌ಗಢದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಮೀಸಲಾಗಿರುವ ಎಲ್ಲ ಐದು ಕ್ಷೇತ್ರಗಳಲ್ಲೂ ಸೋಲು ಅನುಭವಿಸಲಿದೆ. ಮಧ್ಯಪ್ರದೇಶದ ಎಲ್ಲ ಬುಡಕಟ್ಟು ಕ್ಷೇತ್ರಗಳಲ್ಲಿ ಬಿಜೆಪಿಗೆ ವೈಟ್‌ವಾಶ್ ಕಾದಿದೆ. ಉಜ್ಜಯಿನಿ ಮತ್ತು ಟಿಕಂಘರ್ ಸ್ಥಾನಗಳಷ್ಟೇ ಬಿಜೆಪಿ ಪಾಲಿಗೆ ಉಳಿಯಲಿವೆ.


ಕಳೆದ ಲೋಕಸಭಾ ಚುನಾವಣೆಯಲ್ಲಿ ದೇಶದ 131 ಮೀಸಲು ಸ್ಥಾನಗಳ ಪೈಕಿ 67ನ್ನು ಗೆದ್ದುಕೊಂಡಿದ್ದ ಬಿಜೆಪಿಗೆ ಈ ಬಾರಿ ಅಷ್ಟೊಂದು ಸ್ಥಾನಗಳನ್ನು ಗೆಲ್ಲುವುದು ಅಸಾಧ್ಯ ಎನಿಸಲಿದೆ ಎಂದು ಸಮೀಕ್ಷೆ ಹೇಳಿದೆ.


ಮಧ್ಯಪ್ರದೇಶದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ 35 ಮೀಸಲು ಸ್ಥಾನಗಳ ಪೈಕಿ 28 ಸ್ಥಾನಗಳನ್ನು ಬಗಲಿಗೆ ಹಾಕಿಕೊಂಡಿದ್ದ ಬಿಜೆಪಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕೇವಲ 18 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿತ್ತು. ಅಂತೆಯೇ ರಾಜಸ್ಥಾನದಲ್ಲಿ 32 ಮೀಸಲು ಸ್ಥಾನಗಳನ್ನು ಹಿಂದಿನ ಚುನಾವಣೆಯಲ್ಲಿ ಗೆದ್ದಿದ್ದ ಬಿಜೆಪಿ ಈ ಬಾರಿ ಕೇವಲ 12 ಸ್ಥಾನ ಗೆದ್ದಿತ್ತು. ಅಂತೆಯೇ ಛತ್ತೀಸ್‌ಗಢದಲ್ಲಿ ಬಿಜೆಪಿ ಬಲ ಒಂಬತ್ತು ಮೀಸಲು ಕ್ಷೇತ್ರಗಳಿಂದ ಎರಡಕ್ಕೆ ಇಳಿದಿದೆ.


ದಲಿತರ ಹತ್ಯೆ ಪ್ರಕರಣಗಳ ಬಗ್ಗೆ ವಿರೋಧ ಪಕ್ಷಗಳು ಮಾಡುತ್ತಿರುವ ದಾಳಿಯನ್ನು ಪಕ್ಷದ ಮುಖಂಡರು ಸಮರ್ಥವಾಗಿ ಎದುರಿಸದಿರುವುದೇ ಪಕ್ಷಕ್ಕೆ ಮಾರಕವಾಗಿದೆ ಎಂದು ಆಂತರಿಕ ಸಮೀಕ್ಷೆ ಸ್ಪಷ್ಟಪಡಿಸಿದೆ.

ನಮ್ಮ ಚಾನಲ್ ಗೆ ಭೇಟಿ ನೀಡಿ subscribe ಮಾಡಿ Youtube.com/c/janajagrutiTVNews

ಫೇಸ್ಬುಕ್ ನಲ್ಲಿ ಬೆಂಬಲಿಸಲು ಕ್ಲಿಕ್ ಮಾಡಿ https://www.facebook.com/%E0%B2%9C%E0%B2%A8%E0%B2%9C%E0%B2%BE%E0%B2%97%E0%B3%83%E0%B2%A4%E0%B2%BF-%E0%B2%B8%E0%B3%81%E0%B2%A6%E0%B3%8D%E0%B2%A7%E0%B2%BF%E0%B2%B5%E0%B2%BE%E0%B2%B9%E0%B2%BF%E0%B2%A8%E0%B2%BF-474624809612940/

ಗಾಂಜಾ ಸೇವನೆ ಮಾಡುತ್ತಿದ್ದ ಯುವಕನನ್ನು ಬಂಧಿಸಿದ ಪೊಲೀಸರು

ಜನಜಾಗೃತಿ ಸುದ್ಧಿವಾಹಿನಿ


 

ಮಂಗಳೂರು: ನಗರದ ತಾಲೂಕು ಕೆಲಿಂಜಾರು ಗ್ರಾಮದ ಕುಪ್ಪೆಪದವು ಎಂಬಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಆರೋಪದ ಮೇಲೆ ಯುವಕನನ್ನು ಬಜಪೆ ಠಾಣಾ ಪೊಲೀಸರು ಬಂಧಿಸಿದ್ದಾರೆ.


ಕೊಳವೂರು ನಿವಾಸಿ ತಂಜಿಲ್ ಬಂಧಿತ ಆರೋಪಿ.


ಯುವಕ ಗಾಂಜಾ ಸೇವನೆ ಮಾಡುತ್ತಿರುವುದಾಗಿ ಬಂದ ಮಾಹಿತಿ ಮೇರೆಗೆ ಬಜಪೆ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ಎಸ್ ಪರಶಿವಮೂರ್ತಿ ಮತ್ತು ತಂಡದವರು ಕಾರ್ಯಾಚರಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯ ಮೇಲೆ ಪ್ರಕರಣ ದಾಖಲಿಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ನಮ್ಮ ಚಾನಲ್ ಗೆ ಭೇಟಿ ನೀಡಿ subscribe ಮಾಡಿ Youtube.com/c/janajagrutiTVNews

ಫೇಸ್ಬುಕ್ ನಲ್ಲಿ ಬೆಂಬಲಿಸಲು ಕ್ಲಿಕ್ ಮಾಡಿ https://www.facebook.com/%E0%B2%9C%E0%B2%A8%E0%B2%9C%E0%B2%BE%E0%B2%97%E0%B3%83%E0%B2%A4%E0%B2%BF-%E0%B2%B8%E0%B3%81%E0%B2%A6%E0%B3%8D%E0%B2%A7%E0%B2%BF%E0%B2%B5%E0%B2%BE%E0%B2%B9%E0%B2%BF%E0%B2%A8%E0%B2%BF-474624809612940/

ಲೋಕಸಭೆ ಚುನಾವಣೆಗೆ ಬಿಜೆಪಿ ಭರ್ಜರಿ ಸಿದ್ದತೆ : ಇಂದು ಐದು ಜಿಲ್ಲೆಗಳ ಮುಖಂಡರೊಂದಿಗೆ ಬಿಎಸ್ ವೈ ಸಭೆ

      ಜನಜಾಗೃತಿ ಸುದ್ಧಿವಾಹಿನಿ

ಬೆಂಗಳೂರು: 2019 ರ ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಲು ಬಿಜೆಪಿ ಭರ್ಜರಿ ಸಿದ್ದತೆ ನಡೆಸುತ್ತಿದ್ದು, ಇಂದು ಐದು ಜಿಲ್ಲೆಗಳಲ್ಲಿ ಬಿಜೆಪಿ ಮಹತ್ವದ ಸಭೆ ಆಯೋಜಿಸಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಈ ಸಭೆ ನಡೆಯುತ್ತಿದ್ದು, ಈ ಸಭೆಯಲ್ಲಿ ತುಮಕೂರು, ಚಿತ್ರದುರ್ಗ, ಚಾಮರಾಜನಗರ, ಹಾಸನ ಮತ್ತು ಮಂಡ್ಯ ಜಿಲ್ಲೆಗಳ ಮುಖಂಡರೊಂದಿಗೆ ಬಿಎಸ್ವೈ ಚರ್ಚೆ ನಡೆಸಲಿದ್ದಾರೆ.


ಈ ಐದು ಜಿಲ್ಲೆಗಳ ಸಭೆಯಲ್ಲಿ ಲೋಕಸಭೆ ಚುನಾವಣೆಗೆ ಸೂಕ್ತ ಅಭ್ಯರ್ಥಿ ಆಯ್ಕೆ, ಚುನಾವಣೆ ತಂತ್ರಗಾರಿಕೆ ಮತ್ತು ಪ್ರಚಾರದ ಕುರಿತು ಚರ್ಚೆ ನಡೆಸಲಾಗುತ್ತದೆ ಎನ್ನಲಾಗಿದೆ. ಸದ್ಯ ಬಿಎಸ್ ವೈ ದೆಹಲಿಯಿಂದ ಬೆಂಗಳೂರಿಗೆ ಬಂದಿದ್ದು, ಇಂದಿನ ಸಭೆ ಮಹತ್ವ ಪಡೆದುಕೊಂಡಿದೆ.

ನಮ್ಮ ಚಾನಲ್ ಗೆ ಭೇಟಿ ನೀಡಿ subscribe ಮಾಡಲು ಮರೆಯದಿರಿ Youtube.com/c/janajagrutiTVNews

ಫೇಸ್ಬುಕ್ ನಲ್ಲಿ ಬೆಂಬಲಿಸಲು ಕ್ಲಿಕ್ ಮಾಡಿhttps://www.facebook.com/%E0%B2%9C%E0%B2%A8%E0%B2%9C%E0%B2%BE%E0%B2%97%E0%B3%83%E0%B2%A4%E0%B2%BF-%E0%B2%B8%E0%B3%81%E0%B2%A6%E0%B3%8D%E0%B2%A7%E0%B2%BF%E0%B2%B5%E0%B2%BE%E0%B2%B9%E0%B2%BF%E0%B2%A8%E0%B2%BF-474624809612940/ 

ಅಂಡಮಾನ್ ದ್ವೀಪಗಳ ಹೆಸರು ಬದಲಿಸಿದ ನರೇಂದ್ರ ಮೋದಿ

        ಜನಜಾಗೃತಿ ಸುದ್ಧಿವಾಹಿನಿ

ಪೋರ್ಟ್‌ಬ್ಲೇರ್: ಸುಭಾಷ್ ಚಂದ್ರ ಬೋಸ್ ಅವರ ಗೌರವಾರ್ಥ ಪ್ರಧಾನಿ ನರೇಂದ್ರ ಮೋದಿ ಅವರು ಅಂಡಮಾನ್- ನಿಕೋಬಾರ್‌ನ ಮೂರು ದ್ವೀಪಗಳಿಗೆ ಹೊಸ ಹೆಸರು ನಾಮಕರಣ ಮಾಡಿದ್ದಾರೆ.

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಅಂಡಮಾನ್‌ಗೆ ಭೇಟಿ ನೀಡಿದ 75 ನೇ ವರ್ಷಾಚರಣೆ ಕಾರ್ಯಕ್ರಮದ ನಿಮಿತ್ತ ಆಜಾದ್ ಹಿಂದ್ ಫೌಜ್ ಯ ಟೋಪಿ ಧರಿಸಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.


ರೋಸ್ ಐಲ್ಯಾಂಡ್‌ನ ಹೆಸರನ್ನು ನೇತಾಜಿ ಸುಭಾಷ್ ಚಂದ್ರ ಬೋಸ್ ಐಲ್ಯಾಂಡ್ ಎಂದೂ, ಹ್ಯಾವ್‌ಲಾಕ್ ದ್ವೀಪದ ಹೆಸರನ್ನು ಸ್ವರಾಜ್ ಎಂದೂ, ನೀಲ್ ಐಲ್ಯಾಂಡ್ ಹೆಸರನ್ನು ಶಹೀದ್ ಐಲ್ಯಾಂಡ್ ಎಂದೂ ಮರು ನಾಮಕರಣಗೊಳಿಸಿದರು.

ನಮ್ಮ ಚಾನಲ್ ಗೆ ಭೇಟಿ ನೀಡಿ Youtube.com/c/janajagrutiTVNews

ಫೇಸ್ಬುಕ್ ನಲ್ಲಿ ಬೆಂಬಲಿಸಲು ಕ್ಲಿಕ್ ಮಾಡಿ https://www.facebook.com/%E0%B2%9C%E0%B2%A8%E0%B2%9C%E0%B2%BE%E0%B2%97%E0%B3%83%E0%B2%A4%E0%B2%BF-%E0%B2%B8%E0%B3%81%E0%B2%A6%E0%B3%8D%E0%B2%A7%E0%B2%BF%E0%B2%B5%E0%B2%BE%E0%B2%B9%E0%B2%BF%E0%B2%A8%E0%B2%BF-474624809612940/

ಮಂಗಳೂರಲ್ಲಿಅಕ್ರಮ ದಾಸ್ತಾನು ಇರಿಸಿದ್ದ ಗೋಡೌನ್ ಮೇಲೆ ದಾಳಿ

        ಜನಜಾಗೃತಿ ಸುದ್ಧಿವಾಹಿನಿ


ಮಂಗಳೂರು: ಬಿಸಿಯೂಟ ಮತ್ತು ಕ್ಷೀರ ಭಾಗ್ಯ ಯೋಜನೆಯ ಸಾಮಗ್ರಿಗಳ ಅಕ್ರಮ ದಾಸ್ತಾನು ಇರಿಸಿದ್ದ ಗೋಡೌನ್ ಗೆ ಪೊಲೀಸರು ದಾಳಿ ನಡೆಸಿ ಲಾರಿ ಹಾಗೂ ಬಿಸಿಯೂಟ ಸಾಮಗ್ರಿ ವಶಪಡಿಸಿಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ.


ನಗರದ ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯ ದಂಬೇಲ್ ಬಳಿಯ ಗೋಡೌನ್ ಗೆ ಮಂಗಳೂರು ಸಿಸಿಬಿ ಪೊಲೀಸರು ಮತ್ತು ಜಿಲ್ಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.


ನಗರದ ದಂಬೇಲ್ ಗುರುಕೃಪಾ ಆಯಿಲ್ ಮಿಲ್ ನಲ್ಲಿ ಸರ್ಕಾರದಿಂದ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಹಾಗೂ ಕ್ಷೀರ ಭಾಗ್ಯ ಯೋಜನೆಗಳ ಅನ್ವಯ ಒದಗಿಸಲಾಗುವ ಅಕ್ಕಿ, ತೊಗರಿಬೇಳೆ ಹಾಲಿನ ಹುಡಿ ಪ್ಯಾಕೆಟ್ ಸಾಮಗ್ರಿಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿರುವ ಬಗ್ಗೆ ಖಚಿತ ಮಾಹಿತಿ ದೊರೆತಿತ್ತು.


ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಮತ್ತು ಜಿಲ್ಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.


ಈ ಪ್ರಕರಣಕ್ಕೆ ಸಂಭಂದಿಸಿದಂತೆ ಕುಸ್ಟಗಿ ನಿವಾಸಿ ಬಸವರಾಜು, ಮಂಗಳೂರು ಅಶೋಕ ನಗರ ನಿವಾಸಿ ಚಂದ್ರ ಕುಮಾರ್, ಚಿಲಿಂಬಿ ನಿವಾಸಿ ರಕ್ಷಿತ್ ಅವರನ್ನು ಬಂಧಿಸಲಾಗಿದೆ.


ಬಂಧಿತರಿಂದ 25 ಕೆಜಿ ನಂದಿನಿ ಹಾಲಿನ ಪುಡಿ, ಒಂದು ಕ್ವಿಂಟಾಲ್ ತೊಗರಿಬೇಳೆ, 2.5 ಕ್ವಿಂಟಾಲ್ ಅಕ್ಕಿ ಹಾಗೂ ಸಾಗಾಟಕ್ಕೆ ಉಪಯೋಗಿಸಿದ ಲಾರಿಯನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ 10.49 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.

ನಮ್ಮ ಚಾನಲ್ ಗೆ ಇಂದೇ ಭೇಟಿ ನೀಡಿ ಹೇಚಿನ ಸುದ್ಧಿಗಳನ್ನು ವೀಕ್ಷಿಸಿ Youtube.com/c/janajagrutiTVNews

ಫೇಸ್ಬುಕ್ ನಲ್ಲಿ ಬೆಂಬಲಿಸಲು ಕ್ಲಿಕ್ ಮಾಡಿ https://www.facebook.com/%E0%B2%9C%E0%B2%A8%E0%B2%9C%E0%B2%BE%E0%B2%97%E0%B3%83%E0%B2%A4%E0%B2%BF-%E0%B2%B8%E0%B3%81%E0%B2%A6%E0%B3%8D%E0%B2%A7%E0%B2%BF%E0%B2%B5%E0%B2%BE%E0%B2%B9%E0%B2%BF%E0%B2%A8%E0%B2%BF-474624809612940/

ಲೋಕಸಭೆ ಚುನಾವಣೆಗೆ ಬಿಜೆಪಿ ಹುರಿಯಾಳುಗಳ ಪಟ್ಟಿ ಫೈನಲ್..?

      ಜನಜಾಗೃತಿ ಸುದ್ಧಿವಾಹಿನಿ


ಬೆಂಗಳೂರು: ಲೋಕಸಭೆ ಚುನಾವಣೆಗೆ ಭರ್ಜರಿ ಸಿದ್ಧತೆ ಆರಂಭಿಸಿರುವ ಬಿಜೆಪಿ ಮುಂದಿನ ತಿಂಗಳ ಮೊದಲ ವಾರದಲ್ಲಿ ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸೂಚನೆ ಮೇರೆಗೆ ರಾಜ್ಯ ಘಟಕ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಈಗಾಗಲೇ ಸಭೆಗಳನ್ನು ನಡೆಸಿದ್ದಾರೆ. ಕಳೆದು ಒಂದು ವಾರದಿಂದ ನಿರಂತರವಾಗಿ ಸಂಸದರು, ರಾಜ್ಯಸಭಾ ಸದಸ್ಯರು, ಪದಾಧಿಕಾರಿಗಳು, ಕಾರ್ಯಕರ್ತರು ಸೇರಿದಂತೆ ಆಕಾಂಕ್ಷಿಗಳ ಜೊತೆ ಸರಣಿ ಸಭೆಗಳನ್ನು ಆರಂಭಿಸಿದ್ದಾರೆ.


ಜನವರಿ 10ರೊಳಗೆ 28 ಲೋಕಸಭಾ ಕ್ಷೇತ್ರಗಳಿಗೂ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿ ಬಿಜೆಪಿ ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಿಕೊಡಬೇಕೆಂದು ಅಮಿತ್ ಷಾ ಎಲ್ಲ ರಾಜ್ಯಗಳ ಅಧ್ಯಕ್ಷರಿಗೆ ಸೂಚನೆ ಕೊಟ್ಟಿದ್ದಾರೆ.


ಈಗಾಗಲೇ 8ರಿಂದ 10 ಲೋಕಸಭಾ ಕ್ಷೇತ್ರಗಳಲ್ಲಿ ಸಭೆ ನಡೆಸಿರುವ ಯಡಿಯೂರಪ್ಪ ಒಂದಕ್ಕಿಂತ ಹೆಚ್ಚು ಆಕಾಂಕ್ಷಿಗಳಿರುವ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಹೊಣೆಗಾರಿಕೆ ಹೈಕಮಾಂಡ್‍ಗೆ ನೀಡಲಿದ್ದಾರೆ.


*ಹಾಲಿ ಸಂಸದರಿಗೆ ಟಿಕೆಟ್*


ಲೋಕಸಭೆ ಚುನಾವಣೆ ವೇಳೆ ಯಾವುದೇ ಹೊಸ ಪ್ರಯೋಗ ಮಾಡದಿರಲು ತೀರ್ಮಾನಿಸಿರುವ ಬಿಜೆಪಿ ಹಾಲಿ ಸಂಸದರಿಗೆ ಮತ್ತೆ ಮಣೆ ಹಾಕಲು ಮುಂದಾಗಿದೆ.

