Monday, January 28, 2019

⭕ಮೋದಿ ಪೋಟೋ ತಿರುಚಿದ ತ.ನಾಡಿನ ಎಂಡಿಎಂಕೆ ಸದಸ್ಯ ಬಂಧನ

ಜನಜಾಗೃತಿ ಸುದ್ಧಿವಾಹಿನಿ

     28 Jan 2019


ತಮಿಳುನಾಡಿನ ಎಂಡಿಎಂಕೆ ಸದಸ್ಯನನ್ನು ಭಾನುವಾರ ಬಂಧಿಸಿದ್ದು, ಫೇಸ್ ಬುಕ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ತಿರುಚಲಾಗಿದೆ ಎಂಬ ಆರೋಪದಲ್ಲಿ ಬಂಧಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭಿಕ್ಷೆ ಬೇಡುವಂತೆ ಚಿತ್ರಿಸುವ ಫೋಟೋವನ್ನು ಪೋಸ್ಟ್ ಮಾಡಿದ ಆರೋಪದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೀರ್ ಕಾಳಿ ಪಟ್ಟಣದ ಎಂಡಿಎಂಕೆ ಸದಸ್ಯ ಸತ್ಯರಾಜ್ ಅಲಿಯಾಸ್ ಬಾಲು ಬಂಧಿತ ಆರೋಪಿ. ಬಿಜೆಪಿಯ ಸ್ಥಳೀಯ ನಾಯಕರ ಆರೋಪ ಮೇಲೆ ಆತನನ್ನು ಬಂಧಿಸಲಾಗಿದೆ. ಶಾಂತಿ ಕದಡುವ ಪ್ರಯತ್ನ ಮಾಡಿದ ಉದ್ದೇಶ ಹೊಂದಿದ ಆರೋಪ ಮಾಡಲಾಗಿದೆ. ಸತ್ಯರಾಜ್ ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಸೋಮವಾರದಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು.


ಜನವರಿ ಇಪ್ಪತ್ತಾರನೇ ತಾರೀಕು ಆ ಫೋಟೋವನ್ನು ಸತ್ಯರಾಜ್ ಅಪ್ ಲೋಡ್ ಮಾಡಿದ್ದಾನೆ.

ಎಂಡಿಎಂಕೆ ಸದಸ್ಯರು ಅದೇ ದಿನ ಮದುರೈನಲ್ಲಿ ಮೋದಿ ವಿರುದ್ಧ ಪ್ರತಿಭಟನೆ ಆಯೋಜಿಸಿದ್ದರು.


 ತಮಿಳುನಾಡಿನ ಹಿತಾಸಕ್ತಿಗೆ ಮೋದಿ ದ್ರೋಹ ಎಸಗುತ್ತಿದ್ದಾರೆ ಎಂಉ ಪಕ್ಷದ ಸದಸ್ಯರು ಆರೋಪಿಸಿದ್ದರು.

ನಮ್ಮ ಸುದ್ಧಿ ವೀಕ್ಷಿಸಲು ಲಿಂಕ್ ಬಳಸಿ https://youtu.be/syaHfI6BpMQ




Wednesday, January 23, 2019

ಕೈ’ ಮುನ್ನೆಲೆಗೆ ಪ್ರಿಯಾಂಕಾ; ಅನಿರೀಕ್ಷಿತ ನಿರ್ಧಾರ ಪ್ರಕಟಿಸಿದ ಕಾಂಗ್ರೆಸ್‌✋🏻

ಜನಜಾಗೃತಿ ಸುದ್ಧಿವಾಹಿನಿ

ನವದೆಹಲಿ: ಹಲವು ವರ್ಷಗಳ ಊಹಾಪೋಹಗಳಿಗೆ ತೆರೆ ಎಳೆದಿರುವ ಕಾಂಗ್ರೆಸ್‌ ಪಕ್ಷವು, ನೆಹರೂ–ಗಾಂಧಿ ಕುಟುಂಬದ ಇನ್ನೊಂದು ಕುಡಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಮುಖ್ಯವಾಹಿನಿ ರಾಜಕಾರಣಕ್ಕೆ ಕರೆ ತಂದಿದೆ.


ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿದ್ದು ಉತ್ತರ ಪ್ರದೇಶದ ಪೂರ್ವದ ಜಿಲ್ಲೆಗಳ ಉಸ್ತುವಾರಿ ವಹಿಸಲಾಗಿದೆ. ಈ ಮೂಲಕ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಆ ರಾಜ್ಯದಲ್ಲಿ ಭಾರಿ ಸ್ಪರ್ಧೆ ಒಡ್ಡುವ ಇಂಗಿತ ವ್ಯಕ್ತಪಡಿಸಿದೆ. 


ಪ್ರಿಯಾಂಕಾ (47) ಅವರು ಫೆಬ್ರುವರಿ ಮೊದಲ ವಾರದಲ್ಲಿ ಹೊಸ ಹೊಣೆಯನ್ನು ವಹಿಸಿಕೊಳ್ಳಲಿದ್ದಾರೆ ಎಂದು ಕಾಂಗ್ರೆಸ್‌ ತಿಳಿಸಿದೆ.


ಮುಂದಿನ ಲೋಕಸಭಾ ಚುನಾವಣೆಗೆ ಕೆಲವೇ ವಾರಗಳಿರುವ ಈ ಸಂದರ್ಭದಲ್ಲಿ ಪ್ರಿಯಾಂಕಾ ಅವರ ನೇಮಕ ಭಾರಿ ಕಾರ್ಯತಂತ್ರ ಎಂದೇ ವಿಶ್ಲೇಷಿಸಲಾಗಿದೆ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ನ ಪ್ರಭಾವ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಲೇ ಇದೆ. ಎಸ್‌ಪಿ ಮತ್ತು ಬಿಎಸ್‌ಪಿ ಮೈತ್ರಿಯಲ್ಲಿ ಕಾಂಗ್ರೆಸ್‌ಗೆ ಅವಕಾಶ ನೀಡದಿರುವುದು ಆ ಪಕ್ಷದ ಪರಿಸ್ಥಿತಿಯನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡಿದೆ. ಈ ಎಲ್ಲದರಿಂದ ಬಿಡಿಸಿಕೊಂಡು ಪಕ್ಷದ ಕಾರ್ಯಕರ್ತರಲ್ಲಿ ಹುರುಪು ತುಂಬುವುದು ಪ್ರಿಯಾಂಕಾ ಅವರಿಗೆ ಸಾಧ್ಯವಾಗ

ಬಹುದು ಎನ್ನಲಾಗುತ್ತಿದೆ. 

ನಮ್ಮ ಸುದ್ಧಿ ವೀಕ್ಷಿಸಲು ಲಿಂಕ್ ಬಳಸಿ https://youtu.be/UQjfgO_t0g0

ಪ್ರಿಯಾಂಕಾ ರಂಗಪ್ರವೇಶ: ಶಿವಸೇನೆ ಹೇಳಿದ್ದೇನು?*_🚩✋🏻

ಜನಜಾಗೃತಿ ಸುದ್ಧಿವಾಹಿನಿ


ಮುಂಬೈ, ಜ.24: ಪ್ರಿಯಾಂಕಾ ಗಾಂಧಿ ರಾಜಕೀಯ ಪ್ರವೇಶದಿಂದ ಕಾಂಗ್ರೆಸ್ ಪಕ್ಷಕ್ಕೆ ಗಣನೀಯ ಲಾಭವಾಗಲಿದೆ ಎಂದು ಶಿವಸೇನೆ ಅಭಿಪ್ರಾಯಪಟ್ಟಿದೆ. ಪ್ರಿಯಾಂಕಾ ಒಳ್ಳೆಯ ವ್ಯಕ್ತಿತ್ವ ಹೊಂದಿದ್ದು, ಅಜ್ಜಿ ಇಂದಿರಾ ಗಾಂಧಿಯ ಹಲವು ಗುಣಗಳು ಕಾಣಿಸುತ್ತವೆ ಎಂದು ಹೇಳಿಕೆ ನೀಡಿದೆ.


ಕಾಂಗ್ರೆಸ್ ಪಕ್ಷ ಪ್ರಿಯಾಂಕಾ ಗಾಂಧಿಯವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಪೂರ್ವ ಉತ್ತರ ಪ್ರದೇಶಕ್ಕೆ ನೇಮಕ ಮಾಡುವ ಮೂಲಕ ಅವರು ಅಧಿಕೃತವಾಗಿ ರಾಜಕೀಯ ಪ್ರವೇಶಿಸಿದಂತಾಗಿದೆ. ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹೊಸ ಹುಮ್ಮಸ್ಸಿನಿಂದ ಪಕ್ಷವನ್ನು ಮುನ್ನಡೆಸುವುದು ಕಾಂಗ್ರೆಸ್‌ನ ಉದ್ದೇಶವಾಗಿದೆ.


ಪಿಟಿಐ ಜತೆ ಮಾತನಾಡಿದ ಶಿವಸೇನೆ ವಕ್ತಾರೆ ಮನಿಷಾ ಕಯಂಡೆ, ಕಾಂಗ್ರೆಸ್‌ಗೆ ಸಂಭ್ರಮಿಸಲು ಪ್ರಬಲ ಕಾರಣಗಳಿವೆ. ಇದುವರೆಗೆ ಕಾಂಗ್ರೆಸ್ ಸರಹದ್ದಿನಲ್ಲಿದ್ದ ಪ್ರಿಯಾಂಕಾ ಗಾಂಧಿ ಇದೀಗ ಸಕ್ರಿಯ ರಾಜಕೀಯದ ಭಾಗವಾಗಿದ್ದಾರೆ. ಆಕೆಯ ಒಳ್ಳೆಯ ವ್ಯಕ್ತಿತ್ವದಿಂದಾಗಿ ಕಾಂಗ್ರೆಸ್‌ಗೆ ಲಾಭವಾಗಲಿದೆ. ತನ್ನನ್ನು ತಾನು ಅಭಿವ್ಯಕ್ತಪಡಿಸುವ ಸಾಮರ್ಥ್ಯ ಹಾಗೂ ಮತದಾರರನ್ನು ಸೆಳೆಯುವ ಕೌಶಲ ಆಕೆಗೆ ಇದೆ. ಅಜ್ಜಿಯ ಗುಣಗಳು ಅವರಲ್ಲಿ ಬಹಳಷ್ಟಿವೆ ಎಂದು ಮನಿಷಾ ಹೇಳಿದ್ದಾರೆ. "ಮತ ಹಾಕಲು ಹೋಗುವಾಗ ಜನ, ಪ್ರಿಯಾಂಕಾ ಗಾಂಧಿಯಲ್ಲಿ ಇಂದಿರಾರನ್ನು ಕಾಣಲಿದ್ದಾರೆ" ಎಂದು ಬಣ್ಣಿಸಿದ್ದಾರೆ.

ಎನ್‌ಸಿಪಿ ವಕ್ತಾರ ನವಾಬ್ ಮಲಿಕ್ ಕೂಡಾ, ಪ್ರಿಯಾಂಕಾ ಅವರ ಅಧಿಕೃತ ಪ್ರವೇಶದಿಂದ ಉತ್ತರ ಪ್ರದೇಶದಲ್ಲಿ ಪಕ್ಷಕ್ಕೆ ವಿಶೇಷ ಲಾಭವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ನಮ್ಮ ಸುದ್ಧಿ ವೀಕ್ಷಿಸಿ https://youtu.be/UQjfgO_t0g0

Monday, January 21, 2019

ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು : ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯಾಧ್ಯಕ್ಷ

ಜನಜಾಗೃತಿ ಸುದ್ಧಿವಾಹಿನಿ

ಸಿದ್ದಗಂಗಾ ಶ್ರೀಗಳ ನಿಧನಕ್ಕೆ ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯಾಧ್ಯಕ್ಷ ಮುಹಮ್ಮದ್ ಅತರುಲ್ಲಾ ಷರೀಫ್ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.

ಸಿದ್ದಗಂಗಾ ಶ್ರೀಗಳು ಓರ್ವ ವ್ಯಕ್ತಿ ಎಂಬುದಕ್ಕಿಂತ ಒಂದು ಶಕ್ತಿಯಾಗಿ ಬದುಕಿದವರು. ಅನೇಕಾರು ಶಾಲಾ ಕಾಲೇಜುಗಳನ್ನು ಸ್ಥಾಪಿಸಿ ಸಮಾಜಕ್ಕೆ ಅರ್ಪಿಸಿದವರು. ಧರ್ಮಸ್ಥಳದಲ್ಲಿ ನಡೆದ ಸರ್ವ ಧರ್ಮ ಸಮ್ಮೇಳನದ ಅಧ್ಯಕ್ಷ ಸ್ಥಾನ ವಹಿಸಿಕೊಂಡಿರುವುದೇ ಧಾರ್ಮಿಕ ಸೌಹಾರ್ದತೆಯ ಮೇಲೆ ಅವರಿಗಿದ್ದ ಬದ್ಧತೆಗೆ ಸಾಕ್ಷಿ. ಅವರು ಜಾತಿ ಧರ್ಮದ ಗೋಡೆಯನ್ನು ಮೀರಿ ಬೆಳೆದವರು. ಸಮಾಜವನ್ನು ಜನರ ಕೂಟ ಎಂದು ನೋಡಿರುವರೇ ಹೊರತು ಹಿಂದೂ ಮುಸ್ಲಿಂ ಆಗಿ ಒಮ್ಮೆಯೂ ಭಾವಿಸಿಲ್ಲ. ಈ ಗುಣವೇ ಅವರನ್ನು ಅನನ್ಯಗೊಳಿಸಿದೆ. ಅವರ ನಿಧನವು ಈ ಸಮಾಜಕ್ಕೆ ಬಹುದೊಡ್ಡ ನಷ್ಟ. ಅವರು ಪ್ರತಿಪಾದಿಸಿದ ಸೌಹಾರ್ದ ಸಮಾಜ ಕಾರ್ಯರೂಪಕ್ಕೆ ಬರಲಿ ಮತ್ತು ಅವರ ಪರಿವಾರ, ಅಭಿಮಾನಿ ವರ್ಗಕ್ಕೆ ಅವರ ಅನುಪಸ್ಥಿತಿಯನ್ನು ಸಹಿಸುವ ಸಾಮರ್ಥ್ಯವನ್ನು ದೇವನು ದಯಪಾಲಿಸಲಿ ಎಂದರು.


ಅವರೊಂದು ಸರ್ಕಾರದಂತೆ ಕಾರ್ಯನಿರ್ವಹಿಸಿದರು. ಅನ್ನದಾನ ಮತ್ತು ವಿದ್ಯಾದಾನದ ಮೂಲಕ ಲಕ್ಷಾಂತರ ಮಂದಿ ಹೊಟ್ಟೆಯ ಹಸಿವು ಮತ್ತು ಮೆದುಳಿನ ಹಸಿವನ್ನು ತಣಿಸಿದರು. ಆದ್ದರಿಂದ ಭಾರತ ಸರಕಾರವು ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಬೇಕೆಂದು ಮುಹಮ್ಮದ್ ಅತರುಲ್ಲಾ ಷರೀಫ್ ವಿನಂತಿಸಿದ್ದಾರೆ.

ನಮ್ಮ ಸುದ್ಧಿ ವೀಕ್ಷಿಸಲು ಲಿಂಕ್ ಬಳಸಿ https://youtu.be/jcz6XKhO-GY

ನನ್ನ ಪಾಲಿಗೆ ‘ನಡೆದಾಡುತ್ತಿದ್ದ ಬಸವಣ್ಣ’ ಡಾ.ಶ್ರೀ ಶಿವಕುಮಾರ ಸ್ವಾಮೀಜಿ: ಮಾಜಿ ಸಿಎಂ ಸಿದ್ದರಾಮಯ್ಯ

ಜನಜಾಗೃತಿ ಸುದ್ಧಿವಾಹಿನಿ

ಬೆಂಗಳೂರು,: ಜ.21: "ಡಾ.ಶ್ರೀ ಶಿವಕುಮಾರ ಸ್ವಾಮಿಗಳ ಲಿಂಗೈಕ್ಯದಿಂದ ನಾನು ಆಘಾತಕ್ಕೀಡಾಗಿದ್ದೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದು:ಖತಪ್ತ ಮನಸ್ಸಿನಿಂದ ಪ್ರಾರ್ಥಿಸುತ್ತೇನೆ. ದು:ಖದಲ್ಲಿರುವ ಸಮಸ್ತ ಭಕ್ತಾಭಿಮಾನಿಗಳ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ" ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.


"ನಾವು ಯಾರೂ ಬಸವಣ್ಣನವರನ್ನು ಕಣ್ಣಾರೆ ನೋಡಿಲ್ಲ, ನಾನು ಡಾ.ಶ್ರೀ ಶಿವಕುಮಾರ ಸ್ವಾಮೀಜಿಗಳಲ್ಲಿ ಬಸವಣ್ಣನನ್ನು ಕಾಣುತ್ತಿದ್ದೆ. ಅವರನ್ನು ನಡೆದಾಡುವ ದೇವರು ಎನ್ನುತ್ತಾರೆ. ನನ್ನ ಪಾಲಿಗೆ ಅವರು ‘ನಡೆದಾಡುತ್ತಿದ್ದ ಬಸವಣ್ಣ’ ಆಗಿದ್ದರು".


"ಇತ್ತೀಚಿನ ದಿನಗಳಲ್ಲಿ ಅವರ ಆರೋಗ್ಯದಲ್ಲಿ ನಡೆಯುತ್ತಿದ್ದ ಏರುಪೇರು ನಮ್ಮೆಲ್ಲರನ್ನೂ ಆತಂಕಕ್ಕೀಡುಮಾಡಿತ್ತು. ಇಂತಹದ್ದೊಂದು ದಿನ ಎದುರಾಗಬಹುದೆಂಬ ಭಯ ನಿಜವಾಗಿದೆ. ಸಾಧನೆಯ ಮೂಲಕ ಲೋಕವನ್ನೇ ಗೆದ್ದಿರುವ ಸ್ವಾಮಿಗಳು ಕೊನೆಗೂ ಸಾವನ್ನು ಗೆಲ್ಲಲಾಗದೆ ಶರಣಾಗಿ ನಮ್ಮನ್ನು ಅನಾಥರಾಗಿಸಿದ್ದಾರೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.

ಶ್ರೀ ಗಳು 11.44ಗಂಟೆಗೆ ಲಿಂಗೈಕ್ಯ ರಾದರು ಏಕೆ ವಿಷಯ ತಿಳಿಸಿಲ್ಲ ! ?

ಜನಜಾಗೃತಿ ಸುದ್ಧಿವಾಹಿನಿ

 ತುಮಕೂರ್ :ಸಿದ್ದಗಂಗಾ ಮಠದ ಶ್ರೀಗಳಾದ ಶ್ರೀ ಶ್ರೀ ಡಾ ! !  ಶಿವಕುಮಾರ್ ಸ್ವಾಮೀಜಿಗೆ ಮಕ್ಕಳು ಅಂದರೆ ತುಂಬ ಪ್ರೀತಿ ಕಾಳಜಿ ಶ್ರೀ ಗಳ ಆರೋಗ್ಯ ಸರಿ ಇಲ್ಲ ದಿದ್ದರು ಮಕ್ಕಳ ಬಗ್ಗೆ ಅವರ ಕಾಳಜಿ ನೋಡಿದ್ರೆ ಗೊತ್ತಾಗುತ್ತೆ ನಡೆದಾಡುವ ದೇವರ ಕರುಣೆ ಮಕ್ಕಳ ಮೇಲಿನ ಪ್ರೀತಿ ಸ್ವಾಮೀಜಿ ತಾವು ಅನಾರೋಗ್ಯ ದಿಂದ ಬಳಲುತಿದ್ದಾಗ ನಾನು ಯಾವಗ ಸತ್ತರು ಸರಿಯೇ ಮಕ್ಕಳು ಮಧ್ಯಾನದ ದಾಸೋಹ ವನ್ನು ಸ್ವೀಕರಿಸಿದ ನಂತರವೇ ವಿಷಯ  ತಿಳಿಸಬೇಕು ಎಂದಿದಾರಂತೇ ಅದಕ್ಕಾಗಿಯೇ ಶ್ರೀ ಗಳು 11:44 ಕ್ಕೆ ನಿಧನ ರಾದರು ವಿಷಯ ತಿಳಿಸಲಿಲ್ಲ.


ಸಿದ್ದಗಂಗಾ ಮಠದ ಸ್ವಾಮೀಜಿ ವಿಧಿವಶ ಶಾಲಾ-ಕಾಲೇಜುಗಳಿಗೆ ರಜೆ ಫೋಷಣೆ

ಜನಜಾಗೃತಿ ಸುದ್ಧಿವಾಹಿನಿ

ತುಮಕೂರು: ನಡೆದಾಡುವ ದೇವರೆಂದೆ ಖ್ಯಾತರಾದ ಡಾ. ಶಿವಕುಮಾರ ಸ್ವಾಮೀಜಿಗಳು ಇಂದು ವಿಧಿವಶರಾಗಿದ್ದಾರೆ. ಇಂದು ಬೆಳಗ್ಗೆ 11:44ಕ್ಕೆ ಸ್ವಾಮೀಜಿಗಳು ಕೊನೆಯುಸಿರೆಳೆದರೆಂದು ತಿಳಿದುಬಂದಿದೆ. ಶ್ರೀಗಳಿಗೆ 111 ವರ್ಷ ವಯಸ್ಸಾಗಿದ್ದು,  ಅಸಂಖ್ಯಾತ ಭಕ್ತಾದಿಗಳನ್ನು ಅಗಲಿದ್ದಾರೆ. ಸಿದ್ದಗಂಗಾ ಮಠದ ಶಾಲಾ-ಕಾಲೇಜುಗಳಿಗೆ ರಜೆ ಫೋಷಣೆ ಮಾಡಲಾಗಿದೆ.


ಏಪ್ರಿಲ್​ 1, 1907 ರಂದು ಜನಿಸಿದ ಸಿದ್ದಗಂಗಾ ಶ್ರೀಗಳು ಇತ್ತೀಚೆಗೆ ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದರು. ಜೊತೆಗೆ ವಯೋಸಹಜವಾಗಿಯೂ ಅವರ ಆರೋಗ್ಯ ಕ್ಷೀಣಿಸಿತ್ತು. ಶ್ರೀಗಳನ್ನು ನಗರದ ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ತಮ್ಮ ಕೊನೆಯ ಕ್ಷಣಗಳನ್ನು ಮಠದಲ್ಲೇ ಕಳೆಯಬೇಕು ಎಂಬ ಅವರ ಒತ್ತಾಸೆಯ ಮೇರೆಗೆ ಶ್ರೀಗಳನ್ನು ಹಳೆಯ ಮಠಕ್ಕೆ ಕರೆತರಲಾಗಿತ್ತು.


ಶ್ವಾಸಕೋಶದ ಸೋಂಕಿನ ಸಂಬಂಧ ಚೆನ್ನೈನ ರೇಲಾ ಆಸ್ಪತ್ರೆಯಲ್ಲಿ ಶ್ರೀಗಳಿಗೆ ಕಳೆದ ತಿಂಗಳು ಸರ್ಜರಿ ಮಾಡಲಾಗಿತ್ತು. ಸರ್ಜರಿ ಬಳಿಕ ಶ್ರೀಗಳು ಬಹು ಬೇಗನೇ ಚೇತರಿಸಿಕೊಂಡಿದ್ದರು. ಆದ್ರೆ ಸೋಂಕು ಮಾತ್ರ ನಿವಾರಣೆಯಾಗಿರಲಿಲ್ಲ. ಅಲ್ಲದೇ ಶ್ರೀಗಳಿಗೆ ಉಸಿರಾಟದ ತೊಂದರೆ ಇತ್ತು. ನಾಳೆ ಸಂಜೆ 4.30ಕ್ಕೆ ಸ್ವಾಮೀಜಿಗಳ ಅಂತಿಮ ವಿಧಿವಿಧಾನ ನೆರವೇರಿಸಲಾಗುತ್ತದೆ.

ನಮ್ಮ ಸುದ್ಧಿ ವೀಕ್ಷಿಸಲು ಲಿಂಕ್ ಬಳಸಿ https://youtu.be/QWnSxVvFs7I

Saturday, January 19, 2019

ಭಾರತದ ಸಾಲ ಮೋದಿ ಸರ್ಕಾರದ ಅವಧಿಯಲ್ಲಿ 50% ಏರಿಕೆ❗

ಜನಜಾಗೃತಿ ಸುದ್ಧಿವಾಹಿನಿ


     20 jan 2019


ನವದೆಹಲಿ: ನಾಲ್ಕೂವರೆ ವರ್ಷಗಳ ಪ್ರಧಾನಿ ನರೇಂದ್ರ ಮೋದಿ ಆಳ್ವಿಕೆಯಲ್ಲಿ ಒಟ್ಟಾರೆ ಕೇಂದ್ರ ಸರ್ಕಾರಿ ಸಾಲದ ಪ್ರಮಾಣ ಶೇ.49ರಷ್ಟುಜಿಗಿತ ಕಂಡು, 82 ಲಕ್ಷ ಕೋಟಿ ರು.ಗೆ ಏರಿಕೆಯಾಗಿದೆ ಎಂದು ಸ್ವತಃ ಸರ್ಕಾರವೇ ಬಿಡುಗಡೆ ಮಾಡಿರುವ ಅಂಕಿ-ಅಂಶಗಳು ಮಾಹಿತಿ ನೀಡಿವೆ.

2014ರ ಜೂನ್‌ನಲ್ಲಿ ಕೇಂದ್ರ ಸರ್ಕಾರದ ಮೇಲೆ ಒಟ್ಟಾರೆ 54,90,763 ಕೋಟಿ ರು.ನಷ್ಟುಸಾಲವಿತ್ತು. ಆದರೆ ಅದು 2018ರ ಸೆಪ್ಟೆಂಬರ್‌ನಲ್ಲಿ 82,03,253 ಕೋಟಿ ರು.ಗೆ ಏರಿಕೆ ಕಂಡಿದೆ ಎಂದು ಸರ್ಕಾರದ ಸಾಲಕ್ಕೆ ಸಂಬಂಧಿಸಿದ ಹಣಕಾಸು ಸಚಿವಾಲಯದ 8ನೇ ಆವೃತ್ತಿಯ ಸ್ಥಿತಿಗತಿ ವರದಿ ತಿಳಿಸಿದೆ.

ಸಾರ್ವಜನಿಕ ಸಾಲದ ಪ್ರಮಾಣ ಶೇ.51.7ರಷ್ಟುಹೆಚ್ಚಳಗೊಂಡು, 48 ಲಕ್ಷ ಕೋಟಿ ರು.ನಿಂದ 73 ಲಕ್ಷ ಕೋಟಿ ರು.ಗೆ ಏರಿಕೆಯಾಗಿದೆ. ಸರ್ಕಾರದ ಒಟ್ಟಾರೆ ಸಾಲ ಏರಿಕೆಯಾಗಲು ಇದು ಪ್ರಮುಖ ಕಾರಣವಾಗಿದೆ.ಸರ್ಕಾರ ಹೊಂದಿರುವ ಒಟ್ಟಾರೆ ಸಾಲದ ವಿಸ್ತೃತ ವಿಶ್ಲೇಷಣೆಯನ್ನು ಒಳಗೊಂಡ ಸ್ಥಿತಿಗತಿ ವರದಿಯನ್ನು ಹಣಕಾಸು ಸಚಿವಾಲಯ ಹೊರತರುತ್ತದೆ. 2010-11ನೇ ಸಾಲಿನಿಂದ ಪ್ರತಿ ವರ್ಷ ಇದನ್ನು ಬಿಡುಗಡೆ ಮಾಡಲಾಗುತ್ತಿದೆ.

ನಮ್ಮ ಸುದ್ಧಿ ಗಳನ್ನ ವೀಕ್ಷಿಸಲು ಲಿಂಕ್ ಬಳಸಿ https://youtu.be/S3d-poVcRy4 

Thursday, January 17, 2019

💵ಡಾಲರ್‌ ಎದುರು ರೂಪಾಯಿ ಕುಸಿತ: ಸೆನ್ಸೆಕ್ಸ್‌ 106 ಅಂಕ ನಷ್ಟ


ಜನಜಾಗೃತಿ ಸುದ್ಧಿವಾಹಿನಿ

     18 jan 2019


ಮುಂಬಯಿ: ಡಾಲರ್‌ ಎದುರು ರೂಪಾಯಿಯ ದೌರ್ಬಲ್ಯವನ್ನು ಅನುಸರಿಸಿ ಫಾರ್ಮಾ ಮತ್ತು ಬ್ಯಾಂಕಿಂಗ್‌ ರಂಗದ ಶೇರುಗಳು ಭರಾಟೆ ಮಾರಾಟವನ್ನು ಕಂಡ ಪ್ರಯುಕ್ತ ಮುಂಬಯಿ ಶೇರು ಪೇಟೆ ಇಂದು ಶುಕ್ರವಾರದ ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ 80 ಅಂಕಗಳ ಕುಸಿತವನ್ನು ಕಂಡಿತು.

ಬೆಳಗ್ಗೆ 10.45ರ ಹೊತ್ತಿಗೆ ಸೆನ್ಸೆಕ್ಸ್‌ 106.87 ಅಂಕಗಳ ನಷ್ಟದೊಂದಿಗೆ 36,267.21 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ 39.20 ಅಂಕಗಳ ನಷ್ಟದೊಂದಿಗೆ 10,866.00 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.

