Thursday, February 28, 2019

ನಾಳೆ ವಿಂಗ್​ ಕಮಾಂಡರ್​​ ಬಿಡುಗಡೆ: ಪಾಕ್​ ಪ್ರಧಾನಿ ಇಮ್ರಾನ್ ಖಾನ್ ಘೋಷಣೆ

ಜನಜಾಗೃತಿ ಸುದ್ಧಿವಾಹಿನಿ

ಇಸ್ಲಮಾಬಾದ್​: ವಿಂಗ್​ ಕಮಾಂಡರ್​​ ಅವರನ್ನು ಸ್ನೇಹ ಸಂಬಂಧದ ಮೇಲೆ ನಾಳೆ ಬಿಡುಗಡೆ ಮಾಡುವುದಾಗಿ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಹೇಳಿದ್ದಾರೆ. ಇಂದು ಪಾಕ್​ ಸಂಸತ್ತನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಇಮ್ರಾನ್ ಖಾನ್, ನಮ್ಮ ಸೆರೆಯಲ್ಲಿರುವ ಭಾರತದ ಪೈಲಟ್ ವಿಂಗ್ ಕಮಾಂಡರ್ ಅವರನ್ನು ಶಾಂತಿ ದ್ಯೋತಕವಾಗಿ ಬಿಡುಗಡೆ ಮಾಡಲಾಗುತ್ತೆ ಅಂತಾ ತಿಳಿಸಿದ್ದಾರೆ.

ನಿನ್ನೆ ಭಾರತದ ಗಡಿ ಪ್ರವೇಶಿಸಿದ್ದ ಪಾಕ್​​ನ ಜೆಟ್​ ವಿಮಾನವನ್ನು ಭಾರತದ ವಿಮಾನಗಳು ಹೊಡೆದುರುಳಿಸಿದ್ದವು. ಈ ವೇಳೆ ಪಾಕ್​​ ದಾಳಿಗೆ ಸಿಲುಕಿದ್ದ ಮಿಗ್ 21 ವಿಮಾನವು ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ಹೋಗಿ ಬಿದ್ದಿತ್ತು. ಈ ವೇಳೆ, ಅಲ್ಲಿನ ಸೇನೆ ಅವರನ್ನು ಬಂಧಿಸಿ, ಅವರ ವೀಡಿಯೋ ಕೂಡ ಮಾಡಿತ್ತು. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಜಿನೇವಾ ಒಪ್ಪಂದವನ್ನು ಉಲ್ಲಂಘಿಸಿದೆ ಅನ್ನೋ ಬಲವಾದ ಆರೋಪ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೇಳಿ ಬಂದಿತ್ತು. ಇನ್ನೊಂದೆಡೆ ಭಾರತ ಕೂಡ, ಪಾಕಿಸ್ತಾನದ ಯಾವುದೇ ತಂತ್ರಗಳಿಗೂ ಮಣಿಯದೇ ಜಿನೇವಾ ಒಪ್ಪಂದದಂತೆ ನಮ್ಮ ವಿಂಗ್ ಕಮಾಂಡರ್ ಅವರನ್ನು ಬಿಡುಗಡೆ ಮಾಡಬೇಕು ಅಂತಾ ಬಲವಾಗಿ ಆಗ್ರಹಿಸಿತ್ತು. ಈ ಹಿನ್ನೆಲೆಯಲ್ಲಿ, ಕೊನೆಗೂ ಒಂದೆಡೆ ಭಾರತದ ಬಿಗಿ ಕ್ರಮ, ಇನ್ನೊಂದೆಡೆ ಅಂತಾರಾಷ್ಟ್ರೀಯ ಒತ್ತಡಕ್ಕೆ ಕೊನೆಗೂ ಮಣಿದಿರುವ ಪಾಕಿಸ್ತಾನ ವಿಂಗ್ ಕಮಾಂಡರ್ ಅವರನ್ನು ಬಿಡುಗಡೆ ಮಾಡುವುದಾಗಿ ಇಂದು ಘೋಷಣೆ