ಒಂದೆರಡು ಕ್ಷೇತ್ರಗಳನ್ನು ಹೊರತುಪಡಿಸಿದರೆ ಬಹುತೇಕ ಹಾಲಿ ಸಂಸದರೇ ಕಣಕ್ಕಿಳಿಯುವುದು ಖಚಿತವಾಗಿದೆ. ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಸ್ಪರ್ಧಿಸಲು ಹಿಂದೇಟು ಹಾಕಿದ್ದಾರೆ.


ಇದೇ ರೀತಿ ದಕ್ಷಿಣ ಕನ್ನಡದಲ್ಲಿ ಹಾಲಿ ಸಂಸದ ನಳಿನ್‍ಕುಮಾರ್ ಕಟೀಲ್‍ಗೆ ಟಿಕೆಟ್ ನೀಡುವ ಬಗ್ಗೆ ಈವರೆಗೂ ಪಕ್ಷದಲ್ಲಿ ಯಾವುದೇ ತೀರ್ಮಾನವಾಗಿಲ್ಲ. ಹೊಸಬರಿಗೆ ಟಿಕೆಟ್ ನೀಡಬೇಕೆಂದು ಆರ್‍ಎಸ್‍ಎಸ್ ಸೇರಿದಂತೆ ಸ್ಥಳೀಯ ಕಾರ್ಯಕರ್ತರು ಒತ್ತಾಯಿಸಿದ್ದಾರೆ.


ಹೀಗಾಗಿ ಈ ಕ್ಷೇತ್ರದಲ್ಲಿ ಹೊಸ ಅಭ್ಯರ್ಥಿಗಳು ಕಣಕ್ಕಿಳಿದರೆ ಅಚ್ಚರಿಯಿಲ್ಲ. ಒಂದು ವೇಳೆ ಶೋಭಾ ಕರಂದ್ಲಾಜೆ ಸ್ಪರ್ಧಿಸಲು ಹಿಂದೇಟು ಹಾಕಿದರೆ ಈ ಕ್ಷೇತ್ರದಿಂದ ಮಾಜಿ ಸಚಿವ ಜಯಪ್ರಕಾಶ್ ಹೆಗಡೆ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಈವರೆಗೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಸತತ 6 ಬಾರಿ ಗೆದ್ದು ದಾಖಲೆ ನಿರ್ಮಿಸಿ ಇತ್ತೀಚೆಗಷ್ಟೇ ನಿಧನರಾದ ಅನಂತಕುಮಾರ್ ಅವರಿಂದ ತೆರವಾಗಿರುವ ಕ್ಷೇತ್ರಕ್ಕೆ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್‍ಗೆ ಟಿಕೆಟ್ ಬಹುತೇಕ ಖಚಿತವಾಗಿದೆ.


ಆದರೆ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ತೇಜಸ್ವಿನಿ ಅವರು ಈವರೆಗೂ ಯಾವುದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿಲ್ಲ. ಈ ಕ್ಷೇತ್ರಕ್ಕೆ ಟಿಕೆಟ್ ಯಾರಿಗೆ ನೀಡಬೇಕೆಂಬುದನ್ನು ವರಿಷ್ಠರೇ ನಿರ್ಧರಿಸಲಿದ್ದಾರೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಹಾಲಿ ಸಚಿವ ಡಿ.ವಿ.ಸದಾನಂದಗೌಡ ಸ್ಪರ್ಧಿಸುವ ಬಗ್ಗೆ ಇನ್ನು ಗೊಂದಲದಲ್ಲೇ ಇದ್ದಾರೆ.


ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಈ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿರುವುದು ಒಂದು ಕಾರಣ. ಹೀಗಾಗಿ ಅವರು ಉಡುಪಿ-ಚಿಕ್ಕಮಗಳೂರಿನತ್ತ ವಲಸೆ ಹೋಗುವ ಬಗ್ಗೆ ಚಿಂತನೆ ನಡೆಸಿದ್ದಾರೆ. ಆದರೆ ಇದೇ ಕ್ಷೇತ್ರದಿಂದಲೇ ಸ್ಪರ್ಧಿಸಬೇಕೆಂದು ವರಿಷ್ಠರು ಹಾಗೂ ಯಡಿಯೂರಪ್ಪ ಸೂಚಿಸಿದ್ದಾರೆ. ಬೆಂಗಳೂರು ಸೆಂಟ್ರಲ್‍ನಿಂದ ಪಿ.ಸಿ.ಮೋಹನ್, ದಾವಣಗೆರೆಯಿಂದ ಜಿ.ಎಂ.ಸಿದ್ದೇಶ್, ಶಿವಮೊಗ್ಗದಿಂದ ಬಿ.ವೈ.ರಾಘವೇಂದ್ರ, ಕೊಪ್ಪಳದಿಂದ ಕರಡಿ ಸಂಗಣ್ಣ ಸೇರಿದಂತೆ ಹಾಲಿ ಸಂಸದರಿಗೆ ಮಣೆ ಹಾಕಬೇಕಾದ ಅನಿವಾರ್ಯತೆ ಇದೆ.


ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಮಾಜಿ ಸಚಿವರಾದ ಬಿ.ಎನ್.ಬಚ್ಚೇಗೌಡ ಮತ್ತು ಕಟ್ಟಾ ಸುಬ್ರಹ್ಮಣ್ಯ ನಾಯ್ಡು ನಡುವೆ ಬಿರುಸಿನ ಸ್ಪರ್ಧೆ ಏರ್ಪಟ್ಟಿದೆ. ಕಳೆದ ಬಾರಿ ಕಡಿಮೆ ಮತದ ಅಂತರದಿಂದ ಪರಾಭವಗೊಂಡಿದ್ದ ಬಚ್ಚೇಗೌಡ ಇದೊಂದು ಬಾರಿ ಟಿಕೆಟ್ ನೀಡಬೇಕೆಂದು ವರಿಷ್ಠರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸ್ಪರ್ಧಿಸಲು ಹಿಂದೇಟು ಹಾಕಿದರೆ ಬಚ್ಚೇಗೌಡರಿಗೆ ಟಿಕೆಟ್ ಬಹುತೇಕ ಖಚಿತವಾಗಲಿದೆ.


ಕೋಲಾರ ಮಿಸಲು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿಯಲ್ಲಿ ಮೂವರ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಮಾಜಿ ವಿಧಾನಪರಿಷತ್ ಸದಸ್ಯ ಡಿ.ಎಸ್.ವೀರಯ್ಯ, ಚಿ.ನಾ.ರಾಮು ಹಾಗೂ ನಾರಾಯಣಸ್ವಾಮಿ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಈಗಾಗಲೇ ಮೂವರು ಆಕಾಂಕ್ಷಿಗಳು ಕ್ಷೇತ್ರದಲ್ಲಿ ಕೆಲಸ ಆರಂಭಿಸಿದ್ದು, ನಮಗೇ ಟಿಕೆಟ್ ನೀಡಬೇಕೆಂದು ವರಿಷ್ಠರಲ್ಲಿ ಕೋರಿದ್ದಾರೆ.


ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಿಂದ ಮಾಜಿ ಸಚಿವ ಎಂ.ಶಿವಣ್ಣ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಆದರೆ ಈ ಕ್ಷೇತ್ರದಿಂದ ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅವರನ್ನು ಕಣಕ್ಕಿಳಿಸುವ ಬಗ್ಗೆ ಬಿಜೆಪಿ ಚಿಂತನೆ ನಡೆಸಿದೆ. ಆದರೆ ಸಕ್ರಿಯ ರಾಜಕಾರಣದಿಂದ ಈಗಾಗಲೇ ದೂರ ಉಳಿದಿರುವ ಶ್ರೀನಿವಾಸ್ ಪ್ರಸಾದ್ ಪುನಃ ಸ್ಪರ್ಧಿಸುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗುತ್ತಿದೆ. ಇನ್ನು ಬಳ್ಳಾರಿ , ರಾಯಚೂರು, ಕಲಬುರಗಿ, ಚಿಕ್ಕೋಡಿ ಕ್ಷೇತ್ರಗಳಿಗೆ ಪರಿಸ್ಥಿತಿಗೆ ಅನುಗುಣವಾಗಿ ಅಭ್ಯರ್ಥಿಗಳನ್ನು ಘೋಷಿಸಲು ಪಕ್ಷ ತೀರ್ಮಾನಿಸಿದೆ.

visit our channel by link Youtube.com/c/janajagrutiTVNews

Follow us in facebook https://www.facebook.com/%E0%B2%9C%E0%B2%A8%E0%B2%9C%E0%B2%BE%E0%B2%97%E0%B3%83%E0%B2%A4%E0%B2%BF-%E0%B2%B8%E0%B3%81%E0%B2%A6%E0%B3%8D%E0%B2%A7%E0%B2%BF%E0%B2%B5%E0%B2%BE%E0%B2%B9%E0%B2%BF%E0%B2%A8%E0%B2%BF-474624809612940/

ಅಪಘಾತಕ್ಕೀಡಾದ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಶಾಸಕ ಅಜಯ್ ಸಿಂಗ್

     ಜನಜಾಗೃತಿ ಸುದ್ಧಿವಾಹಿನಿ

ಕಲಬುರಗಿ: ಅಪಘಾತಕ್ಕೀಡಾಗಿ ಗಾಯಗೊಂಡು ಕಾರಿನಲ್ಲಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸುವ ಮೂಲಕ ಜೇವರ್ಗಿ ಶಾಸಕ ಅಜಯ್ ಸಿಂಗ್ ಮಾನವೀಯತೆ ಮೆರೆದಿದ್ದಾರೆ.


ಈ ಕುರಿತು ತಮ್ಮ ಫೇಸ್ ಬುಕ್ ನಲ್ಲಿ ಅಜಯ್ ಸಿಂಗ್ ಅವರೇ ಫೋಟೋ ಸಮೇತ ಬರೆದುಕೊಂಡಿದ್ದು, ಇಜೇರಿ ಹಾಗೂ ಚಿಗರಳ್ಳಿ ಗ್ರಾಮದ ನಡುವೆ ಅಪಘಾತವಾದ ಸ್ಥಳಕ್ಕೆ ಭೇಟಿ ನೀಡಿ ಜೆಸಿಬಿ ಮೂಲಕ ಅಪಘಾತವಾದ ಗಾಯಾಳುಗಳಿಗೆ ಹೊರತೆಗೆದು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕಳುಹಿಸಲಾಯಿತು ಎಂದು ಬರೆದುಕೊಂಡಿದ್ದಾರೆ.


ನಿಂತಿದ್ದ ಟ್ರ್ಯಾಕ್ಟರ್ ಗೆ ಹಿಂಬದಿಯಿಂದ ಬಂದು ಕಾರ್ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಚಾಲಕ ಇಮಾಮ್ ಅಲಿ ಗಂಭೀರವಾಗಿ ಗಾಯಗೊಂಡಿದ್ದರು. ಈ ವೇಳೆ ಅಜಯ್ ಸಿಂಗ್ ಗಾಯಾಳು ಇಮಾಮ್ ಅಲಿಯನ್ನು ಜೇವರ್ಗಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.

visit our channel now Youtube.com/c/janajagrutiTVNews

Follow us in facebook https://www.facebook.com/%E0%B2%9C%E0%B2%A8%E0%B2%9C%E0%B2%BE%E0%B2%97%E0%B3%83%E0%B2%A4%E0%B2%BF-%E0%B2%B8%E0%B3%81%E0%B2%A6%E0%B3%8D%E0%B2%A7%E0%B2%BF%E0%B2%B5%E0%B2%BE%E0%B2%B9%E0%B2%BF%E0%B2%A8%E0%B2%BF-474624809612940/

Saturday, December 29, 2018

ನಾಸಿಕ್-ಪುಣೆ ಹೆದ್ದಾರಿಯಲ್ಲಿ 26 ಲಕ್ಷ ರೂ. ಮೌಲ್ಯದ ಗುಟ್ಕಾ ವಶ

      ಜನಜಾಗೃತಿ ಸುದ್ಧಿವಾಹಿನಿ

ನಾಸಿಕ್: ಮಹಾರಾಷ್ಟ್ರದ ನಾಸಿಕ್-ಪುಣೆ ಹೆದ್ದಾರಿಯಲ್ಲಿ ಟ್ರಕ್ಕೊಂದರ ಮೂಲಕ ಅಕ್ರಮವಾಗಿ ಸಾಗಿಸುತ್ತಿದ್ದ 26 ಲಕ್ಷ ರೂ. ಮೌಲ್ಯದ ಗುಟ್ಕಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪರಾರಿಯಾಗಿರುವ ಟ್ರಕ್ ಚಾಲಕನಿಗಾಗಿ ಶೋಧ ನಡೆಸಲಾಗುತ್ತಿದೆ.

ಖಚಿತ ಸುಳಿವಿನ ಮೇರೆಗೆ ಹೆದ್ದಾರಿಯ ನಾರಾಯಣ ಬಾಪು ನಗರ್ ಬಡಾವಣೆ ಬಳಿ ಪೊಲೀಸರು ಟ್ರಕ್ಕೊಂದನ್ನು ತಡೆದು ನಿಲ್ಲಿಸಿ ಪರಿಶೀಲಿಸಿದಾಗ ಅದರಲ್ಲಿ 68 ಚೀಲಗಳಲ್ಲಿ ಇದ್ದ ಅಕ್ರಮ ಗುಟ್ಕಾ ಪತ್ತೆಯಾಯಿತು ಎಂದು ಇನ್ಸ್‍ಪೆಕ್ಟರ್ ಪ್ರಭಾಕರ್ ರಾಯ್ಟೆ ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಗುಟ್ಕಾ ಮತ್ತು ಸುವಾಸಿತ ತಂಬಾಕು ತಯಾರಿಕೆ ಮತ್ತು ಮಾರಾಟದ ಮೇಲೆ ನಿಷೇಧ ವಿಧಿಸಲಾಗಿದೆ.

Visit our channel by link Youtube.com/c/janajagrutiTVNews

Follow us in facebook https://www.facebook.com/%E0%B2%9C%E0%B2%A8%E0%B2%9C%E0%B2%BE%E0%B2%97%E0%B3%83%E0%B2%A4%E0%B2%BF-%E0%B2%B8%E0%B3%81%E0%B2%A6%E0%B3%8D%E0%B2%A7%E0%B2%BF%E0%B2%B5%E0%B2%BE%E0%B2%B9%E0%B2%BF%E0%B2%A8%E0%B2%BF-474624809612940/

22 ತಿಂಗಳ ಜೈಲು ಶಿಕ್ಷೆ ಬಳಿಕ ಶಾರುಖ್‌ ನೋಡಲು ಬಂದಿದ್ದ ಪಾಕ್ ಪ್ರಜೆಗೆ ಬಿಡುಗಡೆ!

        ಜನಜಾಗೃತಿ ಸುದ್ಧಿವಾಹಿನಿ


ಪೇಶಾವರ: ಬಾಲಿವುಡ್‌ ನಟರಾದ ಶಾರುಖ್‌ ಖಾನ್‌ ಹಾಗೂ ಕಾಜೋಲ್‌ ಅವರನ್ನು ಭೇಟಿ ಮಾಡುವ ಹೆಬ್ಬಯಕೆಯೊಂದಿಗೆ ಗಡಿ ದಾಟಿ ಬಂದಿದ್ದ ಪಾಕಿಸ್ತಾನದ 22 ವರ್ಷದ ಯುವಕನೊಬ್ಬ 22 ತಿಂಗಳ ಸೆರೆಮನೆವಾಸದ ಬಳಿಕ ತನ್ನ ತವರಿಗೆ ಮರಳಿದ್ದಾನೆ.

ಅದ್ಭುತ ಪರಿಸರ ಹೊಂದಿರುವ ಪಾಕಿಸ್ತಾನದ ಸ್ವಾತ್‌ ಜಿಲ್ಲೆಯ ಮಿಂಗೋರಾ ನಿವಾಸಿ ಅಬ್ದುಲ್ಲಾ ಎಂಬಾತನೇ ತವರಿಗೆ ಮರಳಿದಾತ. ಪ್ರತಿದಿನ ಸಂಜೆ ವಾಘಾ ಗಡಿಯಲ್ಲಿ ಕಾರ್ಯಕ್ರಮವಿರುತ್ತದೆ. 2017ರ ಮೇ 25ರಂದು ಕಾರ್ಯಕ್ರಮ ನೋಡಲು ಬಂದಿದ್ದ ಅಬ್ದುಲ್ಲಾ, ಬಳಿಕ ಗಡಿ ದಾಟಿ ಭಾರತದೊಳಕ್ಕೆ ಕಾಲಿಟ್ಟಿದ್ದ. ಬಿಎಸ್‌ಎಫ್‌ ಯೋಧರು ಪ್ರಶ್ನಿಸಿದಾಗ, ಶಾರುಖ್‌ ಹಾಗೂ ಕಾಜೋಲ್‌ರನ್ನು ಭೇಟಿ ಮಾಡಬೇಕು ಎಂದು ತಿಳಿಸಿದ್ದ. ಆತನನ್ನು ವಶಕ್ಕೆ ಪಡೆದಿದ್ದ ಯೋಧರು ಪೊಲೀಸರಿಗೆ ಒಪ್ಪಿಸಿದ್ದರು. ಬಳಿಕ ಅಮೃತಸರ ಜೈಲಿಗೆ ಸ್ಥಳಾಂತರಿಸಲಾಗಿತ್ತು.


ನವದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್‌ ಕಚೇರಿ ತುರ್ತು ಪ್ರಯಾಣ ದಾಖಲೆಗಳನ್ನು ನೀಡಿದ ಹಿನ್ನೆಲೆಯಲ್ಲಿ ವಾಘಾ ಗಡಿ ಮೂಲಕ ಈತನನ್ನು ಕಳುಹಿಸಿಕೊಡಲಾಗಿದೆ. ತಾನು ಶಾರುಖ್‌, ಕಾಜೋಲ್‌ ಅವರ ಅಭಿಮಾನಿ. ಭಾರತಕ್ಕೆ ಭೇಟಿ ನೀಡಲು 2 ಬಾರಿ ವೀಸಾ ಕೋರಿ ಅರ್ಜಿ ಸಲ್ಲಿಸಿದ್ದೆ. ತಿರಸ್ಕರಿಸಲಾಗಿತ್ತು. ಅವರ ಭೇಟಿಗೆ ಅವಕಾಶ ಕಲ್ಪಿಸಿ ಎಂದು ಜೈಲಿನಲ್ಲಿದ್ದಾಗಲೂ ಭಾರತ ಸರ್ಕಾರಕ್ಕೆ ಪತ್ರ ಬರೆದಿದ್ದೆ. ಪ್ರಯೋಜನವಾಗಲಿಲ್ಲ. ಪಾಕಿಸ್ತಾನ ಪ್ರಜೆಗಳು ಅಕ್ರಮವಾಗಿ ಭಾರತ ಪ್ರವೇಶಿಸಬೇಡಿ. ನಾನು ಕೂಡ ಹೋಗುವುದಿಲ್ಲ ಎಂದು ತಿಳಿಸಿದ್ದಾನೆ.


ಇತ್ತೀಚೆಗಷ್ಟೇ ಪಾಕಿಸ್ತಾನವು ಇದೇ ರೀತಿ ಪಾಕ್‌ಗೆ ಹೋಗಿ ಸಿಲುಕಿದ್ದ ಭಾರತೀಯ ಹಮೀದ್‌ ಅನ್ಸಾರಿ ಎಂಬುವರನ್ನು 6 ವರ್ಷದ ಬಂಧನದಿಂದ ಬಿಡುಗಡೆ ಮಾಡಿತ್ತು.

Visit our channel by this link Youtube.com/c/janajagrutiTVNews

Visit our page and follow in facebook https://www.facebook.com/%E0%B2%9C%E0%B2%A8%E0%B2%9C%E0%B2%BE%E0%B2%97%E0%B3%83%E0%B2%A4%E0%B2%BF-%E0%B2%B8%E0%B3%81%E0%B2%A6%E0%B3%8D%E0%B2%A7%E0%B2%BF%E0%B2%B5%E0%B2%BE%E0%B2%B9%E0%B2%BF%E0%B2%A8%E0%B2%BF-474624809612940/

ಲಾರಿ ಡ್ರೈವರ್ ರೂಪದ ದೇವರನ್ನೊಮ್ಮೆ ನೋಡಿ: ಪ್ರಯಾಣಿಕರ ಜೀವ ಉಳಿಸಿದ್ಹೇಗೆ?