ಡಾಲರ್‌ ಎದುರಿನ ಇಂದಿನ ಆರಂಭಿಕ ವಹಿವಾಟಿನಲ್ಲಿ ರೂಪಾಯಿ 21 ಪೈಸೆಗಳ ಕುಸಿತವನ್ನು ಕಂಡು 71.24 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.ಇಂದಿನ ಬೆಳಗ್ಗಿನ ವಹಿವಟಿನಲ್ಲಿ ಸನ್‌ ಫಾರ್ಮಾ, ರಿಲಯನ್ಸ್‌, ಎಸ್‌ ಬ್ಯಾಂಕ್‌, ಎಚ್‌ ಯು ಎಲ್‌, ಎಕ್ಸಿಸ್‌ ಬ್ಯಾಂಕ್‌ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.

ನಮ್ಮ ಸುದ್ಧಿ ವೀಕ್ಷಿಸಲು ಲಿಂಕ್ ಬಳಸಿ https://youtu.be/ESMD9rZEQ-E

ಗಮನಿಸಿ: 1 ದಿನ ರಾಜ್ಯಾದ್ಯಂತ TV ಕೇಬಲ್ ಬಂದ್‌, ಯಾವಾಗ? ಯಾಕೆ?

ಜನಜಾಗೃತಿ ಸುದ್ಧಿವಾಹಿನಿ

    16, Jan 2019

ಕರ್ನಾಟಕ ರಾಜ್ಯ ಕೇಬಲ್ ಆಪರೇಟರ್‌ಗಳು ಪ್ರತಿಭಟನೆಗೆ ಮುಂದಾಗಿದ್ದು, ಒಂದು ದಿನ ಕೇಬಲ್ ಬಂದ್ ಮಾಡಲು ನಿರ್ಧರಿಸಿದ್ದಾರೆ. ಬಂದ್ ಯಾವಾಗ? ಯಾಕೆ? ಇಲ್ಲಿದೆ ಡಿಟೇಲ್ಸ್.

ಬೆಂಗಳೂರ್  ಟ್ರಾಯ್‌ನ ಹೊಸ ಕೇಬಲ್ ನಿಯಮಗಳನ್ನು ವಿರೋಧಿಸಿ ಕರ್ನಾಟಕ ರಾಜ್ಯ ಕೇಬಲ್ ಆಪರೇಟರ್‌ಗಳು ಜನವರಿ 24ರಂದು ರಾಜ್ಯಾದ್ಯಾಂತ ಕೇಬಲ್ ಬಂದ್ ಮಾಡಲಿದ್ದಾರೆ.

ಬೆಂಗಳೂರಿನ ಖಾಸಗಿ ಹೊಟೆಲ್‌ನಲ್ಲಿ ಇಂದು [ಬುಧವಾರ] ಕೇಬಲ್ ಆಪರೇಟರ್‌ಗಳು ಸಭೆ ನಡೆಸಿದ್ದು, ಟ್ರಾಯ್ ನ ಹೊಸ ನೀತಿ ಮತ್ತು ದರ ಪದ್ಧತಿ ವಿರುದ್ಧ ಸಾಮೂಹಿಕವಾಗಿ ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆ. 

ಟೀವಿ ಚಾನಲ್ ಹೊಸ ದರ ಫೆ. 1 ಕ್ಕೆ ಮುಂದೂಡಿಕೆ

ಫೆಬ್ರವರಿ 1ರಿಂದ ಟ್ರಾಯ್ ಹೊಸ ದರಗಳು ಮತ್ತು ನಿಯಮಗಳನ್ನು ಜಾರಿಗೆ ತರಲಿದೆ. ಹೊಸ ದರ ಮತ್ತು ನಿಯಮಗಳನ್ನು ವಿರೋಧಿಸಿ ಆಪರೇಟರ್‌ಗಳು ಪ್ರತಿಭಟನೆ ಮಾಡಲಿದ್ದಾರೆ. ಇದ್ರಿಂದ ಜನವರಿ 24 ರಂದು ಕೇಬಲ್ ಟಿವಿ ಬಂದ್ ಆಗಲಿದೆ.

ಕೇಬಲ್‌, ಡಿಟಿಎಚ್‌ ನಿಜಕ್ಕೂ ದುಬಾರಿಯಾಗುತ್ತಾ?

ಜನವರಿ 24 ರಂದು ಬೆಳಿಗ್ಗೆ 10 ಗಂಟೆಗೆ ಕರ್ನಾಟಕದಲ್ಲಿ ಕೇಬಲ್ ಬಂದ್ ಆಗಲಿದೆ. ಕರ್ನಾಟಕದಾದ್ಯಂತ ಕೇಬಲ್ ಟಿವಿ ಬಂದ್ ಆಗಲಿದೆ. ಟ್ರಾಯ್‌ ನೀತಿಗಳ ವಿರುದ್ಧ ಕೇಬಲ್ ಆಪರೇಟರ್‌ಗಳು ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ಅಲ್ಲಿಯೂ ಅವರಿಗೆ ಹಿನ್ನಡೆ ಆಗಿದೆ. 

ಹಿನ್ನಲೆಯಲ್ಲಿ ಸುಪ್ರಿಂ ತೀರ್ಪನ್ನು ಮರುಪರಿಶೀಲನೆಗೆ ಅರ್ಜಿ ಹಾಕಿ ಕಾನೂನು ಹೋರಾಟ ಮುಂದುವರಿಸಿದ್ದಾರೆ.

ನಮ್ಮ ಸುದ್ಧಿ ನೋಡಲು ಲಿಂಕ್ ಬಳಸಿ https://youtu.be/ESMD9rZEQ-E

Wednesday, January 16, 2019

🕋ಹಜ್‌ ಯಾತ್ರೆ-2019: ರಾಜ್ಯದಿಂದ 6701 ಮಂದಿ ಆಯ್ಕೆ- ಸಚಿವ ಝಮೀರ್‌ ಅಹ್ಮದ್‌

ಜನಜಾಗೃತಿ ಸುದ್ಧಿವಾಹಿನಿ 


     16 jan 2019


ಬೆಂಗಳೂರು: ಭಾರತೀಯ ಹಜ್ ಸಮಿತಿಯು ಪ್ರಸಕ್ತ ಸಾಲಿನ ಹಜ್‌ ಯಾತ್ರೆಗಾಗಿ ರಾಜ್ಯದಿಂದ 6701 ಮಂದಿಯನ್ನು ಆಯ್ಕೆ ಮಾಡಲಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಬಿ.ಝೆಡ್. ಝಮೀರ್‌ ಅಹ್ಮದ್‌ ಖಾನ್ ತಿಳಿಸಿದರು.


ಬುಧವಾರ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ರಾಜ್ಯ ಹಜ್ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಹಜ್‌ ಯಾತ್ರಿಗಳನ್ನು ಲಾಟರಿ(ಖುರ್ರಾ) ಮೂಲಕ ಆಯ್ಕೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿ ಅವರು ಮಾತನಾಡಿದರು.


ಸೌದಿ ಅರೇಬಿಯಾ ಸರಕಾರವು ಭಾರತೀಯ ಹಜ್ ಸಮಿತಿಗೆ 1,23,900 ಮಂದಿಯ ಕೋಟಾವನ್ನು ಹಂಚಿಕೆ ಮಾಡಿದೆ. 2011ರ ಜನಗಣತಿಯನ್ನು ಆಧರಿಸಿ ಮುಸ್ಲಿಮರ ಜನಸಂಖ್ಯೆಗೆ ಅನುಗುಣವಾಗಿ ವಿವಿಧ ರಾಜ್ಯಗಳಿಗೆ ಭಾರತೀಯ ಹಜ್ ಸಮಿತಿಯು ಕೋಟಾವನ್ನು ನಿಗದಿ ಮಾಡಿದೆ ಎಂದು ಅವರು ಹೇಳಿದರು.


ನಮ್ಮ ರಾಜ್ಯಕ್ಕೆ 6701 ಮಂದಿಯ ಕೋಟಾವನ್ನು ನಿಗದಿ ಮಾಡಲಾಗಿದ್ದು, ಇಂದು ಲಾಟರಿ ಮೂಲಕ 5884 ಮಂದಿಯನ್ನು ಆಯ್ಕೆ ಮಾಡಲಾಗಿದೆ.


ರಾಜ್ಯ ಹಜ್ ಸಮಿತಿಯು 13,995 ಅರ್ಜಿಗಳನ್ನು ಸ್ವೀಕರಿಸಿದ್ದು, ಈ ಪೈಕಿ 7298 ಪುರುಷರು, 6685 ಮಹಿಳೆಯರು ಹಾಗೂ 12 ಮಕ್ಕಳು ಅರ್ಜಿ ಸಲ್ಲಿಸಿದ್ದರು ಎಂದು ಝಮೀರ್‌ ಅಹ್ಮದ್‌ ಖಾನ್ ತಿಳಿಸಿದರು.


70 ವರ್ಷ ಮೇಲ್ಪಟ್ಟವರ ಮೀಸಲಾತಿ ಪ್ರವರ್ಗದಲ್ಲಿ 794 ಅರ್ಜಿದಾರರು ಹಾಗೂ 45 ವರ್ಷ ಮೇಲ್ಪಟ್ಟ ಮಹಿಳೆಯರ ಮೀಸಲಾತಿ ಪ್ರವರ್ಗದಲ್ಲಿ 23 ಅರ್ಜಿಗಳು ಸಲ್ಲಿಕೆಯಾಗಿದ್ದು, ಅವರನ್ನು ನೇರವಾಗಿ ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದರು.


ಯಾರಿಗೆ ಹಜ್‌ ಯಾತ್ರೆಗೆ ಹೋಗಲು ಅವಕಾಶ ಸಿಗಲಿಲ್ಲವೋ ಅವರು ನಿರಾಶೆಗೊಳ್ಳುವುದು ಬೇಡ. ಸರ್ವಶಕ್ತನಾದ ಅಲ್ಲಾಹ್ ಯಾರನ್ನು ಬೇಕೋ ಅವರನ್ನು ತನ್ನ ಮನೆಯ ದರ್ಶನ ಪಡೆಯಲು ಕರೆಯುತ್ತಾನೆ. ಹೈದರಾಬಾದಿನ ನಿಝಾಮರು ಕೋಟ್ಯಂತರ ರೂ.ಗಳನ್ನು ಪವಿತ್ರ ಮಕ್ಕಾ ಹಾಗೂ ಮದೀನಾಗಳಿಗೆ ನೀಡಿದ್ದಾರೆ. ಆದರೆ, ಅವರಿಗೆ ಹಜ್‌ ಯಾತ್ರೆ ಕೈಗೊಳ್ಳುವ ಅವಕಾಶ ಸಿಗಲಿಲ್ಲ ಎಂದು ಝಮೀರ್‌ ಅಹ್ಮದ್‌ ಖಾನ್ ಹೇಳಿದರು.

ಲಾಟರಿ ಪ್ರಕ್ರಿಯೆಯಲ್ಲಿ ಆಯ್ಕೆಯಾಗದವರು ಯಾವುದೇ ಕಾರಣಕ್ಕೂ ಯಾರ ಮೂಲಕವೂ ಒತ್ತಡ ಹೇರುವ ಪ್ರಯತ್ನವನ್ನು ಮಾಡಬೇಡಿ. ಆನ್‌ಲೈನ್ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ಇದರಲ್ಲಿ ಯಾರ ಹಸ್ತಕ್ಷೇಪಕ್ಕೂ ಅವಕಾಶವಿಲ್ಲ ಎಂದು ಝಮೀರ್‌ ಅಹ್ಮದ್ ಖಾನ್ ಹೇಳಿದರು.

ರಾಜ್ಯ ಹಜ್ ಸಮಿತಿಯ ಅಧ್ಯಕ್ಷ ಆರ್.ರೋಷನ್‌ ಬೇಗ್ ಮಾತನಾಡಿ, ದೇಶದಲ್ಲೆ ಮಾದರಿಯಾದ ಹಜ್ ಕ್ಯಾಂಪ್ ಅನ್ನು ನಮ್ಮ ರಾಜ್ಯದಲ್ಲಿ ನಡೆಸಲಾಗುತ್ತಿದೆ. ಯಾತ್ರಿಗಳಿಗೆ ಸೂಕ್ತವಾದ ತರಬೇತಿ, ಮಾರ್ಗದರ್ಶನವನ್ನು ನೀಡಲಾಗುತ್ತಿದೆ. ವಿವಿಧ ರಾಜ್ಯಗಳ ಪ್ರತಿನಿಧಿಗಳು ನಮ್ಮ ರಾಜ್ಯದ ಮಾದರಿಯನ್ನು ಅನುಸರಿಸುತ್ತಿದ್ದಾರೆ ಎಂದರು.

ರಾಜ್ಯದಲ್ಲಿರುವ ಹಜ್‌ ಭವನವು ಇಡೀ ದೇಶಕ್ಕೆ ಮಾದರಿ. 100 ಕೊಠಡಿಗಳು ಅದರಲ್ಲಿದ್ದು, ಸಿಇಟಿ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಹೊರ ಜಿಲ್ಲೆಗಳು, ಹೊರ ರಾಜ್ಯದಿಂದ ಬರುವ ವಿದ್ಯಾರ್ಥಿಗಳು ತಂಗಲು ಇದರಲ್ಲಿ ಅವಕಾಶ ಮಾಡಿಕೊಡಲಾಗುವುದು. ವರ್ಷದ ಎಲ್ಲ ದಿನಗಳಲ್ಲೂ ಹಜ್ ಭವನ ಸಕ್ರಿಯವಾಗಿರಬೇಕು ಎಂಬುದು ನಮ್ಮ ಬಯಕೆ ಎಂದು ಅವರು ಹೇಳಿದರು.ಕಾರ್ಯಕ್ರಮದಲ್ಲಿ ಯುವಜನ ಸೇವೆ ಹಾಗೂ ಕ್ರೀಡಾ ಸಚಿವ ರಹೀಮ್‌ ಖಾನ್, ವಿಧಾನಪರಿಷತ್ ಸದಸ್ಯರಾದ ನಸೀರ್‌ ಅಹ್ಮದ್, ಕೆ.ಅಬ್ದುಲ್ ಜಬ್ಬಾರ್, ಶಾಸಕಿ ಕನೀಝ್ ಫಾತಿಮಾ, ಮೌಲಾನ ಲುತ್ಫುಲ್ಲಾ ಮಝ್ಹರ್ ರಶಾದಿ, ಮೌಲಾನ ಮಖ್ಸೂದ್ ಇಮ್ರಾನ್ ರಶಾದಿ, ಮೌಲಾನ ಮುಝಮ್ಮಿಲ್, ಮೌಲಾನ ಶಾಯರ್ ಅಲಿ, ರಾಜ್ಯ ಹಜ್ ಸಮಿತಿಯ ಕಾರ್ಯನಿರ್ವಾಹಕ ಅಧಿಕಾರಿ ಸರ್ಫರಾಝ್‌ ಖಾನ್, ನೋಡಲ್ ಅಧಿಕಾರಿ ಸೈಯ್ಯದ್ ಏಜಾಝ್ ಅಹ್ಮದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ನಮ್ಮ ಸುದ್ಧಿಗಳನ್ನು ವೀಕ್ಷಿಸಿ https://youtu.be/ujlXO-HUsaM

ನಾನು ಆಪರೇಷನ್ ಕಮಲಕ್ಕೆ ಒಳಗಾಗಿಲ್ಲ : ಶಾಸಕ ಭೀಮಾನಾಯ್ಕ್

ಜನಜಾಗೃತಿ ಸುದ್ಧಿವಾಹಿನಿ


     16 jan 2019


ಬೆಂಗಳೂರು: ಆಪರೇಷನ್ ಕಮಲಕ್ಕೆ ನಾನು ಒಳಗಾಗಿಲ್ಲ. ಕಾಂಗ್ರೆಸ್ ಬಿಡುವುದಿಲ್ಲ. ಬಿಜೆಪಿ ಸೇರುವುದಿಲ್ಲ ಎಂದು ಶಾಸಕ ಭೀಮಾನಾಯ್ಕ್ ಸ್ಪಷ್ಟಪಡಿಸಿದ್ದಾರೆ. ಕುಮಾರಕೃಪಾ ಅತಿಥಿ ಗೃಹಕ್ಕೆ ಆಗಮಿಸಿದ ಅವರು, ವೇಣುಗೋಪಾಲ್ ಅವರನ್ನು ಭೇಟಿ ಮಾಡುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು.

ಮೈತ್ರಿ ಸರ್ಕಾರ ರಚನೆ ಆರಂಭದಲ್ಲಿ ಬಿಜೆಪಿಯವರು ನನ್ನನ್ನು ಸಂಪರ್ಕಿಸಿದ್ದರು. ಆದರೆ ಇತ್ತೀಚೆಗೆ ಯಾರೂ ನನ್ನನ್ನು ಸಂಪರ್ಕಿಸಿಲ್ಲ. ನಾನು ಬಿಜೆಪಿಗೆ ಹೋಗುವುದೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ನಾನು ಮೊಬೈಲ್ ಸ್ವಿಚ್ ಆಫ್ ಮಾಡಿ ನಾಪತ್ತೆಯಾಗಿದ್ದೆ ಎಂಬುದು ಸುಳ್ಳುಮಾಹಿತಿ. ಶುಕ್ರವಾರ ಬೆಂಗಳೂರಿನಲ್ಲಿದ್ದೆ, ಶನಿವಾರ ಜಿಂದಲ್ ಫ್ಲೈಟ್ ಹತ್ತಿ ಕ್ಷೇತ್ರಕ್ಕೆಹೋದೆ. ಸೋಮವಾರ ಗೋವಾದಲ್ಲಿದ್ದೆ. ಗೋವಾಕ್ಕೆ ಹೋದಾಗ ಎರಡು ದಿನ ಮೊಬೈಲ್ ಸ್ವಿಚ್ ಆಫ್ ಮಾಡಿದ್ದೆ.

ಆದರೆ ಬೇರೆ ನಂಬರ್‍ಗಳಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಮೀರ್ ಅಹಮ್ಮದ್ ಖಾನ್ ಸೇರಿದಂತೆ ಹಲವಾರು ಮಂದಿ ನಾಯಕರ ಜೊತೆ ನಾನು ನಿರಂತರ ಸಂಪರ್ಕದಲ್ಲಿದ್ದೆ. ನನ್ನ ಕ್ಷೇತ್ರದ ಮುಖಂಡರ ಜೊತೆಯೂ ಸಂಪರ್ಕದಲ್ಲಿದ್ದೆ. ನಾನು ಎಲ್ಲಿಯೂ ಹೋಗಿಲ್ಲ. ಮೊಬೈಲ್ ಸ್ವಿಚ್‍ಆಫ್ ಮಾಡಿದ್ದು ಒತ್ತಡದ ತಂತ್ರ ಅಲ್ಲ.

ಸಚಿವ ಸ್ಥಾನ ಸಿಗದೆ ಇರುವ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇವೆ. ಪಿ.ಟಿ.ಪರಮೇಶ್ವರ್‍ನಾಯಕ್ ಸೇರಿದಂತೆ ಯಾರಿಗೆ ಸಚಿವ ಸ್ಥಾನ ಕೊಟ್ಟರೂ ಅದನ್ನು ಸ್ವಾಗತಿಸುವುದಾಗಿ ಈ ಮೊದಲೇ ಹೇಳಿದ್ದೆ. ನಮ್ಮ ಬೇಸರಗಳಿಗೂ ಈಗಿನ ರಾಜಕೀಯಕ್ಕೂ ಸಂಬಂಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ನಮ್ಮ ಸುದ್ಧಿ ಗಳನ್ನು ವೀಕ್ಷಿಸಲು ಲಿಂಕ್ ಬಳಸಿ https://youtu.be/ujlXO-HUsaM

ಆಪರೇಷನ್ ಕಮಲ ಠುಸ್..!❓

ಜನಜಾಗೃತಿ ಸುದ್ಧಿವಾಹಿನಿ 


     16 jan 2019


ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಮುಂದಾಗಿದ್ದ ಬಿಜೆಪಿಯ ಆಪರೇಷನ್ ಕಮಲ ಬಹುತೇಕ ವಿಫಲವಾಗುವ ಹಂತ ತಲುಪಿದೆ.


ಯಾವ ಶಾಸಕರನ್ನು ನೆಚ್ಚಿಕೊಂಡು ದೋಸ್ತಿ ಸರ್ಕಾರ ಕೆಡವಲು ಬಿಜೆಪಿ ಸಂಚು ರೂಪಿಸಿತ್ತೋ ಅದೇ ಶಾಸಕರು ತಮ್ಮ ತಮ್ಮ ಪಕ್ಷಗಳತ್ತ ಮುಖ ಮಾಡಿರುವುದರಿಂದ ಆಪರೇಷನ್ ಕಮಲ ಠುಸ್ಸಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.


ಕಳೆದೆರಡು ದಿನಗಳಿಂದ ಕಾಂಗ್ರೆಸ್‍ಗೆ ಕೈ ಕೊಟ್ಟು ನಿಗೂಢ ಸ್ಥಳದಲ್ಲಿದ್ದ ಬಳ್ಳಾರಿಯ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯಕ್, ಕಂಪ್ಲಿಯ ಜೆ.ಗಣೇಶ್, ಅಮರೇಗೌಡ ಬಯ್ಯಾಪುರ ದಿಢೀರನೇ ಬೆಂಗಳೂರಿಗೆ ಆಗಮಿಸಿರುವುದರಿಂದ ಆಪರೇಷನ್ ಕಮಲ ಬಿಜೆಪಿಗೆ ತಿರುಗುಬಾಣವಾಗಿದೆ.


ಏಕೆಂದರೆ ಇದರಲ್ಲಿ ಭೀಮಾನಾಯಕ್ ಮತ್ತು ಜೆ.ಗಣೇಶ್ ಬಹುತೇಕ ಆಪರೇಷನ್ ಕಮಲಕ್ಕೆ ಒಳಗಾಗಿದ್ದರು. ಈ ಇಬ್ಬರನ್ನು ಕಾಂಗ್ರೆಸ್ ವಿರುದ್ಧ ಸಿಡಿದೆದ್ದಿರುವ ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ಮೂಲಕವೇ ಬಿಜೆಪಿ ಸೆಳೆಯುವ ಪ್ರಯತ್ನ ಮಾಡಿತ್ತು.


ಇದಕ್ಕೆ ಪುಷ್ಟಿ ನೀಡುವಂತೆ ಈ ಇಬ್ಬರು ಶಾಸಕರ ದೂರವಾಣಿ ಕರೆಗಳು ಇದ್ದಕ್ಕಿದ್ದಂತೆ ಕಡಿತಗೊಂಡು ಹಾಗೂ ಯಾರ ಸಂಪರ್ಕಕ್ಕೂ ಸಿಗದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು.


ಆದರೆ ಇಂದು ಬೆಳಗ್ಗೆ ಇದ್ದಕ್ಕಿದ್ದಂತೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಶಾಸಕರನ್ನು ಮನವೊಲಿಸುವಲ್ಲಿ ಬಹುತೇಕ ಯಶಸ್ವಿಯಾಗಿದ್ದಾರೆ.


ಸದ್ಯಕ್ಕೆ ಮುಂಬೈನಲ್ಲಿ ಇಬ್ಬರು ಪಕ್ಷೇತರ ಶಾಸಕರು ಸೇರಿದಂತೆ ಆರು ಶಾಸಕರು ವಾಸ್ತವ್ಯ ಹೂಡಿದ್ದಾರೆ. ಬೆಳಗಾವಿಯ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಚಿಂಚೋಳಿಯ ಡಾ.ಉಮೇಶ್ ಜಾಧವ್, ಬಳ್ಳಾರಿಯ ಬಿ.ನಾಗೇಂದ್ರ, ಮಸ್ಕಿಯ ಪ್ರತಾಪ್ ಗೌಡ ಪಾಟೀಲ್ ಇದ್ದಾರೆಂದು ಹೇಳಲಾಗುತ್ತಿದೆ.


ಇದರಲ್ಲಿ ಪ್ರತಾಪ್ ಗೌಡ ಪಾಟೀಲ್ ನಡೆ ಈಗಲೂ ನಿಗೂಢವಾಗಿದ್ದು, ರಮೇಶ್ ಜಾರಕಿಹೊಳಿ ತಮ್ಮ ರಾಜಕೀಯ ನಿರ್ಧಾರ ಕೈಗೊಳ್ಳಲಿದ್ದೇನೆ ಎಂದು ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗುತ್ತಿದೆ.


ಸದ್ಯಕ್ಕಂತೂ ಆಪರೇಷನ್ ಕಮಲ ಮತ್ತೆ ಹಿನ್ನೆಡೆಯಾಗುವ ಲಕ್ಷಣಗಳು ಸ್ಪಷ್ಟವಾಗಿದೆ. ನಿನ್ನೆಯಿಂದಲೂ ಶಾಸಕರೆಲ್ಲರಿಗೂ ಸಿಹಿ ಸುದ್ದಿ ಕೊಡುತ್ತೇನೆಂದು ಬಿ.ಎಸ್.ಯಡಿಯೂರಪ್ಪ ಹೇಳುತ್ತಿದ್ದರಾದರೂ ಈವರೆಗೂ ಅದನ್ನು ಬಹಿರಂಗಪಡಿಸುತ್ತಿಲ್ಲ.

ಮುಂಬೈ ಹಾಗೂ ಬೆಂಗಳೂರಿನಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಬಿಎಸ್‍ವೈ ಗಮನಿಸುತ್ತಿದ್ದಾರೆ. ಶಾಸಕರಿಗೂ ಕೂಡ ಗುಟ್ಟು ರಟ್ಟು ಮಾಡುತ್ತಿಲ್ಲ. ಹೀಗಾಗಿ ಬಿಜೆಪಿಯಲ್ಲಿ ಏನು ನಡೆಯುತ್ತಿದೆ ಎಂಬುದು ಯಾರೊಬ್ಬರಿಗೂ ತಿಳಿಯದಿರುವುದು ಗೊಂದಲಗಳನ್ನು ಸೃಷ್ಟಿಸಿದೆ.

ಯಾವ ಅತೃಪ್ತ ಶಾಸಕರ ಮೇಲೆ ಕಮಲ ಪಡೆ ಕಣ್ಣಿಟ್ಟಿತ್ತೋ ಈಗಾಗಲೇ ಅವರನ್ನು ಮನವೊಲಿಸುವಲ್ಲಿ ಕಾಂಗ್ರೆಸ್-ಜೆಡಿಎಸ್ ಮುಖಂಡರು ಯಶಸ್ವಿಯಾಗಿರುವುದರಿಂದ ಬಿಜೆಪಿಯ ಆಪರೇಷನ್ ಉಲ್ಟಾ ಹೊಡೆದಿದೆ ಎಂದೇ ವಿಶ್ಲೇಷಿಸಲಾಗಿದೆ.

ನಮ್ಮ ಸುದ್ಧಿ ವೀಕ್ಷಿಸಿ https://youtu.be/ujlXO-HUsaM

Tuesday, January 15, 2019

ಅಸಮಾಧಾನ ಇರೋದು ನಿಜ. ಹಾಗಂತ ಪಕ್ಷ ಬಿಡಲ್ಲ- ಜೇವರ್ಗಿ ಶಾಸಕ ಡಾ.ಅಜಯ್ ಸಿಂಗ್

ಜನಜಾಗೃತಿ ಸುದ್ಧಿವಾಹಿನಿ 

     16 jan 2019


ಬೆಂಗಳೂರು: ಜೇವರ್ಗಿ ಶಾಸಕ ಡಾ.ಅಜಯ್ ಸಿಂಗ್ ಅವರನ್ನುಬಿಜೆಪಿ ನಾಯಕರು ಸಂಪರ್ಕಿಸಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶಾಸಕ ಡಾ.ಅಜಯ್ ಸಿಂಗ್'ನನಗೆ ಅಸಮಾಧಾನ ಇರೋದು ನಿಜ. ಆದರೆ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷ ಬಿಡಲ್ಲ' ಎಂದು ಖಡಕ್ ಆಗಿ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ' ನಾನು ಕುಟುಂಬದವರ ಜೊತೆ ಪ್ರವಾಸಕ್ಕೆ ಹೋಗಿದ್ದೆ. ಹೀಗಾಗಿ ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಇಂದು ವೇಣುಗೋಪಾಲ್ ರನ್ನು ಭೇಟಿ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ. 

'ಮಂತ್ರಿ ಮಾಡಲಿ ಬಿಡಲಿ ಆದ್ರೆ ಪಕ್ಷ ಮಾತ್ರ ತೊರೆಯಲ್ಲ. 1977ರಲ್ಲಿ ಕಾಂಗ್ರೆಸ್ ಇಬ್ಭಾಗವಾದಾಗ ತಮ್ಮ ತಂದೆ ಪಕ್ಷ ಬಿಟ್ಟಿಲ್ಲ.7 ಜನ ಶಾಸಕರಿದ್ದರೂ ಕೂಡ ಕಾಂಗ್ರೆಸ್ ಕಟ್ಟಿದ್ದಾರೆ. ನಮ್ಮ ತಂದೆಯಿಂದ ಹಿಡಿದು ನಾವು ಕಾಂಗ್ರೆಸ್ ಕಟ್ಟಿದ್ದೇವೆ. ನಮ್ಮನ್ನು ಕಡೆಗಣಿಸಿರೋದು ನಿಜ. ಹಾಗಂತ ಪಕ್ಷ ಬಿಡಲ್ಲ' ಎಂದು ಅವರು ತಿಳಿಸಿದ್ದಾರೆ. 