ನಮ್ಮ ಸುದ್ಧಿ ವೀಕ್ಷಿಸಲು ಲಿಂಕ್ ಬಳಸಿ https://youtu.be/jWz-MKDOEW4

Wednesday, February 27, 2019

ಸಬ್‌ ಕಾ ಸಾಥ್‌-ಸಬ್‌ ಕಾ ವಿಕಾಸ್‌ ಎಂದು ಹೇಳುವ ನೈತಿಕತೆ ನನಗಿದೆ ಎಂದ ಸಿದ್ದರಾಮಯ್ಯ

ಜನಜಾಗೃತಿ ಸುದ್ಧಿವಾಹಿನಿ
ವಿಜಯಪುರ: ಪ್ರಧಾನಿ ನರೇಂದ್ರ ಮೋದಿ ಸಬ್‌ ಕಾ ಸಾಥ್‌- ಸಬ್‌ ಕಾ ವಿಕಾಸ್‌ ಎಂದು ಹೇಳಿದ್ದು ಮಾತ್ರ ಆದರೆ ವಿಕಾಸವಾದದ್ದು ಕೇವಲ ಕೈಗಾರಿಕೆ ಆದರೆ ನಾನು ಸಿಎಂ ಆಗಿದ್ದಾಗ ಎಲ್ಲಾ ವರ್ಗ ವಿಕಾಸವಾಗಿದೆ ಆದುದರಿಂದ ನನಗೆ ಸಬ್‌ ಕಾ ಸಾಥ್‌- ಸಬ್‌ ಕಾ ವಿಕಾಸ್‌ ಎನ್ನುವ ನೈತಿಕತೆ ಇದೆ ಎಂದು ಸಿದ್ಧರಾಮಯ್ಯ ಹೇಳಿದ್ದಾರೆ.

ವಿಜಯಪುರದ ದರಬಾರ ಹೈಸ್ಕೂಲ್‌ ಮೈದಾನದಲ್ಲಿ ಬುಧವಾರ ನಡೆದ ಕಾಂಗ್ರೆಸ್‌ ಪರಿವರ್ತನಾ ಯಾತ್ರೆಯಲ್ಲಿ ಪಾಲ್ಗೊಂಡ ಅವರು, ಮಹಾತ್ಮಾ ಗಾಂಧೀಜಿ - ಮೋದಿ ಗುಜರಾತ್‌ನವರು. ಗಾಂಧೀಜಿ ಅವರು ಸತ್ಯ, ಅಹಿಂಸೆಯ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟು ವಿಶ್ವ ನಾಯಕರಾದರು. ಪ್ರಧಾನಿ ಮೋದಿ ಅವರು ಮಹಾನ್‌ ಸುಳ್ಳುಗಾರನಾಗಿ ಬೆಳೆದಿರುವುದು ವಿಪರ್ಯಾಸ ಎಂದರು.
ಪ್ರಧಾನಿ ಸಬ್‌ ಕಾ ಸಾಥ್‌- ಸಬ್‌ ಕಾ ವಿಕಾಸ್‌ ಎಂದು ಹೇಳಿದ್ದೇ ಹೇಳಿದ್ದು.ಆದರೆ ಕೈಗಾರಿಕೋದ್ಯಮಿಗಳು ಮಾತ್ರ ವಿಕಾಸ ಆಗಿದ್ದಾರೆ, ಅಲ್ಪಸಂಖ್ಯಾತ ಹಿಂದುಳಿದವರು, ದಲಿತರು, ಮಹಿಳೆಯರು, ರೈತರ ಅಭಿವೃದ್ಧಿಗೆ ಮೋದಿ ಸರಕಾರ ಶ್ರಮಿಸಿಲ್ಲ ಎಂದು ಟೀಕಿಸಿದ ಸಿದ್ದರಾಮಯ್ಯ, ನಾನು ಸಿಎಂ ಆಗಿದ್ದಾಗ ಎಲ್ಲ ವರ್ಗದವರ ಏಳಿಗೆಗೆ ಶ್ರಮಿಸಿದ್ದೇನೆ. ಹೀಗಾಗಿ ಸಬ್‌ ಕಾ ಸಾಥ್‌-ಸಬ್‌ ಕಾ ವಿಕಾಸ್‌ ಎಂದು ಹೇಳಿಕೊಳ್ಳುವ ನೈತಿಕತೆ ನನಗಿದೆ ಎಂದರು.
ನಮ್ಮ ಸುದ್ಧಿ ನೋಡಲು ಲಿಂಕ್ ಬಳಸಿ https://youtu.be/jWz-MKDOEW4