      ಜನಜಾಗೃತಿ ಸುದ್ಧಿವಾಹಿನಿ

ಕಾರವಾರ: ದೇವರು ಎಲ್ಲ ಕಡೆ ಇದ್ದಾನೆ. ಅವಶ್ಯಕತೆ ಬಿದ್ದಾಗ ಬೇರೆ ಬೇರೆ ರೂಪದಲ್ಲಿ ಆತ ಅವತರಿಸುತ್ತಾನೆ ಅಂತಾರೆ. ಈ ಮಾತು ಅಕ್ಷರಶಃ ನಿಜ ನೋಡಿ.

ಬಸ್ ಚಾಲಕನ ಸಮಯ ಪ್ರಜ್ಞೆ ಹಾಗೂ ಲಾರಿ ಚಾಲಕನ ಚಾಣಾಕ್ಷತೆಯಿಂದ 70 ಕ್ಕೂ ಅಧಿಕ ಪ್ರಯಾಣಿಕರ ಜೀವ ಉಳಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟ ಪ್ರದೇಶದ ಇಳಿಜಾರಿನಲ್ಲಿ ನಡೆದಿದೆ.

ಲಾರಿ ಚಾಲಕ ಈರಣ್ಣ ಹಾಗೂ ವಾಯವ್ಯ ಕರ್ನಾಟಕ ಸಾರಿಗೆ ಬಸ್ ಚಾಲಕ ಕತ್ತಿ ಕಾನಾಪುರ್ ತಮ್ಮ ಜೀವದ ಹಂಗನ್ನೇ ತೊರೆದು ಬಸ್ ನಲ್ಲಿ ಪ್ರಯಾಣಿಸುತ್ತಿದ್ದ 70 ಜನರ ಪ್ರಾಣ ಕಾಪಾಡಿದ್ದಾರೆ.

ಬ್ರೇಕ್ ಫೇಲ್ ಆಗಿದ್ದ ಬಸ್ಸನ್ನು ಪದೇ ಪದೇ ತನ್ನ ಲಾರಿಗೆ ಗುದ್ದಿಸಿಕೊಂಡು ಪ್ರಯಾಣಿಕರನ್ನು ಅಪಾಯದಿಂದ ರಕ್ಷಿಸಿದ್ದಾರೆ.

ಗದಗದಿಂದ ಕಾರವಾರ ಕಡೆಗೆ ಹೋಗುತ್ತಿದ್ದ ಬಸ್ ಅರಬೈಲ್ ಪ್ರದೇಶದ ಇಳಿಜಾರಿನಲ್ಲಿ ಬ್ರೇಕ್ ಫೇಲ್ ಆಗಿದೆ. ಇದರಿಂದಾಗಿ ಬಸ್ ಕಂದಕಕ್ಕೆ ಬಿದ್ದು ದೊಡ್ಡ ಅನಾಹುತಾಗುವ ಸಾಧ್ಯತೆ ಹೆಚ್ಚಾಗಿತ್ತು.

ಇಂತಹ ಕಠಿಣ ಸಂದರ್ಭದಲ್ಲಿ ಬಸ್ ಚಾಲಕ ಮುಂದೆ ಚಲಿಸುತ್ತಿದ್ದ ಲಾರಿಗೆ ಎರಡು ಬಾರಿ ಡಿಕ್ಕಿ ಹೊಡೆದಿದ್ದಾನೆ. ಬಸ್ ನ ಬ್ರೇಕ್ ಫೇಲ್ ಆಗಿದೆ ಎಂದು ಅಂದಾಜಿಸಿದ ಲಾರಿ ಚಾಲಕ ಪದೇ ಪದೇ ಡಿಕ್ಕಿ ಹೊಡೆಸಿಕೊಳ್ಳುತ್ತಲೇ ನಿಧಾನವಾಗಿ ಬಂದಿದ್ದಾನೆ. ನಂತರ ಬಸ್ಸಿನ ವೇಗ ಕಡಿಮೆಯಾಗಿದೆ. ಹೀಗೆ ಸತತ ನಾಲ್ಕು ಕಿಲೋ ಮೀಟರ್ ವರೆಗೂ ಸಾಗಿದ ನಂತರ ಬಸ್ ನಿಂತಿದೆ.

ಕರ್ತವ್ಯ ನಿಷ್ಠೆ ಹಾಗೂ ಸಮಯ ಪ್ರಜ್ಞೆಯಿಂದಾಗಿ 70 ಜನರ ಜೀವ ಉಳಿಸಿದ ಚಾಲಕರ ಕಾರ್ಯದ ಬಗ್ಗೆ ಎಲ್ಲೆಡೆ ಪ್ರಶಂಸೆಯ ಮಾತುಗಳು ಕೇಳಿ ಬರುತ್ತಿವೆ.

Visit our channel by link Youtube.com/c/janajagrutiTVNews 

Follow us in facebook https://www.facebook.com/%E0%B2%9C%E0%B2%A8%E0%B2%9C%E0%B2%BE%E0%B2%97%E0%B3%83%E0%B2%A4%E0%B2%BF-%E0%B2%B8%E0%B3%81%E0%B2%A6%E0%B3%8D%E0%B2%A7%E0%B2%BF%E0%B2%B5%E0%B2%BE%E0%B2%B9%E0%B2%BF%E0%B2%A8%E0%B2%BF-474624809612940/

ಜೆಡಿಎಸ್ ನವರೇನು ಕೈಗೆ ಬಳೆ ತೊಟ್ಟುಕೊಂಡು ಕುಳಿತಿಲ್ಲ : ಶಾಸಕ ಅನ್ನದಾನಿ

        ಜನಜಾಗೃತಿ ಸುದ್ಧಿವಾಹಿನಿ


ಮಂಡ್ಯ: ಕುಮಾರಸ್ವಾಮಿ ಅವರಿಗೆ ಸಮ್ಮಿಶ್ರ ಸರ್ಕಾರವನ್ನು ಮುನ್ನಡೆಸುವ ಸಾಮರ್ಥ್ಯ ಇದೆ. ಅವರು ಸರ್ಕಾರವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸುತ್ತಾರೆ. ಆದರೆ ತಾಲೂಕಿನಲ್ಲಿ ನಡೆಯುತ್ತಿರುವ ಕೆಲವು ಘಟನೆಗಳ ಬಗ್ಗೆ ಅಸಮಾಧಾನ ಇದೆ ಎಂದು ಮಳವಳ್ಳಿ ಶಾಸಕ ಅನ್ನದಾನಿ ಹೇಳಿದ್ದಾರೆ.


ಮಳವಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ' ಸಮ್ಮಿಶ್ರ ಸರ್ಕಾರ ರಚನೆಯಾದ ಸಮಯದಿಂದ ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಕಾರ್ಯ ಮಾಡುತ್ತಿದ್ದೇನೆ. ಆದರೆ ಇದೇ ರೀತಿ ಅವರ ಕಾರ್ಯ ಮುಂದುವರಿದರೆ ನಾವು ಸುಮ್ಮನೆ ಇರುವುದಿಲ್ಲ. ಜನತಾದಳದವರೇನು ಕೈಗೆ ಬಳೆ ತೊಟ್ಟುಕೊಂಡು ಕುಳಿತಿಲ್ಲ ಎಂದು ವಾಗ್ದಾಳಿ ನಡೆಸಿದರು.


ಸಮ್ಮಿಶ್ರ ಸರ್ಕಾರ ರಚನೆಯಾದ ಸಮಯದಿಂದಲೂ ಮೈತ್ರಿ ಧರ್ಮಕ್ಕೆ ಧಕ್ಕೆ ಆಗದಂತೆ ಕೆಲಸ ಮಾಡುತ್ತಿದ್ದು, ಇಲ್ಲಿಯವರೆಗೂ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಿದ್ದೇನೆ.


ಆದರೆ ತಾಲೂಕಿನಲ್ಲಿ ಇದಕ್ಕೆ ವಿರುದ್ಧವಾಗಿ ಕೆಲ ಘಟನೆಗಳು ನಡೆಯುತ್ತಿದ್ದು, ಇದೇ ರೀತಿ ಮುಂದುವರಿದರೆ ಸುಮ್ಮನಿರೋಲ್ಲ ಜೆಡಿಎಸ್ ನವರೇನು ಕೈಗೆ ಬಳೆ ತೊಟ್ಟುಕೊಂಡು ಕುಳಿತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Visit our channel by link Youtube.com/c/janajagrutiTVNews

Follow in Facebook https://www.facebook.com/%E0%B2%9C%E0%B2%A8%E0%B2%9C%E0%B2%BE%E0%B2%97%E0%B3%83%E0%B2%A4%E0%B2%BF-%E0%B2%B8%E0%B3%81%E0%B2%A6%E0%B3%8D%E0%B2%A7%E0%B2%BF%E0%B2%B5%E0%B2%BE%E0%B2%B9%E0%B2%BF%E0%B2%A8%E0%B2%BF-474624809612940/

ಈಶ್ವರಪ್ಪನಿಗೆ ಬುದ್ಧಿ ಕಮ್ಮಿ: ಏಕವಚನದಲ್ಲೇ ಸಿದ್ದು ಟೀಕೆ

       ಜನಜಾಗೃತಿ ಸುದ್ಧಿವಾಹಿನಿ

ಬಾಗಲಕೋಟೆ: 'ನಾನೇಕೆ ಅತೃಪ್ತಿಗೊಳ್ಳಲಿ. ನಾನೇಕೆ ಅತೃಪ್ತರ ನಾಯಕನಾಗಲಿ. ಈಶ್ವರಪ್ಪನಿಗೆ ಬುದ್ಧಿ ಕಮ್ಮಿ. ಹೀಗಾಗಿ ಏನೇನೋ ಮಾತನಾಡುತ್ತಾನೆ' ಎಂದು ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಏಕವಚನದಲ್ಲೇ ಹರಿಹಾಯ್ದರು. ಬಾದಾಮಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪನಿಗೆ ಪೂರ್ತಿ ಅತೃಪ್ತಿ ಇರಬಹುದು. ಅತೃಪ್ತಿ ಅಧಿಕಾರದಲ್ಲಿ ಇರದವರಿಗೆ ಇರುತ್ತೆ. ಹೀಗಾಗಿ ಈಶ್ವರಪ್ಪನಿಗೆ ಇರಬಹುದು ಎಂದು ಲೇವಡಿ ಮಾಡಿದ ಅವರು, ಮೆದುಳು ಇಲ್ಲದ ಈಶ್ವರಪ್ಪನಿಗೆ ಸಹಜವಾಗಿ ಬುದ್ಧಿ ಕಮ್ಮಿ ಇದೆ ಎಂದರು.


ನನಗೆ ಅಧಿಕಾರ ಬಂದಾಗಿದೆ. ರಾಜ್ಯದಲ್ಲಿ ಸಿಎಂ ಹುದ್ದೆಗಿಂತ ದೊಡ್ಡದು ಯಾವುದಾದರೂ ಇದೆಯಾ? ನನಗೆ ಸಿಎಂ ಹುದ್ದೆ ಸಿಕ್ಕಾಗಿದೆ. ನನ್ನ ಜೀವನದಲ್ಲಿ ಯಾವತ್ತೂ ಅಧಿಕಾರದ ಹಿಂದೆ ಹೋದವನಲ್ಲ.


ಐದು ವರ್ಷ ಮುಖ್ಯಮಂತ್ರಿಯಾಗಿದ್ದೇನೆ. ಅಂತಹದರಲ್ಲಿ ಯಾವ ಅತೃಪ್ತಿ ಬರಬೇಕು. ರಾಜ್ಯದಲ್ಲಿಯೂ ಈಗ ನಮ್ಮದೆ ಸರ್ಕಾರವಿದೆ ಎಂದರು. ಈ ಮೂಲಕ ತಾವು ಅಧಿಕಾರದಲ್ಲಿ ಇದ್ದಂತೆ ಎಂದು ಪರೋಕ್ಷವಾಗಿ ಟಾಂಗ್‌ ಕೊಟ್ಟರು.


ಖಾತೆ ಹಂಚಿಕೆಯಲ್ಲಿನ ಜಟಾಪಟಿ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಖಾತೆ ಹಂಚಿಕೆಯನ್ನು ಹೈ-ಕಮಾಂಡನವರು ತೀರ್ಮಾನಿಸುತ್ತಾರೆ ಎಂದಷ್ಟೇ ಹೇಳಿದರು.

Visit our channel now and subscribe Youtube.com/c/janajagrutiTVNews

Follow in facebook https://www.facebook.com/%E0%B2%9C%E0%B2%A8%E0%B2%9C%E0%B2%BE%E0%B2%97%E0%B3%83%E0%B2%A4%E0%B2%BF-%E0%B2%B8%E0%B3%81%E0%B2%A6%E0%B3%8D%E0%B2%A7%E0%B2%BF%E0%B2%B5%E0%B2%BE%E0%B2%B9%E0%B2%BF%E0%B2%A8%E0%B2%BF-474624809612940/

'ಶೂ ಭಾಗ್ಯ ಯೋಜನೆ' ಜಾರಿ ಹಿಂದಿದೆ ಮನಕಲಕುವ ಕಥೆ : ಸಿದ್ದರಾಮಯ್ಯ ನೆನಪು

        ಜನಜಾಗೃತಿ ಸುದ್ಧಿವಾಹಿನಿ

ಬಾಗಲಕೋಟೆ: ಶಾಲಾ ಮಕ್ಕಳಿಗೆ ಶೂ ಭಾಗ್ಯ ಯೋಜನೆ ಜಾರಿಗೆ ತಂದಿರುವ ಕುರಿತಂತೆ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಶಾಲಾ ದಿನಗಳನ್ನು ನೆನಪಿಸಿಕೊಂಡಿದ್ದಾರೆ.


ಬಾದಾಮಿಯಲ್ಲಿ ಪುಸ್ತಕ ಪ್ರಾಧಿಕಾರದ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾವು ಶಾಲಾ ದಿನಗಳಲ್ಲಿ ಟೈರ್ ನಿಂದ ತಯಾರಿಸಿದ ಚಪ್ಪಲಿ ಧರಿಸಿ ಹೋಗುತ್ತಿದ್ದೇವು. ಈಗಿನ ಮಕ್ಕಳಿಗೆ ಇಂತಹ ತೊಂದರೆ ಆಗಬಾರದು ಎಂದು ಹೇಳಿ ಶೂ ಭಾಗ್ಯ ಯೋಜನೆ ಜಾರಿ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.


ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರು, ನಾನು ಶಾಲೆಗೆ ಹೋಗುವಾಗ ಟೈರ್ ಚಪ್ಪಲಿ ಧರಿಸುತ್ತಿದೆ. ಇಂತಹ ತೊಂದರೆ ಬರಬಾರದೆಂದು ವಿದ್ಯಾರ್ಥಿಗಳಿಗೆ ಶೂ ಭಾಗ್ಯ ಜಾರಿಗೆ ತಂದಿದ್ದೇವೆ ಎಂದು ಹೇಳಿದರು.


ಇನ್ನು ಬದಾಮಿಯ ಕನಕ ಜಯಂತಿ ಕಾರ್ಯಕ್ರಮದ ವೇಳೆ ಸಿದ್ದರಾಮಯ್ಯ ಅವರು ಸ್ವತಃ ಡೋಲು ಬಾರಿಸಿ ಗಮನ ಸೆಳೆದರು.


ಆದರೆ ಈ ವೇಳೆ ಡೋಲು ಬಾರಿಸುವ ಕೋಲಿನ ಸಿಬಿರು ಚುಚ್ಚಿ ಸಿದ್ದರಾಮಯ್ಯ ಅವರ ಬೆರಳಿಗೆ ಗಾಯವಾಯಿತು. ಕೂಡಲೇ ಕಾರ್ಯಕರ್ತರು ಪ್ರಥಮ ಚಿಕಿತ್ಸೆ ನೀಡಿದ ಘಟನೆ ನಡೆಯಿತು

Visit our Channel now Youtube.com/c/janajagrutiTVNews

Follow in facebook https://www.facebook.com/%E0%B2%9C%E0%B2%A8%E0%B2%9C%E0%B2%BE%E0%B2%97%E0%B3%83%E0%B2%A4%E0%B2%BF-%E0%B2%B8%E0%B3%81%E0%B2%A6%E0%B3%8D%E0%B2%A7%E0%B2%BF%E0%B2%B5%E0%B2%BE%E0%B2%B9%E0%B2%BF%E0%B2%A8%E0%B2%BF-474624809612940/

Friday, December 28, 2018

ಭ್ರಷ್ಟರ ಬೇಟೆಯಾಡಿದ್ದ ‘ಸಿಂಗಂ’ಈಗ ನೆನಪು ಮಾತ್ರ

      ಜನಜಾಗೃತಿ ಸುದ್ಧಿವಾಹಿನಿ

ಬೆಂಗಳೂರ್ : ,ಡಿ.29- ಕರ್ತವ್ಯ ಪರತೆ, ಮಾನವೀಯತೆ, ಸಾಮಾಜಿಕ ಕಳಕಳಿಯುಳ್ಳವರಾಗಿದ್ದ ಖಡಕ್ ಪೊಲೀಸ್ ಅಧಿಕಾರಿ ಮಧುಕರ ಶೆಟ್ಟಿ ಇದೀಗ ನೆನಪು ಮಾತ್ರ.. ಕರ್ನಾಟಕ ರಾಜ್ಯದಲ್ಲಿ ತಾಂಡವವಾಡುತ್ತಿದ್ದ ಭ್ರಷ್ಟಾಚಾರವನ್ನು ಮತ್ತು ಭ್ರಷ್ಟರನ್ನು ಬೇಟೆಯಾಡುತ್ತಿದ್ದ ಲೋಕಾಯುಕ್ತ ಸಂಸ್ಥೆಯಲ್ಲಿ ಖಡಕ್ ಅಧಿಕಾರಿ ಎಂದೇ ಮಧುಕರ್ ಶೆಟ್ಟಿ ಜನ ಜನಿತರು.

ಲೋಕಾಯುಕ್ತ ಎಸ್ಪಿಯಾಗಿ ನೇಮಕಗೊಂಡ ಎರಡೇ ತಿಂಗಳಿಗೆ ಎರಡು ಜಿಲ್ಲೆಗಳ ಎಸ್ಪಿಗಳನ್ನು ಟ್ರ್ಯಾಪ್ ಮಾಡಿ ಲಂಚ ಪಡೆಯುವಾಗ ಬಂಧಿಸಿ ಜೈಲಿಗಟ್ಟುವ ಮೂಲಕ ಲೋಕಾಯುಕ್ತದಲ್ಲೂ ಭ್ರಷ್ಟಾಚಾರವಿದೆ ಎಂದು ತೋರಿಸಿಕೊಟ್ಟ ದಿಟ್ಟ ಅಧಿಕಾರಿ ಮಧುಕರ ಶೆಟ್ಟಿ.

ಗಣಿ ಹಗರಣ, ಬೆಂಗಳೂರು ವಿಮಾನ ನಿಲ್ದಾಣದ ಬಳಿಯ ಭೂಕಬಳಿಕೆ ಸೇರಿದಂತೆ ಅನೇಕ ಪ್ರಕರಣಗಳಲ್ಲಿ ಯಾರ ಮುಲಾಜಿಗೂ ಒಳಗಾಗದೆ ವಿಚಾರಣೆ ನಡೆಸಿ ತಪ್ತಿತಸ್ಥರು ಎಷ್ಟೇ ಪ್ರಭಾವಿಯಾಗಿದ್ದರೂ ಜೈಲಿಗಟ್ಟದೇ ಬಿಡುತ್ತಿರಲಿಲ್ಲ. ಹಗಲು ರಾತ್ರಿಯೆನ್ನದೇ ದುಡಿಯುತ್ತಿದ್ದ ಮಧುಕರ ಶೆಟ್ಟಿಯವರು ದಕ್ಷ, ಕಾಯಕ ನಿಷ್ಠ ಅಧಿಕಾರಿ.