ನಮ್ಮ ಸುದ್ಧಿ ಗಳನ್ನ ವೀಕ್ಷಿಸಲು ಲಿಂಕ್ ಮೂಲಕ ವೀಕ್ಷಿಸಿ https://youtu.be/ujlXO-HUsaM

ಕಮಲ 2ನೇ ಹಂತ: ಎಷ್ಟು ಮಂದಿ ಅತೃಪ್ತ ಶಾಸಕರಿಂದ ರಾಜೀನಾಮೆ?


ಜನಜಾಗೃತಿ ಸುದ್ಧಿವಾಹಿನಿ 

     16 jan 2019


ಬೆಂಗಳೂರು: ಕಾಂಗ್ರೆಸ್ -ಜೆಡಿಎಸ್ ನೇತೃತ್ವದ ಕರ್ನಾಟಕ ಸರ್ಕಾರವನ್ನು ಹೇಗಾದರೂ ಉರುಳಿಸಬೇಕು ಎಂಬ ಯತ್ನವನ್ನು ಬಿಜೆಪಿ ಮುಂದುವರೆಸಿದೆ. ಕುಮಾರಸ್ವಾಮಿ ನೇತೃತ್ವದ ಬಹುಮತ ಕಳೆದುಕೊಳ್ಳಲಿದೆಯೇ? ಎಂಬ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಸಾಧ್ಯವಿಲ್ಲ. ಇಬ್ಬರು ಪಕ್ಷೇತರ ಶಾಸಕರು ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದಿರುವುದಾಗಿ ಮುಂಬೈನಲ್ಲಿ ಘೋಷಣೆ ಮಾಡಿದ್ದಾರೆ.


ಪಕ್ಷೇತರ ಶಾಸಕರಾದ ಆರ್.ಶಂಕರ್ ಮತ್ತು ಎಚ್.ನಾಗೇಶ್ ಬೆಂಬಲ ವಾಪಸ್ ಪಡೆಯುವಂತೆ ಮಾಡುವ ಮೂಲಕ ಬಿಜೆಪಿ ಪ್ರಾಥಮಿಕ ಯಶಸ್ಸು ಕಂಡಿದೆ.


ಇದು ಆಪರೇಷನ್ ಕಮಲದ ಮೊದಲ ಹಂತ ಎನ್ನಲಾಗಿದ್ದು, ಎರಡನೇ ಹಂತದಲ್ಲಿ ಕಾಂಗ್ರೆಸ್‌ನ 6 ಶಾಸಕರು ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ನಿನ್ನೆ ತನಕ ಹರಿದಾಡುತ್ತಿತ್ತು.


ಆದರೆ, ಈಗ ಈ ಪಟ್ಟಿಗೆ ಮತ್ತೊಬ್ಬ ಶಾಸಕ ಸೇರ್ಪಡೆಯಾಗಿದ್ದು, 7 ಮಂದಿ ಶಾಸಕರು ಬಿಜೆಪಿಯತ್ತ ವಾಲಿದ್ದಾರೆ ಎಂಬ ಮಾಹಿತಿಯಿದೆ.


ಆಪರೇಷನ್ ಕಮಲದ 2ನೇ ಹಂತವಾಗಿ ಕಾಂಗ್ರೆಸ್‌ನ ಏಳು ಶಾಸಕರು ರಾಜೀನಾಮೆ ನೀಡಲಿದ್ದಾರೆ. ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್ ಅವರಿಗೂ ಗಾಳ ಹಾಕಲಾಗಿದೆಯಾದರೂ, ಪರಂಪರಾಗತವಾಗಿ ಕಟ್ಟಾ ಕಾಂಗ್ರೆಸ್ಸಿಗರಾದ ನಾವು, ಪಕ್ಷಕ್ಕೆ ದ್ರೋಹ ಮಾಡುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.


ಗುರುವಾರದಂದು ಶಾಸಕರು ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿ ಮಾಡಿ, ರಾಜೀನಾಮೆ ನೀಡಿ, ಬಿಜೆಪಿ ಬೆಂಬಲಿಸುತ್ತೇವೆ ಎಂದು ಘೋಷಣೆ ಮಾಡುವ ನಿರೀಕ್ಷೆ ಇದೆ.


ಎಷ್ಟು ಶಾಸಕರಿಂದ ರಾಜೀನಾಮೆ ಸಾಧ್ಯತೆ? 

ರಮೇಶ್ ಜಾರಕಿಹೊಳಿಗೆ ಸೂಕ್ತ ಸ್ಥಾನಮಾನ


ಈ ನಡುವೆ ಬೆಂಗಳೂರಿನಲ್ಲಿರುವ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಬೆಂಗಳೂರಿಗೆ ಬರುವಂತೆ ಸೂಚಿಸಿದ್ದಾರೆ. ಕಾಂಗ್ರೆಸ್ ಅತೃಪ್ತ ಶಾಸಕರ ನಾಯಕತ್ವವನ್ನು ರಮೇಶ್ ಜಾರಕೊಹೊಳಿ ಅವರು ವಹಿಸಿಕೊಂಡಿರುವ ಸಾಧ್ಯತೆ ಇದೆ. ರಮೇಶ್ ಅವರಿಗೆ ಬೇಕಾದ ಸ್ಥಾನ ಮಾನವನ್ನು ನೀಡಲು ಕಾಂಗ್ರೆಸ್ ಸಿದ್ಧವಿದೆ ಎಂಬ ಸಂದೇಶ ನೀಡಲಾಗಿದೆ.


ಎಷ್ಟು ಶಾಸಕರಿಂದ ರಾಜೀನಾಮೆ ಸಾಧ್ಯತೆ? 

ಕುಮಾರಸ್ವಾಮಿ ಅವರಿಂದ ತೀಕ್ಷ್ಣ ಪ್ರತಿಕ್ರಿಯೆ


ರಾಜ್ಯ ರಾಜಕೀಯದ ಬೆಳವಣಿಗೆಯ ಕ್ಷಣಕ್ಷಣದ ಮಾಹಿತಿ ಸಿಎಂ ಆಗಿ ನನಗೆ ಸಿಗುತ್ತಲೇ ಇದೆ. ಯಾವ ಶಾಸಕರನ್ನು ರೆಸಾರ್ಟಿಗೆ ಶಿಫ್ಟ್ ಮಾಡುತ್ತಿಲ್ಲ. ಯಡಿಯೂರಪ್ಪ ಅವರು ಕುದುರೆ ವ್ಯಾಪಾರಕ್ಕಿಳಿದಿದ್ದಾರೆ. ನನಗೆ ಯಾವ ಟೆನ್ಶನ್ ಇಲ್ಲ, ಏನೇನೋ ಸುದ್ದಿ ಪ್ರಸಾರ ಮಾಡಿ, ನೀವು ಫೂಲ್ ಆಗುವುದಷ್ಟೇ ಅಲ್ಲದೆ, ಜನರನ್ನು ಫೂಲ್ ಮಾಡಬೇಡಿ ಎಂದು ಮಾಧ್ಯಮದವರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಲಹೆ ನೀಡಿದರು.


ಎಷ್ಟು ಶಾಸಕರಿಂದ ರಾಜೀನಾಮೆ ಸಾಧ್ಯತೆ? 

ರಾಜೀನಾಮೆ ನೀಡಲು ಸಿದ್ಧರಿರುವ ಶಾಸಕರು


 ರಮೇಶ್ ಜಾರಕಿಹೊಳಿ -ಗೋಕಾಕ್ 

 ನಾಗೇಂದ್ರ - ಬಳ್ಳಾರಿ ಗ್ರಾಮಾಂತರ 

 ಉಮೇಶ್ ಜಾಧವ್ - ಚಿಂಚೋಳಿ 

 ಮಹೇಶ್ ಕುಮಟಳ್ಳಿ - ಅಥಣಿ 

 ಭೀಮಾ ನಾಯ್ಕ್ - ಹಗರಿಬೊಮ್ಮನಳ್ಳಿ 

 ಜೆ.ಎನ್.ಗಣೇಶ್ - ಕಂಪ್ಲಿ

ಪ್ರತಾಪ್ ಗೌಡ ಪಾಟೀಲ್- ಮಸ್ಕಿ


ಎಷ್ಟು ಶಾಸಕರಿಂದ ರಾಜೀನಾಮೆ ಸಾಧ್ಯತೆ? 

ಬಿಜೆಪಿಯ ಮುಂದಿನ ನಡೆಯೇನು?

ಆಪರೇಷನ್ ಕಮಲ ಮುಂದುವರೆಸುವುದು

 ಸದನದಲ್ಲಿ ಸಂಖ್ಯಾಬಲ 211ಕ್ಕೆ ಇಳಿಸುವುದು

 ಸರಳ ಬಹುಮತಕ್ಕೆ ಬೇಕಾದ 106 ಗಡಿ ದಾಟುವುದು

 ಕನಿಷ್ಟ 14 ಶಾಸಕರನ್ನು ಸೆಳೆದುಕೊಳ್ಳುವುದು(ಬಿಜೆಪಿಗೆ ಕನಿಷ್ಟ 16 ಶಾಸಕರ ಅಗತ್ಯವಿದೆ)

ಗುರುಗ್ರಾಮ, ಮುಂಬೈನಲ್ಲಿರುವ ಶಾಸಕರನ್ನು ಕಾಯ್ದುಕೊಳ್ಳುವುದು.

ನಮ್ಮ ಚಾನಲ್ ಗೆ ಭೇಟಿ ನೀಡಿ ಸುದ್ಧಿ ಗಳನ್ನ ವೀಕ್ಷಿಸಿ https://youtu.be/ujlXO-HUsaM

50 ಕೋಟಿ ರೂ.ಗೆ ಮತದಾರರನ್ನು ಮಾರಿದ ಶಾಸಕ.!❓

ಜನಜಾಗೃತಿ ಸುದ್ಧಿವಾಹಿನಿ 

     16 jan 2019


ಕಲಬುರಗಿ: ಆಪರೇಷನ್ ಕಮಲಕ್ಕೆ ತುತ್ತಾಗಿ ಚಿಂಚೋಳಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ. ಉಮೇಶ್ ಜಾಧವ್ ಬಿಜೆಪಿ ಬಾಗಿಲಲ್ಲಿ ನಿಂತಿದ್ದಾರೆ ಎಂದು ಹೇಳಲಾಗಿದ್ದು, ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಕಾಂಗ್ರೆಸ್ ಪಕ್ಷದ ನಾಯಕರ ವಿರುದ್ಧ ಅಸಮಾಧಾನಗೊಂಡಿರುವ ಉಮೇಶ್ ಜಾಧವ್, ಬಿಜೆಪಿ ಸೇರಲು ಮುಂದಾಗಿದ್ದಾರೆ ಎನ್ನಲಾಗಿದ್ದು, ಈ ಬೆಳವಣಿಗೆಗಳ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಅವರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

50 ಕೋಟಿ ರೂ.ಗೆ ಚಿಂಚೋಳಿ ಕ್ಷೇತ್ರದ ಮತದಾರರನ್ನು ಶಾಸಕ ಉಮೇಶ್ ಜಾಧವ್ ಮಾರಿದ್ದಾರೆ ಎಂದು ವಾಟ್ಸಾಪ್ ಗ್ರೂಪ್ ಗಳಲ್ಲಿ ಸಂದೇಶ ಹರಿಯಬಿಡಲಾಗಿದೆ.

ಉಮೇಶ್ ಜಾಧವ್ ಅವರ ಫೋಟೋ ಮೇಲೆ ಇಂಗ್ಲಿಷ್ ನಲ್ಲಿ ಕ್ಷೇತ್ರದ ಮತದಾರರನ್ನು 50 ಕೋಟಿ ರೂ.ಗೆ ಮಾರಿದ್ದಾರೆ ಎಂದು ಬರೆಯಲಾಗಿದ್ದು, ಕಾಂಗ್ರೆಸ್ ಬೆಂಬಲಿಗರ ವಾಟ್ಸಾಪ್ ಗ್ರೂಪ್ ಗಳಲ್ಲಿ ಈ ಫೋಟೋ ವೈರಲ್ ಆಗಿದೆ.

ನಮ್ಮ ಸುದ್ಧಿಗಳನ್ನು ವೀಕ್ಷಿಸಲು ಕ್ಲಿಕ್ ಮಾಡಿ https://youtu.be/ujlXO-HUsaM

ಆಪರೇಷನ್ ಕಮಲ ಸಕ್ಸಸ್ ಆದ್ರೂ, ಕಾದಿದೆ ಶಾಕಿಂಗ್ ನ್ಯೂಸ್ ! ಬಿಜೆಪಿಗೆ ಸಿಕ್ಕಿದೆ ಈ ಎಚ್ಚರಿಕೆ

ಜನಜಾಗೃತಿ ಸುದ್ಧಿವಾಹಿನಿ 

     16 jan 2019


ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರವನ್ನು ಉರುಳಿಸಿ ಅಧಿಕಾರದ ಗದ್ದುಗೆ ಏರಲು ಬಿಜೆಪಿ ಆಪರೇಷನ್ ಕಮಲ ನಡೆಸುತ್ತಿದೆ ಎನ್ನಲಾಗಿದ್ದು, ಆದರೆ ಒಂದು ವರ್ಗ ಮಾತ್ರ ಆಪರೇಷನ್ ಕಮಲಕ್ಕೆ ಮುಂದಾದ ಬಿಜೆಪಿ ನಾಯಕರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದೆಯಂತೆ.


ಬಿಜೆಪಿಯ ಆಪರೇಷನ್ ಕಮಲ ಸಕ್ಸಸ್ ಆದ್ರೂ ಬಿಜೆಪಿಗೆ ಸಂಕಷ್ಟ ಎದುರಾಗಲಿದೆ ಎಂದು ಒಂದು ವರ್ಗ ಬಿಜೆಪಿ ಹೈಕಮಾಂಡ್ ಗೆ ಸ್ಪಷ್ಟ ಸಂದೇಶ ರವಾನಿಸಿದೆ. ಏಕೆಂದರೆ 2018 ರ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಹೆಚ್.ಡಿ.ದೇವೇಗೌಡ ಹಾಗೂ ಕುಮಾರಸ್ವಾಮಿ ಅವರನ್ನು ಟಾರ್ಗೆಟ್ ಮಾಡಿದ್ದರು. ಚುನಾವಣೆಯಲ್ಲಿ ಒಕ್ಕಲಿಗರು ಕಾಂಗ್ರೆಸ್ ವಿರುದ್ಧ ಸಿಡಿದೆದ್ದಿದ್ದರು ಎಂದು ಹೇಳಲಾಗುತ್ತೆ, ಹಾಗಾಗಿ ಕಾಂಗ್ರೆಸ್ ಸೋಲಲು ಕಾರಣ ಎಂದು ಹೇಳಲಾಗುತ್ತಿದೆ.


ಸಿದ್ದರಾಮಯ್ಯ ಅವರು ಹೆಚ್.ಡಿಡಿ-ಹೆಚ್.ಡಿಕೆ ಅವರನ್ನು ಟಾರ್ಗೆಟ್ ಮಾಡಿದ್ದರಿಂದಲೇ ಒಕ್ಕಲಿಗರ ಪ್ರಾಬಲ್ಯವಿರುವ ಜಿಲ್ಲೆಗಳಲ್ಲಿ ಕಾಂಗ್ರೆಸ್ ಸೋಲುನುಭವಿಸಿತ್ತು. ಈಗ ಬಿಜೆಪಿ ಸರ್ಕಾರವನ್ನು ಉರುಳಿಸಿದರೆ ಒಕ್ಕಲಿಗರ ಕೋಪ ಬಿಜೆಪಿ ಕಡೆಗೆ ತಿರುಗಬಹುದು ಎನ್ನಲಾಗಿದ್ದು, ಈ ಕುರಿತು ಒಂದು ವರ್ಗ ಬಿಜೆಪಿ ಹೈಕಮಾಂಡ್ ಗೆ ಎಚ್ಚರಿಕೆ ಸಂದೇಶ ರವಾನಿಸಿದೆ ಎನ್ನಲಾಗಿದೆ.

ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಚಿಕ್ಕಬಳ್ಳಾಪುರ, ತುಮಕೂರು, ಮೈಸೂರು ಭಾಗಗಳಲ್ಲಿ ಒಕ್ಕಲಿಗರ ಪ್ರಾಬಲ್ಯವಿದೆ. ಬಿಜೆಪಿ ಸರ್ಕಾರ ಉರುಳಿಸಿದರೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಐದರಿಂದ ಆರು ಕ್ಷೇತ್ರಗಳಲ್ಲಿ ಬಿಜೆಪಿಗೆ ಹಿನ್ನಡೆಯಾಗಬಹುದು ಎನ್ನಲಾಗುತ್ತಿದೆ.

ನಮ್ಮ ಸುದ್ಧಿ ಗಳನ್ನ ನೋಡಲು ಲಿಂಕ್ ಮೇಲೆ ಕ್ಲಿಕ್ ಮಾಡಿ ತಪ್ಪದೇ ವೀಕ್ಷಿಸಿ https://youtu.be/ujlXO-HUsaM

ಶಬರಿಮಲೆ ವಿವಾದ: ಮೌನ ಮುರಿದ ಪ್ರಧಾನಿ ಮೋದಿ ಹೇಳಿದ್ದೇನು?

ಜನಜಾಗೃತಿ ಸುದ್ಧಿವಾಹಿನಿ


     16 jan 2019

ಕೊಲ್ಲಂ: ಶಬರಿಮಲೆ ಅಯ್ಯಪ್ಪ ದರ್ಶನಕ್ಕೆ ಎಲ್ಲ ವಯೋಮಾನದ ಮಹಿಳೆಯರಿಗೆ ಅವಕಾಶ ನೀಡುವ ಐತಿಹಾಸಿಕ ತೀರ್ಪನ್ನು ಸುಪ್ರೀಂಕೋರ್ಟ್ ನೀಡಿದ ಬಳಿಕ ಇದೇ ಮೊದಲ ಬಾರಿಗೆ ಶಬರಿಮಲೆ ವಿವಾದದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೌನ ಮುರಿದಿದ್ದಾರೆ.

ಕೊಲ್ಲಂನಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಮೋದಿ, "ಶಬರಿಮಲೆ ವಿವಾದಕ್ಕೆ ಸಂಬಂಧಿಸಿದಂತೆ ಕೇರಳ ಸರ್ಕಾರದ ನಿಲುವು ನಾಚಿಕೆಗೇಡು. ಈ ವಿವಾದ ಕುರಿತ ಎಲ್‌ಡಿಎಫ್ ನಿರ್ಧಾರ ಯಾವುದೇ ಪಕ್ಷ ಅಥವಾ ಸರ್ಕಾರದ ಅತ್ಯಂತ ನಾಚಿಕೆಗೇಡಿನ ನಡವಳಿಕೆ ಎಂದು ಇತಿಹಾಸದಲ್ಲಿ ದಾಖಲಿಸಲ್ಪಡುತ್ತದೆ" ಎಂದು ಹೇಳಿದರು.

ತ್ರಿಪುರಾದಲ್ಲಿ ಸಂಭವಿಸಿದ ರಾಜಕೀಯ ಬದಲಾವಣೆಯ ಸೂಚನೆ ಕೇರಳದಲ್ಲೂ ಕಂಡುಬರುತ್ತಿದ್ದು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಎರಡು ಧ್ರುವಗಳ ರಾಜಕೀಯ ಅಧಿಪತ್ಯ ಮುಕ್ತಾಯವಾಗಲಿದ್ದು, ಬಿಜೆಪಿ ಹಾಗೂ ಎನ್‌ಡಿಎ ಮೈತ್ರಿಕೂಟ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.


ಎಲ್‌ಡಿಎಫ್ ಹಾಗೂ ಯುಡಿಎಫ್ ಒಂದೇ ನಾಣ್ಯದ ಎರಡು ಮುಖಗಳು ಎಂದು ಮೋದಿ ಟೀಕಿಸಿದರು.

ಇದಕ್ಕೂ ಮುನ್ನ ಮೋದಿ ತಿರುವನಂತಪುರದಲ್ಲಿ 13 ಕಿಲೋಮೀಟರ್ ಉದ್ದದ ಕೊಲ್ಲಂ ಬೈಪಾಸ್ ಉದ್ಘಾಟಿಸಿದರು. ಕಾಂಗ್ರೆಸ್ ಮೇಲೂ ವಾಗ್ದಾಳಿ ನಡೆಸಿದ ಅವರು, "ಯುಡಿಎಫ್ ಉತ್ತಮವೇನೂ ಅಲ್ಲ. ಕಾಂಗ್ರೆಸ್ ಪಕ್ಷ ಬಹು ನಿಲುವು ಹೊಂದಿದೆ. ಸಂಸತ್ತಿನಲ್ಲಿ ಒಂದು ಹೇಳುತ್ತಾರೆ; ಪಟ್ಟಣಂತಿಟ್ಟದಲ್ಲಿ ಮತ್ತೊಂದು ಹೇಳುತ್ತಾರೆ. ಸೋಮವಾರ ಒಂದು ಹೇಳಿದರೆ ಮರುದಿನ ಇನ್ನೊಂದು ಹೇಳುತ್ತಾರೆ" ಎಂದು ಟೀಕಿಸಿದರು.ಮೋದಿ ಹೇಳಿಕೆಯನ್ನು ಸಿಪಿಎಂ ಕಟುವಾಗಿ ಟೀಕಿಸಿದ್ದು, ಸುಪ್ರೀಂಕೋರ್ಟ್ ತೀರ್ಪು ಅನುಷ್ಠಾನಗೊಳಿಸಿದ್ದಕ್ಕೆ ದೇಶದ ಪ್ರಧಾನಿ ಹೀಗೆ ಹೇಳಿರುವುದು ನಿಜಕ್ಕೂ ನಾಚಿಕೆಗೇಡು ಎಂದು ತಿರುಗೇಟು ನೀಡಿದೆ.

ನಮ್ಮ ಸುದ್ಧಿ ಗಳನ್ನ ವೀಕ್ಷಿಸಲು ಕ್ಲಿಕ್ ಮಾಡಿ https://youtu.be/ujlXO-HUsaM

ದೋಸ್ತಿ ಸರ್ಕಾರಕ್ಕೆ ಮತ್ತೊಂದು ಬಿಗ್ ಶಾಕ್ : ಮತ್ತೊಬ್ಬ `ಕೈ' ಶಾಸಕ ಮುಂಬೈಗೆ ಶಿಫ್ಟ್!❓

ಜನಜಾಗೃತಿ ಸುದ್ಧಿವಾಹಿನಿ


     16 jan 2019


ಬೆಂಗಳೂರು: ಮಾಜಿ ಅರಣ್ಯ ಸಚಿವ, ಕೆಪಿಜೆಪಿ ಪಕ್ಷದ ನಾಯಕ ಆರ್. ಶಂಕರ್ ಮತ್ತು ಮುಳಬಾಗಿಲು ಕ್ಷೇತ್ರದ ಶಾಸಕ ಹೆಚ್. ನಾಗೇಶ್ ಅವರು ಮೈತ್ರಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದಿದ್ದು, ಇದೀಗ ಕಾಂಗ್ರೆಸ್ ನ ಮತ್ತೊಬ್ಬ ಅತೃಪ್ತ ಶಾಸಕರು ಮುಂಬೈ ಶಿಫ್ಟ್ ಆಗಿದ್ದಾರೆ ಎನ್ನಲಾಗುತ್ತಿದೆ.

ಮಸ್ಕಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರತಾಪ್ ಗೌಡ ಪಾಟೀಲ್ ಅವರು ಮಂಗಳವಾರ ಸಂಜೆ ಮುಂಬಯಗೆ ತೆರಳಿದ್ದಾರೆ. ಶಾಸಕರು ಹಾಗೂ ಪಕ್ಷದ ನಾಯಕರ ನಡುವೆ ಭಿನ್ನಮತ ಕಾಣಿಸಿಕೊಂಡಿದ್ದು, ಈಗಾಗಲೇ ಮುಂಬೈನಖಾಸಗಿ ಹೋಟೆಲ್ ನಲ್ಲಿರುವ ಆರು ಜನ ಶಾಸಕರನ್ನು ಪ್ರತಾಪ್ ಗೌಡ ಸೇರಿದ್ದಾರೆ ಎನ್ನಲಾಗಿದೆ.

ಮೊದಲ ಹಂತದ ಆಪರೇಷನ್ ಕಮಲದಲ್ಲಿ ಯಶಸ್ವಿಯಾದ ಬಿಜೆಪಿ ಇಂದು ಎರಡನೇ ಹಂತದ ಆಪರೇಷನ್ ಕಮಲ ನಡೆಸಲು ಮುಂದಾಗಲಿದ್ದಾರೆ ಎನ್ನಲಾಗುತ್ತಿದ್ದು, ಕಾಂಗ್ರೆಸ್ ನ 7 ಶಾಸಕರಿಂದ ರಾಜೀನಾಮೆ ಕೊಡಿಸಲು ಬಿಜೆಪಿ ಬಿಗ್ ಪ್ಲಾನ್ ರೂಪಿಸುತ್ತಿದೆ ಎಂದು ಹೇಳಲಾಗುತ್ತಿದೆ.

ನಮ್ಮ ಸುದ್ಧಿ ಗಳನ್ನ ವೀಕ್ಷಿಸಲು ಕ್ಲಿಕ್ ಮಾಡಿ https://youtu.be/ujlXO-HUsaM

ಅತೃಪ್ತ ಶಾಸಕರ ರಾಜೀನಾಮೆ ತಡೆಯಲು ಕಾಂಗ್ರೆಸ್ ಮಾಸ್ಟರ್ ಪ್ಲಾನ್‌

ಜನಜಾಗೃತಿ ಸುದ್ಧಿವಾಹಿನಿ 


     15 jan 2019


ಬೆಂಗಳೂರು: ಕಾಂಗ್ರೆಸ್ ಕೈತಪ್ಪಿ ಹೋಗಿರುವ ಐದು ಜನ ಶಾಸಕರು ಯಾವ ಸಮಯದಲ್ಲಾದರೂ ರಾಜೀನಾಮೆ ಕೊಡಬಹುದು. ಆದರೆ ಅವರ ರಾಜೀನಾಮೆ ತಡೆಯಲು ಕಾಂಗ್ರೆಸ್ ಒಂದು ಮಾಸ್ಟರ್ ಪ್ಲಾನ್ ಸಿದ್ದಮಾಡಿಕೊಂಡಿದೆ.


ಕಾಂಗ್ರೆಸ್‌ನ ಐದು ಶಾಸಕರು ಈಗಾಗಲೇ ಕರ್ನಾಟಕದ ಗಡಿ ದಾಟಿ ಮುಂಬೈನಲ್ಲಿ ವಾಸ್ತವ್ಯ ಹೂಡಿದ್ದಾರೆ. ಅವರು ಇಂದು ಅಥವಾ ನಾಳೆ ಸ್ಪೀಕರ್ ರಮೇಶ್‌ ಕುಮಾರ್‌ಗೆ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ ಆದರೆ ಅವರು ರಾಜೀನಾಮೆ ನೀಡದಂತೆ ತಡೆಯಲು ಕಾಂಗ್ರೆಸ್‌ ತಂತ್ರವೊಂದನ್ನು ಹೂಡಲಿದೆ.


ಶಾಸಕರು ವಿಧಾನಸಭೆ ಸಭಾಧ್ಯಕ್ಷರಿಗೆ ರಾಜೀನಾಮೆ ಸಲ್ಲಿಸಲು ಅವಕಾಶವೇ ನೀಡದಂತೆ ಮಾಡಲು, ಸ್ಪೀಕರ್ ರಮೇಶ್‌ ಕುಮಾರ್ ಅವರನ್ನು ಪ್ರವಾಸಕ್ಕೆ ಕಳಿಸಿಬಿಡುವ ಆಲೋಚನೆಯೂ ಕಾಂಗ್ರೆಸ್‌ ಮುಖಂಡರು ಮಾಡಿದ್ದಾರೆ.


ರಮೇಶ್ ಕುಮಾರ್ ಅವರನ್ನು ಪ್ರವಾಸಕ್ಕೆ ಕಳುಹಿಸಿದರೆ, ಅವರು ಮರಳುವವರೆಗೆ ತಮ್ಮ ರಾಜೀನಾಮೆ ಅಂಗೀಕಾರಗೊಳ್ಳುವುದಿಲ್ಲ.


ಇದು ಕಾಂಗ್ರೆಸ್‌ಗೆ ಸಮಯವಾಕಾಶ ದೊರಕಿಸಿಕೊಡುತ್ತದೆ. ಆ ಸಮಯದಲ್ಲಿ ಅತೃಪ್ತ ಶಾಸಕರ ಮನವೊಲಿಸಲು ಅಥವಾ ಬಿಜೆಪಿಯ ಶಾಸಕರನ್ನು ತಮ್ಮತ್ತ ಸೆಳೆದುಕೊಳ್ಳುವ ಯತ್ನ ಕಾಂಗ್ರೆಸ್ ಮಾಡಬಹುದಾಗಿದೆ.