Tuesday, February 26, 2019

ಸರ್ಜಿಕಲ್ ಸ್ಟ್ರೈಕ್: ಸುಳ್ಳಿನ ಸರಮಾಲೆ ಕಟ್ಟಿ ಕೊನೆಗೆ ಸತ್ಯ ಒಪ್ಪಿಕೊಂಡ ಪಾಕ್

ಜನಜಾಗೃತಿ ಸುದ್ಧಿವಾಹಿನಿ

ಇಸ್ಲಾಮಾಬಾದ್: ಭಾರತದ ವಾಯುಸೇನೆ ನಡೆಸಿದ ದಾಳಿಯನ್ನು ಒಪ್ಪಿಕೊಳ್ಳಲಾಗದ ಪಾಕಿಸ್ತಾನದ ಮುಖಂಡರು, ಒಬ್ಬರ ಮೇಲೊಬ್ಬರು ಸುಳ್ಳಿನ ಸರಮಾಲೆಯನ್ನೇ ಕಟ್ಟುತ್ತಿದ್ದಾರೆ.


ವಿಚಿತ್ರವೆಂದರೆ, ಸುಳ್ಳು ಹೇಳಿದರೂ ನಂಬುವಂತಿರಬೇಕು ಎನ್ನುವ ಮಾತಿನಂತೆ ಅಲ್ಲಿನ ಜನತೆಯನ್ನು ನಂಬಿಸಲು ಮುಂದಾಗಿರುವ, ಪಾಕ್ ಪ್ರಧಾನಿ ಒಂದು ಸುಳ್ಳು, ವಿದೇಶಾಂಗ ಸಚಿವರು ಇನ್ನೊಂದು, ಪಾಕಿಸ್ತಾನದ ಆರ್ಮಿ ಮುಖ್ಯಸ್ಥ ಮಗದೊಂದು ಸುಳ್ಳನ್ನು ಹೇಳುತ್ತಿದ್ದಾರೆ.


ದಾಳಿಯೇ ನಡೆದಿಲ್ಲ, ನಮ್ಮವರು ಭಾರತದ ಯುದ್ದವಿಮಾನವನ್ನು ಹಿಮ್ಮೆಟ್ಟಿಸಿದ್ದರು ಎಂದು ಹೇಳುತ್ತಿದ್ದ ಪಾಕಿಸ್ತಾನದ ರಕ್ಷಣಾ ಸಚಿವ ಪರ್ವೇಜ್ ಖಟ್ಟಕ್, ಮಾಧ್ಯಮದವರ ಪ್ರಶ್ನೆಗೆ ಆಯತಪ್ಪಿ ಸತ್ಯ ಒಪ್ಪಿಕೊಂಡು ಬೆಪ್ಪುತಕಡಿಯಂತಾಗಿದ್ದಾರೆ.


ಭಾರತ ಸುಳ್ಳು ಹೇಳುತ್ತಿದೆ, ಅಂತರಾಷ್ಟ್ರೀಯ ಮಾಧ್ಯಮಗಳನ್ನು ಭಾರತ ದಾಳಿ ನಡೆಸಿದೆ ಎನ್ನುವ ಸ್ಥಳಕ್ಕೆ ಹೆಲಿಕಾಪ್ಟರ್ ನಲ್ಲಿ ಕರೆದುಕೊಂಡು ಹೋಗುತ್ತೇವೆ ಎಂದು ಪಾಕ್ ಸಚಿವರು ಹೇಳಿದ್ದರು.