ಖ್ಯಾತ ಪತ್ರಕರ್ತ ದಿವಂಗತ ವಡ್ಡರ್ಸೆ ರಘುರಾಮ್ ಶೆಟ್ಟಿ ಅವರ ಪುತ್ರ ,1999ರ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿರುವ ಮಧುಕರ್ ಶೆಟ್ಟಿ, ಕರ್ನಾಟಕದ ಉಡುಪಿ ಜಿಲ್ಲೆಯವರು.ಅವರು ಹೊಸದಿಲ್ಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಿಂದ ಸಮಾಜಶಾಸ್ತ್ರದಲ್ಲಿ ಎಂ.ಎ. ಮತ್ತು ನ್ಯೂಯಾರ್ಕ್ ನ ಯೂನಿವರ್ಸಿಟಿಯಲ್ಲಿ ಪಿ.ಎಚ್.ಡಿ ಪದವಿ ಪಡೆದಿದ್ದರು. ಚಿಕ್ಕಮಗಳೂರು ಎಸ್ಪಿಯಾಗಿ, ಲೋಕಾಯುಕ್ತ ಎಸ್ಪಿಯಾಗಿ ಅವರು ಖಡಕ್ ಹಾಗೂ ಜನಪರ ಅಧಿಕಾರಿಯಾಗಿ ಖ್ಯಾತಿ ಗಳಿಸಿದ್ದರು. ಚಾಮರಾಜನಗರ ಎಸ್ಪಿಯಾಗಿದ್ದ ವೇಲೆ ಮಾರು ವೇಷದಲ್ಲಿ ಕಾರ್ಯಾಚರಣೆ ನಡೆಸಿ ಲಂಚಕೋರ ಪೊಲೀಸರಿಗೇ ಬಿಸಿ ಮುಟ್ಟಿಸಿದ್ದರು.

 ದಕ್ಷ ಅಧಿಕಾರಿಯ ಹೆಜ್ಜೆ ಗುರುತು:

ಈ ಹಿಂದೆ ಚಿಕ್ಕಮಗಳೂರು ಎಸ್ಪಿಯಾಗಿ ಸೇವೆ ಸಲ್ಲಿಸುತ್ತಿದ್ದ ವೇಳೆ, ಡಿಸಿ ಹರ್ಷ ಗುಪ್ತ ಜತೆಗೂಡಿ ದಲಿತ ಸಮುದಾಯದ ಬೆನ್ನೆಲುಬಾಗಿ ನಿಂತಿದ್ದರು. ದಲಿತರ ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಂಡಿದ್ದ ವ್ಯಕ್ತಿಗಳಿಂದ ಜಮೀನು ಬಿಡಿಸಿ ದಲಿತರಿಗೆ ನೀಡಿದ್ದರು. ನಂತರ ಆ ಹಳ್ಳಿಯ ಹೆಸರನ್ನು ಗುಪ್ತಶೆಟ್ಟಿ ಹಳ್ಳಿ ಎಂದು ನಾಮಕರಣ ಮಾಡಲಾಗಿತ್ತು. ಈಗಲೂ ಆ ಹಳ್ಳಿಯಲ್ಲಿರುವ ನೂರಾರು ಮಂದಿ ಮಧುಕರ್ ಶೆಟ್ಟಿ ಅವರು ಮಾಡಿದ ಕೆಲಸವನ್ನು ನೆನೆಯುತ್ತಾರೆ.

ಉನ್ನತ ವಿದ್ಯಾಭ್ಯಾಸದ ರಜೆಯ ಮೇಲೆ ಮಧುಕರ್ ಶೆಟ್ಟಿ 2011ರಲ್ಲಿ ತೆರಳಿದ್ದರು. ಅದಾಗಿ ಬರೋಬ್ಬರಿ ಐದು ವರ್ಷಗಳ ಕಾಲ ಮಧುಕರ್ ಶೆಟ್ಟಿ ಅಮೆರಿಕಾದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ನಂತರ ಐಜಿಪಿಯಾಗಿ ಬಡ್ತಿ ಪಡೆದ ಅವರು ಕೆಲ ಕಾಲ ಪೊಲೀಸ್ ನೇಮಕಾತಿ ವಿಭಾಗದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದರು. ಅದಾದ ಕೆಲವೇ ದಿನಗಳಲ್ಲಿ ಕೇಂದ್ರ ಸೇವೆಗೆ ತೆರಳಿದ ಅವರು ಸರ್ದಾರ್ ವಲ್ಲಭಭಾಯ್ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ಉಪ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಧುಕರ್ ಶೆಟ್ಟಿ ಸಾಮಾಜಿಕ ಕಳಕಳಿ ಹೊಂದಿರುವ ಅಧಿಕಾರಿ ಎಂಬ ಹೆಸರನ್ನ ಜನಸಾಮಾನ್ಯರಿಂದ ಗಳಿಸಿರುವ ಅಧಿಕಾರಿ.

ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆ ಬರೆಯುವ ಮುನ್ನ ಅವರು ದೆಹಲಿಯ ಜವಹರಲಾಲ್ ವಿಶ್ವವಿದ್ಯಾಲಯದಲ್ಲಿ (ಜೆಎನ್ಯು) ಸಮಾಜ ಶಾಸ್ತ್ರದಲ್ಲಿ ಎಂಎ ಮಾಡಿದ್ದರು. ನೇರ ನಡೆ, ನಿಷ್ಠುರ ಮಾತಿನ, ಮಾನವೀಯ ಗುಣವುಳ್ಳ ಮಧುಕರ ಶೆಟ್ಟಿಯವರು ಎಂದಿಗೂ ಕರ್ತವ್ಯದ ವಿಚಾರದಲ್ಲಿ ರಾಜೀ ಮಾಡಿಕೊಂಡವರಲ್ಲ. ಕಾನೂನು ಚೌಕಟ್ಟಿನಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದ ಮಧುಕರ ಶೆಟ್ಟಿಯವರು ಭ್ರಷ್ಟರ ಪಾಲಿಗೆ ಸಿಂಹ ಸ್ವಪ್ನರಾಗಿದ್ದರು.

ತಪ್ಪನ್ನು ಯಾರೇ ಮಾಡಲಿ ಅದನ್ನು ಯಾವ ಮುಲಾಜು ಇಲ್ಲದೇ ಖಂಡಿಸುತ್ತಿದ್ದ ಅವರು, ಹಿರಿಯ ಅಧಿಕಾರಿಗಳಿಗೆ ವಿಧೇಯರಾಗಿ, ಕಿರಿಯ ಅಧಿಕಾರಿಗಳಿಗೆ ಉತ್ತಮ ಮಾರ್ಗದರ್ಶಕರಾಗಿದ್ದರು. ತಂದೆ ವಡ್ಡರ್ಸೆ ರಘುರಾಮ ಶೆಟ್ಟರಂತೆಯೇ ಉತ್ತಮ ಸಮಾಜದ ಕನಸು ಕಂಡಿದ್ದ ಮಧುಕರ ಶೆಟ್ಟಿಯವರ ಅಗಲಿಕೆ ಕರ್ನಾಟಕ ಪೊಲೀಸ್ ಇಲಾಖೆಗೆ ತುಂಬಲಾರದ ನಷ್ಟ. ಅಂತೆಯೇ ಇಡೀ ಕರ್ನಾಟಕದ ಜನತೆಯೂ ಮಧುಕರ ಶೆಟ್ಟಿಯವರ ಜನಪರ ಕಾರ್ಯಗಳನ್ನು ನೆನೆಯುತ್ತಿರುವುದು ಅವರ ಜನಪ್ರಿಯತೆಯನ್ನು ಸಾಕ್ಷೀಕರಿಸಿದೆ.

visit our channel by link Youtube.com/c/janajagrutiTVNews

Follow in facebook https://www.facebook.com/%E0%B2%9C%E0%B2%A8%E0%B2%9C%E0%B2%BE%E0%B2%97%E0%B3%83%E0%B2%A4%E0%B2%BF-%E0%B2%B8%E0%B3%81%E0%B2%A6%E0%B3%8D%E0%B2%A7%E0%B2%BF%E0%B2%B5%E0%B2%BE%E0%B2%B9%E0%B2%BF%E0%B2%A8%E0%B2%BF-474624809612940/


ಚುನಾವಣೆಗೆ ಸ್ಪರ್ಧಿಸಲು ಹಣಕ್ಕಾಗಿ ಪತ್ನಿಯನ್ನೇ ಕೊಂದ ಪತಿ!

     ಜನಜಾಗೃತಿ ಸುದ್ಧಿವಾಹಿನಿ

ಮೈಸೂರು: ಜಿಲ್ಲಾ ಪಂಚಾಯಿತಿ ಚುನಾವಣೆಗಾಗಿ ಸ್ಪರ್ಧಿಸಲು ಹಣಕ್ಕಾಗಿ ಪತಿಯೇ ಪತ್ನಿಯನ್ನು ಬೆಂಕಿ ಹಚ್ಚಿ ಕೊಂದಿರುವ ಘಟನೆ ಜಿಲ್ಲೆಯ ಕೆ.ಆರ್. ನಗರ ತಾಲೂಕಿನ ನಾಟನಹಳ್ಳಿ ಗ್ರಾಮದಲ್ಲಿ ನಡೆದಿದೆ.


ಕಾವ್ಯಾರಾಣಿ (28) ಮೃತ ದುರ್ದೈವಿ. ಅತ್ತೆ, ಪತಿ,ನಾದಿನಿಯ ಪತಿ ಸೇರಿಕೊಂಡು ಬೆಂಕಿ ಹಚ್ಚಿದ್ದಾರೆ ಎಂದು ಕಾವ್ಯಾರಾಣಿ ಸಾಯುವ ಮುನ್ನ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.


ಕಾವ್ಯಾರಾಣಿ ಹಾಗೂ ಸಂತೋಷ್ ಎರಡು ವರ್ಷಗಳ ಹಿಂದೆ ವಿವಾಹವಾಗಿದ್ದರು, ಸಂತೋಷ್ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತ, ಮುಂಬರುವ ಜಿಪಂ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದ್ದ ಸಂತೋಷ್, ಹಣಕ್ಕಾಗಿ ಕಾವ್ಯಾ ಅವರನ್ನು ಪೀಡಿಸುತ್ತಿದ್ದ. ತವರುಮನೆಯಿಂದ 15 ಲಕ್ಷ ರೂ. ತರುವಂತೆ ಒತ್ತಡ ಹೇರಿದ್ದ. ಹಣ ತರದೆ ಇದ್ದಾಗ ಪತ್ನಿಗೆ ದೈಹಿಕ, ಮಾನಸಿಕ ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ.


ಘಟನೆ ಸಂಬಂಧ ಕೆ.ಆರ್. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Visit our channel by link for more news Youtube.com/c/janajagrutiTVNews

Follow in Facebook https://www.facebook.com/%E0%B2%9C%E0%B2%A8%E0%B2%9C%E0%B2%BE%E0%B2%97%E0%B3%83%E0%B2%A4%E0%B2%BF-%E0%B2%B8%E0%B3%81%E0%B2%A6%E0%B3%8D%E0%B2%A7%E0%B2%BF%E0%B2%B5%E0%B2%BE%E0%B2%B9%E0%B2%BF%E0%B2%A8%E0%B2%BF-474624809612940/

ಬಾಲಿವುಡ್ ನಟ ಖಾದರ್ ಖಾನ್ ಆರೋಗ್ಯ ಸ್ಥಿತಿ ಗಂಭೀರ

        ಜನಜಾಗೃತಿ ಸುದ್ಧಿವಾಹಿನಿ

ನವದೆಹಲಿ: ಬಾಲಿವುಡ್‍ನ ಹಿರಿಯ ನಟ, ಸಂಭಾಷಣೆಗಾರ ಖಾದರ್‍ಖಾನ್‍ ರ ದೇಹ ಸ್ಥಿತಿ ಗಂಭೀರ ವಾಗಿದ್ದು ಅವರಿಗೆ ಕೆನಡಾದ ಬಿಪಾಪ್ ಆಸ್ಪತ್ರೆಯ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೆನಡಾದಲ್ಲಿರುವ ತಮ್ಮ ಮಗ ಶಾರ್ಫಾಜ್‍ಖಾನ್ ಹಾಗೂ ಸೊಸೆ ಷಹಿಷ್ಠರೊಂದಿಗೆ ವಾಸವಾಗಿರುವ ಖಾದರ್ ಖಾನ್ ಅವರು ಉಸಿರಾಟಕ್ಕೆ ಸಂಬಂಧಿಸಿದ ಬಾಧೆಯಿಂದ ನರಳುತ್ತಿದ್ದು ಅವರನ್ನು ಬಿಪಾಪ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿತ್ತು.


ಆದರೆ ಅವರ ದೇಹ ಸ್ಥಿತಿ ಗಂಭೀರವಾಗಿರುವುದರಿಂದ ಅವರನ್ನು ಸಾಮಾನ್ಯ ಐಸಿಯು ಘಟಕದಿಂದ ವಿಶೇಷ ಐಸಿಯು ಘಟಕಕ್ಕೆ ವರ್ಗಾಯಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಖಾದರ್‍ಖಾನ್ ಅವರಿಗೆ ಮಾತನಾಡಲು ಸಾಧ್ಯವಾಗುತ್ತಿಲ್ಲ ಹಾಗೂ ಅವರ ದೇಹ ಚಿಕಿತ್ಸೆಗೆ ಸ್ಪಂದಿಸದ ಕಾರಣ ಅವರ ಸ್ಥೀತಿ ಚಿಂತಾಜನಕ ವಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.


ಇತ್ತೀಚೆಗೆ ಮಂಡಿ ನೋವಿಗಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಖಾದರ್‍ಖಾನ್ ಅವರು ಮುಜ್‍ಸೇ ಶಾದಿ ಕರೋಗಿ, ಲಕ್ಕಿ, ಜೀನಾ ಮೇರೆ ಲೀಯೆ, ಅಖೊಂಸೆ ಗೋಲಿ ಮಾರೆ, ಜೋರು ಕಾ ಗುಲಾಮ್, ಹಸೀನಾ ಮನ್ ಜಾಯೇಂಗೆ, ಅನಾರಿ ನಂ. 1, ಆಂಟಿ ನಂ.1, ಬಾಪ್ ಏಕ್ ನಂಬರಿ, ಬೇಟಾ ದಸ್ ನಂಬರಿ ಮುಂತಾದ ಚಿತ್ರಗಳಲ್ಲಿ ತಮ್ಮ ನಟನೆಯಿಂದ ಪ್ರೇಕ್ಷಕರ ಮನರಂಜಿಸಿದ್ದರು.


300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಕಾದರ್ ಸಂವಾದ ಲೇಖನಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ತನ್ನ ಆಕರ್ಷಕ ಧ್ವನಿ ಹಾಗೂ ಅದ್ಭುತ ಕಾಮಿಕ್ ಟೈಮಿಂಗ್ ಗೆ ಸುಪ್ರಸಿದ್ಧರಾಗಿರುವ ಕಾದರ್ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. 90ರ ದಶಕದಲ್ಲಿ ನಟ ಗೋವಿಂದಾ ಹಾಗೂ ಕಾದರ್ ಖಾನ್ ಜೋಡಿಯನ್ನು ಹಿಟ್ ಫಾರ್ಮುಲಾ ಎಂದೇ ಕರೆಯಲಾಗುತ್ತಿತ್ತು. ಇವರಿಬ್ಬರೂ ದೂಲ್ಹೇ ರಾಜಾ, ಕುಲೀ ನಂಬರ್ 1, ರಾಜಾ ಬಾಬೂ ಹಾಗೂ ಆಂಖೆ ಯಂತಹ ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ್ದಾರೆ.

Visit our channel and subscribe to support us Youtube.com/c/janajagrutiTVNews

Follow us in facebook https://www.facebook.com/%E0%B2%9C%E0%B2%A8%E0%B2%9C%E0%B2%BE%E0%B2%97%E0%B3%83%E0%B2%A4%E0%B2%BF-%E0%B2%B8%E0%B3%81%E0%B2%A6%E0%B3%8D%E0%B2%A7%E0%B2%BF%E0%B2%B5%E0%B2%BE%E0%B2%B9%E0%B2%BF%E0%B2%A8%E0%B2%BF-474624809612940/

'ಕಾಂಗ್ರೆಸ್ ನಲ್ಲಿ ಹಿರಿಯರಿಗೆ ಅಧಿಕಾರವಿಲ್ಲ; ಅಧಿಕಾರ ಸಿಕ್ಕವರಿಗೆ ಸಮಾಧಾನವಿಲ್ಲ'

      ಜನಜಾಗೃತಿ ಸುದ್ಧಿವಾಹಿನಿ


ಬೆಂಗಳೂರು: ಕಾಂಗ್ರೆಸ್‍ನಲ್ಲಿ ಗೆದ್ದ ಹಿರಿಯರಿಗೆ ಅಧಿಕಾರವಿಲ್ಲ; ಅಧಿಕಾರ ಸಿಕ್ಕವರಿಗೆ ಸಮಾಧಾನವಿಲ್ಲ. ಹಿರಿಯರಿಂದ ಸೂಕ್ತ ಮಾರ್ಗದರ್ಶನವೂ ಸಿಗುತ್ತಿಲ್ಲ ಎಂದು ಹಿರಿಯ ಮುಖಂಡ ಹನುಮಂತಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕೆಪಿಸಿಸಿ ಕಚೇರಿಯಲ್ಲಿ ಇಂದು ನಡೆದ 134ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಕೆಪಿಸಿಸಿ ಅಧ್ಯಕ್ಷರಾದ ದಿನೇಶ್ ಗುಂಡೂರಾವ್ ಅವರ ಎದರೇ ತರಾಟೆಗೆ ತೆಗೆದುಕೊಂಡ ಅವರು ಪಕ್ಷದ ಪರಿಸ್ಥಿತಿಯನ್ನು ಅನಾವರಣ ಮಾಡಿದರು.


ಹಿರಿಯ ಕಾಂಗ್ರೆಸ್ಸಿಗರಿಗೆ ಆದ್ಯತೆ ಸಿಗದಿರುವ ಬಗ್ಗೆ ಪರೋಕ್ಷ ಚಾಟಿ ಬೀಸಿದರು. ಅಧಿಕಾರ ಸಿಕ್ಕವರು ಸಮಾಧಾನಿತರಾಗಿರಬೇಕು ಎಂಬ ಸಲಹೆಯನ್ನು ಕೂಡ ನೀಡಿದರು. ಲೋಕಸಭೆ ಚುನಾವಣೆ ಇನ್ನು ಕೇವಲ ನಾಲ್ಕು ತಿಂಗಳು ಬಾಕಿ ಇದೆ.


ಕೇವಲ ಕಾರ್ಯಕರ್ತರಷ್ಟೇ ಅಲ್ಲ ಎಲ್ಲಾ ಹಿರಿಯರು, ಮುಖಂಡರು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಆಗ ಮಾತ್ರ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯ ಎಂದು ಅವರು ಹೇಳಿದರು.


ನಾವು ಸಂಕೀರ್ಣ ಪರಿಸ್ಥಿತಿಯಲ್ಲಿದ್ದೇವೆ. ಪ್ರತಿಷ್ಠೆಯನ್ನು ಬದಿಗಿಟ್ಟು ಒಗ್ಗಟ್ಟಾಗಿ ಕೆಲಸ ಮಾಡಬೇಕಾಗಿದೆ ಎಂದು ಕರೆ ನೀಡಿದರು.ಕಾಂಗ್ರೆಸ್ ಪಕ್ಷಕ್ಕೆ 134 ವರ್ಷಗಳ ಇತಿಹಾಸವಿದೆ. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಪಕ್ಷ ಈಗ ಅತಂತ್ರವಾಗಿದೆ. ಎಲ್ಲರೂ ಒಟ್ಟಾಗಿ ಮತ್ತೆ ಪಕ್ಷವನ್ನು ಕಟ್ಟಬೇಕಾಗಿದೆ ಎಂದರು. ಹಿರಿಯ ಮುಖಂಡರು, ಕೆಪಿಸಿಸಿ ಪ್ರಚಾರ ಸಮಿತಿ ನೂತನ ಅಧ್ಯಕ್ಷರಾದ ಹೆಚ್.ಕೆ.ಪಾಟೀಲ್ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ಪ್ರಸ್ತುತ ಹನುಮಂತಪ್ಪನವರಂತಹ ಹಿರಿಯರ ಮಾರ್ಗದರ್ಶನದ ಅವಶ್ಯಕತೆಯಿದೆ.