ಸಭಾಧ್ಯಕ್ಷರು ಪಕ್ಷಾತೀತವಾಗಿರಬೇಕು 

ರಮೇಶ್‌ ಕುಮಾರ್ ಒಪ್ಪುತ್ತಾರೆಯೇ?ಈ ಬಗ್ಗೆ ಇಂದಿನ ಕಾಂಗ್ರೆಸ್‌ ಸಭೆಯಲ್ಲಿ ಚರ್ಚಿಸಲಾಗಿದೆ ಎಂಬ ಮಾಹಿತಿ ಇದೆ. ಸಭಾಧ್ಯಕ್ಷರು ಪಕ್ಷಾತೀತವಾಗಿ ಕಾರ್ಯ ನಿರ್ವಹಿಸಬೇಕು ಎಂಬ ನಿಯಮ ಇದೆ ಹಾಗಾಗಿ, ಈ ರಾಜಕೀಯ ಆಟಕ್ಕೆ ರಮೇಶ್‌ ಕುಮಾರ್ ಒಪ್ಪಿಕೊಳ್ಳುತ್ತಾರೆಯೇ ಎಂಬ ಅನುಮಾನವೂ ಇದೆ.


ರಮೇಶ್‌ ಕುಮಾರ್‌ ಅನ್ನು ಪ್ರವಾಸಕ್ಕೆ ಕಳುಹಿಸುವ ತಂತ್ರ? 

ಸಭಾಧ್ಯಕ್ಷರಿಗೆ ರಾಜೀನಾಮೆ ಸಲ್ಲಿಸಬೇಕುನಿಯಮದ ಪ್ರಕಾರ ಶಾಸಕರು ರಾಜೀನಾಮೆಯನ್ನು ಸಭಾಧ್ಯಕ್ಷರಿಗೆ ಸಲ್ಲಿಸಬೇಕು. ಸಭಾಧ್ಯಕ್ಷರು ಅಂಕಿತ ಹಾಕುವವರೆಗೂ ರಾಜೀನಾಮೆ ಅಂಗೀಕಾರಗೊಳ್ಳುವುದಿಲ್ಲ. ಇದರ ಲಾಭವನ್ನು ಕಾಂಗ್ರೆಸ್ ಪಡೆದುಕೊಳ್ಳಲು ರಮೇಶ್ ಕುಮಾರ್ ಅವರನ್ನು ಪ್ರವಾಸಕ್ಕೆ ಕಳುಹಿಸುವ ಯತ್ನ ಮಾಡಲಿದೆ ಎನ್ನಲಾಗಿದೆ.

ರಾಜೀನಾಮೆ ಸಲ್ಲಿಸುವ ಸಾಧ್ಯತೆ ಐದು ಶಾಸಕರು ಮುಂಬೈನಲ್ಲಿರಮೇಶ್ ಜಾರಕಿಹೊಳಿ, ಉಮೇಶ್ ಜಾದವ್, ಶ್ರೀಮಂತ ಪಾಟೀಲ್ ಸೇರಿ ಇನ್ನೂ ಕೆಲವರು ಈಗಾಗಲೇ ಮುಂಬೈನಲ್ಲಿದ್ದಾರೆ ವಾಸ್ತವ್ಯ ಹೂಡಿದ್ದಾರೆ ಎನ್ನಲಾಗಿದೆ. ಇವರು ಬಿಜೆಪಿ ಸಂಪರ್ಕದಲ್ಲಿದ್ದು, ಯಾವಾಗ ಬೇಕಾದರೂ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ.

ವಾಪಸ್ ಕರೆತರಲು ತಂತ್ರ 

ಮುಂಬೈಗೆ ತೆರಳಲಿರುವ ಡಿಕೆಶಿ

ಅತೃಪ್ತ ಶಾಸಕರ ಮನವೊಲಿಸಲು ಸಚಿವ ಡಿ.ಕೆ.ಶಿವಕುಮಾರ್ ಅವರು ಮುಂಬೈಗೆ ತೆರಳಲಿದ್ದಾರೆ. ಸಮ್ಮೇಳನವೊಂದರಲ್ಲಿ ಭಾಗವಹಿಸುವ ಉದ್ದೇಶದಿಂದ ಔರಂಗಾಬಾದ್‌ಗೆ ಹೋಗುತ್ತಿದ್ದೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರಾದರೂ ಅವರು ಮುಂಬೈನಲ್ಲಿ ತಂಗಿರುವ ತಮ್ಮ ಪಕ್ಷದ ಶಾಸಕರನ್ನು ವಾಪಸ್ ಕರೆತರಲು ಮುಂಬೈಗೆ ಹೋಗುತ್ತಿದ್ದಾರೆ ಎನ್ನಲಾಗಿದೆ.

ನಮ್ಮ ಸುದ್ಧಿಗಳನ್ನು ವೀಕ್ಷಿಸಲು ಕ್ಲಿಕ್ ಮಾಡಿ https://youtu.be/YrKYQ4HlZeA

ರಾಜ್ಯ ಸರ್ಕಾರದಿಂದ ರೈತರಿಗೆ `ಸಂಕ್ರಾಂತಿ ಉಡುಗೊರೆ' : 1.7 ಲಕ್ಷ ಸಾಲ ಖಾತೆಗಳಿಗೆ 876 ಕೋಟಿ ರೂ. ಬಿಡುಗಡೆ

ಜನಜಾಗೃತಿ ಸುದ್ಧಿವಾಹಿನಿ

     15 jan 2019


ಬೆಂಗಳೂರು: ರಾಜ್ಯ ಸರ್ಕಾರವು ರೈತರಿಗೆ ಸಂಕ್ರಾಂತಿ ಹಬ್ಬಕ್ಕೆ ಭರ್ಜರಿ ಉಡುಗೊರೆ ನೀಡಿದ್ದು, 1.1 ಲಕ್ಷ ಸಹಕಾರಿ ಬ್ಯಾಂಕುಗಳ ಸಾಲದ ಖಾತೆಗಳಿಗೆ 616 ಕೋಟಿ ರೂ. ಹಾಗೂ ವಾಣಿಜ್ಯ ಬ್ಯಾಂಕುಗಳಲ್ಲಿನ 58 ಸಾವಿರ ಸಾಲದ ಖಾತೆಗಳಿಗೆ 260 ಕೋಟಿ ರೂ.ಗಳ ಬೆಳೆ ಸಾಲ ಮನ್ನಾದ ಮೊತ್ತ ಬಿಡುಗಡೆ ಮಾಡಲಾಗಿದೆ.

ಈ ಎರಡೂ ಬ್ಯಾಂಕುಗಳಲ್ಲಿ ಒಟ್ಟು 1.7 ಲಕ್ಷ ಸಾಲ ಖಾತೆಗಳಿಗೆ 876 ಕೋಟಿ ರೂ. ಗಳಷ್ಟು ಸಾಲ ಮನ್ನಾ ಮೊತ್ತ ಬಿಡುಗಡೆ ಮಾಡಿದಂತಾಗಿದೆ. ಜನವರಿ 11 ರ ವರೆಗೆ ಒಟ್ಟು 10 ಲಕ್ಷಕ್ಕೂ ಹೆಚ್ಚು ರೈತರು ಸಾಲ ಮನ್ನಾ ಯೋಜನೆಗಾಗಿ ಅರ್ಹತೆ ಹೊಂದಿದ್ದು, ಸಹಕಾರಿ ಬ್ಯಾಂಕುಗಳ ಹಾಗೂ ವಾಣಿಜ್ಯ ಬ್ಯಾಂಕುಗಳ ಸಾಲ ಖಾತೆಗಳ ಜಿಲ್ಲಾವಾರು ವಿವರ ನೀಡಲಾಗಿದೆ.

ಈ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಸಾಲದ ಖಾತೆಗಳಿಗೆ ಮನ್ನಾ ಮೊತ್ತವನ್ನು ನಿಯಮಿತವಾಗಿ ಪಾವತಿಸಲಾಗುತ್ತಿದೆ.

ಸಹಕಾರಿ ಬ್ಯಾಂಕುಗಳಲ್ಲಿ ಸಾಲವನ್ನು ತೀರಿಸುವ ವಾಯಿದೆ ಮುಗಿದ ನಂತರ ಮನ್ನಾ ಮೊತ್ತ ಬಿಡುಗಡೆ ಮಾಡಲಾಗುತ್ತದೆ ಎನ್ನಲಾಗಿದೆ.

ನಮ್ಮ ಸುದ್ಧಿಗಳನ್ನು ವೀಕ್ಷಿಸಲು ಕ್ಲಿಕ್ ಮಾಡಿ https://youtu.be/YrKYQ4HlZeA

Monday, January 14, 2019

ಪಕ್ಷ ಬಿಟ್ಟು ಹೋಗುವವರನ್ನು ವಾಪಸ್ ಕರೆತರುವ ತಾಕತ್ತು ನಮಗಿದೆ' ; ಡಿಕೆಶಿ

ಜನಜಾಗೃತಿ ಸುದ್ಧಿವಾಹಿನಿ 

     15 jan 2019


ಬೆಂಗಳೂರು: ಬಿಜೆಪಿ ಆಪರೇಷನ್ ಕಮಲ ಕಾರ್ಯಾಚರಣೆಯಲ್ಲಿ ಪಕ್ಷ ತೊರೆದು ಹೋಗುವವರನ್ನು ಮತ್ತೆ ಪಕ್ಷಕ್ಕೆ ಕರೆ ತರುವ ತಾಕತ್ತು ನಮಗಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಹೆಣೆದಿರುವ ತಂತ್ರಕ್ಕೆ ಪ್ರತಿ ತಂತ್ರ ಹೆಣೆಯುವ ಶಕ್ತಿ ಕಾಂಗ್ರೆಸ್ ಪಕ್ಷಕ್ಕೂ ಇದೆ ಎಂದರು.


ಕಾಂಗ್ರೆಸ್ ಪಕ್ಷದ ಅತೃಪ್ತ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂಬುದು ಸುಳ್ಳು. ಯಾರೂ ಕೂಡಾ ಬಿಜೆಪಿಯೊಂದಿಗೆ ಹೋಗಿಲ್ಲ. ಆನಂದ್ ಸಿಂಗ್ ಕೂಡ ನಮ್ಮೊಂದಿಗೇ ಇದ್ದಾರೆ.


ಸುಖಾಸುಮ್ಮನೆ ಸುಳ್ಳು ಸುದ್ದಿಗಳನ್ನು ಬಿಜೆಪಿ ಪ್ರಚುರಪಡಿಸುತ್ತಿದೆ ಎಂದು ಹೇಳಿದರು.


ಒಂದು ವೇಳೆ ಬಿಜೆಪಿ ಕಾಂಗ್ರೆಸ್ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡಿದರೆ ಅವರನ್ನು ಮತ್ತೆ ಕರೆತರುವ ತಾಕತ್ತು ನಮಗಿದೆ ಎಂದರು.


ಸಿಎಂ ವಿರುದ್ಧ ಪರೋಕ್ಷವಾಗಿ ಅಸಮಾಧಾನ : ಕೈ ಅತೃಪ್ತರ ಭಿನ್ನಮತೀಯ ಚಟುವಟಿಕೆ ವಿಚಾರದಲ್ಲಿ ಸಿಎಂ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ನ ಪವರ್ ಪುಲ್ ನಾಯಕ ಡಿ.ಕೆ.ಶಿವಕುಮಾರ್ ನಡುವೆ ಭಿನ್ನಮತ ಉಂಟಾಗಿದೆ.


'ಬಿಜೆಪಿ ಬಗ್ಗೆ ಸಿಎಂ ಕುಮಾರಸ್ವಾಮಿ ಸಹಾನುಭೂತಿ ಹೊಂದಿದ್ದಾರೆ' ಎಂದು ಸಿಎಂ ಕುಮಾರಸ್ವಾಮಿ ವಿರುದ್ಧ ಮೊದಲ ಬಾರಿಗೆ ಸಚಿವ ಡಿ.ಕೆ.ಶಿವಕುಮಾರ್ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.

'ಅತೃಪ್ತ ಕಾಂಗ್ರೆಸ್ ಶಾಸಕರನ್ನು ಸೆಳೆಯುವ ಅಪರೇಶನ್ ಬಗ್ಗೆ ಸಿಎಂಗೆ ಮಾಹಿತಿ ಇದೆ. ಶಾಸಕರಿಗೆ ಆಮಿಷವೊಡ್ಡುತ್ತಿರುವ ಬಗ್ಗೆಯೂ ಸಿಎಂ ಕುಮಾರಸ್ವಾಮಿಗೆ ನಿಖರ ಮಾಹಿತಿ ಇದೆ. ಸ್ವತಃ ಶಾಸಕರೇ ತಮಗೆ ಆಮಿಷವೊಡ್ಡುತ್ತಿರುವ ಬಗ್ಗೆ ಸಿಎಂಗೆ ಮಾಹಿತಿ ಕೊಟ್ಟಿದ್ದಾರೆ. ನಾನಾಗಿದ್ದರೆ 24 ಗಂಟೆಗಳಲ್ಲಿ ಎಲ್ಲವನ್ನೂ ಬಯಲು ಮಾಡ್ತಿದ್ದೆ' ಎಂದು ಸಿಎಂ ಕುಮಾರಸ್ವಾಮಿ ವಿರುದ್ಧ ಡಿ.ಕೆ.ಶಿವಕುಮಾರ್ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ.

ನಮ್ಮ ಸುದ್ಧಿ ಗಳನ್ನ ವೀಕ್ಷಿಸಲು ಕ್ಲಿಕ್ ಮಾಡಿ https://youtu.be/YrKYQ4HlZeA

ಕರ್ನಾಟಕದಲ್ಲಿ ಸರ್ಕಾರ ರಚನೆ ಯತ್ನಕ್ಕೆ ಕೊನೆಗೂ ಅಮಿತ್‌ ಶಾ ಎಂಟ್ರಿ❗

ಜನಜಾಗೃತಿ ಸುದ್ಧಿವಾಹಿನಿ


     15 jan 2019


ನವದೆಹಲಿ: ಸಂಪುಟ ವಿಸ್ತರಣೆ ನಂತರ ರಮೇಶ್‌ ಜಾರಕಿಹೊಳಿ ದಿಲ್ಲಿಗೆ ಬಂದು ಕುಳಿತಿದ್ದರೂ ಅವರೊಡನೆ ನೇರವಾಗಿ ಕುಳಿತು ಮಾತನಾಡಲು ತಯಾರಾಗದ ಅಮಿತ್‌ ಶಾ, ಕಳೆದ ಒಂದು ವಾರದ ಈಚೆಗೆ ಮಾತ್ರ '18 ಶಾಸಕರು ತಯಾರಾದರೆ ಸರ್ಕಾರ ರಚನೆಗೆ ನಮ್ಮ ಅಡ್ಡಿ ಇಲ್ಲ' ಎಂದು ಯಡಿಯೂರಪ್ಪನವರಿಗೆ ಸ್ಪಷ್ಟಪಡಿಸಿದ್ದಾರೆ.


ಶೀಘ್ರದಲ್ಲೇ ಕೆಲ ಜಿಲ್ಲೆಯ ಶಾಸಕರಿಗೆ ಶುಭಸುದ್ದಿ: ಬಿ.ಎಸ್.ಯಡಿಯೂರಪ್ಪ!


ಅಗತ್ಯಬಿದ್ದಲ್ಲಿ ಕೇಂದ್ರ ಸಚಿವ ಪಿಯೂಷ್‌ ಗೋಯಲ್ ಸಹಾಯ ಪಡೆದುಕೊಳ್ಳಿ ಎಂದು ಕೂಡ ಹೇಳಿದ್ದಾರೆ. ಬಿಜೆಪಿ ಹೈಕಮಾಂಡ್‌ಗೆ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಬಂದರೆ 20 ಲೋಕಸಭಾ ಸೀಟ್‌ ಗೆಲ್ಲಬಹುದು ಎಂಬ ಅಭಿಪ್ರಾಯವಿದ್ದು, ಕಾಂಗ್ರೆಸ್‌, ಜೆಡಿಎಸ್‌ ಸರ್ಕಾರವಿದ್ದರೆ ಬಿಜೆಪಿ 10-12ಕ್ಕಿಂತ ಜಾಸ್ತಿ ಗೆಲ್ಲುವುದು ಕಷ್ಟಎಂಬ ಅನಿಸಿಕೆಯಿದೆ.

ಹೀಗಾಗಿ ಸರ್ಕಾರ ರಚನೆ ಎಂದಕೂಡಲೇ ಹೈಕಮಾಂಡ್‌ ಕೂಡ ಉತ್ಸಾಹದಲ್ಲಿದೆ.

ಬಿಎಸ್‌ವೈ ಲವಲವಿಕೆಯ ಗುಟ್ಟೇನು?ಇಷ್ಟು ದಿನ ಸೈಲೆಂಟ್ ಆಗಿದ್ದ ಬಿಜೆಪಿ ಹೈಕಮಾಂಡ್ ಇದೀಗ ಅಖಾಡಕ್ಕೆ ಇಳಿದಿದ್ದಾರೆ. ಅಮಿತ್ ಶಾ ಎಂಟ್ರಿ ಕೊಡುತ್ತಿದ್ದಂತೆ ರಾಜ್ಯ ರಾಜ್ಯಕಾರಣದಲ್ಲಿ ಸಂಚಲನ ಮೂಡಿದೆ. ಇಷ್ಟೇ ಅಲ್ಲ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆ ಕನಸು ಬಿಜೆಪಿ ಪಾಳಯದಲ್ಲಿ ಬಲಗೊಳ್ಳುತ್ತಿದೆ.

ನಮ್ಮ ಸುದ್ಧಿಗಳನ್ನು ವೀಕ್ಷಿಸಲು ಕ್ಲಿಕ್ ಮಾಡಿ https://youtu.be/YrKYQ4HlZeA

🤚🏻ಕಾಂಗ್ರೆಸ್ ಶಾಸಕರೇನು ಬಕ್ರಾಗಳಲ್ಲ' : ಪ್ರಿಯಾಂಕ್ ಖರ್ಗೆ

ಜನಜಾಗೃತಿ ಸುದ್ಧಿವಾಹಿನಿ 


     15 jan 2019


ಬೆಂಗಳೂರು: ಸರ್ಕಾರ ಕೆಡವುವಷ್ಟು ಸಂಖ್ಯಾ ಬಲ ಬಿಜೆಪಿಯವರ ಬಳಿ ಇಲ್ಲ. ತೋಳ ಬಂತು ತೋಳ ಎಂಬಂತೆ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.

ಇಂದು ಬೆಳಗ್ಗೆ ಕುಮಾರಕೃಪ ಅತಿಥಿಗೃಹದಲ್ಲಿ ಕಾಂಗ್ರೆಸ್ ಉಸ್ತುವಾರಿ ನಾಯಕ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಹಿಂಬಾಗಿಲ ಮೂಲಕ ಅಧಿಕಾರ ಹಿಡಿಯಲು ಅಸಂವಿಧಾನಿಕವಾಗಿ ಪ್ರಯತ್ನ ಪಡುತ್ತಿರುವುದು ಇದು ಮೊದಲ ಬಾರಿ ಅಲ್ಲ.

ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಪ್ರಯತ್ನ ಪಡುತ್ತಲೇ ಇದ್ದಾರೆ. ಹಲವಾರು ಬಾರಿ ಸರ್ಕಾರಕ್ಕೆ ಡೆಡ್‍ಲೈನ್‍ಗಳನ್ನು ಕೊಡುತ್ತಲೇ ಇದ್ದಾರೆ.ಯಾವಾಗಲೂ ಯಶಸ್ವಿಯಾಗಿಲ್ಲ. ಈಗಲೂ ಯಶಸ್ವಿಯಾಗುವುದಿಲ್ಲ ಎಂದರು.

ಸರ್ಕಾರ ಪತನಗೊಳಿಸಲು ಕನಿಷ್ಠ 12ರಿಂದ 15 ಮಂದಿ ಶಾಸಕರು ಬೇಕು. ಅಷ್ಟು ಸಂಖ್ಯಾಬಲ ಬಿಜೆಪಿಯವರ ಬಳಿ ಇಲ್ಲ. ಮೂರ್ನಾಲ್ಕು ಮಂದಿ ಬಿಜೆಪಿಯವರ ಜತೆ ಹೋಗಿರಬಹುದು. ಅಷ್ಟರಿಂದಲೇ ಸರ್ಕಾರ ಕೆಡವಲು ಸಾಧ್ಯವಿಲ್ಲ ಎಂದು ಹೇಳಿದರು.

ಶಾಸಕರನ್ನು ಬಲವಂತವಾಗಿ ಹಿಡಿದಿಟ್ಟುಕೊಳ್ಳುವುದು ಸರಿಯಲ್ಲ. ಅವರೇನು ಕುರಿಗಳಲ್ಲ. ಎರಡೂವರೆ ಲಕ್ಷ ಜನರಿಂದ ಮತ ಪಡೆದು ಚುನಾಯಿತರಾದ ಜವಾಬ್ದಾರಿಯುತ ಪ್ರತಿನಿಧಿಗಳು.ಅವರಿಗೆ ಸ್ವಂತ ವಿಚೇಚನೆ ಇದೆ ಎಂದು ತಿಳಿಸಿದರು. ಮಾಧ್ಯಮಗಳು ದಿನಬೆಳಗಾದರೆ ಬ್ರೇಕಿಂಗ್ ಸುದ್ದಿಗಳನ್ನು ಹಾಕಿ ಅನಗತ್ಯವಾಗಿ ಆತಂಕ ಸೃಷ್ಟಿಸುತ್ತಿವೆ. ಆ ಕಾರಣಕ್ಕಾಗಿ ಕೆ.ಸಿ.ವೇಣುಗೋಪಾಲ್ ಅವರು ಬೆಂಗಳೂರಿಗೆ ಬಂದು ವಸ್ತು ಸ್ಥಿತಿಯನ್ನು ಅಧ್ಯಯನ ಮಾಡುತ್ತಿದ್ದಾರೆ ಎಂದು ಹೇಳಿದರು.

ನಮ್ಮ ಚಾನಲ್ ಗೆ ಭೇಟಿ ನೀಡಿ ಸುದ್ಧಿಗಳನ್ನ ವೀಕ್ಷಿಸಿ https://youtu.be/YrKYQ4HlZeA

ಭಾರತೀಯ ಸೇನೆಯಿಂದ ಆತ್ಮಹತ್ಯಾ ಬಾಂಬರ್ ಸೆರೆ❓

ಜನಜಾಗೃತಿ ಸುದ್ಧಿವಾಹಿನಿ


     15 jan 2019

ನವದೆಹಲಿ: ಹೊಟ್ಟೆಗೆ ಬಾಂಬ್‌ ಕಟ್ಟಿಕೊಂಡಿದ್ದ ಆತ್ಮಹತ್ಯಾ ಬಾಂಬರ್‌ನೊಬ್ಬನನ್ನು ಭಾರತೀಯ ಸೇನೆ ಸೆರೆಹಿಡಿದಿದೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಸಂಜಯ್‌ ಚೌದರಿ ಎಂಬ ಹೆಸರಿನ ಫೇಸ್‌ಬುಕ್‌ ಪೇಜ್‌ನಲ್ಲಿ ವಯಸ್ಸಾದ ವ್ಯಕ್ತಿಯೊಬ್ಬ ಹಳದಿ ಬಣ್ಣದ ಬ್ಯಾಗ್‌ಗಳನ್ನು ತನ್ನ ಹೊಟ್ಟೆಗೆ ಕಟ್ಟಿಕೊಂಡು ಸೇನಾಧಿಕಾರಿಯ ಜೊತೆ ನೀಂತಿರುವ ಫೋಟೋವನ್ನು ಪೋಸ್ಟ್‌ ಮಾಡಿ, 'ಇವನು ಸೂಸೈಡ್‌ ಬಾಂಬರ್‌. ಭಾರತೀಯ ಸೇನೆ ಈತನನ್ನು ಸೆರೆಹಿಡಿದಿದೆ' ಎಂದು ಒಕ್ಕಣೆ ಬರೆಯಲಾಗಿದೆ. ಸದ್ಯ ಈ ಪೋಸ್ಟ್‌ 6,300 ಬಾರಿ ಶೇರ್‌ ಆಗಿದೆ. ಫೇಸ್‌ಬುಕ್‌ ಮಾತ್ರವಲ್ಲದೆ ಟ್ವೀಟರ್‌ ಮತ್ತು ವಾಟ್ಸ್‌ಆಯಪ್‌ಗಳಲ್ಲೂ ವೈರಲ್‌ ಆಗಿದೆ.

ಆದರೆ ನಿಜಕ್ಕೂ ಫೋಟೋದಲ್ಲಿರುವಾತ ಸೂಸೈಡ್‌ ಬಾಂಬರ್‌ ಹೌದೇ ಎಂದು ಆಲ್ಟ್‌ ನ್ಯೂಸ್‌ ಸುದ್ದಿ ಸಂಸ್ಥೆ ಪರಿಶೀಲಿಸಿದಾಗ ಕಳೆದ ವರ್ಷವೂ ಇದೇ ಫೋಟೋ ಹರಿದಾಡಿವುದು ಪತ್ತೆಯಾಗಿದೆ.

ಈ ಸುದ್ದಿ ಸತ್ಯಾಸತ್ಯ ಏನು ಎಂದು ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲಿಸಿದಾಗ 2014ರ ಟ್ವೀಟ್‌ವೊಂದರಲ್ಲಿ 'ಮಾದಕ ವಸ್ತು ಸಾಗಣೆ ಮಾಡುತ್ತಿದ್ದ ವ್ಯಕ್ತಿಯ ಬಂಧನ' ಎಂದು ಬರೆದು ಇದೇ ಪೋಟೋವನ್ನು ಪೋಸ್ಟ್‌ ಮಾಡಲಾಗಿರುವುದು ಪತ್ತೆಯಾಗಿದೆ.ಅಲ್ಲದೆ ಪಾಕಿಸ್ತಾನ ಮೂಲದ ಪತ್ರಕರ್ತರೊಬ್ಬರ ಟ್ವೀಟ್‌ನಲ್ಲೂ ಇದೇ ರೀತಿ ಬರೆಯಲಾಗಿದೆ. ಅಂದರೆ ಈತ ಪಾಕಿಸ್ತಾ ಮತ್ತು ಅಷ್ಘಾನಿಸ್ತಾನ ಗಡಿಗಳಲ್ಲಿ ಮಾದಕ ವಸ್ತುಗಳ ಸಾಗಾಣಿಕೆ ಮಾಡುತ್ತಿದ್ದು, ಪಾಕ್‌ ಸೇನೆ 2014ರಲ್ಲಿ ಈತನನ್ನು ಬಂಧಿಸಿತ್ತು. ಸದ್ಯ ಅದೇ ಫೋಟೋವನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಸುದ್ದಿಯನ್ನು ಹರಡಲಾಗುತ್ತಿದೆ.

ನಮ್ಮ ಚಾನಲ್ ಗೆ ಭೇಟಿ ನೀಡಿ ಸುದ್ಧಿಗಳನ್ನು ವೀಕ್ಷಿಸಿ https://youtu.be/YrKYQ4HlZeA

ಕರಾಳ 'ಸಂಕ್ರಾಂತಿ' : ಕಾರು ಕಾಲುವೆಗೆ ಬಿದ್ದು ಒಂದೇ ಕುಟುಂಬದ ಐವರು ದುರ್ಮರಣ..!

ಜನಜಾಗೃತಿ ಸುದ್ಧಿವಾಹಿನಿ


     15 jan 2019


ಬೆಳಗಾವಿ: ಅಂತ್ಯಕ್ರಿಯೆ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದ ಕಾರು ಕಾಲುವೆಗೆ ಬಿದ್ದು ಒಂದೇ ಕುಟುಂಬದ ಐವರು ನೀರು ಪಾಲಾಗಿರುವ ಘಟನೆ ಸವದತ್ತಿ ತಾಲೂಕಿನ ಕಡಬಿ ಶಿವಾಪುರ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.

ಅಂತ್ಯಕ್ರಿಯೆ ಮುಗಿಸಿಕೊಂಡು ಮನೆಗೆ ವಾಪಾಸ್ ಆಗುತ್ತಿದ್ದ ಐದು ಜನರಿದ್ದ ಕಾರು ಪಲ್ಟಿಯಾಗಿ ಕಾಲುವೆಗೆ ಬಿದ್ದಿದ್ದು, ಐದೂ ಜನ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಕಡಬಿ ಗ್ರಾಮದ ಒಂದೇ ಕುಟುಂಬದ ನಿವಾಸಿಗಳಾದ ಪಕ್ಕೀರವ್ವ ಪೂಜೇರಿ(29), ಹನುಮಂತ ಪೂಜೇರಿ(60), ಲಗಮಣ್ಣ ಪೂಜೇರಿ(38), ಪಾರವ್ವ ಪೂಜೇರಿ(50), ಲಕ್ಷ್ಮೀ ಪೂಜೇರಿ(40) ಮೃತ ದುರ್ದೈವಿಗಳು. ಇನ್ನು ಕಾರು ಚಾಲಕ ಅಡಿವೆಪ್ಪ ಮಾಳಗಿ ಎಂಬಾತ ಕಾರು ಕಾಲುವೆಗೆ ಬೀಳುತ್ತಿದ್ದಂತೆ ಈಜಿ ದಡ ಸೇರುವ ಮೂಲಕ ಬದುಕುಳಿದಿದ್ದಾನೆ.