ಭಾರತ ಸರಕಾರ ಅಥವಾ ಸೇನೆ 

ಪಾಕಿಸ್ತಾನ ದಾಳಿ ನಡೆದ ಬಗ್ಗೆ ಟ್ವಿಟ್ಟರ್ ಮೂಲಕ ಹೇಳಿತ್ತು


ಭಾರತ ಸರಕಾರ ಅಥವಾ ಸೇನೆ, ಸರ್ಜಿಕಲ್ ಸ್ಟ್ರೈಕ್ ನಡೆದ ಬಗ್ಗೆ ಹೇಳುವ ಮುನ್ನವೇ, ಪಾಕಿಸ್ತಾನ ದಾಳಿ ನಡೆದ ಬಗ್ಗೆ ಟ್ವಿಟ್ಟರ್ ಮೂಲಕ ಹೇಳಿತ್ತು. ಭಾರತ ಗಡಿರೇಖೆಯನ್ನು ದಾಟಿ ಬಂದಿತ್ತು, ಆದರೆ ನಮ್ಮ ವಾಯುಸೇನೆ ಅವರನ್ನು ಸಮರ್ಥವಾಗಿ ಹಿಮ್ಮೆಟ್ಟಿಸಿತ್ತು ಎಂದು ಮೇಜರ್ ಜನರಲ್ ಆಸಿಫ್ ಗಫೂರ್ ಹೇಳಿದ್ದರು.


ಪಾಕಿಸ್ತಾನದ ಆರ್ಮಿ ಮುಖ್ಯಸ್ಥ 

ಬಾಯಿತಪ್ಪಿ ಸತ್ಯ ಹೇಳಿ, ಬೆಪ್ಪುತಕಡಿಯಂತಾದ ಸಚಿವ


ಪಾಕಿಸ್ತಾನದ ಆರ್ಮಿ ಮುಖ್ಯಸ್ಥರ ಮಾತನ್ನೇ ಪುನರುಚ್ಚಿಸುತ್ತಾ ಬರುತ್ತಿದ್ದ ಪಾಕಿಸ್ತಾನದ ರಕ್ಷಣಾ ಸಚಿವ ಪರ್ವೇಜ್ ಖಟ್ಟಕ್ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಬಾಯಿತಪ್ಪಿ ಸತ್ಯ ಹೇಳಿ, ಬೆಪ್ಪುತಕಡಿಯಂತಾಗಿದ್ದಾರೆ. ಕತ್ತಲು ಇದ್ದಿದ್ದರಿಂದ ನಮ್ಮವರಿಗೆ ಗೊತ್ತಾಗಲಿಲ್ಲ ಎಂದು ಹೇಳಿದ್ದಾರೆ.


ಬೆಳ್ಳಂಬೆಳಗ್ಗೆ, ನಸುಕಿನ ಕತ್ತಲಲ್ಲಿ 

ನಾಲ್ಕೈದು ಕಿಲೋಮೀಟರ್ ಒಳಗೆ ಬಂದ, ಭಾರತದ ವಾಯುಪಡೆ


ಬೆಳ್ಳಂಬೆಳಗ್ಗೆ, ನಸುಕಿನ ಕತ್ತಲಲ್ಲಿ, ನಮ್ಮ ಗಡಿರೇಖೆಯೊಳಗೆ ಸುಮಾರು ನಾಲ್ಕೈದು ಕಿಲೋಮೀಟರ್ ಒಳಗೆ ಬಂದ, ಭಾರತದ ವಾಯುಪಡೆ ಬಾಂಬ್ ದಾಳಿ ನಡೆಸಿತ್ತು. ನಮ್ಮ ಮಿಲಿಟರಿಯವರೂ ತಯಾರಾಗಿದ್ದರು, ಆದರೆ ಕತ್ತಲು ಇದ್ದಿದ್ದರಿಂದ ಅವರು ಸುಮ್ಮನಾದರು ಎಂದು ರಕ್ಷಣಾ ಸಚಿವರು ಹೇಳಿದ್ದಾರೆ.