ಲೋಕಸಭೆ ಚುನಾವಣೆಗೆ ಕಡಿಮೆ ಅವಧಿಯಿದೆ. ನಾವು ಜನರ ಬಳಿ ಹೋಗಬೇಕು. ಪಕ್ಷವನ್ನು ಸಂಘಟಿಸಿ, ಸದೃಢಗೊಳಿಸಿ, ಬೆಳೆಸಬೇಕಾಗಿದೆ. ರಾಹುಲ್‍ರನ್ನು ಪ್ರಧಾನಿ ಮಾಡಲು ಎಲ್ಲರೂ ಹೆಚ್ಚು ಶ್ರಮಿಸಬೇಕಾಗಿದೆ ಎಂದರು. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ ಕಾಂಗ್ರೆಸ್ ಹೆಚ್ಚು ಶಕ್ತಿಯುತವಾಗಿದೆ.


ಈ ಬಗ್ಗೆ ಆತಂಕ ಪಡುವುದು ಬೇಡ. ಕಾಂಗ್ರೆಸ್ ಶಕ್ತಿಯನ್ನು ಮತ್ತಷ್ಟು ಬಲಗೊಳಿಸೋಣ ಎಂದು ಕರೆ ನೀಡಿದರು. ಪರಮೇಶ್ವರ್, ಸಿದ್ದರಾಮಯ್ಯ ನಡುವೆ ಖಾತೆ ಹಂಚಿಕೆ ಸಂಬಂಧ ಯಾವುದೇ ವಾಗ್ವಾದ ನಡೆದಿಲ್ಲ. ನಾನು ಅಲ್ಲಿಯೇ ಇದ್ದೆ ಎಂದು ಹೇಳಿದರು. ಹಿರಿಯ ಮುಖಂಡರಾದ ಎಂ.ವಿ.ರಾಜಶೇಖರನ್, ರಾಮಲಿಂಗಾರೆಡ್ಡಿ, ಮಹಿಳಾ ಘಟಕದ ರಾಜ್ಯಾಧ್ಯಕ್ಷ ಪುಷ್ಪಾ ಅಮರನಾಥ್ ಮತ್ತಿತರರು ಇದ್ದರು.

Visit Our channel and subscribe to support us Youtube.com/c/janajagrutiTVNews

Follow Us in Facebook https://www.facebook.com/%E0%B2%9C%E0%B2%A8%E0%B2%9C%E0%B2%BE%E0%B2%97%E0%B3%83%E0%B2%A4%E0%B2%BF-%E0%B2%B8%E0%B3%81%E0%B2%A6%E0%B3%8D%E0%B2%A7%E0%B2%BF%E0%B2%B5%E0%B2%BE%E0%B2%B9%E0%B2%BF%E0%B2%A8%E0%B2%BF-474624809612940/

💵ಮೋದಿ ಸರ್ಕಾರ ಪ್ರಚಾರಕ್ಕಾಗಿ ರೂ. 5,245 ಕೋಟಿ ಖರ್ಚು ಮಾಡಿದೆ

   ಜನಜಾಗೃತಿ ಸುದ್ಧಿವಾಹಿನಿ


ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯೋಜನೆಗಳ ಪ್ರಚಾರ ಕಾರ್ಯಕ್ಕಾಗಿ ಎಷ್ಟು ಹಣ ಖರ್ಚು ಮಾಡಿದೆ ಎಂಬ ಕುತೂಹಲ ಇತ್ತು. ಮೋದಿ ಸರ್ಕಾರ ಕೆಲಸಕ್ಕಿಂತ ಪ್ರಚಾರಕ್ಕಾಗಿ ಹೆಚ್ಚು ಖರ್ಚು ಮಾಡಿದೆ ಎಂದು ವಿರೋಧ ಪಕ್ಷಗಳು ಆರೋಪ ಮಾಡಿದ್ದವು. ಇದೀಗ ಸರ್ಕಾರ ಎಷ್ಟು ಖರ್ಚು ಮಾಡಿದೆ ಎಂಬ ಮಾಹಿತಿ ಹೊರಬಿದ್ದಿದೆ.


ಕೇಂದ್ರ ಸರ್ಕಾರ ತನ್ನ ಯೋಜನೆಗಳ ಪ್ರಚಾರಕ್ಕೆ 2014 ರಿಂದ ಡಿಸೆಂಬರ್ 7, 2018 ರವರೆಗೆ ಯೋಜನೆಗಳ ಪ್ರಚಾರಕ್ಕಾಗಿ ರೂ. 5,245.73 ಕೋಟಿ ಖರ್ಚು ಮಾಡಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಲೋಕಸಭೆಯಲ್ಲಿ ಹೇಳಿದ್ದಾರೆ.


ಸದಸನದಲ್ಲಿ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ರಾಜ್ಯವರ್ಧನ್ ಸಿಂಗ್, ಬೇರೆ ಬೇರೆ ಸಚಿವಾಲಯ ಮತ್ತು ಇಲಾಖೆ ಅಡಿಯಲ್ಲಿ ಬರುವ ಯೋಜನೆಗಳನ್ನು ಜನರಿಗೆ ತಲುಪಿಸಲು ಮಾಹಿತಿ, ಪ್ರಚಾರ, ಜಾಗೃತಿ ನೀಡುವ ಅಗತ್ಯವಿರುತ್ತದೆ ಎಂದಿದ್ದಾರೆ.


ಸಚಿವಾಲಯ ಹಾಗೂ ಇಲಾಖೆಗಳು ಬಜೆಟ್ ಲಭ್ಯತೆ ಆಧಾರದ ಮೇಲೆ ಪ್ರಚಾರಕ್ಕೆ ನಿಗದಿತ ಹಣ ಖರ್ಚು ಮಾಡುತ್ತವೆ. 2014 ರಿಂದ ಈವರೆಗೆ ಸರ್ಕಾರದ ಯೋಜನೆಗಳ ಪ್ರಚಾರಕ್ಕೆ ಒಟ್ಟು ರೂ. 5,245.73 ಕೋಟಿ ಖರ್ಚು ಮಾಡಲಾಗಿದೆ ಎಂದಿದ್ದಾರೆ.

Visit our channel by link and subscribe to support us Youtube.com/c/janajagrutiTVNews

Follow Us in facebook https://www.facebook.com/%E0%B2%9C%E0%B2%A8%E0%B2%9C%E0%B2%BE%E0%B2%97%E0%B3%83%E0%B2%A4%E0%B2%BF-%E0%B2%B8%E0%B3%81%E0%B2%A6%E0%B3%8D%E0%B2%A7%E0%B2%BF%E0%B2%B5%E0%B2%BE%E0%B2%B9%E0%B2%BF%E0%B2%A8%E0%B2%BF-474624809612940/

🤰65 ವರ್ಷದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಕಾಶ್ಮೀರಿ ಮಹಿಳೆ

     ಜನಜಾಗೃತಿ ಸುದ್ಧಿವಾಹಿನಿ


ಜಮ್ಮು: ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲಾ ಆಸ್ಪತ್ರೆ  65 ವರ್ಷದ ಕಾಶ್ಮೀರಿ ಮಹಿಳೆಯೊಬ್ಬರು ಆರೋಗ್ಯವಂತ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಮಗುವಿನ 80 ವರ್ಷದ ತಂದೆ ಈ 'ಅಮೂಲ್ಯ ಉಡುಗೊರೆ'ಗಾಗಿ ಅಲ್ಲಾಹ್ ನಿಗೆ ಧನ್ಯವಾದ ಹೇಳಿದ್ದಾರೆ.


ಹೆರಿಗೆ ನೋವು ಆರಂಭಗೊಂಡ ಹಿನ್ನೆಲೆಯಲ್ಲಿ ಮಹಿಳೆಯನ್ನು ಬುಧವಾರ ಬೆಳಗ್ಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಪರಾಹ್ನದ ವೇಳೆ ಆಕೆಗೆ ಹೆರಿಗೆಯಾಗಿತ್ತು, ದಂಪತಿಗೆ ಈಗಾಗಲೇ 10 ವರ್ಷ ವಯಸ್ಸಿನ ಮಗನಿದ್ದಾನೆ.


ಮಗುವಿನ ತಂದೆ ಹಕೀಂ ದಿನ್ ತಮಗೆ ಮಗುವನ್ನು ಸಾಕಿ, ಸಲಹಿ ಬೆಳೆಸಲು ಸರಕಾರದ ಸಹಾಯ ಬೇಕಾಗುವುದು ಎಂದಿದ್ದಾರೆ.


''ಸಾಮಾನ್ಯವಾಗಿ ಭಾರತದಲ್ಲಿ ಮಹಿಳೆಯರು ಸರಾಸರಿ 47 ವರ್ಷದವರಾದಾಗ ಅವರಿಗೆ ಋತುಬಂಧವಾಗುತ್ತದೆ. ನಂತರ ಮಗುವಾಗುವ ಸಾಧ್ಯತೆಯೇ ಇಲ್ಲ.


ಆದರೆ ಇದೊಂದು ಅಪರೂಪದ ಪ್ರಕರಣ'' ಎಂದು ಕಾಶ್ಮೀರದ ಪ್ರಸೂತಿ ತಜ್ಞರೊಬ್ಬರು ಹೇಳಿದ್ದಾರೆ.


ಸಾಮಾನ್ಯವಾಗಿ 50 ವರ್ಷ ದಾಟಿದ ಮಹಿಳೆಯರು ಐವಿಎಫ್ ತಂತ್ರಜ್ಞಾನದ ಮೂಲಕ ಮಗು ಪಡೆಯುತ್ತಾರೆ. ಆದರೆ ಈ ಮಹಿಳೆಯ ಹೇಳಿಕೆಗಳು ನಿಜವೆಂದಾದರೆ ನೈಸರ್ಗಿಕವಾಗಿ ಮಗುವಿಗೆ ಜನ್ಮ ನೀಡಿದ ಜಗತ್ತಿನ ಅತ್ಯಂತ ಹಿರಿಯ ಮಹಿಳೆ ಆಕೆಯಾಗಲಿದ್ದಾಳೆ.


ಸದ್ಯ ಜಗತ್ತಿನಲ್ಲಿ ಅತ್ಯಂತ ಹಿರಿಯ ವಯಸ್ಸಿನಲ್ಲಿ ತಾಯಿಯಾದವರು ಸ್ಪೇನ್ ದೇಶದ ಮರಿಯಾ ಡೆಲ್ ಕಾರ್ಮೆನ್ ಬೌಸದ ಡೆ ಲಾರಾ ಆಗಿದ್ದು ಆಕೆ 66 ವರ್ಷದವಳಾಗಿದ್ದಾಗ ಐವಿಎಫ್ ಮೂಲಕ ಮಗುವಿಗೆ ಜನ್ಮ ನೀಡಿದ್ದರು.

Visit our channel and subscribe to support us Youtube.com/c/janajagrutiTVNews

Follow in Facebook https://www.facebook.com/%E0%B2%9C%E0%B2%A8%E0%B2%9C%E0%B2%BE%E0%B2%97%E0%B3%83%E0%B2%A4%E0%B2%BF-%E0%B2%B8%E0%B3%81%E0%B2%A6%E0%B3%8D%E0%B2%A7%E0%B2%BF%E0%B2%B5%E0%B2%BE%E0%B2%B9%E0%B2%BF%E0%B2%A8%E0%B2%BF-474624809612940/

Thursday, December 27, 2018

🤚🏻ಕಾಂಗ್ರೆಸ್ ಸಾಲಮನ್ನಾ ಅಸ್ತ್ರ ನಿಷ್ಕ್ರಿಯಗೊಳಿಸಲು ಮೋದಿ ರಣತಂತ್ರ

       ಜನಜಾಗೃತಿ ಸುದ್ಧಿವಾಹಿನಿ

ನವದೆಹಲಿ: ಮುಂದಿನ 100ದಿನಗಳಲ್ಲಿ ಎದುರಾಗಲಿರುವ ಲೋಕಸಭೆ ಚುನಾವಣೆಗೆ ರೈತರ ಸಮಸ್ಯೆಗಳನ್ನು ಕಾಂಗ್ರೆಸ್ ತನ್ನ ಪ್ರಮುಖ ಚುನಾವಣಾ ವಿಷಯವಾಗಿ ಮಾಡಿಕೊಳ್ಳುವುದು ಬಹುತೇಕ ಖಚಿತಗೊಂಡಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅದಕ್ಕೆ ಪ್ರತಿತಂತ್ರ ರೂಪಿಸಲು ಆರಂಭಿಸಿದ್ದಾರೆ. ಕಾಂಗ್ರೆಸ್ಸಿನ ಸಾಲ ಮನ್ನಾ ಅಸ್ತ್ರವನ್ನು ನಿಷ್ಕ್ರಿಯಗೊಳಿಸಲು ಮಧ್ಯಪ್ರದೇಶದ ಮಾಜಿ ಸಿಎಂ ಶಿವರಾಜ ಸಿಂಗ್ ಚೌಹಾಣ್ ಅವರ 'ಭಾವಾಂತರ' (ಭಾವ್-ಬೆಲೆ, ಅಂತರ್-ವ್ಯತ್ಯಾಸ)ಯೋಜನೆ ಜಾರಿಗೆ 3 ತಾಸು ಚರ್ಚೆ ನಡೆಸಿದ್ದಾರೆ. ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಹಾಗೂ ಮಾರುಕಟ್ಟೆ ಬೆಲೆಯ ನಡುವಣ ವ್ಯತ್ಯಾಸದ ಮೊತ್ತವನ್ನು ರೈತರಿಗೆ ನೇರವಾಗಿ ವರ್ಗಾವಣೆ ಮಾಡುವುದೇ 'ಭಾವಾಂತರ'.


ಜ.೫ರಂದು ಸಂಸತ್ತಿನ ಚಳಿಗಾಲದ ಅಧಿವೇಶನ ಮುಗಿಯುವಷ್ಟರಲ್ಲಿ ಮೋದಿ ಅವರು ಈ ಕುರಿತು ಘೋಷಣೆ ಮಾಡುವ ಸಾಧ್ಯತೆ ಇದೆ.


ಇದಲ್ಲದೆ, ಬಿಜೆಪಿ ಆಳ್ವಿಕೆಯ ಜಾರ್ಖಂಡ್‌ನಲ್ಲಿರುವ ರೈತರಿಗೆ ನೇರ ಸಬ್ಸಿಡಿ ವರ್ಗಾವಣೆ ಯೋಜನೆ ಕುರಿತೂ ಸರ್ಕಾರ ಪರಿಶೀಲಿಸುತ್ತಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಲ್ಲಿನ ಸಾಲ ಮಿತಿಯನ್ನು ಹೆಚ್ಚಳ ಮಾಡುವ ಪ್ರಸ್ತಾವವೂ ಇದೆ ಎನ್ನಲಾಗಿದೆ.


ಕಾಂಗ್ರೆಸ್ಸಿಗೆ ಪ್ರತಿ ಸವಾಲು: ಬಿಜೆಪಿ ಸಂಘಟನೆ ಪ್ರಬಲವಾಗಿರುವ, ಹಿಂದಿ ನಾಡಿನ ಪ್ರಮುಖ ರಾಜ್ಯಗಳಾದ ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್‌ಗಢದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಳ್ಳಲು ರೈತರ ಸಮಸ್ಯೆಯೇ ಕಾರಣ, ಕಾಂಗ್ರೆಸ್ ಪಕ್ಷ ಸಾಲ ಮನ್ನಾ ಘೋಷಣೆ ಮಾಡಿದ್ದು ಬಿಜೆಪಿ ಹಿನ್ನಡೆಗೆ ಭಾರಿ ಕೊಡುಗೆ ನೀಡಿತು ಎಂಬ ವಿಶ್ಲೇಷಣೆಗಳಿವೆ. ಕಾಂಗ್ರೆಸ್ಸಿಗೆ ಅಧಿಕಾರ ಸಿಕ್ಕ ಖುಷಿಯಲ್ಲಿರುವ ಆ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ, ದೇಶಾದ್ಯಂತ ಸಾಲ ಮನ್ನಾ ಮಾಡುವವರೆಗೂ ಪ್ರಧಾನಿ ಮೋದಿ ಅವರನ್ನು ನಿದ್ರೆ ಮಾಡಲು ಬಿಡುವುದಿಲ್ಲ ಎಂದು ಸವಾಲು ಹಾಕಿದ್ದಾರೆ. ರಾಹುಲ್ ಸವಾಲು ಹಾಗೂ ರೈತರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಮೋದಿ, ಬುಧವಾರ ರಾತ್ರಿ ತಮ್ಮ ನಿವಾಸದಲ್ಲಿ ಮೂರು ತಾಸು ಮಹತ್ವದ ಚರ್ಚೆ ನಡೆಸಿದ್ದಾರೆ.


 ಹಣಕಾಸು ಸಚಿವ ಅರುಣ್ ಜೇಟ್ಲಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಾಗೂ ಕೃಷಿ ಸಚಿವ ರಾಧಾಮೋಹನ ಸಿಂಗ್ ಅವರು ಭಾಗವಹಿಸಿದ್ದ ಈ ಸಭೆಯಲ್ಲಿ ಸಾಲ ಮನ್ನಾದಿಂದಾಚೆಗೂ ಚರ್ಚೆ ನಡೆದಿದೆ. ಅದರಲ್ಲಿ 'ಭಾವಾಂತರ' ಪ್ರಮುಖವಾಗಿ ಚರ್ಚೆಗೆ ಬಂದಿದೆ ಎಂದು ಮೂಲಗಳು ತಿಳಿಸಿವೆ. ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ಜ.೫ರಂದು ತೆರೆ ಬೀಳಲಿದೆ. ಅಷ್ಟರೊಳಗೆ ಅಂದರೆ ಹೊಸ ವರ್ಷದ ಸಂದರ್ಭದಲ್ಲಿ ಮೋದಿ ಅವರು ರೈತರ ಅನುಕೂಲಕ್ಕಾಗಿ ಹೊಸ ಕ್ರಮಗಳನ್ನು ಪ್ರಕಟಿಸುವ ನಿರೀಕ್ಷೆ ಇದೆ ಎಂದು ಹಣಕಾಸು ಸಚಿವಾಲಯದ ಮೂಲಗಳು ತಿಳಿಸಿವೆ.

Visit Our channel Youtube.com/c/janajagrutiTVNews

Follow in Facebook https://www.facebook.com/%E0%B2%9C%E0%B2%A8%E0%B2%9C%E0%B2%BE%E0%B2%97%E0%B3%83%E0%B2%A4%E0%B2%BF-%E0%B2%B8%E0%B3%81%E0%B2%A6%E0%B3%8D%E0%B2%A7%E0%B2%BF%E0%B2%B5%E0%B2%BE%E0%B2%B9%E0%B2%BF%E0%B2%A8%E0%B2%BF-474624809612940/

🤼‍♂ಕಬಡ್ಡಿ ಆಡುವಾಗಲೇ ಕಾದಿತ್ತು ದುರ್ವಿಧಿ

         ಜನಜಾಗೃತಿ ಸುದ್ಧಿವಾಹಿನಿ

ಮೈಸೂರು: ಕಬಡ್ಡಿ ಆಡುವಾಗ ಆಯತಪ್ಪಿ ಬಿದ್ದು ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಮೈಸೂರಿನ ಶಾರದಾ ದೇವಿ ನಗರದ ಖಾಸಗಿ ಶಾಲೆಯಲ್ಲಿ ನಡೆದಿದೆ.


15 ವರ್ಷದ ಆಕಾಶ್ ಮೃತಪಟ್ಟ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಶಾಲೆಯ ಮೈದಾನದಲ್ಲಿ ಕಬಡ್ಡಿ ಅಭ್ಯಾಸ ಪಂದ್ಯದ ವೇಳೆ ಆಕಾಶ್ ರೈಡ್ ಗೆ ಹೋಗಿ ಬರುವಾಗ ಸಿಮೆಂಟ್ ಕಂಬಕ್ಕೆ ಡಿಕ್ಕಿ ಹೊಡೆದುಕೊಂಡು ಗಂಭೀರವಾಗಿ ಗಾಯಗೊಂಡಿದ್ದಾರೆ.