ಸುದ್ಧಿ ಗಳನ್ನ ವೀಕ್ಷಿಸಲು ನಮ್ಮ ಚಾನಲ್ ಗೆ ಭೇಟಿನೀಡಿ https://youtu.be/YrKYQ4HlZeA

ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಗ್ರಾಮ ಹಳ್ಳಿ ಗಳಲ್ಲಿ ನೀರಿಗಾಗಿ ಪರದಾಟ ಅಧಿಕಾರಿ ಗಳು ಕೇರ್ ಮಾಡ್ತಿಲ್ಲ ಎಂದ ದೇಶಮುಖ್

ಔರಾದ್: ಅಧಿಕಾರಿಗಳು  ಯಾವುದೇ ಸ್ಪಂದನೆ ನೀಡುತಿಲ್ಲ ಮತ್ತು ಊರಿನ ಗ್ರಾಮ ಪಂಚಾಯತ್  ಅದ್ಯಕ್ಷರು  ಯಾವುದೇ ಪರಿಹಾರ ಕಂಡುಹಿಡಿಯಲು ವಿಫಲ ವಾಗುತ್ತಿದ್ದಾರೆ  ಎಂದು ಕೆಪಿಸಿಸಿ ಕಾರ್ಮಿಕ ವಿಭಾಗದ  ತಾಲ್ಲೂಕ ಸಂಘಟನ ಕಾರ್ಯದರ್ಶಿ ಹಣಮಂತ್ ದೇಶಮುಖ ತಿಳಿಸಿದ್ದಾರೆ 

ಇದೆ ರೀತಿ ತಾಲೂಕಿನ ಅನೇಕ ಗ್ರಾಮಗಳಲ್ಲಿ  ನೀರಿನ ತೊಂದರೆ ಇದೆ ಬೋರವೆಲ್ ಗಳು ಇದ್ದು ಇಲ್ಲ ದಂತಾಗಿವೆ ಅವು ಗಳು ಕೊಳೆತು ಹೋಗುತಿದ್ದರು ಆ ಕಡೆ ಗಮನ ಹರಿಸಲು ಯಾರು ದಿಕ್ಕಿಲ್ಲದಂತಾಗಿದೆ ಅದಕ್ಕೆ ಅಧಿಕಾರಿಗಳು ಕೂಡಲೇ ಪರಿಹಾರ ಕಂಡುಕೊಳ್ಳಬೇಕು ಎಂದು ದೇಶಮುಖ್ ನಮ್ಮ ಸುದ್ಧಿ ವಾಹಿನಿಯ ಮೂಲಕ ತಮ್ಮ ಮನದಾಳದ ಮಾತು ಹಂಚಿ ಕೊಂಡಿದ್ದಾರೆ 

ಹೀಗೆ ಇದೆ ತೊಂದರೆ ಜನರಿಗೆ ಮುಂದಿನ ದಿನಗಳಲ್ಲಿ  ಉಂಟಾದರೆ ಕಾನೂನಿನ ಪ್ರಕಾರ ಸೂಕ್ತ ಹೋರಾಟ  

ಮಾಡಬೇಕಾಗುತ್ತದೆ ಎಂದು ದೇಶಮುಖ್  ನಮ್ಮ ಮಾಧ್ಯಮದ ಮೂಲಕ ತಿಳಿಸಿದ್ದಾರೆ

ನಮ್ಮ ಚಾನಲ್ ಗೆ ಭೇಟಿ ನೀಡಿ ಹಾಗೂ Subscribe ಮಾಡಿ Youtube.com/c/janajagrutiTVNews

 

ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಉರುಳಿದ ಕಾರು : ಒಂದೇ ಕುಟುಂಬದ ಐವರು ಜಲಸಮಾಧಿ

ಜನಜಾಗೃತಿ ಸುದ್ಧಿವಾಹಿನಿ


     15 jan 2019


ಬೆಳಗಾವಿ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕಾಲುವೆಗೆ ಉರುಳಿ ಬಿದ್ದ ಪರಿಣಾಮ ಕಾರಿನಲ್ಲಿದ್ದ ಒಂದೇ ಕುಟುಂಬದ ಐವರು ಜಲಸಮಾಧಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿಯ ಕಡಬಿ ಗ್ರಾಮದ ಬಳಿ ನಡೆದಿದೆ.

ಸೋಮವಾರ ರಾತ್ರಿ ಘಟಪ್ರಭಾ ಎಡದಂಡೆ ನಾಲೆಗೆ ಕಾರು ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದ್ದು, ಐವರು ಸಾವನ್ನಪ್ಪಿದ್ದಾರೆ. ಮೃತರನ್ನು ಪಕ್ಕೀರವ್ವ ಪೂಜಾರಿ (29), ಹನುಮಂತ ಪೂಜಾರಿ (60), ಲಗಮಣ್ಣ ಪೂಜಾರಿ (38), ಪಾರವ್ವ ಪೂಜಾರಿ (50), ಲಕ್ಷ್ಮೀ ಪೂಜಾರಿ (40) ಎಂದು ಗುರುತಿಸಲಾಗಿದೆ.ಮೃತರೆಲ್ಲ ಕಡಬಿ ಗ್ರಾಮದವರು ಎಂದು ತಿಳಿದುಬಂದಿದೆ. ಘಟನೆ ಸಂಬಂಧ ಮುರುಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಮ್ಮ ಚಾನಲ್ ಗೆ ಭೇಟಿ ನೀಡಿ Subscribe ಮಾಡಿ Youtube.com/c/janajagrutiTVNews

ಜೆಡಿಎಸ್ ಜೊತೆ ಸೀಟು ಹಂಚಿಕೆಯ ಜೊತೆಗೆ, ಕಾಂಗ್ರೆಸ್ಸಿಗೆ ಶುರುವಾಯ್ತು ಇನ್ನೊಂದು ತಲೆನೋವು

ಜನಜಾಗೃತಿ ಸುದ್ಧಿವಾಹಿನಿ


ಕರ್ನಾಟಕ ಕಾಂಗ್ರೆಸ್ಸಿಗೆ ಚುನಾವಣಾಪೂರ್ವ ಮೈತ್ರಿ ಮತ್ತು ಚುನಾವಣೋತ್ತರ ಮೈತ್ರಿಯ ನಡುವಿನ ನಿಜವಾದ 'ವ್ಯತ್ಯಾಸ' ಏನು ಎನ್ನುವುದು ಅರ್ಥವಾಗುವ ಕಾಲ ಸನ್ನಿಹಿತವಾದಂತಿದೆ. ರಾಜ್ಯ ಅಸೆಂಬ್ಲಿ ಚುನಾವಣೆಗೆ ಮುನ್ನ ಬೀದಿರಂಪ ಮಾಡಿಕೊಂಡಿದ್ದ ಜೆಡಿಎಸ್-ಕಾಂಗ್ರೆಸ್, ಅತಂತ್ರ ಫಲಿತಾಂಶ ಬರುತ್ತಿದ್ದಂತೆಯೇ ಒಂದಾಯಿತು.

ಮನೆ ಬಾಗಿಲಿಗೆ ಬಂದ ಮುಖ್ಯಮಂತ್ರಿ ಹುದ್ದೆಯನ್ನು ಒಲ್ಲೆ ಎನ್ನಲು ಕುಮಾರಸ್ವಾಮಿ ಏನು ರಾಜಕೀಯ ಸನ್ಯಾಸ ತೆಗೆದುಕೊಂಡಿರಲಿಲ್ಲ. 


ಆದರೆ, ಸಮ್ಮಿಶ್ರ ಸರಕಾರದಲ್ಲಿ ಜೆಡಿಎಸ್ ತನ್ನ ಬಿಗುವನ್ನು ಹೆಚ್ಚಿಸಿಕೊಳ್ಳುತ್ತಿದ್ದಂತೆಯೇ, ಕಾಂಗ್ರೆಸ್ಸಿಗರು ಬಹಿರಂಗವಾಗಿಯೇ ತಮ್ಮ ಅಪಸ್ವರವನ್ನು ಎತ್ತಲಾರಂಭಿಸಿದರು.

ನಾಲ್ಕು, ಐದು, ಆರು ಸೀಟಿನಿಂದ, ಈಗ ಜೆಡಿಎಸ್ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹನ್ನೆರಡು ಸೀಟನ್ನು ಬಿಟ್ಟುಕೊಡಬೇಕು ಎನ್ನುವ ನಿಲುವು ತಾಳಿದೆ ಎನ್ನುವ ಸುದ್ದಿ, ಒಂದೆಡೆ ಹೈಕಮಾಂಡಿಗೂ ಮತ್ತು ರಾಜ್ಯ ಕಾಂಗ್ರೆಸ್ಸಿಗರಿಗೂ ನಿದ್ದೆಗೆಡಿಸಿದೆ.

ಇದರ ಜೊತೆಗೆ, ಮಹಿಳೆಯರಿಗೆ ಪ್ರಾತಿನಿಧ್ಯ ನೀಡಬೇಕು ಎನ್ನುವ ತಮ್ಮ ಮುಖಂಡ ರಾಹುಲ್ ಗಾಂಧಿಯವರ ಮಾತು, ಬರೀ ಮಾತಾಗಬಾರದು, ಅದು ಕಾರ್ಯರೂಪಕ್ಕೆ ಬರಬೇಕು ಎಂದು ರಾಜ್ಯ ಮಹಿಳಾ ಕಾಂಗ್ರೆಸ್ಸಿಗರು ಬೇಡಿಕೆಯನ್ನು ಇಟ್ಟಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಮುಂಬರುವ ಲೋಕಸಭಾ ಚುನಾವಣೆ

ಬಿಜೆಪಿಗಿಂತ ಕಾಂಗ್ರೆಸ್ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಲಿದೆ

ಮುಂಬರುವ ಲೋಕಸಭಾ ಚುನಾವಣೆಗೆ ಮಹಿಳೆಯರಿಗೂ ಸ್ಪರ್ಧಿಸಲು ಟಿಕೆಟ್ ನೀಡಬೇಕು ಎನ್ನುವ ಡಿಮಾಂಡ್ ಕೇಳಿಬಂದಿದೆ.


ಕೆಲವೊಂದು ಕ್ಷೇತ್ರಗಳಲ್ಲಂತೂ ಬಲವಾದ ಒತ್ತಡವಿರುವುದರಿಂದ, ಕಾಂಗ್ರೆಸ್ ಯಾವ ರೀತಿ ಈ ಪರಿಸ್ಥಿತಿಯನ್ನು ನಿಭಾಯಿಸಲಿದೆ ಎನ್ನುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಬಿಜೆಪಿಗಿಂತ ಕಾಂಗ್ರೆಸ್ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಲಿದೆ ಎನ್ನುವ ಸಂದೇಶ ರವಾನೆಯಾಗಬೇಕು ಎನ್ನುವುದು ರಾಜ್ಯ ಮಹಿಳಾ ಕಾಂಗ್ರೆಸ್ ನಾಯಕಿಯರ ವಾದ.


2014ರ ಲೋಕಸಭಾ ಚುನಾವಣೆ

ಲಕ್ಷ್ಮೀ ಹೆಬ್ಬಾಳ್ಕರ್, ಮಂಡ್ಯದಲ್ಲಿ ರಮ್ಯಾ,

2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಇಬ್ಬರು ಮಹಿಳೆಯರಿಗೆ ಟಿಕೆಟ್ ಅನ್ನು ನೀಡಿತ್ತು. ಬೆಳಗಾವಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಸುರೇಶ್ ಅಂಗಡಿಯವರ ವಿರುದ್ದ 75,860 ಮತಗಳ ಅಂತರದಿಂದ ಮತ್ತು ಮಂಡ್ಯದಲ್ಲಿ ರಮ್ಯಾ, ತಮ್ಮ ಪ್ರತಿಸ್ಪರ್ಧಿ ಜೆಡಿಎಸ್ ಅಭ್ಯರ್ಥಿ ಸಿ ಎಸ್ ಪುಟ್ಟರಾಜು ವಿರುದ್ದ 5,518 ಮತಗಳ ಅಂತರದಿಂದ ಸೋತಿದ್ದರು.


ಬೆಳಗಾವಿ ಗ್ರಾಮಾಂತರ

ಈ ಬಾರಿ ಮೂರು ಸೀಟು ನೀಡಬೇಕು ಎನ್ನುವ ಒತ್ತಡ

ಆದರೆ, ಈ ಬಾರಿ ಲಕ್ಷ್ಮೀ ಹೆಬ್ಬಾಳ್ಕರ್, ಬೆಳಗಾವಿ ಗ್ರಾಮಾಂತರ ಅಸೆಂಬ್ಲಿ ಕ್ಷೇತ್ರದ ಶಾಸಕಿಯಾಗಿರುವುದರಿಂದ ಲೋಕಸಭಾ ಚುನಾವಣಾ ಸ್ಪರ್ಧೆಗೆ ಒಲ್ಲೆ ಎಂದಿದ್ದಾರೆ. ಕಳೆದ ಬಾರಿ ಎರಡು ಕ್ಷೇತ್ರಗಳಲ್ಲಿ ಮಹಿಳೆಯರು ಸ್ಪರ್ಧಿಸಿದ್ದರು, ಈ ಬಾರಿ ಮೂರು ಸೀಟು ನೀಡಬೇಕು ಎನ್ನುವ ಒತ್ತಡ ಸದ್ದಿಲ್ಲದೇ ನಡೆಯುತ್ತಿದೆ ಎನ್ನುವ ಮಾತು ಕೇಳಿಬರುತ್ತಿದೆ.


ಹನ್ನೆರಡು ಕ್ಷೇತ್ರ

ಕಾಂಗ್ರೆಸ್ಸಿಗೆ ತೀವ್ರ ತಲೆನೋವಾಗುವ ಸಾಧ್ಯತೆಯಿಲ್ಲದಿಲ್ಲ

ಹನ್ನೆರಡು ಕ್ಷೇತ್ರವನ್ನು ಜೆಡಿಎಸ್ ಪಕ್ಷಕ್ಕೆ ಯಾವ ಕಾರಣಕ್ಕೂ ಬಿಟ್ಟುಕೊಡಬಾರದು ಎಂದು ಈಗಾಗಲೇ, ಹಲವು ಕಾಂಗ್ರೆಸ್ ಮುಖಂಡರು ನೇರವಾಗಿ ರಾಹುಲ್ ಗಾಂಧಿಯವರಲ್ಲಿ ಮನವಿ ಮಾಡಿಬಂದಿದ್ದಾರೆ. ಇದರ ಜೊತೆಗೆ , ಮೂರು ಸೀಟು ಅನ್ನು ಮಹಿಳೆಯರಿಗೆ ಬಿಟ್ಟುಕೊಡಿ ಎನ್ನುವ ಕೂಗು, ಚುನಾವಣೆಯ ವೇಳೆ ಹೆಚ್ಚಾದರೆ, ಕಾಂಗ್ರೆಸ್ಸಿಗೆ ಅದು ತೀವ್ರ ತಲೆನೋವಾಗುವ ಸಾಧ್ಯತೆಯಿಲ್ಲದಿಲ್ಲ.


ಮೂಲಗಳ ಪ್ರಕಾರ

ಹಲವು ಮಹಿಳಾ ಟಿಕೆಟ್ ಆಕಾಂಕ್ಷಿಗಳು ಮೂಲಗಳ ಪ್ರಕಾರ, ಮಾರ್ಗರೆಟ್ ಆಳ್ವ (ಉತ್ತರ ಕನ್ನಡ), ರಮ್ಯಾ (ಬೆಂಗಳೂರಿನ ಯಾವುದಾದರೂ ಕ್ಷೇತ್ರದಲ್ಲಿ, ಗ್ರಾಮಾಂತರ ಹೊರತು ಪಡಿಸಿ) ಬಯಸಿದರೆ, ಟಿಕೆಟ್ ನೀಡಲು ಹೈಕಮಾಂಡ್ ಸಿದ್ದವಿದೆ. ಇದರ ಜೊತೆಗೆ, ಎಐಸಿಸಿ ಸದಸ್ಯೆ ಕಾಂತ ನಾಯಕ್ (ವಿಜಯಪುರ), ಬಾಗಲಕೋಟೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ವೀಣಾ ಕಾಶಪ್ಪನವರ್ (ಬಾಗಲಕೋಟೆ) ಕೂಡಾ ಟಿಕೆಟ್ ಆಕಾಂಕ್ಷಿಗಳು ಎನ್ನುವ ಸುದ್ದಿ ಹರಿದಾಡುತ್ತಿದೆ.

ನಮ್ಮ ಚಾನಲ್ ಗೆ ಭೇಟಿ ನೀಡಿ subscribe ಮಾಡಲು ಮರಿಯದಿರಿ Youtube.com/c/janajagrutiTVNews

Sunday, January 13, 2019

ಮೂರು ಮಂದಿ ಶಾಸಕರು ಮುಂಬೈನಲ್ಲಿದ್ದಾರೆ: ಸಚಿವ ಡಿ.ಕೆ.ಶಿವಕುಮಾರ್ ಹೊಸಬಾಂಬ್

      ಜನಜಾಗೃತಿ ಸುದ್ಧಿವಾಹಿನಿ

ಬೆಂಗಳೂರ್ :ಮೂರು ಮಂದಿ ಶಾಸಕರು ಮುಂಬೈನಲ್ಲಿದ್ದು, ಅವರು ಯಾವ ಪಕ್ಷದವರು ಎಂಬುದನ್ನು ನಾನು ಈಗಲೇ ಬಹಿರಂಗಪಡಿಸುವುದಿಲ್ಲ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೊಸಬಾಂಬ್ ಸಿಡಿಸಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ಶಾಸಕರ ಹೆಸರನ್ನು ಹೇಳಿದರೆ ಮಾಧ್ಯಮಗಳಲ್ಲಿ ಸುದ್ಧಿ ಬಿತ್ತರ ಮಾಡುತ್ತೀರಿ. ಇದರಿಂದ ಶಾಸಕರಿಗೆ ತೊಂದರೆಯಾಗುತ್ತದೆ. ಮುಂಬೈಗೆ ಯಾರನ್ನು ಭೇಟಿಯಾಗಲು ಹೋಗಿದ್ದಾರೆಂದು ನನಗೆ ಗೊತ್ತಿಲ್ಲ. ಆದರೆ, ಅವರೆಲ್ಲ ಯಾವ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದಾರೆಂಬುದು ಗೊತ್ತಿದೆ ಎಂದು ಹೇಳಿದರು.

ಬಿಜೆಪಿ ಆಪರೇಷನ್ ಕಮಲಕ್ಕೆ ತಿರುಗೇಟು ನೀಡಲು ಸಿದ್ದ. ಬಿಜೆಪಿ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ಶಾಸಕ ಬಿ.ಸಿ.ಪಾಟೀಲ್ ತಮ್ಮ ಪುತ್ರಿ ವಿವಾಹದ ಓಡಾಟದಲ್ಲಿದ್ದಾರೆ. ಅವರಿಗೆ ಮುಂದೆ ಸೂಕ್ತ ಸ್ಥಾನ ದೊರೆಯಲಿದೆ. ಉಳಿದೆಲ್ಲ ಶಾಸಕರು ತಮ್ಮ ತಮ್ಮ ಕ್ಷೇತ್ರದಲ್ಲಿ ಇದ್ದಾರೆ ಎಂದು ಹೇಳಿದರು.

ಗೊಂದಲ ಸೃಷ್ಟಿ: ಸಂಕ್ರಾಂತಿ ಬಳಿಕ ರಾಜ್ಯದಲ್ಲಿ ಕ್ರಾಂತಿ ಆಗುತ್ತದೆ ಎಂದು ಹೇಳುವ ಮೂಲಕ ಬಿಜೆಪಿಯವರು ಗೊಂದಲ ಸೃಷ್ಟಿಸಿ, ಅಸ್ಥಿರತೆ ಮೂಡಿಸುತ್ತಿದ್ದಾರೆ. ಸರಕಾರ ಉರುಳಿಸಲು ಮುಹೂರ್ತ ನಿಗದಿ ಮಾಡಿದ್ದೇವೆ, ಜೈಲಿಗೆ ಕಳುಹಿಸುತ್ತೇವೆ ಎಂದೆಲ್ಲ ಹೇಳುತ್ತಿದ್ದಾರೆ ಎಂದು ಶಿವಕುಮಾರ್ ಟೀಕಿಸಿದರು.


ಶಾಸಕರಿಗೆ ಆಮಿಷವೊಡ್ಡಿರುವ ಬಗ್ಗೆ ಎಸಿಬಿ, ಐಟಿಗೆ ದೂರು ನೀಡಿದ್ದಾರೆ. ಆದರೆ, ತನಿಖೆ ಏನಾಗಿದೆ ಎಂದು ಗೊತ್ತಿಲ್ಲ. ಯಾರಿಗೆ ಎಷ್ಟು ಹಣದ ಆಮಿಷವೊಡ್ಡಿದ್ದಾರೆಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಸಿಎಂ ಕುಮಾರಸ್ವಾಮಿ ಎಲ್ಲವನ್ನು ಗಮನಿಸುತ್ತಿದ್ದಾರೆ ಎಂದು ಹೇಳಿದರು.

ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಪ್ರಧಾನಿ ಮೋದಿ ‘ಕ್ಲರ್ಕ್’ ಎಂದು ಹೇಳಿಕೆ ನೀಡಿದ್ದು, ಈಗಾಗಲೇ ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದ್ದು, ನಾನು ಏನೂ ಹೇಳುವುದಿಲ್ಲ ಎಂದು ಶಿವಕುಮಾರ್ ನುಡಿದರು.

ನಮ್ಮ ಚಾನಲ್ ಗೆ ಭೇಟಿ ನೀಡಿ subscribe ಮಾಡಿ Youtube.com/c/janajagrutiTVNews

Saturday, January 12, 2019

ಎಸ್‌ಪಿ– ಬಿಎಸ್‌ಪಿ ಮೈತ್ರಿ ಆ ಪಕ್ಷಗಳಿಗೆ ಬಿಟ್ಟದ್ದು: ಖರ್ಗೆ

        ಜನಜಾಗೃತಿ ಸುದ್ಧಿವಾಹಿನಿ

ಬೆಂಗಳೂರು: ‘ಉತ್ತರ ಪ್ರದೇಶದಲ್ಲಿ ಎಸ್‌ಪಿ– ಬಿಎಸ್‌ಪಿ ಮೈತ್ರಿ ವಿಚಾರ ಆ ಪಕ್ಷಗಳಿಗೆ ಬಿಟ್ಟದ್ದು. ಆದರೆ, ರಾಷ್ಟ್ರಮಟ್ಟದಲ್ಲಿ ಬಿಜೆಪಿ ವಿರೋಧಿ ಪಕ್ಷಗಳು ಒಂದಾಗಬೇಕು ಎನ್ನುವುದು ನನ್ನ ಉದ್ದೇಶ’ ಎಂದು ಲೋಕಸಭೆ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಮಾಧ್ಯಮ ಪ್ರತಿನಿಧಿಗಳ ಜೊತೆ ಶನಿವಾರ ಮಾತನಾಡಿದ ಅವರು, ‘ಒಂದೇ ಸಿದ್ಧಾಂತ ಹೊಂದಿರುವವರೆಲ್ಲ ಒಟ್ಟಾಗಿ ಚುನಾವಣೆಗೆ ಹೋಗಬೇಕೆಂಬುದು ನಮ್ಮ ಉದ್ದೇಶ. ಇನ್ನೂ ಸಮಯವಿದೆ. ಜಾತ್ಯತೀತ ಸಿದ್ಧಾಂತದಲ್ಲಿ ನಂಬಿಕೆ ಇರುವ ಎಲ್ಲರೂ ಒಗ್ಗೂಡಿ ಹೋಗುವ ಬಗ್ಗೆ ಪ್ರಯತ್ನ ಮಾಡುತ್ತೇವೆ’ ಎಂದರು.

‘ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ರಾಜಕೀಯ ಶಕ್ತಿಗಳಿವೆ. ಅವುಗಳನ್ನು ನಾವು ಪರಿಗಣಿಸಬೇಕು. ಮುಂದಿನ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅಮೇಠಿಯಿಂದಲೇ ಸ್ಪರ್ಧಿಸುತ್ತಾರೆ’ ಎಂದು ಅವರು ಸ್ಪಷ್ಟಪಡಿಸಿದರು.

‘ಸಂಕ್ರಾಂತಿ ಬಳಿಕ ಕ್ರಾಂತಿ ಮಾಡುತ್ತೇವೆ’ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಖರ್ಗೆ, ‘ಬಿಜೆಪಿಯವರು ಹಗಲುಗನಸು ಕಾಣುತ್ತಿದ್ದಾರೆ. 18 ಶಾಸಕರು ರಾಜೀನಾಮೆ ಕೊಟ್ಟು ಹೋಗುವುದು ಸಾಧ್ಯವಿದೆಯೇ. ಒಂದು ಪಕ್ಷದಲ್ಲೇ ಸಣ್ಣಪುಟ್ಟ ಸಮಸ್ಯೆಗಳಿರುತ್ತವೆ. ಮೈತ್ರಿ ಸರ್ಕಾರ ಅಂದ ಮೇಲೆ ಸಮಸ್ಯೆಗಳು ಇಲ್ಲದೆ ಇರುತ್ತವೆಯೇ. ಎಲ್ಲವನ್ನೂ ಚರ್ಚಿಸಿ, ಮುಂದುವರಿಯಬೇಕು’ ಎಂದರು.

‘ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ತಮ್ಮ ರಾಜ್ಯದಲ್ಲಿ ಕಾಂಗ್ರೆಸ್‌ ವಿರುದ್ಧ ಸ್ಪರ್ಧೆ ಮಾಡಿದ್ದಾರೆ. ಹೀಗಾಗಿ, ಅವರು ತಮ್ಮ ಶಕ್ತಿ ಪ್ರದರ್ಶನ ಮಾಡಲು ರಾಷ್ಟ್ರಮಟ್ಟದಲ್ಲಿ ಬೇರೆ ಪಕ್ಷಗಳನ್ನು ಒಗ್ಗೂಡಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದರು.

ನಮ್ಮ ಚಾನಲ್ ಗೆ ಭೇಟಿ ನೀಡಿ subscribe ಮಾಡಿ Youtube.com/c/janajagrutiTVNews

Wednesday, January 9, 2019

🔫ಬಿಹಾರದಲ್ಲಿ ಬಿಜೆಪಿ ಮುಖಂಡನ ಬರ್ಬರ ಹತ್ಯೆ

     ಜನಜಾಗೃತಿ ಸುದ್ಧಿವಾಹಿನಿ


     10 jan 2019


ಮುಜಾಫರ್ಪುರ: ಸ್ಥಳೀಯ ಬಿಜೆಪಿ ಮುಖಂಡರೊಬ್ಬರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದ ಘಟನೆ ಬಿಹಾರದ ಮುಜಾಫರ್ಪುರ ಜಿಲ್ಲೆಯಲ್ಲಿ ಬುಧವಾರ ರಾತ್ರಿ ನಡೆದಿದೆ.

ಔಷಧಿ ಅಂಗಡಿಯೊಂದರಲ್ಲಿ ಕುಳಿತದ್ದ ಬೈಜು ಪ್ರಸಾದ್ ಗುಪ್ತಾ ಎಂಬ ಎಂಬುವವರ ಬಳಿ ಔಷಧಿ ಕೇಳುವ ನೆಪದಲ್ಲಿ ಬಂದ ದುಷ್ಕರ್ಮಿಯೊಬ್ಬ ನಂತರ ಅವರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾನೆ.

ತಕ್ಷಣವೇ ಬೈಜು ಅವರನ್ನು ಆಸ್ಪತ್ರೆಗೆ ರವಾನಿಸಲಾಯಿತಾದರೂ ಗಂಭೀರವಾಗಿ ಗಾಯಗೊಂಡಿದ್ದ ಅವರು ಆಸ್ಪತ್ರೆಗೆ ತೆರಳುವ ಮೊದಲೇ ಅಸುನೀಗಿದ್ದರು.

ಸಣ್ಣ ಮೆಡಿಕಲ್ ಶಾಪ್ ವೊಂದನ್ನು ಇಟ್ಟುಕೊಂಡಿದ್ದ ಬೈಜು, ಮನೆಮದ್ದುಗಳನ್ನು ತಯಾರಿಸಿ ಜನರಿಗೆ ನೀಡುತ್ತಿದ್ದರು.

ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆಬೀಸಿದ್ದಾರೆ.ಜನವರಿ 08 ರಂದು ಗುಜರಾತಿನ ಮಾಜಿ ಶಾಸಕ ಜಯಂತಿಲಾಲ್ ಭಾನುಶಾಲಿ ಎಂಬುವವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದ ಘಟನೆ ನಡೆದಿತ್ತು.ಘಟನೆ ನಡೆಯುವ ಸಂದರ್ಭದಲ್ಲಿ ಜಯಂತಿಲಾಲ್ ಅವರು ಭುಜ್ ನಿಂದ ಅಹ್ಮದಾಬಾದಿಗೆ ರೈಲಿನ ಮೂಲಕ ತೆರಳುತ್ತಿದ್ದರು ಗುಜರಾತಿನ ಅಬಾದಸಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾಗಿದ್ದ ಜಯಂತಿಲಾಲ್ ಅವರ ಮೇಲೆ ಕಳೆದ ವರ್ಷ ಮಹಿಳೆಯೊಬ್ಬರು ಅತ್ಯಾಚಾರದ ಆರೋಪ ಮಾಡಿದ್ದರು.

