Friday, December 28, 2018

ಬಾಲಿವುಡ್ ನಟ ಖಾದರ್ ಖಾನ್ ಆರೋಗ್ಯ ಸ್ಥಿತಿ ಗಂಭೀರ

        ಜನಜಾಗೃತಿ ಸುದ್ಧಿವಾಹಿನಿ

ನವದೆಹಲಿ: ಬಾಲಿವುಡ್‍ನ ಹಿರಿಯ ನಟ, ಸಂಭಾಷಣೆಗಾರ ಖಾದರ್‍ಖಾನ್‍ ರ ದೇಹ ಸ್ಥಿತಿ ಗಂಭೀರ ವಾಗಿದ್ದು ಅವರಿಗೆ ಕೆನಡಾದ ಬಿಪಾಪ್ ಆಸ್ಪತ್ರೆಯ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೆನಡಾದಲ್ಲಿರುವ ತಮ್ಮ ಮಗ ಶಾರ್ಫಾಜ್‍ಖಾನ್ ಹಾಗೂ ಸೊಸೆ ಷಹಿಷ್ಠರೊಂದಿಗೆ ವಾಸವಾಗಿರುವ ಖಾದರ್ ಖಾನ್ ಅವರು ಉಸಿರಾಟಕ್ಕೆ ಸಂಬಂಧಿಸಿದ ಬಾಧೆಯಿಂದ ನರಳುತ್ತಿದ್ದು ಅವರನ್ನು ಬಿಪಾಪ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿತ್ತು.


ಆದರೆ ಅವರ ದೇಹ ಸ್ಥಿತಿ ಗಂಭೀರವಾಗಿರುವುದರಿಂದ ಅವರನ್ನು ಸಾಮಾನ್ಯ ಐಸಿಯು ಘಟಕದಿಂದ ವಿಶೇಷ ಐಸಿಯು ಘಟಕಕ್ಕೆ ವರ್ಗಾಯಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಖಾದರ್‍ಖಾನ್ ಅವರಿಗೆ ಮಾತನಾಡಲು ಸಾಧ್ಯವಾಗುತ್ತಿಲ್ಲ ಹಾಗೂ ಅವರ ದೇಹ ಚಿಕಿತ್ಸೆಗೆ ಸ್ಪಂದಿಸದ ಕಾರಣ ಅವರ ಸ್ಥೀತಿ ಚಿಂತಾಜನಕ ವಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.


ಇತ್ತೀಚೆಗೆ ಮಂಡಿ ನೋವಿಗಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಖಾದರ್‍ಖಾನ್ ಅವರು ಮುಜ್‍ಸೇ ಶಾದಿ ಕರೋಗಿ, ಲಕ್ಕಿ, ಜೀನಾ ಮೇರೆ ಲೀಯೆ, ಅಖೊಂಸೆ ಗೋಲಿ ಮಾರೆ, ಜೋರು ಕಾ ಗುಲಾಮ್, ಹಸೀನಾ ಮನ್ ಜಾಯೇಂಗೆ, ಅನಾರಿ ನಂ. 1, ಆಂಟಿ ನಂ.1, ಬಾಪ್ ಏಕ್ ನಂಬರಿ, ಬೇಟಾ ದಸ್ ನಂಬರಿ ಮುಂತಾದ ಚಿತ್ರಗಳಲ್ಲಿ ತಮ್ಮ ನಟನೆಯಿಂದ ಪ್ರೇಕ್ಷಕರ ಮನರಂಜಿಸಿದ್ದರು.


300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಕಾದರ್ ಸಂವಾದ ಲೇಖನಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ತನ್ನ ಆಕರ್ಷಕ ಧ್ವನಿ ಹಾಗೂ ಅದ್ಭುತ ಕಾಮಿಕ್ ಟೈಮಿಂಗ್ ಗೆ ಸುಪ್ರಸಿದ್ಧರಾಗಿರುವ ಕಾದರ್ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. 90ರ ದಶಕದಲ್ಲಿ ನಟ ಗೋವಿಂದಾ ಹಾಗೂ ಕಾದರ್ ಖಾನ್ ಜೋಡಿಯನ್ನು ಹಿಟ್ ಫಾರ್ಮುಲಾ ಎಂದೇ ಕರೆಯಲಾಗುತ್ತಿತ್ತು. ಇವರಿಬ್ಬರೂ ದೂಲ್ಹೇ ರಾಜಾ, ಕುಲೀ ನಂಬರ್ 1, ರಾಜಾ ಬಾಬೂ ಹಾಗೂ ಆಂಖೆ ಯಂತಹ ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ್ದಾರೆ.

Visit our channel and subscribe to support us Youtube.com/c/janajagrutiTVNews

Follow us in facebook https://www.facebook.com/%E0%B2%9C%E0%B2%A8%E0%B2%9C%E0%B2%BE%E0%B2%97%E0%B3%83%E0%B2%A4%E0%B2%BF-%E0%B2%B8%E0%B3%81%E0%B2%A6%E0%B3%8D%E0%B2%A7%E0%B2%BF%E0%B2%B5%E0%B2%BE%E0%B2%B9%E0%B2%BF%E0%B2%A8%E0%B2%BF-474624809612940/

No comments:

Post a Comment