ಕೂಡಲೇ ಆಕಾಶ್ ನನ್ನು ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸರಸ್ವತಿಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Visit our channel and subscribe to support us Youtube.com/c/janajagrutiTVNews

Follow us in facebook https://www.facebook.com/%E0%B2%9C%E0%B2%A8%E0%B2%9C%E0%B2%BE%E0%B2%97%E0%B3%83%E0%B2%A4%E0%B2%BF-%E0%B2%B8%E0%B3%81%E0%B2%A6%E0%B3%8D%E0%B2%A7%E0%B2%BF%E0%B2%B5%E0%B2%BE%E0%B2%B9%E0%B2%BF%E0%B2%A8%E0%B2%BF-474624809612940/

ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹೆಚ್. ವಿಶ್ವನಾಥ್ ಗುಡ್ ಬೈ!?

      ಜನಜಾಗೃತಿ ಸುದ್ಧಿವಾಹಿನಿ



ಬೆಂಗಳೂರು: ಲೋಕಸಭಾ ಚುನಾವಣೆ ತಯಾರಿ ಸಂಬಂಧ ಜೆಡಿಎಸ್ ರಾಜ್ಯಾಧ್ಯಕ್ಷ ಹುದ್ದೆ ತ್ಯಜಿಸಲು ಹೆಚ್. ವಿಶ್ವನಾಥ್ ಮುಂದಾಗಿದ್ದಾರೆ ಎನ್ನಲಾಗಿದೆ.


ಲೋಕಸಭಾ ಚುನಾವಣೆ ತಯಾರಿ ಸಂಬಂಧ ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ .ದೇವೇಗೌಡರು ಜನವರಿ 3 ರಂದು ಪಕ್ಷದ ಕಚೇರಿಯಲ್ಲಿ ಕರೆದಿರವ ಶಾಸಕರು, ಸಂಸದರು, ಜಿಲ್ಲಾಧ್ಯಕ್ಷರು, ರಾಜ್ಯ ಪದಾಧಿಕಾರಿಗಳು ಸೇರಿದಂತೆ ಪಕ್ಷದ ಪ್ರಮುಖ ಸಭೆ ಬಳಿಕ ದೇವೇಗೌಡರನ್ನು ಭೇಟಿಯಾಗಿ ರಾಜ್ಯಾಧ್ಯಕ್ಷ ಸ್ಥಾನದಿಂದ ತಮ್ಮನ್ನು ಬಿಡುಗಡೆ ಮಾಡಬೇಕೆಂದು ಮನವಿ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.


ಈ ಕುರಿತು ಮಾತನಾಡಿರುವ ವಿಶ್ವನಾಥ್, ದೇವೇಗೌಡರು ಅಪಾರ ನಿರೀಕ್ಷೆ ಹಾಗೂ ವಿಶ್ವಾಸವಿಟ್ಟು ಹುದ್ದೆ ನೀಡಿದ್ದಾರೆ. ಆದರೆ ಅವರ ನಿರೀಕ್ಷೆಗೆ ತಕ್ಕಂತೆ ಹುದ್ದೆಗೆ ನ್ಯಾಯ ಕೊಡಲು ಆಗುತ್ತಿಲ್ಲ.


ಜೊತೆಗೆ ವೈದ್ಯರು ಸಹ ವಿಶ್ರಾಂತಿಗೆ ಸಲಹೆ ನೀಡಿರುವುದರಿಂದ ರಾಜ್ಯಾಧ್ಯಕ್ಷ ಹುದ್ದೆ ತ್ಯಜಿಸಲು ಮುಂದಾಗಿದ್ದೇನೆ ಎಂದಿದ್ದಾರೆ.

Visit Our Channel And Subscribe to Support Us Youtube.com/c/janajagrutiTVNews

Follow Us In Facebook https://www.facebook.com/%E0%B2%9C%E0%B2%A8%E0%B2%9C%E0%B2%BE%E0%B2%97%E0%B3%83%E0%B2%A4%E0%B2%BF-%E0%B2%B8%E0%B3%81%E0%B2%A6%E0%B3%8D%E0%B2%A7%E0%B2%BF%E0%B2%B5%E0%B2%BE%E0%B2%B9%E0%B2%BF%E0%B2%A8%E0%B2%BF-474624809612940/

ಮತ್ತೊಂದು ಗಣಿ ಸಂಕಷ್ಟ;ರೆಡ್ಡಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ SIT

         ಜನಜಾಗೃತಿ ಸುದ್ಧಿವಾಹಿನಿ 


ಬೆಂಗಳೂರು: ಬಳ್ಳಾರಿಯಲ್ಲಿ ಅಕ್ರಮ ಅದಿರು ಗಣಿಗಾರಿಕೆ ನಡೆಸಿದ ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ಗಾಲಿ ಜನಾರ್ದನ ರೆಡ್ಡಿ ವಿರುದ್ಧ ಜನಪ್ರತಿನಿಧಿಗಳ ಕೋರ್ಟ್ ನಲ್ಲಿ ಚಾರ್ಜ್ ಶೀಟ್ ಸಲ್ಲಿಸಿದೆ.


ಶೇಖ್ ಸಾಬ್ ಅವರಿಂದ ಗಣಿ ಕಂಪನಿ ಗುತ್ತಿಗೆ ಪಡೆದು ಅಕ್ರಮ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಎಸ್ ಐಟಿ ತನಿಖಾ ತಂಡ ತನಿಖೆ ನಡೆಸಿತ್ತು. ಇದೀಗ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ನಲ್ಲಿರುವ ವಿಶೇಷ ಕೋರ್ಟ್ ಗೆ ಆರೋಪ ಪಟ್ಟಿ ಸಲ್ಲಿಸಿದೆ ಎಂದು ವರದಿ ತಿಳಿಸಿದೆ.


ಚಾರ್ಜ್ ಶೀಟ್ ನಲ್ಲಿ ಜನಾರ್ದನ ರೆಡ್ಡಿ ಎ1 ಆರೋಪಿಯಾಗಿ, ಅಲಿಖಾನ್ ಎ2 ಹಾಗೂ ಶ್ರೀನಿವಾಸ್ ರೆಡ್ಡಿ ಎ3 ಆರೋಪಿಯನ್ನಾಗಿ ಉಲ್ಲೇಖಿಸಲಾಗಿದೆ. ಆದರೆ ಖಾರದಪುಡಿ ಮಹೇಶ್ ಸೇರಿದಂತೆ ಹಲವರ ಹೆಸರು ಆರೋಪಪಟ್ಟಿಯಲ್ಲಿ ಕೈಬಿಡಲಾಗಿದೆ ಎಂದು ವರದಿ ವಿವರಿಸಿದೆ.

Visit our channel subscribe to support us Youtube.com/c/janajagrutiTVNews 

Follow in facebook https://www.facebook.com/%E0%B2%9C%E0%B2%A8%E0%B2%9C%E0%B2%BE%E0%B2%97%E0%B3%83%E0%B2%A4%E0%B2%BF-%E0%B2%B8%E0%B3%81%E0%B2%A6%E0%B3%8D%E0%B2%A7%E0%B2%BF%E0%B2%B5%E0%B2%BE%E0%B2%B9%E0%B2%BF%E0%B2%A8%E0%B2%BF-474624809612940/

ಮೆಟ್ರೊದಲ್ಲಿ ಬೆಂಕಿ; ಪ್ರಯಾಣಿಕರು ಅಪಾಯದಿಂದ ಪಾರು, 16 ಮಂದಿ ಅಸ್ವಸ್ಥ

         ಜನಜಾಗೃತಿ ಸುದ್ಧಿವಾಹಿನಿ


ಕೋಲ್ಕತ್ತ: ಕೋಲ್ಕತ್ತ ಮೆಟ್ರೊ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡು ಸುಮಾರು ಹದಿನಾರು ಪ್ರಯಾಣಿಕರು ಅಸ್ವಸ್ಥರಾಗಿರುವ ಘಟನೆ ಗುರುವಾರ ಸಂಜೆ ನಡೆದಿದೆ.


ನಗರದ ಹೃದಯ ಭಾಗದ ರವೀಂದ್ರ ಸದನ ನಿಲ್ದಾಣದಿಂದ ಮೈದಾನ್ ನಿಲ್ದಾಣ ಮಾರ್ಗದಲ್ಲಿ ಮೆಟ್ರೊ ರೈಲಿನ ಮೊದಲ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಆವರಿಸಿಕೊಳ್ಳುತ್ತಿದ್ದಂತೆ ಹಲವು ಪ್ರಯಾಣಿಕರು ಅಸ್ವಸ್ಥರಾಗಿದ್ದಾರೆ. ಇವರಲ್ಲಿ ಬಹುತೇಕ ಪ್ರಯಾಣಿಕರು ಹಿರಿಯ ನಾಗರಿಕರಾಗಿದ್ದರು ಎಂದು ಎನ್‌ಡಿಟಿವಿ ವರದಿ ಮಾಡಿದೆ.


ಒಬ್ಬ ಪ್ರಯಾಣಿಕ ಕಾಲು ಮುರಿತಕ್ಕೆ ಒಳಗಾಗಿದ್ದು, ಹದಿನೈದು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ.


ನೀರು ಮತ್ತು ಅಗ್ನಿ ಶಮನಕ ಸಿಲಿಂಡರ್‌ಗಳನ್ನು ಬಳಸಿ ಮೆಟ್ರೊ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಪಶ್ಚಿಮ ಬಂಗಾಳ ಅಗ್ನಿಶಾಮಕ ಸೇವೆಗಳ ಸಿಬ್ಬಂದಿ ಮತ್ತು ಕೋಲ್ಕತ್ತ ಪೊಲೀಸ್‌ ವಿಪತ್ತು ನಿರ್ವಹಣಾ ತಂಡ ಸ್ಥಳಕ್ಕೆ ಬಂದಿದ್ದು, ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಕೋಲ್ಕತ್ತ ಮೆಟ್ರೊ ಟ್ವೀಟಿಸಿದೆ.

Visit our channel 

http://Youtube.com/c/janajagrutiTVNews

Follow us in facebook 

https://www.facebook.com/%E0%B2%9C%E0%B2%A8%E0%B2%9C%E0%B2%BE%E0%B2%97%E0%B3%83%E0%B2%A4%E0%B2%BF-%E0%B2%B8%E0%B3%81%E0%B2%A6%E0%B3%8D%E0%B2%A7%E0%B2%BF%E0%B2%B5%E0%B2%BE%E0%B2%B9%E0%B2%BF%E0%B2%A8%E0%B2%BF-474624809612940/

ನಾನೇನು ಪೆದ್ದನಾ? ಸಿದ್ದರಾಮಯ್ಯ ಜಾಣತನಕ್ಕೆ ಈ 'ಮಾಧ್ಯಮ'ವೇ ಕಾರಣ

       ಜನಜಾಗೃತಿ ಸುದ್ಧಿವಾಹಿನಿ


ಬೆಂಗಳೂರು: ದೋಸ್ತಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಸಿದ್ದರಾಮಯ್ಯ ಈ ಸಾರಿ ಸರಕಾರದ ವಿಚಾರ ಹೊರತುಪಡಿಸಿ ಕನ್ನಡದ ಬಗ್ಗೆ ಮಾತನ್ನಾಡಿದ್ದಾರೆ.


ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವಿನ ಪರೋಕ್ಷ ಭಿನ್ನಾಭಿಪ್ರಾಯ ಇದೀಗ ಸಿದ್ದರಾಮಯ್ಯ ಟ್ವೀಟ್‌ ಮೂಲಕ ಮತ್ತೊಮ್ಮೆ ಬಹಿರಂಗವಾಗಿದೆ.


ಕನ್ನಡ ಮಾಧ್ಯಮ ವಿಚಾರ ಇಬ್ಬರ ನಡುವಿನ ಜಂಗಿ ಕುಸ್ತಿಗೆ ವೇದಿಕೆ ಕಲ್ಪಿಸಿದೆ. ರಾಜ್ಯದಲ್ಲಿ‌ ಮುಂದಿನ ಶೈಕ್ಷಣಿಕ ವರ್ಷದಿಂದ ಒಂದು ಸಾವಿರ ಇಂಗ್ಲೀಷ್ ಮಾಧ್ಯಮ ಶಾಲೆಗಳನ್ನು‌ ಪ್ರಾರಂಭಿಸುವುದಾಗಿ‌ ಮುಖ್ಯಮಂತ್ರಿ‌ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.


ಈ ಬಗ್ಗೆ ಅವರೊಡನೆ ಚರ್ಚೆ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.


ಅಲ್ಲದೇ ಕನ್ನಡ ಭಾಷೆ ಕಲಿಕೆ ಮತ್ತು ಕನ್ನಡ ಮಾಧ್ಯಮದ ಬಗ್ಗೆ ನಮಗೆ ಸ್ಪಷ್ಟತೆ ಇರಬೇಕು.‌ನಾನು ಹೈಸ್ಕೂಲ್ ವರೆಗೆ ಕನ್ನಡ ಮಾಧ್ಯಮದಲ್ಲಿಯೇ ಕಲಿತವನು. ನಾನೇನು ಪೆದ್ದನಾ? ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿ ಉಳಿಯಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Visit our channel for more news 

http://Youtube.com/c/janajagrutiTVNews

Follow us in facebook 

https://www.facebook.com/%E0%B2%9C%E0%B2%A8%E0%B2%9C%E0%B2%BE%E0%B2%97%E0%B3%83%E0%B2%A4%E0%B2%BF-%E0%B2%B8%E0%B3%81%E0%B2%A6%E0%B3%8D%E0%B2%A7%E0%B2%BF%E0%B2%B5%E0%B2%BE%E0%B2%B9%E0%B2%BF%E0%B2%A8%E0%B2%BF-474624809612940/

ಮೋದಿ ರ್ಯಾಲಿ ವೀಕ್ಷಿಸಲು ತೆರಳುತ್ತಿದ್ದ ಬಸ್ ಪಲ್ಟಿ- 35 ಮಕ್ಕಳಿಗೆ ಗಾಯ

       ಜನಜಾಗೃತಿ ಸುದ್ಧಿವಾಹಿನಿ


ಶಿಮ್ಲಾ: ಪ್ರಧಾನಿ ನರೇಂದ್ರ ಮೋದಿ ರ್ಯಾಲಿ ವೀಕ್ಷಿಸಲು ತೆರಳುತ್ತಿದ್ದ ಬಸ್ಸೊಂದು ಪಲ್ಟಿಯಾದ ಪರಿಣಾಮ 35ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿರುವ ಘಟನೆ ಹಿಮಾಚಲ ಪ್ರದೇಶದ ಕಂಗ್ರಾದಲ್ಲಿ ನಡೆದಿದೆ.

ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಧರ್ಮಶಾಲಾದಲ್ಲಿ ಬೃಹತ್ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು. ಈ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದರು. ಹೀಗಾಗಿ ಸ್ಥಳೀಯ ಕಂಪ್ಯೂಟರ್ ಶಾಲೆಯ ಮಕ್ಕಳೆಲ್ಲಾ ಬಸ್ ನಲ್ಲಿ ರ್ಯಾಲಿ ನಡೆಯುತ್ತಿದ್ದ ಸ್ಥಳಕ್ಕೆ ತೆರಳುತ್ತಿದ್ದರು.


ಈ ವೇಳೆ ಕಾಂಗ್ರಾ ಬಳಿ ಬಸ್ ಏಕಾಏಕಿ ಪಲ್ಟಿಯಾಗಿದೆ. ಪರಿಣಾಮ 35ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿದ್ದರೆ, 5 ಮಂದಿ ಸ್ಥಿತಿಯ ಗಂಭೀರವಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಹಾಗೂ ಪೊಲೀಸರು ಗಾಯಗೊಂಡ ಮಕ್ಕಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮಾಹಿತಿಗಳ ಪ್ರಕಾರ 32 ಆಸನಗಳುಳ್ಳ ಬಸ್ನಲ್ಲಿ 45 ಮಕ್ಕಳು ಪ್ರಯಾಣ ಬೆಳೆಸಿದ್ದು, ಅವಘಡಕ್ಕೆ ಕಾರಣವೆಂದು ಹೇಳಲಾಗುತ್ತಿದೆ. ಘಟನೆ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Visit our channel for more and subscribe now http://Youtube.com/c/janajagrutiTVNews

Follow us in facebook https://www.facebook.com/%E0%B2%9C%E0%B2%A8%E0%B2%9C%E0%B2%BE%E0%B2%97%E0%B3%83%E0%B2%A4%E0%B2%BF-%E0%B2%B8%E0%B3%81%E0%B2%A6%E0%B3%8D%E0%B2%A7%E0%B2%BF%E0%B2%B5%E0%B2%BE%E0%B2%B9%E0%B2%BF%E0%B2%A8%E0%B2%BF-474624809612940/

ಮದ್ಯ ಕುಡಿಸಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ : ಹೋಟೆಲ್ ನೌಕರ ಬಂಧನ

          ಜನಜಾಗೃತಿ ಸುದ್ಧಿವಾಹಿನಿ


ಬೆಂಗಳೂರು: ಕೇರಳ ಮೂಲದ ವಿದ್ಯಾರ್ಥಿನಿಯೊಬ್ಬರಿಗೆ ಬಲವಂತವಾಗಿ ಮದ್ಯ ಕುಡಿಸಿ ಅತ್ಯಾಚಾರ ಎಸಗಿದ ಹೋಟೆಲ್​ ನೌಕರನನ್ನು ಅಶೋಕ ನಗರ ಪೊಲೀಸರು ಬಂಧಿಸಿದ್ದಾರೆ.


ಅಸ್ಸೋಂ ಮೂಲದ ಹಯಾನ್ ಡೈಮೇರಿ ಅಲಿಯಾಸ್ ಬಬುಲ್ ಬಂಧಿತ. ರಿಚ್ಮಂಡ್ ರಸ್ತೆಯ ಹೋಟೆಲ್‌ವೊಂದರಲ್ಲಿ ಹಯಾನ್​ ಕೆಲಸ ಮಾಡುತ್ತಿದ್ದ.


ಮುಂಬೈನ ಕಾಲೇಜಿನಲ್ಲಿ ಓದಿ, ಆರು ತಿಂಗಳ ಕಾಲ ಹೋಟೆಲ್​ನಲ್ಲಿ ತರಬೇತಿ ಪಡೆಯುತ್ತಿದ್ದ ವಿದ್ಯಾರ್ಥಿನಿಯನ್ನು ಹಯಾನ್​ ಪರಿಚಯ ಮಾಡಿಕೊಂಡಿದ್ದ. ಇತ್ತೀಚೆಗೆ ಆಸ್ಟಿನ್‌ ಟೌನ್‌ನ ತಮ್ಮ ಮನೆಯಲ್ಲಿ ನಡೆಯುತ್ತಿದ್ದ ಪಾರ್ಟಿಗೆ ಸಂತ್ರಸ್ತೆಯನ್ನೂ ಆಹ್ವಾನಿಸಿದ್ದ ಎನ್ನಲಾಗಿದೆ.


ಆ ದಿನ ರಾತ್ರಿ ನನಗೆ ಬಲವಂತವಾಗಿ ಮದ್ಯಪಾನ ಮಾಡಿಸಿ. ಅಲ್ಲೇ ಉಳಿದುಕೊಳ್ಳಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಿದ್ದ.


ನಾನು ನಿದ್ರೆ ಮಾಡುತ್ತಿದ್ದ ಸಮಯದಲ್ಲಿ ರಾತ್ರಿ 1.30ರ ಸುಮಾರಿಗೆ ಹಯಾನ್ ನನ್ನ ಕೊಠಡಿಗೆ ಬಂದಿದ್ದ. ಎಚ್ಚರಗೊಂಡು ಕಿರುಚಿದಾಗ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ. ನಂತರ ಅತ್ಯಾಚಾರವೆಸಗಿ ಮನೆಯಿಂದ ಹೊರಟು ಹೋದ ಎಂದು ಸಂತ್ರಸ್ತೆ ತಿಳಿಸಿದ್ದಾರೆ.