ನಮ್ಮ ಚಾನಲ್ ಗೆ ಭೇಟಿನೀಡಿ subscribe ಮಾಡಿ Youtube.com/c/janajagrutiTVNews

ಫೇಸ್ಬುಕ್ ನಲ್ಲಿ ಬೆಂಬಲಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://www.facebook.com/%E0%B2%9C%E0%B2%A8%E0%B2%9C%E0%B2%BE%E0%B2%97%E0%B3%83%E0%B2%A4%E0%B2%BF-%E0%B2%B8%E0%B3%81%E0%B2%A6%E0%B3%8D%E0%B2%A7%E0%B2%BF%E0%B2%B5%E0%B2%BE%E0%B2%B9%E0%B2%BF%E0%B2%A8

Sunday, January 6, 2019

ಲೋಕಸಭೆ ಎಲೆಕ್ಷನ್: ಜ.21 ಕ್ಕೆ ಮತದಾರರ ಪಟ್ಟಿ ಪ್ರಕಟ

      ಜನಜಾಗೃತಿ ಸುದ್ಧಿವಾಹಿನಿ


ನವದೆಹಲಿ :

                   (ಜ. 03): 2019 ರ ಬೇಸಿಗೆಯಲ್ಲಿ ಎದುರಾಗಲಿರುವ ಲೋಕಸಭೆ ಚುನಾವಣೆಗೆ ಚುನಾವಣಾ ಆಯೋಗ ಸಿದ್ಧತೆ ಆರಂಭಿಸಿದ್ದು, ಜನವರಿ 21 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾ ಗುತ್ತದೆ ಎಂದು ಹೇಳಿದೆ.


ಈ ಹಿನ್ನೆಲೆಯಲ್ಲಿ ಮತದಾರರು ತಮ್ಮ ಹೆಸರು ಸಂಬಂಧಿತ ಲೋಕಸಭಾ ಕ್ಷೇತ್ರದಲ್ಲಿ ಇದೆಯೇ ಎಂಬುದನ್ನು ಸಮೀಪದ ಚುನಾವಣಾ ಕಚೇರಿಗೆ ಹೋಗಿ ದೃಢಪಡಿಸಿಕೊಳ್ಳಬೇಕು ಎಂದೂ ಅದು ಕೇಳಿಕೊಂಡಿದೆ. ಇದೇ ವೇಳೆ ಎಲ್ಲ ರಾಜ್ಯಗಳ ಚುನಾವಣಾ ಅಧಿಕಾರಿಗಳಿಗೂ ಸೂಚನೆ ನೀಡಿರುವ ಆಯೋಗ, ಮತದಾರರ ಹೆಸರು ವಿನಾಕಾರಣ ಬಿಟ್ಟು ಹೋಗಕೂಡದು ಎಂದೂ ನಿರ್ದೇಶಿಸಿದೆ.

ಮತದಾನ ನಮ್ಮ ಹಕ್ಕು

ನಮ್ಮ ಚಾನಲ್ ಗೆ ಭೇಟಿ ನೀಡಿ Youtube.com/c/janajagrutiTVNews

ಫೇಸ್ಬುಕ್ ನಲ್ಲಿ ಹಿಂಬಾಲಿಸಿ https://www.facebook.com/%E0%B2%9C%E0%B2%A8%E0%B2%9C%E0%B2%BE%E0%B2%97%E0%B3%83%E0%B2%A4%E0%B2%BF-%E0%B2%B8%E0%B3%81%E0%B2%A6%E0%B3%8D%E0%B2%A7%E0%B2%BF%E0%B2%B5%E0%B2%BE%E0%B2%B9%E0%B2%BF%E0%B2%A8%E0%B2%BF-474624809612940/

Saturday, January 5, 2019

ಭಾರತ್ ಬಂದ್

     ಜನಜಾಗೃತಿ ಸುದ್ಧಿವಾಹಿನಿ


ಗಮನಿಸಿ, ಎರಡು ದಿನ ಸ್ತಬ್ಧವಾಗಲಿದೆ ಕರುನಾಡು..!


ಬೆಂಗಳೂರು: ರಸ್ತೆ ಸುರಕ್ಷತಾ ತಿದ್ದುಪಡಿ ಮಸೂದೆ ವಿರೋಧಿಸಿ ಸಾರಿಗೆ ಇಲಾಖೆ ಕಾರ್ಮಿಕ ಸಂಘಟನೆಗಳು ಮಂಗಳವಾರ ಹಾಗೂ ಬುಧವಾರ ಎರಡು ದಿನ ಕೇಂದ್ರ ಸರ್ಕಾರದ ವಿರುದ್ಧ ಭಾರತ್ ಬಂದ್‍ಗೆ ಕರೆಕೊಟ್ಟಿದೆ.


ಎಐಟಿಯುಸಿ, ಸಿಐಟಿಯು, ಐಎನ್‍ಟಿಯುಸಿ, ಎಲ್‍ಪಿಎಫ್ ಕಾರ್ಮಿಕ ಸಂಘಟನೆಗಳು ಬಂದ್‍ಗೆ ಕರೆ ಕೊಟ್ಟಿದ್ದು, 12 ಬೇಡಿಕೆ ಮುಂದಿಟ್ಟು ಕಾರ್ಮಿಕ ಸಂಘಟನೆಗಳು ಜನವರಿ 8 ಮತ್ತು 9 ರಂದು ಬೀದಿಗಿಳಿಯಲಿವೆ. ಬಿಎಂಟಿಸಿ ಹಾಗೂ ಕೆಎಸ್‍ಆರ್ ಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮದ ಬಸ್‍ ಗಳು ಸ್ತಬ್ಧವಾಗಲಿದೆ ಅಂತ ಸಿಐಟಿಯು ಉಪಾಧ್ಯಕ್ಷ ಅನಂತ್ ಸುಬ್ಬರಾವ್ ಮಾಧ್ಯಮಕ್ಕೆ ತಿಳಿಸಿದ್ದಾರೆ.


ಮಂಗಳವಾರ ಬೆಳಗ್ಗೆ ಆರು ಗಂಟೆಯಿಂದ ಬುಧವಾರ ಸಂಜೆ ಐದು ಗಂಟೆಯವರೆಗೂ ಬಂದ್ ನಡೆಯಲಿದ್ದು, ಈಗಾಗಲೇ ಮೋದಿ ಸರ್ಕಾರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗೆ ರಾಜ್ಯದ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರವೂ ಬೆಂಬಲ ಕೊಟ್ಟಿದೆ ಎಂದು ತಿಳಿದುಬಂದಿದೆ.


ಬಂದ್ ಯಾಕೆ?:

ಮೋಟಾರು ವಾಹನ ತಿದ್ದುಪಡಿ ಮಸೂದೆ -2017ರನ್ನು ಹಿಂಪಡೆಯಲು, ಸಾರಿಗೆ ಉದ್ದಿಮೆಯನ್ನ ರಕ್ಷಿಸಲು ಮತ್ತು ಅಸಂಘಟಿತ ಸಾರಿಗೆ ಕಾರ್ಮಿಕರಿಗೆ ಸಾಮಾಜಿಕ ಸುರಕ್ಷಾ ಕಾಯ್ದೆಯನ್ನು ಜಾರಿಗೊಳಿಸಲು ಬಂದ್‍ಗೆ ಕರೆ ಮಾಡಲಾಗಿದೆ.


ಬಂದ್ ದಿನ ಏನಿರಲ್ಲ:

ಮಂಗಳವಾರ ಮತ್ತು ಬುಧವಾರ ಬಿಎಂಟಿಸಿ, ಕೆಎಸ್‍ಆರ್ ಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮದ ಬಸ್ ಇರಲ್ಲ. ಆಟೋ ಸಂಘಟನೆಯಿಂದ ಬೆಂಬಲ ಇರುವುದರಿಂದ ಆಟೋ ಕೂಡ ಸಿಗಲ್ಲ. ಇತ್ತ ಓಲಾ ಮತ್ತು ಊಬರ್ ಕ್ಯಾಬ್‍ಗಳು ಸಿಗುವುದಿಲ್ಲ. ಮುಷ್ಕರದಲ್ಲಿ ಬ್ಯಾಂಕ್ ನೌಕರರು ಕೂಡ ಪಾಲ್ಗೊಳ್ಳಲಿದ್ದಾರೆ. ಆದ್ದರಿಂದ ಬ್ಯಾಂಕ್ ಸೇವೆಯಲ್ಲೂ ವ್ಯತ್ಯಯವಾಗುವ ಸಾಧ್ಯತೆಗಳು ಇವೆ. ಎಪಿಎಂಸಿ ಲಾರಿ ಸಿಬ್ಬಂದಿ ಪಾಲ್ಗೊಳ್ಳುವುದರಿಂದ ಎಪಿಎಂಸಿ ಸ್ತಬ್ಧಗೊಳ್ಳುವ ಸಾಧ್ಯತೆ ಇದೆ.


ಏನಿರುತ್ತೆ?:

ಆಸ್ಪತ್ರೆಗಳು, ಮೆಡಿಕಲ್ ಶಾಪ್, ಅಂಗಡಿ ಮುಂಗಟ್ಟುಗಳು ಇರುತ್ತದೆ. ಜೊತೆಗೆ ಅಂಬುಲೆನ್ಸ್ ಸೇವೆ, ಮೆಟ್ರೋ ಮತ್ತು ರೈಲು ಸೇವೆ ಇರಲಿದೆ.


50- 50 ಬೆಂಬಲ:

ನಿರ್ಧಾರ ಪ್ರಕಟಿಸದ ಹೋಟೆಲ್ ಮಾಲೀಕರು ನೈತಿಕ ಬೆಂಬಲದ ಘೋಷಣೆ ಮಾಡಿದ್ದು, ಚಿತ್ರೋದ್ಯಮದ ನೈತಿಕ ಬೆಂಬಲ, ಚಿತ್ರ ಪ್ರದರ್ಶನ ಬಂದ್ ಮಾಡುವ ಬಗ್ಗೆ ಯಾವುದೇ ಫೋಷಣೆ ಮಾಡಿಲ್ಲ. ಇನ್ನೂ ಶಾಲಾ ಕಾಲೇಜುಗಳ ವಾಹನಗಳು ಸ್ತಬ್ಧವಾಗುವುದರಿಂದ ಆಯಾಯ ಜಿಲ್ಲಾಧಿಕಾರಿಗಳು ಶಾಲಾ -ಕಾಲೇಜು ಬಂದ್ ನಿರ್ಣಯ ಕೈಗೊಳ್ಳಲಿದ್ದಾರೆ.

ನಮ್ಮ ಚಾನಲ್ ಗೆ ಭೇಟಿ ನೀಡಿ Youtube.com/c/janajagrutiTVNews

Friday, January 4, 2019

ಮೈಸೂರು: ಹುಚ್ಚು ನಾಯಿ ಕಡಿತ; 15 ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ

ಜನಜಾಗೃತಿ ಸುದ್ಧಿವಾಹಿನಿ


    04 jan 2019


ಮೈಸೂರು: ಗ್ರಾಮಾಂತರ ಭಾಗದ ಪಿಲ್ಲಳ್ಳಿ, ವರಕೂಡು ಮತ್ತು ಮೂಡಲ ಹಳ್ಳಿ ಪ್ರದೇಶದಲ್ಲಿ ಹುಚ್ಚು ನಾಯಿಯೊಂದು ಸಿಕ್ಕ ಸಿಕ್ಕವರಿಗೆ ಕಡಿದು ಆತಂಕಕ್ಕೆ ಕಾರಣವಾಗಿದೆ.

15 ಕ್ಕೂ ಹೆಚ್ಚು ಜನರು ಹುಚ್ಚು ನಾಯಿಯಿಂದ ದಾಳಿಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಡಿತಕ್ಕೊಳಗಾದವರನ್ನು ಮೈಸೂರಿನ ಕೆ.ಆರ್‌.ಆಸ್ಪತ್ರೆ, ಜಿಲ್ಲಾ ಸಾಂಕ್ರಾಮಿಕ ರೋಗಿಗಳ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಹುಚ್ಚು ನಾಯಿ ನಾಗರಿಕರಿಗೆ ಮಾತ್ರವಲ್ಲದೆ ಇತರ ಹಲವು ಜಾನುವಾರೂಗಳಿಗೂ ಕಡಿದಿರುವ ಬಗ್ಗೆ ತಿಳಿದು ಬಂದಿದ್ದು, ಗ್ರಾಮಾದಲ್ಲಿ ಆತಂಕಕಾರಿ ವಾತಾವರಣ ನಿರ್ಮಾಣವಾಗಿದೆ.

ನಮ್ಮ ಚಾನಲ್ ಗೆ ಭೇಟಿ ನೀಡಿ https://youtu.be/sSiNFL-BgBc

🏦ಗ್ರಾಹಕರೇ ಗಮನಿಸಿ: ಮುಂದಿನ ವಾರ ಮೂರು ದಿನ ಬ್ಯಾಂಕ್ ಬಂದ್!

ಜನಜಾಗೃತಿ ಸುದ್ಧಿವಾಹಿನಿ


     04 jan 2019


ನವದೆಹಲಿ: ಒಂದು ವೇಳೆ ನೀವು ಉದ್ಯೋಗಿಗಳಾಗಿದ್ದು, ಬ್ಯಾಂಕ್ ಕೆಲಸ ಕಾರ್ಯಗಳನ್ನು ಶನಿವಾರಕ್ಕೆಂದೇ ಮೀಸಲಿಡುತ್ತೀರೆಂದಾದರೆ, ಕೆಲಸ ಮುಗಿಸಲು ನಿಮ್ಮ ಬಳಿ ಕೇವಲ ಈ ಶನಿವಾರ[5ಜನವರಿ]ಯಷ್ಟೇ ಉಳಿದುಕೊಂಡಿದೆ. ಯಾಕೆಂದರೆ ಮುಂದಿನ ಶನಿವಾರದಿಂದ 3 ದಿನಗಳವರೆಗೆ ಬ್ಯಾಂಕ್ ಗಳು ತೆರೆಯುವುದಿಲ್ಲ.

ಯಾವೆಲ್ಲ ದಿನ ಬ್ಯಾಂಕ್ ಗಳು ಬಂದ್?

ಮುಂದಿನ ವಾರ ಬ್ಯಾಂಕ್ ಗಳಿಗೆ ದಿನಾಂಕ 12 ರಿಂದ 14 ಜನವರಿವರೆಗೆ ರಜೆ ಇದೆ. 12 ಜನವರಿ ಎರಡನೇ ಶಬನಿವಾರ ಆಗಿದ್ದರೆ, 13 ಜನವರಿಯಂದು ಭಾನುವಾರದ ರಜೆ ಇದೆ. ಇನ್ನು ಜನವರಿ 14[ಸೋಮವಾರ] ಮಕರ ಸಂಕ್ರಾಂತಿ/ಪೊಂಗಲ್ ಆಗಿರುವುದರಿಂದ ಬ್ಯಾಂಕ್ ಗಳಿಗೆ ರಜೆ ಇರಲಿದೆ.ಈ ವಿಚಾರವನ್ನುಗಮನದಲ್ಲಿಟ್ಟುಕೊಂಡರೆ ನೀವು ಕ್ಯಾಷ್ ಸಮಸ್ಯೆಯಿಂದ ಪಾರಾಗಬಹುದಾಗಿದೆ.

ನಮ್ಮ ಚಾನಲ್ ಗೆ ಭೇಟಿ ನೀಡಿ subscribe ಮಾಡಿ Youtube.com/c/janajagrutiTVNews

ನಾನು ಸಾಮಾನ್ಯ ವ್ಯಕ್ತಿ - ಝೀರೋ ಟ್ರಾಫಿಕ್ ವ್ಯವಸ್ಥೆ ಬೇಡ ಎಂದ ಗೃಹಸಚಿವ ಎಂ.ಬಿ ಪಾಟೀಲ್

ಜನಜಾಗೃತಿ ಸುದ್ಧಿವಾಹಿನಿ


      04 jan 2019


ಬೆಂಗಳೂರು: ನಾನು ಸಾಮಾನ್ಯ ವ್ಯಕ್ತಿ, ನಾನು ಕೂಡಾ ಸಾರ್ವಜನಿಕರಂತೆಯೇ ಸಂಚಾರಿ ನಿಯಮಗಳನ್ನು ಪಾಲಿಸುತ್ತೇನೆ. ಹೀಗಾಗಿ ತಾನು ದಿನಂಪ್ರತಿ ಓಡಾಡೋ ಮಾರ್ಗದಲ್ಲಿ ಝೀರೋ ಟ್ರಾಫಿಕ್ ವ್ಯವಸ್ಥೆ ಬೇಡ ಎಂದು ಗೃಹ ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.

ಶೂನ್ಯ ಟ್ರಾಫಿಕ್ ನಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ. ನನ್ನಿಂದ ಇತರ ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗೋದು ನನಗಿಷ್ಟವಿಲ್ಲ. ಸಾರ್ವಜನಿಕರಂತೆ ನಾನು ಕೂಡ ಟ್ರಾಫಿಕ್ ನಿಯಮ ಪಾಲಿಸುತ್ತೇನೆ ಎಂದಿದ್ದಾರೆ.

ಸಚಿವರ ಸೂಚನೆಯಂತೆ ಗೃಹ ಇಲಾಖೆಯಿಂದ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಕಮಲ್ ಪಂತ್ ಎಲ್ಲಾ ಜಿಲ್ಲೆಯ ಎಸ್ಪಿಗಳಿಗೆ ಆದೇಶ ಝೀರೋ ಟ್ರಾಫಿಕ್ ವ್ಯವಸ್ಥೆ ಬೇಡ ಎಂದು ಆದೇಶ ಹೊರಡಿಸಿದ್ದಾರೆ. ಇದಲ್ಲದೇ ತಾವು ಉಳಿದುಕೊಳ್ಳುವ ಸ್ಥಳ ಹಾಗೂ ತಾವು ಭಾಗವಹಿಸುವ ಕಾರ್ಯಕ್ರಮಗಳ ಸುತ್ತಮುತ್ತ ರಕ್ಷಣೆಗಾಗಿ ಹೆಚ್ಚಿನ ಯಾವುದೇ ಪೊಲೀಸ್ ಸಿಬ್ಬಂದಿ ಅಗತ್ಯವಿಲ್ಲ ಎನ್ನುವುದನ್ನು ಹೇಳಿದ್ದಾರೆ.

ನಮ್ಮ ಚಾನಲ್ ಗೆ ಭೇಟಿನೀಡಿ Subscribe ಮಾಡಿ Youtube.com/c/janajagrutiTVNews

ಟ್ರಂಪ್ ವ್ಯಂಗ್ಯ: ಪ್ರಧಾನಿ ಮೋದಿ ಬೆಂಬಲಕ್ಕೆ ನಿಂತ ಕಾಂಗ್ರೆಸ್

ಜನಜಾಗೃತಿ ಸುದ್ಧಿವಾಹಿನಿ


     04 jan 2019


ನವದೆಹಲಿ: ಅಫ್ಗಾನಿಸ್ತಾನದಲ್ಲಿ ಗ್ರಂಥಾಲಯ ನಿರ್ಮಾಣಕ್ಕೆ ಹಣಕಾಸು ನೆರವು ನೀಡಿದ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ವ್ಯಂಗ್ಯವಾಡಿದ್ದಕ್ಕೆ ಕಾಂಗ್ರೆಸ್‌ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ.


'ಭಾರತದ ಪ್ರಧಾನಿಯವರ ಬಗ್ಗೆ ಅಮೆರಿಕದ ಅದ್ಯಕ್ಷರು ನೀಡಿದ ಹೇಳಿಕೆಯು ಉತ್ತಮ ಅಭಿರುಚಿಯಿಂದ ಕೂಡಿಲ್ಲ ಮತ್ತು ಸ್ವೀಕಾರಾರ್ಹವಲ್ಲ' ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಅಹ್ಮದ್ ಪಟೇಲ್ ಹೇಳಿದ್ದಾರೆ.


'ಟ್ರಂಪ್ ಹೇಳಿಕೆಗೆ ನಮ್ಮ ಸರ್ಕಾರ ಸೂಕ್ತ ಪ್ರತಿಕ್ರಿಯೆ ನೀಡಲಿದೆ ಎಂಬ ವಿಶ್ವಾಸವಿದೆ. 2004ರ ನಂತರ ಭಾರತವು ಅಫ್ಗಾನಿಸ್ತಾನದಲ್ಲಿ ಉತ್ತಮ ರಸ್ತೆ, ಅಣೆಕಟ್ಟೆಗಳನ್ನು ನಿರ್ಮಿಸಿದೆ. 3 ಶತಕೋಟಿ ಡಾಲರ್ ನೆರವು ನೀಡಿದೆ ಎಂಬುದನ್ನು ಅಮೆರಿಕಕ್ಕೆ ನೆನಪಿಸಬಯಸುತ್ತೇವೆ' ಎಂದು ಅವರು ಹೇಳಿದ್ದಾರೆ.

'ಪ್ರಿಯ ಟ್ರಂಪ್ ಅವರೇ, ಭಾರತದ ಪ್ರಧಾನಿಯವರನ್ನು ಅಣಕಿಸುವುದನ್ನು ನಿಲ್ಲಿಸಿ. ಅಫ್ಗಾನಿಸ್ತಾನ ವಿಷಯದಲ್ಲಿ ಭಾರತಕ್ಕೆ ಅಮೆರಿಕದಿಂದ ಉಪದೇಶ ಬೇಕಾಗಿಲ್ಲ' ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸರ್ಜೆವಾಲ ಖಾರವಾಗಿ ಟ್ವೀಟ್ ಮಾಡಿದ್ದಾರೆ.

ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವಧಿಯಲ್ಲಿ ಅಫ್ಗಾನಿಸ್ತಾನದ ಸಂಸತ್ತಿನ ಕಟ್ಟಡ ನಿರ್ಮಾಣಕ್ಕೆ ಭಾರತ ನೆರವಾಗಿದ್ದನ್ನೂ ಅವರು ಸ್ಮರಿಸಿಕೊಂಡಿದ್ದಾರೆ.

'ಮಾನವ ಕಲ್ಯಾಣಕ್ಕೆ ವ್ಯೂಹಾತ್ಮಕ ಆರ್ಥಿಕ ಸಹಭಾಗಿತ್ವವೂ ಅಗತ್ಯ. ಅಫ್ಗಾನಿಸ್ತಾನದ ಸಹೋದರ, ಸಹೋದರಿಯರ ಜತೆ ನಾವಿದ್ದೇವೆ' ಎಂದು ಸರ್ಜೆವಾಲ ಹೇಳಿದ್ದಾರೆ.

ಅಫ್ಗಾನಿಸ್ತಾನದಲ್ಲಿ ಗ್ರಂಥಾಲಯ ನಿರ್ಮಾಣಕ್ಕೆ ಹಣಕಾಸು ನೆರವು ನೀಡಿದ ವಿಷಯದಲ್ಲಿ ಮೋದಿ ಬಗ್ಗೆ ವ್ಯಂಗ್ಯವಾಡಿದ್ದ ಟ್ರಂಪ್, 'ನನ್ನೊಂದಿಗೆ ಮಾತನಾಡುವಾಗ ಮೋದಿ ಅಫ್ಗಾನಿಸ್ತಾನದಲ್ಲಿನ ಗ್ರಂಥಾಲಯ ನಿರ್ಮಾಣದ ಬಗ್ಗೆ ಪದೇ ಪದೇ ಹೇಳುತ್ತಿದ್ದರು. ಅವರು ಬಹಳ ಚಾಲಾಕಿ. ಕೊನೆಗೂ, ಗ್ರಂಥಾಲಯ ನಿರ್ಮಾಣಕ್ಕೆ ಧನ್ಯವಾದ ಎಂದು ನಾವು ಹೇಳಬೇಕಾಯಿತು. ಆದರೆ, ಆ ಗ್ರಂಥಾಲಯವನ್ನು ಅಲ್ಲಿ ಯಾರು ಬಳಸುತ್ತಿದ್ದಾರೋ ನನಗಂತೂ ತಿಳಿಯದು' ಎಂದು ಹೇಳಿದ್ದರು.

ನಮ್ಮ ಚಾನಲ್ ಗೆ ಭೇಟಿನೀಡಿ subscribe ಮಾಡಿ Youtube.com/c/janajagrutiTVNews

Thursday, January 3, 2019

ಯಶ್ ಮನೆ ಮೇಲೆ ಐಟಿ ದಾಳಿಗೂ, ಕುಕ್ಕೆ ಸುಬ್ರಹ್ಮಣ್ಯಕ್ಕೂ ಇದೆಯಾ ಸಂಬಂಧ?

     ಜನಜಾಗೃತಿ ಸುದ್ಧಿವಾಹಿನಿ


     04 jan 2019

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮನೆ ಮೇಲೆ ಐಟಿ ದಾಳಿ ನಡೆದಿದೆ. ಹೆಲಿಕಾಪ್ಟರ್ ನಲ್ಲಿ ಆಗಮಿಸಿ ಕುಕ್ಕೆ ಸುಬ್ರಹ್ಮಣ್ಯನ ದರ್ಶನ ಪಡೆದಿದ್ದೇ ಯಶ್ ಸಂಕಷ್ಟಕ್ಕೆ ಕಾರಣವಾಯ್ತಾ ಎಂಬ ಮಾತು ಕೇಳಿ ಬರುತ್ತಿದೆ.

ಕುಕ್ಕೆಗೆ ಹೆಲಿಕಾಪ್ಟರ್ ನಲ್ಲಿ ಆಗಮಿಸಿದವರಿಗೆ ಸಂಕಷ್ಟ ಎದುರಾಗುತ್ತದೆ ಎನ್ನುವ ನಂಬಿಕೆ ಇದೆ. ಕುಕ್ಕೆಗೆ ಹೆಲಿಕಾಪ್ಟರ್ ನಲ್ಲಿ ಬಂದು ಅಧಿಕಾರ, ಅಂತಸ್ತು ಕಳೆದುಕೊಂಡಿದ್ದಾರೆ ಗಣ್ಯರು. ಈ ಹಿಂದೆ ಹೆಲಿಕಾಪ್ಟರ್ ನಲ್ಲಿ ಬಂದು ಅಧಿಕಾರ ಕಳೆದುಕೊಂಡಿದ್ದಾರೆ ರಾಜಕಾರಣಿಗಳು. ಮಹಾರಾಷ್ಟ್ರ ಸಿಎಂ ವಿಲಾಸ್ ರಾವ್ ದೇಶ್ ಮುಖ್, ಪಂಜಾಬ್ ಸಿಎಂ ಅಮರಿಂದರ್ ಸಿಂಗ್, ಕರ್ನಾಟಕ ಸಿಎಂ ಆಗಿದ್ದ ಧರಂ ಸಿಂಗ್ ಅಧಿಕಾರಕ್ಕೆ ಕುತ್ತು ಬಂದಿತ್ತು. ವಿಜಯಮಲ್ಯಗೂ ಸಹ ಹೆಲಿಕಾಪ್ಟರ್ ಲ್ಯಾಂಡಿಂಗ್ ಕುತ್ತು ತಂದಿತ್ತು.

ಹೀಗಾಗಿ ಕುಕ್ಕೆ ಪರಿಸರದಲ್ಲಿ ಹೆಲಿಕಾಪ್ಟರ್ ಹಾರಾಟ ಕಂಠಕ ಅನ್ನೋ ನಂಬಿಕೆಯಿದೆ.

ಕಳೆದ ಡಿ. 16 ರಂದು ಕುಕ್ಕೆಗೆ ಹೆಲಿಕಾಪ್ಟರ್ ನಲ್ಲಿ ಆಗಮಿಸಿದ್ದ ನಟ ಯಶ್ ಕುಮಾರಧಾರ ಬಳಿ ಹೆಲಿಕಾಪ್ಟರ್ ಲ್ಯಾಂಡ್ ಮಾಡಿ ದೇವರ ದರ್ಶನ ಪಡೆದಿದ್ದಾರೆ. ಯಶ್ ಮನೆ ಐಟಿ ದಾಳಿಗೂ ಕುಕ್ಕೆ ಸುಬ್ರಹ್ಮಣ್ಯಕ್ಕೂ ಸಂಬಂಧ ಇದೆ ಎನ್ನಲಾಗುತ್ತಿದೆ.

ನಮ್ಮ ಚಾನಲ್ ಗೆ ಭೇಟಿ ನೀಡಿ subscribe ಮಾಡಿ Youtube.com/c/janajagrutiTVNews

ಅವಕಾಶ ಸಿಕ್ಕರೆ ಸರ್ಕಾರ ರಚಿಸಿ

    ಜನಜಾಗೃತಿ ಸುದ್ಧಿವಾಹಿನಿ


     04 jan 2019


ಬೆಂಗಳೂರು: ರಾಜ್ಯದಲ್ಲಿ ಅವಕಾಶ ಸಿಕ್ಕರೆ ಸರ್ಕಾರ ರಚನೆಗೆ ಬಿಜೆಪಿ ಹೈಕಮಾಂಡ್‌ನಿಂದ ಹಸಿರು ನಿಶಾನೆ ಸಿಕ್ಕಿದ್ದು, ಮಕರ ಸಂಕ್ರಾಂತಿ ಬಳಿಕ ರಾಜ್ಯ ರಾಜಕಾರಣದಲ್ಲಿ ಸಂಕ್ರಮಣ ಸಂಭವಿಸುವ ಲಕ್ಷಣಗಳು ಗೋಚರಿಸುತ್ತಿವೆ.


ದೆಹಲಿಯಲ್ಲಿ ವರಿಷ್ಠರ ಭೇಟಿ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಾಗಿದೆ. ಹಾಗಾಗಿ ಜ.15ರ ನಂತರ ಬದಲಾದ ಸನ್ನಿವೇಶದಲ್ಲಿ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಿ, ಸರ್ಕಾರ ರಚನೆ ಮಾಡುವ ಗಂಭೀರ ಪ್ರಯತ್ನ ನಡೆದಿದೆ. ಇದಕ್ಕೆ ಸಂಬಂಧಪಟ್ಟಂತೆ ರಾಷ್ಟ್ರೀಯ ನಾಯಕರ ಮಟ್ಟದಲ್ಲೇ ಕಾರ್ಯತಂತ್ರ ಹೆಣೆಯಲಾಗುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.


ಈ ಹಿಂದೆ ಸರ್ಕಾರ ರಚನೆಗೆ ನಡೆಸಿದ ಪ್ರಯತ್ನ ವಿಫ‌ಲವಾಗಿ ಹಿನ್ನಡೆ ಅನುಭವಿಸುವ ಜತೆಗೆ ಪಕ್ಷದ ವರ್ಚಸ್ಸಿಗೂ ಧಕ್ಕೆ ಉಂಟಾಗಿದ್ದು, ಪಕ್ಷದ ವರಿಷ್ಠರ ಅಸಮಾಧಾನಕ್ಕೆ ಕಾರಣವಾಗಿತ್ತು.


ಹಾಗಾಗಿ ವರಿಷ್ಠರ ಸಹಮತವಿಲ್ಲದೇ ಮತ್ತೆ ಸರ್ಕಾರ ರಚನೆಗೆ ಪ್ರಯತ್ನ ನಡೆಸುವ ಬಗ್ಗೆ ರಾಜ್ಯ ಬಿಜೆಪಿ ನಾಯಕರಲ್ಲೂ ಗೊಂದಲವಿತ್ತು. ಅಂತಿಮವಾಗಿ ಅವಕಾಶ ಸಿಕ್ಕರೆ ಸರ್ಕಾರ ರಚನೆಗೆ ವರಿಷ್ಠರಿಂದ ಹಸಿರು ನಿಶಾನೆ ಸಿಕ್ಕಿದ್ದು, ಸರ್ಕಾರ ರಚಿಸುವ ಹುಮ್ಮಸ್ಸಿಗೆ ಹೆಚ್ಚು ಬಲ ಬಂದಂತಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.


ಪೂರಕ ಸನ್ನಿವೇಶ ನಿರ್ಮಾಣವಾದರೆ ಸರ್ಕಾರ ರಚನೆಗೆ ಗ್ರೀನ್‌ ಸಿಗ್ನಲ್‌ ತೋರಿರುವ ವರಿಷ್ಠರು, ಯಾವುದೇ ಕಾರಣಕ್ಕೂ ಸರ್ಕಾರ ರಚನೆ ಪ್ರಯತ್ನ ನಡೆಸಿದರೆ ವಿಫ‌ಲವಾಗಬಾರದು. ಸುಸ್ಥಿರ ಸರ್ಕಾರ ರಚನೆಗೆ ಪೂರಕ ವ್ಯವಸ್ಥೆ ಮಾಡಿಕೊಂಡು ಖಾತರಿಯಾದ ಬಳಿಕವಷ್ಟೇ ಕಾರ್ಯಪ್ರವೃತ್ತವಾಗಬೇಕು ಎಂಬ ಎಚ್ಚರಿಕೆಯ ಸಂದೇಶವನ್ನು ವರಿಷ್ಠರು ರವಾನಿಸಿದ್ದಾರೆ ಎನ್ನಲಾಗಿದೆ.

ಸದ್ದಿಲ್ಲದೇ ಸಂಪರ್ಕ ಯತ್ನ 

ಸಚಿವ ಸ್ಥಾನದ ಆಕಾಂಕ್ಷಿಗಳು, ಸಚಿವ ಸ್ಥಾನ ವಂಚಿತರು, ಮೈತ್ರಿ ಸರ್ಕಾರ ರಚನೆ ಬಳಿಕ ಅಸಮಾಧಾನಗೊಂಡಿರುವ ಶಾಸಕರನ್ನು ಸೆಳೆಯುವ ಕಾರ್ಯ ಸದ್ದಿಲ್ಲದೇ ನಡೆದಿದೆ. ಏಳೆಂಟು ತಂಡಗಳು ಪ್ರತ್ಯೇಕವಾಗಿ ಅತೃಪ್ತರೊಂದಿಗೆ ನಿರಂತರ ಸಂಪರ್ಕವಿಟ್ಟುಕೊಂಡು ಸೆಳೆಯುವ, ಮನವೊಲಿಸುವ ಕಾರ್ಯದಲ್ಲಿ ನಿರತರಾಗಿವೆ. ಒಂದು ತಂಡದ ಪ್ರಯತ್ನದ ಬಗ್ಗೆ ಮತ್ತೂಂದು ತಂಡಕ್ಕೆ ಮಾಹಿತಿ ಇಲ್ಲದಂತೆ ಎಚ್ಚರ ವಹಿಸಲಾಗಿದೆ. ಕೆಲ ತಂಡಗಳಿಗೆ ನಿರೀಕ್ಷಿತ ಸ್ಪಂದನೆಯೂ ಸಿಕ್ಕಿದೆ ಎನ್ನಲಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮರಕ ಸಂಕ್ರಾಂತಿ ಬಳಿಕ ರಾಜಕೀಯ ಕ್ರಾಂತಿ ಸೃಷ್ಟಿಯಾಗುವ ನಿರೀಕ್ಷೆ ಮೂಡಿದೆ.

ದೆಹಲಿಯಿಂದ ಹಿಂತಿರುಗಿದ ಬಳಿಕ ಯಡಿಯೂರಪ್ಪ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಾಗಿದ್ದು, ಇನ್ನಷ್ಟು ಕ್ರಿಯಾಶೀಲವಾಗಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ನಿರೀಕ್ಷಿತ ಸಂಖ್ಯೆಯ ಶಾಸಕರನ್ನು ಸೆಳೆದ ಬಳಿಕ ಸ್ವಂತ ಬಲದ ಸರ್ಕಾರ ರಚನೆ ಪ್ರಯತ್ನಕ್ಕೆ ಚಾಲನೆ ಸಿಗುವ ಸಾಧ್ಯತೆ ಇದೆ. ಈ ಹಂತದವರೆಗೆ ಬೆಳವಣಿಗೆಯಾದರೆ ಅಗತ್ಯ ಸಹಕಾರ, ಮಾರ್ಗದರ್ಶನವನ್ನು ನೀಡುವ ಭರವಸೆಯನ್ನು ವರಿಷ್ಠರು ನೀಡಿದ್ದಾರೆ ಎನ್ನಲಾಗಿದೆ.

ರಾಜಧಾನಿಯಿಂದ ಬಿಎಸ್‌ವೈ ದೂರ 

ಬಿ.ಎಸ್‌.ಯಡಿಯೂರಪ್ಪ ಅವರು ಮುಂದಿನ ಕೆಲವು ದಿನ ಶಿವಮೊಗ್ಗದಲ್ಲೇ ವಾಸ್ತವ್ಯ ಹೂಡಲಿದ್ದು, ರಾಜಧಾನಿಯಿಂದ ಕೆಲವು ದಿನ ದೂರ ಉಳಿಯುತ್ತಿರುವ ನಡೆಯೂ ಕುತೂಹಲ ಮೂಡಿಸಿದೆ. ಸುತ್ತೂರು ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲೇ ಕೆಲದಿನ ಯಡಿಯೂರಪ್ಪ ಅವರು ನೆಲೆಯೂರಲಿದ್ದಾರೆ ಎಂದು ಆಪ್ತ ಬಳಗ ತಿಳಿಸಿದೆ. ಬಿರುಸಿನ ರಾಜಕೀಯ ಚಟುವಟಿಕೆ ನಡೆಯುತ್ತಿರುವ ಹೊತ್ತಿನಲ್ಲೇ ಅವರು ಕೆಲ ದಿನದ ಮಟ್ಟಿಗೆ ಶಿವಮೊಗ್ಗದಲ್ಲಿ ಉಳಿಯುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.

ದೆಹಲಿಯಲ್ಲಿ ಜ.11 ಹಾಗೂ 12ರಂದು ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯಲಿದ್ದು, ಯಡಿಯೂರಪ್ಪ ಅವರು ಪಾಲ್ಗೊಳ್ಳಲಿದ್ದಾರೆ. ಆ ಸಭೆಯ ಬಳಿಕ ರಾಜ್ಯದ ರಾಜಕೀಯ ಚಿತ್ರಣದ ಬಗ್ಗೆ ವರಿಷ್ಠರಿಗೆ ಮಾಹಿತಿ ನೀಡಿ ನಂತರ ಮುಂದಿನ ಕಾರ್ಯತಂತ್ರ ರೂಪಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಸಕ್ರಿಯವಾದ ಬಿಜೆಪಿ 

ಮೈತ್ರಿ ಸರ್ಕಾರದ ಆರು ತಿಂಗಳ ಆಡಳಿತ ಪೂರ್ಣಗೊಳ್ಳುತ್ತಿದ್ದಂತೆ ಪ್ರತಿಪಕ್ಷ ಬಿಜೆಪಿ ಹೆಚ್ಚು ಸಕ್ರಿಯವಾಗಿದ್ದು, ಮೈತ್ರಿ ಸರ್ಕಾರದ ಕಾರ್ಯವೈಖರಿ ಹಾಗೂ ವೈಫ‌ಲ್ಯಗಳ ಬಗ್ಗೆ ಗಟ್ಟಿ ಧ್ವನಿಯಲ್ಲಿ ವಾಗ್ಧಾಳಿ ನಡೆಸಲಾರಂಭಿಸಿದೆ. ಸಂಪುಟ ಪುನಾರಚನೆ ಬಳಿಕ ಅಸಮಾಧಾನಗೊಂಡಿರುವ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಸೇರಿದಂತೆ ಸಚಿವ ಸ್ಥಾನ ವಂಚಿತ ಅತೃಪ್ತ ಶಾಸಕರನ್ನು ಸೆಳೆಯುವ ಪ್ರಯತ್ನದ ಬಗ್ಗೆ ತೆರೆಮರೆಯಲ್ಲೇ ಕಸರತ್ತು ನಡೆದಿತ್ತು. ಇದಕ್ಕೆ ಪುಷ್ಠಿ ನೀಡುವಂತೆ ಬಿಜೆಪಿ ಹಿರಿಯ ಶಾಸಕ ಉಮೇಶ್‌ ಕತ್ತಿಯವರು 24 ಗಂಟೆಯಲ್ಲಿ ಸರ್ಕಾರ ಪತನವಾಗಲಿದೆ ಎಂದು ಬಹಿರಂಗವಾಗಿ ಹೇಳಿದ್ದ ಭವಿಷ್ಯ ನಂತರ ಹುಸಿಯಾಗಿತ್ತು. ಒಟ್ಟಾರೆ ತೆರೆಮರೆಯಲ್ಲೇ ಶಾಸಕರನ್ನು ಸೆಳೆಯುವ ಕಸರತ್ತು ಗಂಭೀರವಾಗಿ ನಡೆದಿದೆ ಎಂಬುದು ಸ್ಪಷ್ಟ.

ನಮ್ಮ ಚಾನಲ್ ಗೆ ಭೇಟಿ ನೀಡಿ subscribe ಮಾಡಿ Youtube.com/c/janajagrutiTVNews

ಪ್ರಧಾನಿ ಮೋದಿಗೆ ಮತ್ತೊಂದು ಮಿತ್ರ ಪಕ್ಷದಿಂದ 'ಶಾಕ್'

      ಜನಜಾಗೃತಿ ಸುದ್ಧಿವಾಹಿನಿ


     04 jan 2019


ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಮಿತ್ರ ಪಕ್ಷಗಳೇ ಶಾಕ್ ನೀಡುತ್ತಿದ್ದು, ಈಗ ಮತ್ತೊಂದು ಮಿತ್ರ ಪಕ್ಷ ಸರ್ಕಾರದ ತೀರ್ಮಾನಕ್ಕೆ ವಿರೋಧ ವ್ಯಕ್ತಪಡಿಸಿದೆ.

ರಾಮಮಂದಿರ ನಿರ್ಮಾಣ ವಿಚಾರ ಕುರಿತಂತೆ ರಾಮ್ ವಿಲಾಸ್ ಪಾಸ್ವಾನ್ ಅವರ ಎಲ್.ಜೆ.ಪಿ. ಪಕ್ಷ ಭಿನ್ನ ನಿಲುವು ವ್ಯಕ್ತಪಡಿಸಿದ್ದು, ರಫೆಲ್ ಯುದ್ದ ವಿಮಾನ ವಿಚಾರದಲ್ಲಿ ಉದ್ಧವ್ ಠಾಕ್ರೆ ಅವರ ಶಿವಸೇನೆ ಕಾಂಗ್ರೆಸ್ ಪರ ನಿಂತಿತ್ತು.

ಇದೀಗ ನಿತೀಶ್ ಕುಮಾರ್ ನೇತೃತ್ವದ ಜೆಡಿಯು, ತ್ರಿವಳಿ ತಲಾಖ್ ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದು, ರಾಜ್ಯಸಭೆಯಲ್ಲಿ ಈ ಮಸೂದೆಯನ್ನು ಮಂಡಿಸಿದ ವೇಳೆ ಸರ್ಕಾರದ ವಿರುದ್ಧವಾಗಿ ಮತ ಚಲಾಯಿಸುವುದಾಗಿ ತಿಳಿಸಿದೆ. ಇದರಿಂದಾಗಿ ತ್ರಿವಳಿ ತಲಾಕ್ ಮಸೂದೆ ಅಂಗೀಕಾರವಾಗುವುದು ಕಷ್ಟ ಸಾಧ್ಯವೆನ್ನಲಾಗಿದೆ

ನಮ್ಮ ಚಾನಲ್ ಗೆ ಭೇಟಿ ನೀಡಿ subscribe ಮಾಡಿ ಬೆಂಬಲಿಸಿ Youtube.com/c/janajagrutiTVNews

ರಾಜ್ಯ ಬಜೆಟ್‌ಗೆ ದಿನಾಂಕ ಫಿಕ್ಸ್!: ಒಂದೇ ಕಂತಿನಲ್ಲಿ 46 ಸಾವಿರ ಕೋಟಿ ಸಾಲ ಮನ್ನಾ

         ಜನಜಾಗೃತಿ ಸುದ್ಧಿವಾಹಿನಿ

           04 jan 2019


ಬೆಂಗಳೂರು: ರೈತರ ಸಾಲ ಮನ್ನಾ ಕುರಿತಂತೆ ಪ್ರತಿಪಕ್ಷಗಳು ಮಾಡುತ್ತಿರುವ ಎಲ್ಲ ಟೀಕೆಗೆ ಉತ್ತರ ಕೊಡಲು ಮುಂದಾಗಿರುವ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಬರುವ ಫೆ. 8 ರಂದು ಮಂಡಿಸಲಿರುವ ಬಜೆಟ್‌ನಲ್ಲಿ ಬ್ಯಾಂಕುಗಳಿಗೆ ನೀಡಬೇಕಾದ ಸಾಲದ ಮೊತ್ತವನ್ನು ನಾಲ್ಕು ಕಂತುಗಳ ಬದಲು ಒಂದೇ ಕಂತಿನಲ್ಲಿ ಪಾವತಿಸುವ ಘೋಷಣೆ ಮಾಡುವುದಾಗಿ ಹೇಳಿದ್ದಾರೆ.


ಲೋಕಸಭಾ ಚುನಾವಣೆ ಸಿದ್ದತೆ ಹಿನ್ನೆಲೆಯಲ್ಲಿ ಪಕ್ಷದ ಕಚೇರಿ ಜೆ.ಪಿ.ಭವನದ ಆವರಣದಲ್ಲಿ ಗುರುವಾರ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ, 'ಫೆ.8ರಂದು ಬಜೆಟ್‌ ಮಂಡನೆ ಮಾಡುವ ಉದ್ದೇಶವನ್ನು ಹೊಂದಿದ್ದೇನೆ. ಬಜೆಟ್‌ ಘೋಷಣೆ ವೇಳೆ ಸಾಲಮನ್ನಾ ಯೋಜನೆಯ ಸಂಪೂರ್ಣ ಮೊತ್ತ 46 ಸಾವಿರ ಕೋಟಿ ರು.ಗಳನ್ನು ಮುಂದಿನ ಆರ್ಥಿಕ ಸಾಲಿನಲ್ಲಿ ಚುಕ್ತಾ ಮಾಡುವ ಬಗ್ಗೆ ಪ್ರಕಟಿಸಲಾಗುವುದು.


ರೈತರಲ್ಲಿ ಅವಿಶ್ವಾಸ ಮೂಡಿಸುವ ಪ್ರತಿಪಕ್ಷಗಳ ಹುನ್ನಾರಕ್ಕೆ ಆಸ್ಪದ ನೀಡಬಾರದು ಎಂಬ ಕಾರಣಕ್ಕಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ' ಎಂದು ಹೇಳಿದರು.


'ರೈತರ ಸಾಲಮನ್ನಾ ಯೋಜನೆ ಬಗ್ಗೆ ರಾಜ್ಯದ ಮಾಜಿ ಮುಖ್ಯಮಂತ್ರಿಯೊಬ್ಬರು ವೈಜ್ಞಾನಿಕವಾಗಿ ಮಾಡಿಲ್ಲ ಎಂದು ಆರೋಪಿದ್ದಾರೆ. ಈಗಲಾದರೂ ಅವರಿಗೆ ರೈತರ ಬಗ್ಗೆ ಕಾಳಜಿ ಬಂದಿದ್ದರೆ ಗೌರವ ಸಲ್ಲಿಸುತ್ತೇನೆ. ಬಹುಶಃ ಅವರಿಗೆ ಸಾಲಮನ್ನಾದ ಬಗ್ಗೆ ಸರಿಯಾದ ಮಾಹಿತಿ ಇಲ್ಲದಿರಬಹುದು. ಅವರಿಗೆ ಸರ್ಕಾರ ಯಾವ ರೀತಿಯಲ್ಲಿ ವೈಜ್ಞಾನಿಕವಾಗಿ ಸಾಲಮನ್ನಾ ಮಾಡಲಾಗುತ್ತಿದೆ ಎಂಬ ಸಮಗ್ರ ಮಾಹಿತಿಯುಳ್ಳ ಪ್ರತಿಯನ್ನು ಕಳುಹಿಸಿಕೊಡಲಾಗುವುದು' ಎಂದು ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಹೆಸರು ಪ್ರಸ್ತಾಪಿಸಿದರೆ ಪರೋಕ್ಷವಾಗಿ ಆಕ್ಷೇಪಿಸಿದರು.


ಪ್ರಧಾನಿ ಹುದ್ದೆ ಉಳಿಯೋದು ಕಷ್ಟಎಂದು ಮೋದಿಗೆ ಹೇಳಿದ್ದೇನೆ


ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕಾಪ್ರಹಾರ ನಡೆಸಿರುವ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, 'ರೈತರಿಗೆ ಸಾಲ ಮನ್ನಾ ಎಂಬ ಲಾಲಿಪಾಪ್‌ ಕೊಡಲಾಗಿದೆ ಎಂದು ಮೋದಿ ಲೇವಡಿ ಮಾಡಿದ್ದಾರೆ. ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ನೀವು ಉಳಿಯಬೇಕಾದರೆ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಪ್ರಧಾನಿ ಹುದ್ದೆ ಉಳಿಯುವುದು ಕಷ್ಟ. ರೈತರನ್ನು ಕಡೆಗಣಿಸಬೇಡಿ ಎಂದು ಹೇಳಿದ್ದೇನೆ' ಎಂದರು.


ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರೊಂದಿಗೆ ಜನತೆ ಕೈ ಜೋಡಿಸಬೇಕು. 10-12 ಜೆಡಿಎಸ್‌ ನಾಯಕರನ್ನು ಲೋಕಸಭೆಗೆ ಕಳುಹಿಸಬೇಕು. ಉತ್ತರ ಕರ್ನಾಟಕದ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಮಾಡಬೇಕು. ಇಲ್ಲದಿದ್ದರೆ ಯೋಜನೆ ಸಾಕಾರವಾಗುವುದಿಲ್ಲ. ಈ ಸತ್ಯವನ್ನು ಜನತೆ ತಿಳಿದುಕೊಳ್ಳಬೇಕು. ಇದನ್ನು ಜನರು ತಿಳಿದುಕೊಳ್ಳದಿದ್ದರೆ ಬಿಜೆಪಿಯಿಂದ ಟೋಪಿ ಹಾಕಿಸಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.


ವೃದ್ಧಾಪ್ಯ ವೇತನ 2000 ರು.ಗೆ ಏರಿಕೆ


ಮುಂದಿನ ಬಜೆಟ್‌ನಲ್ಲಿ ಹಿರಿಯ ನಾಗರಿಕರ ವೃದ್ಧಾಪ್ಯ ವೇತನವನ್ನು ಒಂದು ಸಾವಿರ ರು.ನಿಂದ ಎರಡು ಸಾವಿರ ರು.ಗೆ ಹೆಚ್ಚಳ ಮಾಡುವ ಇಂಗಿತ ಇದೆ. ಅಲ್ಲದೇ, ವಿಧವಾ ವೇತನ ಹೆಚ್ಚಳ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪ್ರಕಟಿಸಲಾಗುವುದು ಎಂದು ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಸರ್ಕಾರ ಬೀಳಿಸಲಿ ಎಂದು ಪ್ಯಾರಿಸ್‌ಗೆ ಹೋಗಿದ್ದೆ

ಇತ್ತೀಚೆಗೆ ಬಿಜೆಪಿ ಮುಖಂಡರೊಬ್ಬರು ಸಹ ಸರ್ಕಾರ ಪತನವಾಗುವ ಬಗ್ಗೆ ಹೇಳಿಕೆ ನೀಡಿದ್ದರು. ಸರ್ಕಾರ ಪತನಗೊಳಿಸುವ ಪ್ರಯತ್ನ ಮಾಡಲಿ ಎಂಬ ಕಾರಣಕ್ಕಾಗಿ ವಿದೇಶ ಪ್ರವಾಸ ಕೈಗೊಂಡಿದ್ದೆ. ನನ್ನಿಂದ ಸಮಸ್ಯೆಯಾಗಬಾರದು ಎಂದು ಪ್ಯಾರಿಸ್‌ಗೆ ಪ್ರಯಾಣ ಬೆಳೆಸಿದ್ದೆ. ಆದರೂ ಏನೂ ಮಾಡಲಿಲ್ಲ ಎಂದು ಮಾಜಿ ಸಚಿವ ಉಮೇಶ್‌ ಕತ್ತಿ ಉದ್ದೇಶಿಸಿ ಕುಮಾರಸ್ವಾಮಿ ವ್ಯಂಗ್ಯವಾಡಿದರು.

ರಾಜ್ಯ ನಂ.1 ಮಾಡದಿದ್ರೆ ಪಕ್ಷದ ಕಚೇರಿಗೆ ಬೀಗ

ಮುಂದಿನ ಚುನಾವಣೆಯಲ್ಲಾದರೂ ನಾಡಿನ ಜನತೆ ಐದು ವರ್ಷಗಳ ಕಾಲ ಆಡಳಿತ ನಡೆಸಲು ಜೆಡಿಎಸ್‌ ಪಕ್ಷಕ್ಕೆ ಸ್ವಂತ ಶಕ್ತಿ ಕೊಡಬೇಕು. ಬಹುಮತ ನೀಡಿದರೆ ದೇಶದಲ್ಲಿಯೇ ರಾಜ್ಯವನ್ನು ನಂಬರ್‌ ಒನ್‌ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಒಂದು ವೇಳೆ ಇದು ಸಾಧ್ಯವಾಗದಿದ್ದರೆ ಜೆಡಿಎಸ್‌ ಪಕ್ಷದ ಕಚೇರಿಗೆ ಬೀಗ ಹಾಕುತ್ತೇನೆ.

ನಮ್ಮ ಚಾನಲ್ ಗೆ ಭೇಟಿ ನೀಡಿ Subscribe ಮಾಡಿ Youtube.com/c/janajagrutiTVNews

SKSSF ಬೆಳ್ತಂಗಡಿ ವಲಯ ವತಿಯಿಂದ ಪ್ರವಾದಿ ನಿಂದನೆ ವಿರುಧ್ಧ ದೂರು ದಾಖಲು

      ಜನಜಾಗೃತಿ ಸುದ್ಧಿವಾಹಿನಿ

ಸುವರ್ಣ ನ್ಯೂಸ್ ಚಾನಲ್ ನಿರೂಪಕ ಅಜಿತ್ ಹನುಮಕನವರ್ ಅವರ ವಿರುಧ್ಧ ಪ್ರವಾದಿ ನಿಂದನೆ ನಡೆಸಿದ ಬಗ್ಗೆ

ಬೆಳ್ತಂಗಡಿ  ಠಾಣೆಯಲ್ಲಿ  ದೂರು ಹಾಗು ಟಿಬೆಟ್ ಕಾರ್ಯಕ್ರಮದ  ಸಿಡಿ ಯನ್ನು ನೀಡಲಾಯಿತು . ವಲಯ ಕೋಶಾಧಿಕಾರಿ ಸಂಶುದ್ದೀನ್ ದಾರಿಮಿ ಸಂಘಟನಾ ಕಾರ್ಯದರ್ಶಿ ಸಿರಾಜ್ ಚಿಲಿಂಬಿ

ಜಿಲ್ಲಾ ಕಾರ್ಯದರ್ಶಿ ಶರೀಫ್ ಕಕ್ಕಿಂಜೆ, ವಲಯ ಸದಸ್ಯರುಗಳಾದ  ಶಮೀರ್ ಮುಸ್ಲಿಯಾರ್ ಚಾರ್ಮಾಡಿ, ಸಾದಿಕ್ ಕಟ್ಟೆ,ಹನೀಫ್ ಮಜಲ್ ,ಅಬ್ದುಲ್ಲ ಪುಂಜಾಲ್ ಕಟ್ಟೆ ,  ಮೊದಲಾದವರು ಹಾಜರಿದ್ದರು

ನಮ್ಮ ಚಾನಲ್ ಗೆ ಭೇಟಿ ನೀಡಿ Subscribe ಮಾಡಿ Youtube.com/c/janajagrutiTVNews

Tuesday, January 1, 2019

ಅಖಾಡಕ್ಕಿಳಿದ ಬಿಜೆಪಿ ವರಿಷ್ಠರು, ದೋಸ್ತಿ ಸರ್ಕಾರ ಬೀಳಿಸುವ ಆಟ ಶುರು.!

      ಜನಜಾಗೃತಿ ಸುದ್ಧಿವಾಹಿನಿ


     02 jan 2019


ಬೆಂಗಳೂರು: ಆಡಳಿತರೂಢ ದೋಸ್ತಿ ಸರ್ಕಾರದಲ್ಲಿ ಉಂಟಾಗಿರುವ ಬಿಕ್ಕಟ್ಟಿನಿಂದ ಈವರೆಗೂ ಸುರಕ್ಷಿತ ಅಂತರದಲ್ಲಿದ್ದ ಕೇಂದ್ರ ಬಿಜೆಪಿ ವರಿಷ್ಠರು ಮೊದಲ ಬಾರಿಗೆ ನೇರವಾಗಿ ಅಖಾಡಕ್ಕೆ ಇಳಿದಿದ್ದಾರೆ. ಶತಾಯಗತಾಯ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಲೋಕಸಭೆ ಚುನಾವಣೆಗೂ ಮುನ್ನವೇ ಅಸ್ಥಿರಗೊಳಿಸಿ ಬಿಜೆಪಿ ನೇತೃತ್ವದ ಸರ್ಕಾರವನ್ನು ರಚಿಸಲು ಬಿಜೆಪಿ ನಾಯಕರು ತೆರೆ ಮರೆಯಲ್ಲಿ ಆಟ ಪ್ರಾರಂಭಿಸಿದ್ದಾರೆ.


ಈವರೆಗೂ ರಾಜ್ಯ ಬಿಜೆಪಿ ನಾಯಕರು ಏನೇ ಹೇಳಿದರೂ ದೆಹಲಿ ನಾಯಕರು ಮಾತ್ರ ಸರ್ಕಾರ ಅಸ್ಥಿರಗೊಳಿಸುವ ಯಾವುದೇ ಪ್ರಯತ್ನವನ್ನು ಮಾಡಿರಲಿಲ್ಲ. ಎರಡೂ ಪಕ್ಷಗಳ ಶಾಸಕರ ಮುನಿಸು ಬೀದಿಗೆ ಬರುವವರೆಗೂ ಅಂತಹ ಯಾವುದೇ ಪ್ರಯತ್ನ ನಮ್ಮಿಂದ ಆಗಬಾರದೆಂಬ ದೃಢ ನಿಲುವಿಗೆ ಬಂದಿದ್ದರು.