ನಂಬಿಕೆ ದ್ರೋಹವೆಸಗಿದ ಹಯಾನ್ ವಿರುದ್ಧ ಸೂಕ್ತ ಜರುಗಿಸಬೇಕು ಎಂದು ಸಂತ್ರಸ್ತೆ ದೂರಿನಲ್ಲಿ ಮನವಿ ಮಾಡಿದ್ದಾರೆ. ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡ ಪೊಲೀಸರು, ಆರೋಪಿಯನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.

visit Our Channel and subscribe now Youtube.com/c/janajagrutiTVNews

Follow us in facebook https://www.facebook.com/%E0%B2%9C%E0%B2%A8%E0%B2%9C%E0%B2%BE%E0%B2%97%E0%B3%83%E0%B2%A4%E0%B2%BF-%E0%B2%B8%E0%B3%81%E0%B2%A6%E0%B3%8D%E0%B2%A7%E0%B2%BF%E0%B2%B5%E0%B2%BE%E0%B2%B9%E0%B2%BF%E0%B2%A8%E0%B2%BF-474624809612940/

Wednesday, December 26, 2018

🚩ತಾಕತ್ತಿದ್ರೆ NDA ಯಿಂದ ಹೊರಹೋಗಿ... ಶಿವಸೇನೆಗೆ RSS ಖಡಕ್ ಎಚ್ಚರಿಕೆ?!

    ಜನಜಾಗೃತಿ ಸುದ್ಧಿವಾಹಿನಿ


ಮುಂಬೈ: ಎನ್ ಡಿಎ ಸರ್ಕಾರದಲ್ಲೇ ಗುರುತಿಸಿಕೊಂಡು ಬಿಜೆಪಿ ಬಗ್ಗೆ ನಿರಂತರ ಆರೋಪ ಮಾಡುತ್ತಿರುವ ಶಿವಸೇನೆಯನ್ನು ಆರೆಸ್ಸೆಸ್ ಬೆಂಬಲಿತ ಪತ್ರಿಕೆಯೊಂದು ತರಾಟೆಗೆ ತೆಗೆದುಕೊಂಡಿದೆ.


ಆಕ್ಸಿಜನ್ ಖಾಲಿನಾ? ಮೋದಿಗೆ ಶಿವಸೇನೆ ತಪರಾಕಿ


'ತರುಣ ಭಾರತ' ಎಂಬ ಮರಾಠಿ ಪತ್ರಿಕೆಯು 'ಚೌಕಿದಾರ ಕಳ್ಳ' ಎಂದ ಉದ್ಧವ್ ಠಾಕ್ರೆ ಅವರ ಹೇಳಿಕೆಯನ್ನು ಉಲ್ಲೇಖಿಸಿ, 'ನಿಮಗೆ ಬಿಜೆಪಿ ಬಗ್ಗೆ ಗೌರವವಿಲ್ಲವಾದರೆ, ಅದನ್ನು ನಿರಂತರವಾಗಿ ಟೀಕಿಸುತ್ತೀರಾದರೆ ಇನ್ನೂ ಎನ್ ಡಿಎ ಸರ್ಕಾರದಲ್ಲೇ ಯಾಕಿದ್ದೀರಿ. ತಾಕತ್ತಿದ್ರೆ ಹೊರಬನ್ನಿ' ಎಂದು ಅದು ಖಡಕ್ ವಾರ್ನಿಂಗ್ ನೀಡಿದೆ.


"ಶಿವಸೇನೆಗೆ ಅಧಿಕಾರವೂ ಬೇಕು, ಬಿಜಿಯನ್ನು ಹಳಿಯುವುದೂ ಬೇಕು ಎಂದರೆ ಆಗುವುದಿಲ್ಲ.


ಈ ದೇಶದ ಚೌಕಿದಾರ ಕಳ್ಳ ಎನ್ನಿಸಿದರೆ ತಕ್ಷಣವೇ ಸರ್ಕಾರವನ್ನು ಬಿಟ್ಟು ಬರಲಿ! ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ನಿರಂತರ ಆರೋಪ ಮಾಡುತ್ತಲೇ ಕೇಂದ್ರ ಮತ್ತು ಮಹಾರಾಷ್ಟ್ರ ರಾಜ್ಯದಲ್ಲಿ ಅವರ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿರುವುದು ಸರಿಯೇ?" ಎಂದು ಅದು ಪ್ರಶ್ನಿಸಿದೆ.


ಸರ್ಕಾರದ ಜೊತೆ* *ಯಾಕಿದ್ದೀರಿ? 

ಎನ್ ಡಿಎ ಜೊತೆ ಯಾಕಿದ್ದೀರಿ?


"ಮೋದಿಯವರನ್ನು ಕಳ್ಳ ಎನ್ನುವುದಾರೆ ಅವರದೇ ನೇತೃತ್ವದ ಸರ್ಕಾರದಲ್ಲಿ ನೀವ್ಯಾಕಿದ್ದೀರಿ? ನೀವೂ ಕಳ್ಳರೇ?" ಎಂದು ಪತ್ರಿಕೆಯಲ್ಲಿ ಪ್ರಶ್ನಿಸಲಾಗಿದೆ.


'ಬಾಳಾಸಾಹೇಬ್ ಠಾಕ್ರೆ ಅವರಿದ್ದಾಗಿನ ಶಿವಸೇನೆಗೂ ಈಗಿನದಕ್ಕೂ ಅಜಗಜಾಂತರವಿದೆ. ಈಗಿರುವ ಶಿವಸೇನೆಗೆ ಅಧಿಕಾರವೂ ಬೇಕು, ಆದರೆ ಎನ್ ಡಿಎ ಯಿಂದ ಹೊರಬರುವ ತಾಕತ್ತಿಲ್ಲ' ಎಂದು ಅದು ಟೀಕಿಸಿದೆ.


ಈಗೇಕೆ ನೆನಪಾಯ್ತು?

ರಾಮ ಮಂದಿರ ಈಗೇಕೆ ನೆನಪಾಯ್ತು?


ಇಷ್ಟು ದಿನವಿಲ್ಲದ ರಾಮಮಂದಿರದ ನೆನಪು ಶಿವಸೇನೆಗೆ ಈಗೇಕಾಯ್ತು? ರಾಮಮಂದಿರದ ಕುರಿತು ಬಿಜೆಪಿಯನ್ನು ಹಳಿಯುವ ಶಿವಸೇನೆ, ತಾನೂ ಬಿಜೆಪಿಯೊಂದಿಗೆ ಕೇಂದ್ರದಲ್ಲಿ ಅಧಿಕಾರದಲ್ಲಿತ್ತಲ್ಲ? ಆಗೇಕೆ ರಾಮಮಂದಿರದ ಬಗ್ಗೆ ಚಕಾರವೆತ್ತಲಿಲ್ಲ? ತಾನು ರಾಮಮಂದಿರ ವಿಷಯವನ್ನು ಕೆದಕಿ ಅಧಿಕಾರಕ್ಕೆ ಬಂದುಬಿಡುತ್ತೇನೆ ಎಂಬ ಭ್ರಮೆಯಲ್ಲಿ ಶಿವಸೇನೆ ಇದೆ. ಆದರೆ ಬಿಜೆಪಿ ಇಲ್ಲದೆ ತಾನು ಅಧಿಕಾರಕ್ಕೆ ಬರುವುದಕ್ಕೆ ಸಾಧ್ಯವಿಲ್ಲ ಎಂಬುದು ಅದಕ್ಕೆ ಗೊತ್ತಿಲ್ಲ" ಎಂದು ಈ ಲೇಖನದಲ್ಲಿ ಬರೆಯಲಾಗಿದೆ.


ಚೌಕಿದಾರ ಚೋರ

ರಾಹುಲ್ ಮಾತಿನ ಪುನರುಚ್ಚರಣೆ


ರಾಜಸ್ಥಾನ, ಛತ್ತೀಸ್ ಗಢ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಕಾಂಗ್ರೆಸ್ ಜಯಗಳಿಸಿದ ನಂತರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಶಿವಸೇನೆ ಮನಸಾರೆ ಹೊಗಳಿತ್ತು. ಅದು ಸಾಲದೆಂಬಂತೆ, ಪ್ರಧಾನಿ ಮೋದಿ ಅವರನ್ನು, 'ಚೌಕಿದಾರ ಚೋರ' ಎಂದಿದ್ದ ರಾಹುಲ್ ಗಾಂಧಿ ಅವರ ಮಾತನ್ನೇ ಉಚ್ಚರಿಸಿ, ಬಿಜೆಪಿಗೆ ಮತ್ತಷ್ಟು ಇರಿಸುಮುರಿಸುಂಟು ಮಾಡಿತ್ತು.


ಆಕ್ಸಿಜನ್ ಖಾಲಿನಾ?!

ಮೋದಿಯವರಿಗೆ ಅಧಿಕಾರವೆಂದರೆ ಆಕ್ಸಿಜನ್!


'ಕಾಂಗ್ರೆಸ್ಸಿಗೆ ಮತ್ತು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಅಧಿಕಾರವೆಂದರೆ ಆಕ್ಸಿಜನ್ ಇದ್ದ ಹಾಗೆ ಎನ್ನಿಸಿತ್ತು. ಅದಕ್ಕೆಂದೇ ಅವರು ಅದನ್ನು ಬಿಟ್ಟು ಎಂದಿಗೂ ಇರುತ್ತಿರಲಿಲ್ಲ' ಎಂದಿದ್ದ ಮೋದಿ ಮಾತನ್ನೇ ಶಿವಸೇನೆ ಮೋದಿಯವರತ್ತ ತಿರುಗಿಸಿತ್ತು. ಮೋದಿಯವರಿಗೂ ಅಧಿಕಾರವೆಂದರೆ ಆಕ್ಸಿಜನ್ ಇದ್ದ ಹಾಗೆ ಎಂದಿತ್ತು.

Visit our channel and subscribe now http://Youtube.com/c/janajagrutiTVNews

Follow Us on facebook https://www.facebook.com/%E0%B2%9C%E0%B2%A8%E0%B2%9C%E0%B2%BE%E0%B2%97%E0%B3%83%E0%B2%A4%E0%B2%BF-%E0%B2%B8%E0%B3%81%E0%B2%A6%E0%B3%8D%E0%B2%A7%E0%B2%BF%E0%B2%B5%E0%B2%BE%E0%B2%B9%E0%B2%BF%E0%B2%A8%E0%B2%BF-474624809612940/

🤚🏻ಕಾಂಗ್ರೆಸ್‌ನ ಮೂವರ ನೇಮಕಕ್ಕೆ ಜೆಡಿಎಸ್‌ ತೀವ್ರ ಅತೃಪ್ತಿ

      ಜನಜಾಗೃತಿ ಸುದ್ಧಿವಾಹಿನಿ

ಬೆಂಗಳೂರು: ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಸೇರಿದಂತೆ ಮೂರು ಪ್ರಮುಖ ನೇಮಕ ಕುರಿತ ನಿರ್ಧಾರಕ್ಕೆ ಸಂಬಂಧಿಸಿದಂತೆ ಅಸಮಾಧಾನಗೊಂಡಿರುವ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷ ಜೆಡಿಎಸ್‌ ನಾಯಕರು ಮಿತ್ರ ಪಕ್ಷ ಕಾಂಗ್ರೆಸ್ಸಿನ ವರಿಷ್ಠರಿಗೆ ದೂರು ರವಾನಿಸಿದ್ದಾರೆ.


ಸದ್ಯ ರಾಜಸ್ಥಾನದ ಮುಖ್ಯಮಂತ್ರಿಯೂ ಆಗಿರುವ ಕಾಂಗ್ರೆಸ್ಸಿನ ಹಿರಿಯ ನಾಯಕ ಅಶೋಕ್‌ ಗೆಹ್ಲೋಟ್‌ ಮತ್ತು ಇನ್ನೊಬ್ಬ ಹಿರಿಯ ನಾಯಕ ಅಹಮದ್‌ ಪಟೇಲ್‌ ಅವರಿಗೆ ದೂರವಾಣಿ ಮೂಲಕ ಜೆಡಿಎಸ್‌ ನಾಯಕರು ತಮ್ಮ ಅತೃಪ್ತಿಯನ್ನು ತಲುಪಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.


ಕಾಂಗ್ರೆಸ್ಸಿನ ಈ ಹಿರಿಯ ನಾಯಕರು ತಮ್ಮ ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಗಮನಕ್ಕೆ ತರುವುದಾಗಿ ಜೆಡಿಎಸ್‌ ನಾಯಕರಿಗೆ ಭರವಸೆಯನ್ನೂ ನೀಡಿದ್ದಾರೆ. ಇದೇ ವೇಳೆ ದೆಹಲಿಯಲ್ಲಿರುವ ಜೆಡಿಎಸ್‌ ವರಿಷ್ಠ ನಾಯಕ ಎಚ್‌.ಡಿ.ದೇವೇಗೌಡ ಹಾಗೂ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡುವ ಸಾಧ್ಯತೆಯೂ ಇದೆ ಎನ್ನಲಾಗಿದೆ.


ಜೆಡಿಎಸ್‌ ಅತೃಪ್ತಿಗೊಂಡಿರುವುದಕ್ಕೆ ಕಾರಣವಾದ ಮೂರು ಅಂಶಗಳು- ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ಹಾಗೂ ದೆಹಲಿ ವಿಶೇಷ ಪ್ರತಿನಿಧಿ ನೇಮಕ ತೀರ್ಮಾನ.


ಈ ಮೂರು ಹುದ್ದೆಗಳು ನೇರವಾಗಿ ಸರ್ಕಾರದ ಮುಖ್ಯಸ್ಥರಾಗಿರುವ ಮುಖ್ಯಮಂತ್ರಿಗಳಿಗೆ ಸಂಬಂಧಿಸುವಂಥವು. ಅವುಗಳಿಗೆ ನೇಮಕ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳುವ ಅಧಿಕಾರ ಕಾಂಗ್ರೆಸ್‌ ನಾಯಕರಿಗೂ ಇದೆಯಾದರೂ ಯಾರಾಗಬಹುದು ಎಂಬುದರ ಬಗ್ಗೆ ಸೌಜನ್ಯಕ್ಕಾದರೂ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಬೇಕಿತ್ತು ಎಂಬುದು ಜೆಡಿಎಸ್‌ ನಾಯಕರ ಆಕ್ಷೇಪ.


ಅದರಲ್ಲೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಯಾರಾಗಬೇಕು ಎಂಬುದನ್ನು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸದೇ ತೀರ್ಮಾನ ಕೈಗೊಂಡಿದ್ದರ ಬಗ್ಗೆ ಜೆಡಿಎಸ್‌ ನಾಯಕರು ತೀವ್ರ ಆಕ್ರೋಶಗೊಂಡಿದ್ದಾರೆ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳನ್ನಾಗಿ ಇಬ್ಬರನ್ನು ನೇಮಕ ಮಾಡಿಕೊಳ್ಳುವ ಅವಕಾಶವಿದೆ. ಕಾಂಗ್ರೆಸ್‌ನಿಂದ ನೇಮಕ ಕುರಿತು ನಿರ್ಧಾರ ಪ್ರಕಟಿಸುವ ಮೊದಲು ಯಾರನ್ನು ನೇಮಕ ಮಾಡಿದರೆ ಸೂಕ್ತವಾದೀತು ಎಂಬುದನ್ನಾದರೂ ಸಮಾಲೋಚನೆ ಮಾಡಬೇಕಾಗಿತ್ತು. ಯಾವುದನ್ನೂ ಮಾಡದೆ ನೇರವಾಗಿ ಮಾಧ್ಯಮಗಳಲ್ಲಿ ನೇಮಕ ಕುರಿತ ನಿರ್ಧಾರ ಪ್ರಕಟಿಸಿರುವುದು ಸರಿಯಲ್ಲ ಎಂಬ ಮಾತನ್ನು ಜೆಡಿಎಸ್‌ ನಾಯಕರು ಮಿತ್ರ ಪಕ್ಷವಾದ ಕಾಂಗ್ರೆಸ್ಸಿನ ರಾಷ್ಟ್ರೀಯ ನಾಯಕರ ಗಮನಕ್ಕೆ ತಂದಿದ್ದಾರೆ.


ಆದರೆ, ಕಾಂಗ್ರೆಸ್‌ ಪಕ್ಷದ ನಾಯಕರು ಈಗಾಗಲೇ ಈ ಮೂರು ಪ್ರಮುಖ ಹುದ್ದೆಗಳಿಗೆ ಹೆಸರುಗಳನ್ನು ಅಂತಿಮಗೊಳಿಸಿ ಪ್ರಕಟಿಸಿದ್ದಾರೆ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಸ್ಥಾನಕ್ಕೆ ಶಾಸಕ ವಿ.ಮುನಿಯಪ್ಪ, ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ಹುದ್ದೆಗೆ ಶಾಸಕ ಶರಣಬಸಪ್ಪ ದರ್ಶನಾಪುರ ಹಾಗೂ ದೆಹಲಿ ವಿಶೇಷ ಪ್ರತಿನಿಧಿಯಾಗಿ ಶಾಸಕ ಡಾ.ಅಜಯ್‌ ಸಿಂಗ್‌ ಅವರನ್ನು ಕಾಂಗ್ರೆಸ್‌ ಪ್ರಸ್ತಾಪಿಸಿದೆ. ಆದರೆ, ಆ ಕುರಿತ ಕಡತಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅಂಕಿತ ಹಾಕಿಲ್ಲ. ಇದೀಗ ಜೆಡಿಎಸ್‌ ನಾಯಕರ ಆಕ್ಷೇಪದ ಹಿನ್ನೆಲೆಯಲ್ಲಿ ಹೆಸರುಗಳಲ್ಲಿ ಬದಲಾವಣೆಯಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

For more news visit our channel : http://Youtube.com/c/janajagrutiTVNews

Follow Us on facebook 


https://www.facebook.com/%E0%B2%9C%E0%B2%A8%E0%B2%9C%E0%B2%BE%E0%B2%97%E0%B3%83%E0%B2%A4%E0%B2%BF-%E0%B2%B8%E0%B3%81%E0%B2%A6%E0%B3%8D%E0%B2%A7%E0%B2%BF%E0%B2%B5%E0%B2%BE%E0%B2%B9%E0%B2%BF%E0%B2%A8%E0%B2%BF-474624809612940/

ಆಹ್ವಾನ ಪತ್ರಿಕೆಯಲ್ಲಿ ಪ್ರಮೋದ್ ಮಧ್ವರಾಜ್ ಹೆಸರು ಕೈ ಬಿಟ್ಟ ಮುಸ್ಲಿಂ ಸೆಂಟ್ರಲ್ ಕಮಿಟಿ

    ಜನಜಾಗೃತಿ ಸುದ್ಧಿವಾಹಿನಿ

ಮಂಗಳೂರು: ಕರಾವಳಿ ಕರ್ನಾಟಕ ಭಾಗದ ಅಲ್ಪಸಂಖ್ಯಾತರ ಧ್ವನಿ ಎಂದೇ ಹೇಳಲಾಗುವ ಮುಸ್ಲಿಂ ಸೆಂಟ್ರಲ್ ಕಮಿಟಿಯು ತನ್ನ 50ನೇ ವರ್ಷಾಚರಣೆಯನ್ನು ಇದೇ ಬರುವ ಡಿಸೆಂಬರ್ 29 ರಂದು ಆಚರಿಸಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಡಿಸೆಂಬರ್ 29 ರಂದು ಮಂಗಳೂರಿನ ಪುರಭವನದಲ್ಲಿಮುಸ್ಲಿಂ ಸೆಂಟ್ರಲ್ ಕಮಿಟಿಯ ಸುವರ್ಣ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದೆ. 

ದರೆ ಇಲ್ಲಿ ವಿಷಯ ಏನಪ್ಪ ಅಂದರೆ ಈ 'ಸ್ವರ್ಣ ಮಹೋತ್ಸವ' ಕಾರ್ಯಕ್ರಮಕ್ಕೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರನ್ನು ಮುಸ್ಲಿಂ ಸೆಂಟ್ರಲ್ ಕಮಿಟಿ ಮುಖ್ಯ ಅತಿಥಿಯಾಗಿ ಆಹ್ವಾನಿಸಿತ್ತು.