ಇದೀಗ ಸಚಿವ ಸಂಪುಟ ವಿಸ್ತರಣೆ ನಂತರ ಸ್ಥಾನ ಕಳೆದುಕೊಂಡು ಕಾಂಗ್ರೆಸ್ ವಿರುದ್ಧ ಮುನಿಸಿಕೊಂಡಿರುವ ಮಾಜಿ ಸಚಿವ ರಮೇಶ್ ಜಾರಕಿ ಹೊಳಿ ಇದುವರೆಗೂ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಹೋದರರಾದ ಸತೀಶ್ ಜಾರಕಿ ಹೊಳಿ, ಲಖನ್ ಜಾರಕಿ ಹೊಳಿ ಸೇರಿದಂತೆ ಅನೇಕರು ಸತತ ಪ್ರಯತ್ನಪಟ್ಟರೂ ಸಂಪರ್ಕಕ್ಕೆ ಸಿಗುತ್ತಿಲ್ಲ.


ಈಗ ಕಾಂಗ್ರೆಸ್ನ ಒಳಜಗಳವನ್ನೇ ಲಾಭ ಮಾಡಿಕೊಳ್ಳಲು ಹಪಹಪಿಸುತ್ತಿರುವ ಬಿಜೆಪಿ ಕನಿಷ್ಠ 13 ರಿಂದ 16 ಶಾಸಕರನ್ನು ಸೆಳೆಯುವ ಕಾರ್ಯಕ್ಕೆ ಕೈ ಹಾಕಿದೆ. ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹಾಗೂ ಪ್ರಭಾವಿ ವಾಲ್ಮೀಕಿ ಸಮುದಾಯದ ಸಚಿವರೊಬ್ಬರ ಮೂಲಕ ಕಾಂಗ್ರೆಸ್ನ ಅತೃಪ್ತ ಶಾಸಕರನ್ನು ಸೆಳೆಯುವ ಪ್ರಯತ್ನ ನಿರಂತರವಾಗಿ ಮುಂದುವರೆದಿದೆ.


ಆದರೆ ನಿರೀಕ್ಷಿತ ಮಟ್ಟದಲ್ಲಿ ಶಾಸಕರ ಸಂಖ್ಯೆ ಹೆಚ್ಚಾಗದ ಕಾರಣ ಸರ್ಕಾರ ಅಸ್ಥಿರಗೊಳಿಸುವ ಆಪರೇಷನ್ ಕಮಲ ತುಸು ಮಟ್ಟಿಗೆ ಹಿನ್ನಡೆಯಾಗಿದೆ ಎಂದು ಹೇಳಲಾಗುತ್ತಿದೆ. ಇದುವರೆಗೂ ರಮೇಶ್ ಜಾರಕಿ ಹೊಳಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ಷಾ ಅವರನ್ನು ಭೇಟಿ ಮಾಡುವ ತವಕದಲ್ಲಿದ್ದಾರೆ. ಆದರೆ ಬಿಜೆಪಿಯ ಚುನಾವಣಾ ಚಾಣಕ್ಯ ಅವಕಾಶ ನೀಡಿಲ್ಲ.


ಕೇವಲ ಮೂರ್ನಾಲ್ಕು ಮಂದಿ ಶಾಸಕರು ಬಂದರೆ ಸರ್ಕಾರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಇದರಿಂದ ಬಿಜೆಪಿಗೆ ಅನುಕೂಲವೂ ಆಗುವುದಿಲ್ಲ. ಕನಿಷ್ಠ ಪಕ್ಷ 15 ಮಂದಿ ಶಾಸಕರು ಏಕಕಾಲಕ್ಕೆ ಪಕ್ಷ ತೊರೆದರೆ ಸರ್ಕಾರವನ್ನು ಅಸ್ಥಿರಗೊಳಿಸಬಹುದೆಂಬ ಲೆಕ್ಕಾಚಾರದಲ್ಲಿದ್ದಾರೆ ಬಿಜೆಪಿ ನಾಯಕರು.


ದೋಸ್ತಿ ಸರ್ಕಾರ ಮುಂದುವರೆದಷ್ಟು ಲೋಕಸಭೆ ಚುನಾವಣೆಗೆ ಹಿನ್ನೆಡೆಯಾಗಬಹುದೆಂಬ ಕಾರಣಕ್ಕಾಗಿಯೇ ಎಷ್ಟು ಸಾಧ್ಯವೋ ಅಷ್ಟರೊಳಗೆ ಸರ್ಕಾರವನ್ನು ಪತನಗೊಳಿಸುವ ರಣೋತ್ಸವದಲ್ಲಿ ಬಿಜೆಪಿ ಇದೆ.


ಬಳ್ಳಾರಿಯ ಬಿ.ನಾಗೇಂದ್ರ, ಆನಂದ್ಸಿಂಗ್, ಗಣೇಶ್, ಪ್ರತಾಪ್ಗೌಡ ಪಾಟೀಲ್, ಬಸವರಾಜ ದದ್ದೂರ್, ಬಿ.ಸಿ.ಪಾಟೀಲ್, ಬಿ.ಕೆ.ಸಂಗಮೇಶ್, ಮಹಂತೇಶ ಕುಮುಟಹಳ್ಳಿ, ಶ್ರೀಮಂತ ಪಾಟೀಲ ಸೇರಿದಂತೆ ಸುಮಾರು ಒಂದು ಡಜನ್ಗೂ ಅಧಿಕ ಶಾಸಕರು ರಮೇಶ್ ಜಾರಕಿ ಹೊಳಿ ಜೊತೆ ನಿರಂತರವಾಗಿ ಸಂಪರ್ಕ ಇಟ್ಟುಕೊಂಡಿದ್ದಾರೆ.


ನಾವು ಕಾಂಗ್ರೆಸ್ ಬಿಟ್ಟು ಎಲ್ಲಿಗೂ ಹೋಗುವುದಿಲ್ಲ ಎಂದು ಈ ಶಾಸಕರು ಹೇಳುತ್ತಿದ್ದರಾದರೂ ಒಳಗೊಳಗೇ ಪಕ್ಷಕ್ಕೆ ಕೈ ಕೊಡಲು ಮಾನಸಿಕ ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ನಾಗೇಂದ್ರ ಹಾಗೂ ಆನಂದ್ಸಿಂಗ್ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಕಾಂಗ್ರೆಸ್ನ ಭಿನ್ನಮತೀಯರನ್ನು ಸೆಳೆಯಲು ಈ ಬಾರಿ ಜಾರಕಿ ಹೊಳಿ ಅವರ ಮತ್ತೋರ್ವ ಸಹೋದರ ಬಾಲಚಂದ್ರ ಜಾರಕಿ ಹೊಳಿ ನೇತೃತ್ವ ವಹಿಸಿದ್ದಾರೆ ಎನ್ನಲಾಗುತ್ತಿದೆ.


ಗೌಪ್ಯ ಸ್ಥಳದಲ್ಲಿ ಭಿನ್ನಮತೀಯರನ್ನು ಒಗ್ಗೂಡಿಸುವುದು ಹಾಗೂ ಇವರೆಲ್ಲರನ್ನು ದೆಹಲಿಗೆ ಕರೆದೊಯ್ದು ಏಕಕಾಲದಲ್ಲಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲು ಅಗತ್ಯ ವೇದಿಕೆ ಸಿದ್ಧಪಡಿಸುವ ಜವಾಬ್ದಾರಿಯನ್ನು ಬಾಲಚಂದ್ರ ಜಾರಕಿ ಹೊಳಿ ವಹಿಸಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ನೇರವಾಗಿ ಬಿಜೆಪಿಯಿಂದ ಸರ್ಕಾರ ಪತನವಾಯಿತು ಎಂಬ ಟೀಕೆಯಿಂದ ತಪ್ಪಿಸಿಕೊಳ್ಳಲು ಕಮಲ ನಾಯಕರು ಗೌಪ್ಯವಾಗಿ ಹೊರಗಿನ ನಾಯಕರಿಂದಲೇ ಕಾರ್ಯಾಚರಣೆ ಆರಂಭಿಸಿದ್ದಾರೆ. ಒಂದೆರಡು ದಿನಗಳಲ್ಲಿ ಇದರ ಮರ್ಮ ಹೊರಬೀಳುವ ಸಾಧ್ಯತೆ ಇದೆ.

ನಮ್ಮ ಚಾನಲ್ ಗೆ ಭೇಟಿ ನೀಡಿ subscribe ಮಾಡಿ 👉Youtube.com/c/janajagrutiTVNews


ಸಿದ್ದು ಜಾಗದಲ್ಲಿ ನಾನು ಇದ್ದಿದ್ದರೆ ಹೀಗೆ ಮಾಡುತ್ತಿರಲಿಲ್ಲ : ಡಿಕೆಶಿ

    ಜನಜಾಗೃತಿ ಸುದ್ಧಿವಾಹಿನಿ


     02 jan 2019


ಬೆಂಗಳೂರು: 'ಬೆಂಗಳೂರು ಕೇಂದ್ರ ಭಾಗದಿಂದ ಉತ್ತರ ಭಾಗಕ್ಕೆ ಸಂಪರ್ಕ ಕಲ್ಪಿಸಲು ಸ್ಟೀಲ್‌ ಬ್ರಿಡ್‌ ಯೋಜನೆ ಅನಿವಾರ್ಯ. ಕಳೆದ ಸರ್ಕಾರದ ಅವಧಿಯಲ್ಲಿ ಯೋಜನೆಗೆ ವಿರೋಧ ವ್ಯಕ್ತಪಡಿಸಿದವರಿಗೆ ಗೌರವ ನೀಡಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಯೋಜನೆ ಹಿಂಪಡೆದಿದ್ದಾರೆ. ಸಿದ್ದರಾಮಯ್ಯ ಅವರ ಸ್ಥಾನದಲ್ಲಿ ನಾನು ಇದ್ದಿದ್ದರೆ ಹಿಂದಕ್ಕೆ ಸರಿಯುತ್ತಿರಲಿಲ್ಲ' ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.


ಅಲ್ಲದೆ, ಉತ್ತರ ಭಾಗದ ಜನರು ಅನುಭವಿಸುತ್ತಿರುವ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರವಾಗಿ ಯೋಜನೆ ಮಾಡಿಯೇ ತೀರುತ್ತೇವೆ. ಅಗತ್ಯವಾದರೆ ಸಲಹೆ ನೀಡಲಿ, ಯೋಜನೆಯೇ ಬೇಡ ಎಂದು ಬೆದರಿಕೆ ಹಾಕಿದರೆ ಸರ್ಕಾರ ಕೇಳುವುದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.


ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಭಾಗದ ಜನರಿಗೆ ನಗರಕ್ಕೆ ಸಂಪರ್ಕ ಕಲ್ಪಿಸಬೇಕಾದ ಅನಿವಾರ್ಯತೆ ಇದೆ.


ಹೆಬ್ಬಾಳದಿಂದ ನಗರ ಕೇಂದ್ರ ಭಾಗಕ್ಕೆ ಬರಲು ಸಂಚಾರ ದಟ್ಟಣೆಯಲ್ಲೇ ಹೆಚ್ಚು ಸಮಯ ವ್ಯರ್ಥವಾಗುತ್ತಿದೆ. ಸಾರ್ವಜನಿಕರಿಗೆ ಸಮಯ ತುಂಬಾ ಅಮೂಲವ್ಯವಾದದ್ದು. ಹೀಗಾಗಿ ಸಾರ್ವಜನಿಕರ ಸಮಯ ಉಳಿತಾಯ ಮಾಡಲು ಯೋಜನೆ ಅಗತ್ಯ ಎಂದರು.


ಸಂಚಾರ ದಟ್ಟಣೆ ಸಮಸ್ಯೆ ನಿವಾರಿಸಲು ಸರ್ಕಾರ ಮುಂದಾದರೆ ವಿರೋಧ ಪಕ್ಷದವರು ರಾಜಕೀಯವಾಗಿ ಮಾತನಾಡುತ್ತಾರೆ. ಮೊಸರಿನಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ಹೆದರಿಕೊಂಡು ಕೆಲಸ ಮಾಡಲು ಆಗುತ್ತದೆಯೇ ಎಂದು ಪ್ರಶ್ನಿಸಿದ ಅವರು, ನಮ್ಮ ತಪ್ಪಿದ್ದರೆ ಗಲ್ಲಿಗೇರಿಸಲಿ. ವಿರೋಧ ಮಾಡುತ್ತಿರುವವರು ಯಾರೂ ಹರಿಶ್ಚಂದ್ರನ ಮೊಮ್ಮಕ್ಕಳು ಅಲ್ಲ ಎಂಬುದು ಗೊತ್ತಿದೆ ಎಂದು ಕಿಡಿ ಕಾರಿದರು.


'ಬ್ಲ್ಯಾಕ್‌ಮೇಲ್‌ಗೆ ಹೆದರುವುದಿಲ್ಲ'ಟೆಂಡರ್‌ನಲ್ಲಿ ಅಕ್ರಮವಾಗಿದೆ ಎಂದು ಸುಳ್ಳು ಆರೋಪ ಮಾಡಿದರು. ಮಾಚ್‌ರ್‍ನಲ್ಲಿ ಗೋವಿಂದರಾಜು ಮೇಲೆ ಐಟಿ ದಾಳಿ ನಡೆದರೆ ಅಕ್ಟೋಬರ್‌ನಲ್ಲಿ ಕಿಕ್‌ಬ್ಯಾಕ್‌ ಆರೋಪ ಮಾಡಿದರು. ನನ್ನ ವಿರುದ್ದವೂ ಐಟಿ ದಾಳಿ ಆಗಿತ್ತು. ಅಗತ್ಯವಾದರೆ ಅಭಿವೃದ್ಧಿ ಯೋಜನೆಗಳಿಗೆ ಸಲಹೆಗಳನ್ನು ನೀಡಲಿ, ಹೆದರಿಸುವುದು ಹಾಗೂ ಬ್ಲ್ಯಾಕ್‌ಮೇಲ್‌ ಮಾಡಲು ಮುಂದಾದರೆ ಸರ್ಕಾರ ಹೆದರುವುದಿಲ್ಲ ಎಂದು ಇದೇ ವೇಳೆ ಸಚಿವ ಡಿ.ಕೆ.ಶಿವಕುಮಾರ್‌ ಗುಡುಗಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ನಾವು ಅಡ್ಡಿ ಉಂಟು ಮಾಡಿಲ್ಲ. ನಾವು ಯೋಜನೆಯಲ್ಲಿ ತಪ್ಪು ಮಾಡಿದರೆ ಸಲಹೆ ನೀಡಲಿ. ಆದರೆ, ಅನಗತ್ಯವಾಗಿ ರಾಜಕೀಯ ಕಾರಣಗಳಿಗೆ ವಿರೋಧ ವ್ಯಕ್ತಪಡಿಸುವುದು ಬೇಡ. ಹೆಚ್ಚು ಕೆಲಸ ಮಾಡಿದರೆ ಹೆಚ್ಚು ಶತ್ರುಗಳು ಇರುತ್ತಾರೆ. ಹೆದರಿಕೊಂಡು ಕುಳಿತುಕೊಳ್ಳಲು ಆಗುತ್ತಾ? ಹೀಗಾಗಿ ಯೋಜನೆ ಮಾಡುತ್ತೇವೆ ಎಂದು ಪ್ರತಿಪಾದಿಸಿದರು

ನಿರಂತರ ಸುದ್ಧಿಗಳಿಗಾಗಿ ನಮ್ಮ ಚಾನಲ್ ಗೆ ಭೇಟಿ ನೀಡಿ subscribe ಮಾಡಿ  👉Youtube.com/c/janajagrutiTVNews

ಫೇಸ್ಬುಕ್ ನಲ್ಲಿ ಬೆಂಬಲಿಸಲು https://www.facebook.com/%E0%B2%9C%E0%B2%A8%E0%B2%9C%E0%B2%BE%E0%B2%97%E0%B3%83%E0%B2%A4%E0%B2%BF-%E0%B2%B8%E0%B3%81%E0%B2%A6%E0%B3%8D%E0%B2%A7%E0%B2%BF%E0%B2%B5%E0%B2%BE%E0%B2%B9%E0%B2%BF%E0%B2%A8%E0%B2%BF-474624809612940/

ಪೊಲೀಸ್ ಪೇದೆಯ ಮೇಲೆ ಇಬ್ಬರು ಯುವಕರಿಂದ ಬ್ಲೇಡ್ ನಿಂದ ದಾಳಿ!

   ಜನಜಾಗೃತಿ ಸುದ್ಧಿವಾಹಿನಿ

     02 jan 2019


ಶಿವಮೊಗ್ಗ: ಗಾಂಜಾ ಮತ್ತಿನಲ್ಲಿ ಇದ್ದ ಇಬ್ಬರು ಯುವಕರು ಪೊಲೀಸ್ ಪೇದೆಯೊಬ್ಬರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ನಗರದ ಬಸ್ ನಿಲ್ದಾಣದಲ್ಲಿ ನಡೆದಿದೆ.

ಕುಂಸಿ ಠಾಣೆ ಪೊಲೀಸ್ ಪೇದೆ ಮಂಜುನಾಥ್ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಮಂಗಳವಾರ ರಾತ್ರಿ ಶಿವಮೊಗ್ಗ ಬಸ್ ನಿಲ್ದಾಣದಲ್ಲಿದ್ದಾಗ ಈ ಘಟನೆ ನಡೆದಿದೆ. ಇಬ್ಬರು ಯುವಕರು ಮಂಜುನಾಥ್ ಬಳಿ ಬಂದು ಹಣ ಕೇಳಿದ್ದಾರೆ ಹಣ ನೀಡುವುದಿಲ್ಲ ಎಂದಿದ್ದಕ್ಕೆ ಕೋಪಗೊಂಡ ಯುವಕರು ಕುತ್ತಿಗೆ, ಕೈ ಕಾಲಿಗೆ ಬ್ಲೇಡಿನಲ್ಲಿ ಕೊಯ್ದಿದ್ದಾರೆ.

ಸದ್ಯ ಮಂಜುನಾಥ್ ಅವರನ್ನು ನಗರದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆಟೋ ಚಾಲಕ ನದೀಂ ಹಾಗೂ ನಜೀರ್ ನನ್ನು ವಶಕ್ಕೆ ಪಡೆದಿದ್ದಾರೆ.

ನಮ್ಮ ಚಾನಲ್ ಗೆ ಭೇಟಿ ನೀಡಿ ಬೆಂಬಲಿಸಲು Subscribe ಮಾಡಿ 👉Youtube.com/c/janajagrutiTVNews

ಫೇಸ್ಬುಕ್ ನಲ್ಲಿ ಬೆಂಬಲಿಸಲು 👉https://www.facebook.com/%E0%B2%9C%E0%B2%A8%E0%B2%9C%E0%B2%BE%E0%B2%97%E0%B3%83%E0%B2%A4%E0%B2%BF-%E0%B2%B8%E0%B3%81%E0%B2%A6%E0%B3%8D%E0%B2%A7%E0%B2%BF%E0%B2%B5%E0%B2%BE%E0%B2%B9%E0%B2%BF%E0%B2%A8%E0%B2%BF-474624809612940/

ನಕಲಿ ಪರ್ಮಿಟ್ ಸೃಷ್ಟಿಸಿ ಅಕ್ರಮ ಮರಳುಗಾರಿಕೆ:ಇಬ್ಬರ ಬಂಧನ

      ಜನಜಾಗೃತಿ ಸುದ್ಧಿವಾಹಿನಿ


      02 jan 2019


ಬಂಟ್ವಾಳ: ನಕಲಿ ಪರ್ಮಿಟ್ ಸೃಷ್ಟಿಸಿ ಅಕ್ರಮವಾಗಿ ಮರಳು ಸಾಗಾಟ ಮಾಡುವ ಜಾಲವನ್ನು ಬಂಟ್ವಾಳ ಗ್ರಾಮಾಂತರ ಎಸ್ಐ ಪ್ರಸನ್ನ ಪತ್ತೆ ಹಚ್ಚಿ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಘಟನೆ ನಡೆದಿದೆ. ಟಿಪ್ಪರ್ ಲಾರಿ ಚಾಲಕ ಅಬೂಬಕ್ಕರ್ ಸಿದ್ದಿಕ್ ಮತ್ತು ಅಬ್ದುಲ್ ಖಾದರ್ ಬಂಧಿತ ಆರೋಪಿಗಳು.

ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಲಾರಿ ಮಾಲಕ ಸೇರಿದಂತೆ ಆಶ್ರಪ್, ಜಾಬೀರ್ ಈ ಪ್ರಕರಣದಲ್ಲಿ ಆರೋಪಿ ಗಳಾಗುವ ಸಾಧ್ಯತೆ ಗಳಿವೆ ಎನ್ನಲಾಗಿದೆ. ವಿಚಾರಣೆಯ ವೇಳೆ ಇನ್ನಷ್ಟು ಮಾಹಿತಿಗಳು ಲಭ್ಯವಾಗುವ ಸಾಧ್ಯತೆ ಗಳಿದ್ದು ಇನ್ನಷ್ಟು ಆರೋಪಿ ಗಳ ಬಂಧನವಾಗುವ ಸಾಧ್ಯತೆಗಳಿದೆ.

ಬಂಟ್ವಾಳ ಗ್ರಾಮಾಂತರ ಪೋಲೀಸರು ಫರಂಗಿಪೇಟೆ ಜಂಕ್ಸನ್ ನಲ್ಲಿ ವಾಹನ ತಪಾಸಣೆ ಮಾಡುವ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ.

ಇನ್ನು ಅಕ್ರಮವಾಗಿ ಮರಳು ಸಾಗಾಟ ಮಾಡುವ ದಂಧೆ ಹಲವು ಸಮಯಗಳಿಂದ ಇವರು ಮಾಡುತ್ತಿದ್ದಾರೆ ಎನ್ನಲಾಗಿದ್ದು , ಇದರ ಹಿಂದೆ ರಾಜಕೀಯ ವ್ಯಕ್ತಿಯೋರ್ವರ ಕೈವಾಡ ಇದೆ ಎನ್ನಲಾಗಿದೆ. ‌

ಈ ಬಗ್ಗೆ ಸೂಕ್ತ ತನಿಖೆ ನಡೆಸಿ ನಕಲಿ ದಾಖಲೆ ಪತ್ರಗಳನ್ನು ಮಾಡುವ ಜಾಗ ಮತ್ತು ಬಳಕೆ ಮಾಡುತ್ತಿದ್ದ ಸಾಮಾಗ್ರಿಗಳನ್ನು ಪೋಲೀಸರು ಇನ್ನಷ್ಟೇ ವಶಕ್ಕೆ ಪಡೆಯಬೇಕಾಗಿದೆ.

ನಮ್ಮ ಚಾನಲ್ ಗೆ ಭೇಟಿ ನೀಡಿ ಬೆಂಬಲಿಸಲು subscribe ಮಾಡಿ Youtube.com/c/janajagrutiTVNews

ಫೇಸ್ಬುಕ್ ನಲ್ಲಿ ಬೆಂಬಲಿಸಲು ಕ್ಲಿಕ್ ಮಾಡಿ https://www.facebook.com/%E0%B2%9C%E0%B2%A8%E0%B2%9C%E0%B2%BE%E0%B2%97%E0%B3%83%E0%B2%A4%E0%B2%BF-%E0%B2%B8%E0%B3%81%E0%B2%A6%E0%B3%8D%E0%B2%A7%E0%B2%BF%E0%B2%B5%E0%B2%BE%E0%B2%B9%E0%B2%BF%E0%B2%A8%E0%B2%BF-474624809612940/

ರಾಜಕೀಯ ಗುರುವನ್ನು ಭೇಟಿಯಾಗಿ ಆಶೀರ್ವಾದ ಪಡೆದ ಡಿಕೆಶಿ

      ಜನಜಾಗೃತಿ ಸುದ್ಧಿವಾಹಿನಿ


     01 jan 2019


ಬೆಂಗಳೂರು: ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಇಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಎಸ್.ಎಂ.ಕೃಷ್ಣ ಅವರಿಗೆ ಭೇಟಿ ಮಾಡಿ ಹೊಸ ವರ್ಷದ ಶುಭಾಶಯ ತಿಳಿಸಿದ್ದಾರೆ.


ಕಾಂಗ್ರೆಸ್‍ನ ಅತ್ಯುನ್ನತ ನಾಯಕರಲ್ಲೊಬ್ಬರಾಗಿದ್ದ ಎಸ್.ಎಂ.ಕೃಷ್ಣ ಅವರು ಕಾಂಗ್ರೆಸ್‍ನಲ್ಲಿನ ಬೆಳವಣಿಗೆಗಳಿಂದ ಬೇಸತ್ತು ಪಕ್ಷ ತೊರೆದು ಬಿಜೆಪಿ ಸೇರಿದರು. ಆನಂತರ ಕಾಂಗ್ರೆಸ್ ನಾಯಕರು ಎಸ್.ಎಂ.ಕೃಷ್ಣ ಅವರಿಂದ ಅಂತರ ಕಾಯ್ದುಕೊಂಡಿದ್ದರು.


ಒಂದು ಕಾಲಕ್ಕೆ ಡಿ.ಕೆ.ಶಿವಕುಮಾರ್ ಅವರಿಗೆ ಎಸ್.ಎಂ.ಕೃಷ್ಣ ಅವರು ರಾಜಕೀಯ ಗುರುವಾಗಿದ್ದರು. ಇಂದು ತಮ್ಮ ರಾಜಕೀಯ ಗುರು ಅವರನ್ನು ಡಿ.ಕೆ.ಶಿವಕುಮಾರ್ ಭೇಟಿ ಮಾಡಿ ಆಶೀರ್ವಾದ ಪಡೆದುಕೊಳ್ಳುವ ಮೂಲಕ ಕುತೂಹಲ ಕೆರಳಿಸಿದ್ದಾರೆ.


ಬೇಸಿಗೆ ಹಂಗಾಮಿ ಬೆಳೆಗೆ ನಾಳೆಯಿಂದ ನೀರು :ಬೆಂಗಳೂರು,ಜ.1-ಬೇಸಿಗೆ ಹಂಗಾಮಿನ ಬೆಳೆಗಳನ್ನು ಬೆಳೆಯಲು ಅನುಕೂಲವಾಗುವಂತೆ ಭದ್ರಾ ಜಲಾಶಯದಿಂದ ನಾಳೆಯಿಂದ ನೀರು ಹರಿಸಲು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸೂಚಿಸಿದ್ದಾರೆ. ಬೇಸಿಗೆ ಬೆಳೆಗಳನ್ನು ಬೆಳೆಯಲು ಹಾಗೂ ತೋಟಗಾರಿಕೆ ಬೆಳೆಗಳನ್ನು ಉಳಿಸಿಕೊಳ್ಳಲು ಅನುಕೂಲವಾಗುವಂತೆ ಲಕ್ಕವಳ್ಳಿಯ ಭದ್ರಾ ಅಣೆಕಟ್ಟಿನಿಂದ ಭದ್ರಾ ಬಲ ಮತ್ತು ಎಡ ದಂಡೆ ನಾಲೆಗಳಿಗೆ ನೀರು ಹರಿಸಲು ಸೂಚಿಸಿದ್ದಾರೆ.


ರೈತರ ಬೆಳೆಗಳಿಗೆ ನೀರು ಬಿಡುಗಡೆ ಮಾಡುವಂತೆ ಜಲಸಂಪನ್ಮೂಲ ಇಲಾಖಾ ಅಧಿಕಾರಿಗಳಿಗೆ ಸಚಿವರು ಸೂಚಿಸಿದ್ದು ಈ ಸಂಬಂಧ ಮಾಧ್ಯಮ ಹೇಳಿಕೆ ಬಿಡುಗಡೆಗೊಳಿಸಿದ್ದಾರೆ. ಯಾವುದೇ ಕಾರಣಕ್ಕೂ ರೈತರ ಬೆಳೆ ಹಾನಿಗೀಡಾಗದಂತೆ ಹಾಗೂ ರೈತರಿಗೆ ಸಮಸ್ಯೆಯಾಗದಂತೆ ಎಚ್ಚರ ವಹಿಸಬೇಕು.  ರೈತರ ಹಿತದೃಷ್ಠಿಯಿಂದ ನೀರು ಹರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು


ನಮ್ಮ ಚಾನಲ್ ಗೆ ಭೇಟಿ ನೀಡಿ subscribe ಮಾಡಿ Youtube.com/c/janajagrutiTVNews

ಫೇಸ್ಬುಕ್ ಸಲ್ಲಿ ಬೆಂಬಲಿಸಲು ಕ್ಲಿಕ್ ಮಾಡಿ https://www.facebook.com/%E0%B2%9C%E0%B2%A8%E0%B2%9C%E0%B2%BE%E0%B2%97%E0%B3%83%E0%B2%A4%E0%B2%BF-%E0%B2%B8%E0%B3%81%E0%B2%A6%E0%B3%8D%E0%B2%A7%E0%B2%BF%E0%B2%B5%E0%B2%BE%E0%B2%B9%E0%B2%BF%E0%B2%A8%E0%B2%BF-474624809612940/