ಕಾಂಗ್ರೆಸ್ ಗೆ ಬಿಸಿ ತುಪ್ಪವಾದ ದಕ್ಷಿಣಕನ್ನಡ ಮುಸ್ಲಿಂ ಸೆಂಟ್ರಲ್ ಕಮಿಟಿಯ ತೀರ್ಮಾನ


ಆದರೆ ಈ ನಡುವೆ ಟಿಪ್ಪು ಸುಲ್ತಾನ್ ವಿರುದ್ಧ ಬ್ರಹ್ಮಾವರದ ಚರ್ಚ್ ಒಂದರ ಕಾರ್ಯಕ್ರಮದಲ್ಲಿ ಪ್ರಮೋದ್ ಮಧ್ವರಾಜ್ ಮಾತನಾಡಿದ್ದಾರೆಂಬ ಆರೋಪಕ್ಕೆ ಗುರಿಯಾಗುತ್ತಿದ್ದಂತೆ ಪ್ರಮೋದ್ ಅವರ ಹೆಸರನ್ನು ಆಮಂತ್ರಣ ಪತ್ರಿಕೆಯಲ್ಲಿ ಕೈಬಿಟ್ಟು ಪರಿಷ್ಕೃತ ಆಹ್ವಾನ ಪತ್ರಿಕೆ ಮುದ್ರಿಸಲಾಗಿದೆ ಎಂದು ಸಮಿತಿ ತಿಳಿಸಿದೆ.


ಉಡುಪಿ ಜಿಲ್ಲೆಯಲ್ಲಿ ಇತ್ತೀಚೆಗೆ ಚರ್ಚ್ ಒಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, 'ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಆ ದೇವರೇ ತನ್ನನ್ನು ತಡೆದಿದ್ದಾನೆ' ಎಂದು ಹೇಳಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು.

Subscribe Us on Youtube(Jana Jagruti Tv.news) https://youtu.be/SZZ6czQsK84 

Follow Us on facebook(ಜನಜಾಗೃತಿ ಸುದ್ಧಿವಾಹಿನಿ) https://www.facebook.com/%E0%B2%9C%E0%B2%A8%E0%B2%9C%E0%B2%BE%E0%B2%97%E0%B3%83%E0%B2%A4%E0%B2%BF-%E0%B2%B8%E0%B3%81%E0%B2%A6%E0%B3%8D%E0%B2%A7%E0%B2%BF%E0%B2%B5%E0%B2%BE%E0%B2%B9%E0%B2%BF%E0%B2%A8%E0%B2%BF-474624809612940/

2019 ರಲ್ಲಿ ಯಾರು ಗೆಲ್ಲುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ - ಬಾಬಾ ರಾಮ್ ದೇವ್

      ಜನಜಾಗೃತಿ ಸುದ್ಧಿವಾಹಿನಿ

ನವದೆಹಲಿ: ದೇಶದಲ್ಲಿ ಈಗಿನ ರಾಜಕೀಯ ಪರಿಸ್ಥಿತಿ ಜಟಿಲವಾಗಿದೆ.೨೦೧೯ರ ಲೋಕಸಭಾ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ ಎಂಬುವುದರ ಬಗ್ಗೆ ಏನೂ ಹೇಳಲು ಸಾಧ್ಯವಿಲ್ಲ. ಹೀಗಾಗಿ ಮುಂಬರುವ ಲೋಕಸಭಾ ಚುನಾವಣೆ ಬಳಿಕ ಯಾರು ಮುಂದಿನ ಪ್ರಧಾನಿಯಾಗಬಹುದು ಎಂದು ಹೇಳಲು ಸಾಧ್ಯವಿಲ್ಲ ಎಂದು ಖ್ಯಾತ ಯೋಗಗುರು ಬಾಬಾ ರಾಮ್ ದೇವ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.


ತಮಿಳುನಾಡಿನ ಮಧುರೈನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಾಬಾ ರಾಮ್ ದೇವ್, ಮುಂದಿನ ಪ್ರಧಾನಿಯಾಗಿ ಯಾರು ದೇಶವನ್ನು ಮುನ್ನಡೆಸುತ್ತಾರೆ ಎಂಬುದನ್ನು ಅರಿಯಲು ಸಾಧ್ಯವಿಲ್ಲ ಎಂದರು.


ಇದೇ ವೇಳೆ ತಾವು ಯಾವುದೇ ಪಕ್ಷದ ಪರವಾಗಿ ಅಥವಾ ವ್ಯಕ್ತಿಯ ಪರವಾಗಿ ನಿಂತಿಲ್ಲ ಎಂದು ಸ್ಪಷ್ಟನೆ ನೀಡಿದ ಬಾಬಾ ರಾಮ್ ದೇವ್, ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಾವು ಯಾರನ್ನೂ ಬೆಂಬಲಿಸುವುದಿಲ್ಲ ಎಂದು ಹೇಳಿದ್ದಾರೆ. ಅಂತೆಯೇ ಪ್ರಸ್ತುತ ತಾವು ರಾಜಕೀಯದ ಕುರಿತು ಆಲೋಚನೆ ಮಾಡುತ್ತಿಲ್ಲ ಎಂದೂ ಹೇಳಿದ್ದಾರೆ. ೫೨ ಹರೆಯ ರಾಮ್ ದೇವ್ ೨೦೧೫ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ಮಾಡಿದ್ದರು. ವರ್ಷದ ನಂತರ ಹರಿಯಾಣದ ರಾಯಭಾರಿಯನ್ನಾಗಿ ಸಂಪುಟ ಸಚಿವರ ದರ್ಜೆ ನೀಡಲಾಯಿತು.


ಆದರೆ ಇತ್ತೀಚೆಗೆ ರಾಜಕೀಯದಿಂದ ದೂರವಾಗಿರುವಂತೆ ಮಾತನಾಡಿತ್ತಿರುವ ಅವರು ಇಲ್ಲೂ ಕೂಡಾ ‘ರಾಜಕೀಯ ಅಸ್ಥಿರತೆ, ಹೋರಾಟ, ಕಿತ್ತಾಟಗಳು ದೇಶಕ್ಕೆ ಒಳ್ಳೆಯದಲ್ಲ. ನನ್ನ ಉದ್ದೇಶ ಹಿಂದು ದೇಶ ನಿರ್ಮಾಣವಲ್ಲ, ಅಧ್ಯಾತ್ಮಿಕ ದೇಶ ಕಟ್ಟುವುದು. ರಾಜಕೀಯದ ಬಗ್ಗೆ ಆಸಕ್ತಿಯಿಲ್ಲ ಯೋಗ ಮತ್ತು ವೇದಾಭ್ಯಾಸಗಳಿಂದ ನಾವು ಭಾರತವನ್ನು ಆಭಿವೃದ್ದಿಶೀಲ ದೈವಿಕ ಮತ್ತು ಆಧ್ಯಾತ್ಮ ದೇಶವನ್ನಾಗಿ ಮಾಡುತ್ತೇವೆ ’ ಎಂದು ಹೇಳಿದ್ದಾರೆ.

Subscribe Us On Youtube (Jana Jagruti Tv.news) https://youtu.be/SZZ6czQsK84 

Follow Us In Facebook(ಜನಜಾಗೃತಿ ಸುದ್ಧಿವಾಹಿನಿ) https://www.facebook.com/%E0%B2%9C%E0%B2%A8%E0%B2%9C%E0%B2%BE%E0%B2%97%E0%B3%83%E0%B2%A4%E0%B2%BF-%E0%B2%B8%E0%B3%81%E0%B2%A6%E0%B3%8D%E0%B2%A7%E0%B2%BF%E0%B2%B5%E0%B2%BE%E0%B2%B9%E0%B2%BF%E0%B2%A8%E0%B2%BF-474624809612940/

Tuesday, December 25, 2018

ತೆಲಂಗಾಣ ಸೆಂಟಿಮೆಂಟ್: ನಾಯ್ಡು ಜುಟ್ಟು ಮೋದಿ ಕೈಯಲ್ಲಿ!

    ಜನಜಾಗೃತಿ ಸುದ್ಧಿವಾಹಿನಿ

  ಅಮರಾವತಿ: ಕೇಂದ್ರ ಎನ್ ಡಿಎ ಸರ್ಕಾರಕ್ಕೆ ಕಾಂಗ್ರೆಸ್ ಗಿಂತ ದೊಡ್ಡ ದುಃಸ್ವಪ್ನವೆನ್ನಿಸಿದ್ದ ತೆಲುಗುದೇಶಂ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಅವರ ಜುಟ್ಟು ಕೊನೆಗೂ ಪ್ರಧಾನಿ ಮೋದಿಗೆ ಸಿಕ್ಕಂತಾಗಿದೆ! ತೆಲಂಗಾಣ ಸೆಂಟಿಮೆಂಟ್ ಅನ್ನೇ ಇಟ್ಟುಕೊಂಡು ನಾಯ್ಡು ಅವರನ್ನು ಹಳಿಯುವ ಕೆಲಸ ಮಾಡಲು ಮೋದಿ ಮುಂದಾಗಿದ್ದಾರೆ.


ಕಾಂಗ್ರೆಸ್‌ಗಿಂತಲೂ ಬಿಜೆಪಿ ಅಪಾಯಕಾರಿ: ಚಂದ್ರಬಾಬು ನಾಯ್ಡು


ತೆಲಂಗಾಣದಲ್ಲಿ ನಡೆದ ವಿಧಾನಸಭೆ ಚುನಾವಣೆಯ ಪ್ರಚಾರದ ಸಮಯದಲ್ಲಿ ನಾಯ್ಡು ಅವರನ್ನು 'ತೆಲಂಗಾಣ ವಿರೋಧಿ' ಎಂದು ಬಿಂಬಿಸುವಲ್ಲಿ ಯಶಸ್ವಿಯಾದ ತೆಲಂಗಾಣ ಮುಖ್ಯಮಂತ್ರಿ ಮತ್ತು ತೆಲಂಗಾಣ ರಾಷ್ಟ್ರ ಸಮಿತಿ ನಾಯಕ ಕೆ ಚಂದ್ರಶೇಖರ್ ರಾವ್ ಅವರ ಹಾದಿಯನ್ನೇ ಪ್ರಧಾನಿ ಮೋದಿಯವರೂ ತುಳಿದಿದ್ದಾರೆ!


ಮೋದಿಯ ಸ್ವಭಾವದಿಂದಲೇ ದೇಶದ ಅರ್ಥಿಕತೆ ಹಾಳು: ಚಂದ್ರಬಾಬು ನಾಯ್ಡು

ಆಂಧ್ರಪ್ರದೇಶ ಬಿಜೆಪಿ ಕಾರ್ಯಕರ್ತರೊಂದಿಗೆ ವಿಡಿಯೋ ಕಾನ್ಫಿರೆನ್ಸ್ ಮೂಲಕ ಮಾತನಾಡಿದ ಮೋದಿ, 'ಕಾಂಗ್ರೆಸ್ ನೊಂದಿಗೆ ಕೈಜೋಡಿಸುವ ಮೂಲಕ ಚಂದ್ರಬಾಬು ನಾಯ್ಡು ಅವರು ಎನ್ ಟಿಆರ್ ಅವರಿಗೆ ಮೋಸ ಮಾಡುತ್ತಿದ್ದಾರೆ' ಎಂದಿದ್ದರು.


ಮಾತು ಬದಲಿಸಿದ ನಾಯ್ಡು 

'ಸೋನಿಯಾ ಗೋಡ್ಸೆ' ಎಂದಿದ್ದ ನಾಯ್ಡು!


2014 ರ ಲೋಕಸಭಾ ಚುನಾವಣೆಯ ನಂತರ ಬಿಜೆಪಿ ಜೊತೆ ಕೈಜೋಡಿಸಿದ್ದ ನಾಯ್ಡು, ಸಿಕ್ಕಾಗಲೆಲ್ಲ ಕಾಂಗ್ರೆಸ್ ಅನ್ನು ಹಳಿಯಲು ಮರೆತವರಲ್ಲ. ಸೋನಿಯಾ ಗಾಂಧಿ ಅವರನ್ನು 'ಸೋನಿಯಾ ಗೋಡ್ಸೆ' ಎಂದು ಕರೆದಿದ್ದವರು ನಾಯ್ಡು. ಕಾಂಗ್ರೆಸ್ ಅನ್ನು ಹೂಳಬೇಕು ಎಂದಿದ್ದರು. ಈ ದೇಶದ ರೈತರು ಕತ್ತಿ ಹಿಡಿದು ಬಂದು ಕಾಂಗ್ರೆಸ್ ಪಕ್ಷವನ್ನು ಮುಗಿಸಿ, ಕಾಂಗ್ರೆಸ್ ಪಕ್ಷ ಈ ದೇಶದ ಶನಿ ಎಂದು ನಾಯ್ಡು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಆದರೆ ಇಂದು ಅದೇ ಕಾಂಗ್ರೆಸ್ ಜೊತೆ ಕೈಜೋಡಿಸಿದ್ದಾರೆ' ಎಂದು ಮೋದಿ ನಾಯ್ಡು ಅವರ ಹಳೆಯ ದಿನಗಳನ್ನು ಕೆದಕಿದರು.

 

ತೆಲಂಗಾಣದ ಭಾವನೆ

ತೆಲಂಗಾಣ ಸೆಂಟಿಮೆಂಟ್


ತೆಲುಗು ದೇಶಂ ಪಕ್ಷದ ಸಂಸ್ಥಾಪಕ ಎನ್ ಟಿ ರಾಮರಾವ್ ಅವರಿಗೆ ಆಂಧ್ರಪ್ರದೇಶದ ಜನರೊಂದಿಗಿದ್ದ ಭಾವನಾತ್ಮಕ ಬಂಧವನ್ನು ನೆನಪಿಸಿದ ಮೋದಿ, "ಕಾಂಗ್ರೆಸ್ ನಿಂದ ಹೊರಬಂದು, ಅದರಿಂದ ದೂರವುಳಿದಿದ್ದ ಎನ್ ಟಿಆರ್ ಅವರ ಪಕ್ಷದವರೇ ಆದ ನಾಯ್ಡು, ಇದೀಗ ಕಾಂಗ್ರೆಸ್ ಜೊತೆ ಕೈಜೋಡಿಸಿದ್ದು, ಎನ್ ಟಿಆರ್ ಅವರಿಗೆ ಮಾಡಿದ ವಂಚನೆ" ಎಂದರು.


ನಾಯ್ಡು ಏನಂದ್ರು?

ನಾಯ್ಡು ಪ್ರತಿಕ್ರಿಯೆ ಏನು?


ಮೋದಿಯವರ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ನಾಯ್ಡು, ಕಾಂಗ್ರೆಸ್-ಟಿಡಿಪಿ ಒಟ್ಟಾಗಿರುವುದನ್ನು ಸಹಿಸದೆ ಮೋದಿಯವರು ಇಂಥ ಆರೋಪ ಮಾಡುತ್ತಿದ್ದಾರೆ. ಯಾರೇನೇ ಅಂದರೂ ಸರಿ, ನಾವು ಲೋಕಸಭಾ ಚುನಾವಣೆಯನ್ನೂ ಕಾಂಗ್ರೆಸ್ ಜೊತೆಗೇ ಸ್ಪರ್ಧಿಸುತ್ತೇವೆ ಎಂದು ಖಡಕ್ಕಾಗಿ ಉತ್ತರಿಸಿದ್ದಾರೆ.


ಟಿಆರ್ ಎಸ್ ಗೆ ಮುಖಭಂಗ 

ತೆಲಂಗಾಣದಲ್ಲಿ ಮುಖಭಂಗ


ಇತ್ತೀಚೆಗೆ ತೆಲಂಗಾಣದಲ್ಲಿ ನಡೆದ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಜೊತೆ ತೆಲುಗುದೇಶಂ ಪಕ್ಷ ಮೈತ್ರಿ ಮಾಡಿಕೊಂಡಿತ್ತು. ಆದರೆ ತೆಲಂಗಾಣ ರಾಷ್ಟ್ರ ಸಮಿತಿಯ ಅಲೆಯ ಮುಂದೆ ಈ ಮಹಾಕೂಟಮಿ ಪೇಲವವಾಗಿ ಸೋತು ಸುಣ್ಣವಾಗಿತ್ತು. ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು, ಕೆಸಿಆರ್ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿ, ಟಿಆರ್ ಎಸ್ ಪಾರುಪತ್ಯಕ್ಕೆ ಮಂಗಳ ಹಾಡುವ ಯೋಚನೆಗೆ ತೀವ್ರ ಮುಖಭಂಗವಾಗಿತ್ತು.

Subscribe us on Youtube(Jana Jagruti Tv.news) https://youtu.be/KJK-MwcJBw0

Follow us on facebook (ಜನಜಾಗೃತಿ ಸುದ್ಧಿವಾಹಿನಿ) https://www.facebook.com/%E0%B2%9C%E0%B2%A8%E0%B2%9C%E0%B2%BE%E0%B2%97%E0%B3%83%E0%B2%A4%E0%B2%BF-%E0%B2%B8%E0%B3%81%E0%B2%A6%E0%B3%8D%E0%B2%A7%E0%B2%BF%E0%B2%B5%E0%B2%BE%E0%B2%B9%E0%B2%BF%E0%B2%A8%E0%B2%BF-474624809612940/

ಯವತ್‌ಮಾಳ್‌ ನಲ್ಲಿ ಭೀಕರ ಅಪಘಾತ ; 9 ಮಂದಿ ದುರ್ಮರಣ

     ಜನಜಾಗೃತಿ ಸುದ್ಧಿವಾಹಿನಿ

          2⃣6⃣▪12▪2018

ಯವತ್‌ಮಾಳ್‌ (ಮಹಾರಾಷ್ಟ್ರ):

ಕ್ರೂಸರ್‌ ಎಸ್‌ಯುವಿ ವಾಹನವೊಂದು ಗ್ಯಾಸ್‌ ಟ್ಯಾಂಕರ್‌ಗೆ ಢಿಕ್ಕಿಯಾಗಿ 9 ಮಂದಿ ದಾರುಣವಾಗಿ ಸಾವನ್ನಪ್ಪಿ, 7 ಮಂದಿ ಗಂಭೀರವಾಗಿ ಗಾಯಗೊಂಡ ಭೀಕರ ಅವಘಡ ಮಂಗಳವಾರ ತಡರಾತ್ರಿ ನಾಗಪುರ-ಯವತ್‌ಮಾಳ ಹೆದ್ದಾರಿಯಲ್ಲಿ ನಡೆದಿದೆ.


ಪಾರ್ಡಿಯಿಂದ ಚಪ್ರಾಡಾ ಎಂಬಲ್ಲಿಗೆ ನಿಶ್ಚಿತಾರ್ಥಕ್ಕೆ ತೆರಳಿ ವಾಪಾಸಾಗುತ್ತಿದ್ದ ವೇಳೆ ಅವಘಡ ಸಂಭವಿಸಿದ್ದು, ಗ್ಯಾಸ್‌ ಟ್ಯಾಂಕರ್‌ಗೆ ಮುಖಾಮುಖೀಯಾಗಿ ಅವಘಡ ಸಂಭವಿಸಿದೆ.


ಎರಡು ಕುಟುಂಬದ 9 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದರೆ, 7 ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಯವತ್‌ಮಾಳ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

Subscribe Us on (ಜನಜಾಗೃತಿ ಸುದ್ಧಿವಾಹಿನಿ)

youtube https://youtu.be/SZZ6czQsK84 

Follow Us on Facebook

https://www.facebook.com/%E0%B2%9C%E0%B2%A8%E0%B2%9C%E0%B2%BE%E0%B2%97%E0%B3%83%E0%B2%A4%E0%B2%BF-%E0%B2%B8%E0%B3%81%E0%B2%A6%E0%B3%8D%E0%B2%A7%E0%B2%BF%E0%B2%B5%E0%B2%BE%E0%B2%B9%E0%B2%BF%E0%B2%A8%E0%B2%BF-474624809612940/