ಭಾರತ ದಾಳಿ 

ಯಾವ ಮಟ್ಟಿಗೆ ನಷ್ಟವಾಗಿದೆ ಎನ್ನುವುದರ ಬಗ್ಗೆ ಗೊತ್ತಾಗಲಿಲ್ಲ


ಭಾರತ ದಾಳಿ ನಡೆಸಿದ ವೇಳೆ ಕತ್ತಲು ಕವಿದಿದ್ದರಿಂದ ಯಾವ ಮಟ್ಟಿಗೆ ನಷ್ಟವಾಗಿದೆ ಎನ್ನುವುದರ ಬಗ್ಗೆ ಗೊತ್ತಾಗಲಿಲ್ಲ. ಈಗ ನಮಗೆ ಸರಿಯಾದ ಮಾಹಿತಿ ಸಿಕ್ಕಿದೆ, ಸರಿಯಾದ ದಾರಿಯಲ್ಲಿ ಸಾಗಲು ಡೈರೆಕ್ಸನ್ ಕೂಡಾ ಸಿಕ್ಕಿದೆ ಎಂದು ಪಾಕ್ ರಕ್ಷಣಾ ಸಚಿವ ಪರ್ವೇಜ್ ಖಟ್ಟಕ್ ಸತ್ಯವನ್ನು ಒಪ್ಪಿಕೊಂಡಿದ್ದಾರೆ.

ಪಾಕಿಸ್ತಾನ ಸರ್ಜಿಕಲ್ ಸ್ಟ್ರೈಕ್ 2 ಬಾಲಿವುಡ್‌ನ ಅಡ್ಡಪರಿಣಾಮ ಪಾಕಿಸ್ತಾನದಲ್ಲಿ ಭಾರತ ಇಂದು ಮಾಡಿರುವ ಸರ್ಜಿಕಲ್ ಸ್ಟ್ರೈಕ್ 2 ಅನ್ನು ಬಾಲಿವುಡ್‌ನ ಅಡ್ಡಪರಿಣಾಮ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಲೇವಡಿ ಮಾಡಿದ್ದರು. ಪಾಕಿಸ್ತಾನದ ಮೇಲೆ ಭಾರತ ದಾಳಿ ನಡೆಸಿರುವುದನ್ನೇ ಸುಳ್ಳು ಎಂದು ಇಮ್ರಾನ್ ಹೇಳಿದ್ದರು.

ನಮ್ಮ ಸುದ್ಧಿ ವೀಕ್ಷಿಸಲು ಲಿಂಕ್ ಬಳಸಿ https://youtu.be/jWz-MKDOEW4

Saturday, February 23, 2019

ಪುಲ್ವಾಮಾ ದಾಳಿ ಹಿಂದೆ ಪಾಕ್​ : ಜೈಷ್​​-ಎ-ಮೊಹ್ಮದ್​ ಅಲ್ಲ, ಅದು ಜೈಶ್​​-ಎ-ಶೈತಾನ್​ ಎಂದ ಓವೈಸಿ

ಜನಜಾಗೃತಿ ಸುದ್ಧಿವಾಹಿನಿ

ಮುಂಬೈ ​​: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಭಾರತೀಯ ಸಿಆರ್​​ಪಿಎಫ್​​ ಯೋಧರ ಮೇಲೆ ನಡೆದ ಉಗ್ರರ ದಾಳಿಯಲ್ಲಿ 40ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದು, ಘಟನೆಗೆ ಇಡೀ ವಿಶ್ವವೇ ಆಕ್ರೋಶ ವ್ಯಕ್ತಪಡಿಸುತ್ತಿದೆ.

ಇದೀಗ ಎಐಎಂಐಎಂ ಮುಖಂಡ ಅಸಾದುದ್ದೀನ್​ ಓವೈಸಿ ಕೂಡ ದಾಳಿ ವಿಚಾರವಾಗಿ ಪಾಕ್​ ಹಾಗೂ ಜೈಷ್​​-ಎ-ಮೊಹ್ಮದ್​ ಉಗ್ರ ಸಂಘಟನೆ ವಿರುದ್ಧ ಹರಿಹಾಯ್ದಿದ್ದಾರೆ. ದಾಳಿ ಹಿಂದೆ ಪಾಕಿಸ್ತಾನದ ನೇರ ಕೈವಾಡವಿದ್ದು, ಅಲ್ಲಿನ ಸರ್ಕಾರ, ಪಾಕ್​ ಆರ್ಮಿ ಹಾಗೂ ಐಎಸ್​ಐ ಸಂಘಟನೆ ಪ್ರಕಾರ ಈ ದಾಳಿಯ ಯೋಜನೆ ನಡೆದಿದೆ. ದಾಳಿ ನಡೆಸಿರುವ ಜೈಷ್​​-ಎ-ಮೊಹ್ಮದ್​ ಅದು ಜೈಷ್​-ಎ-ಶೈತಾನ್​ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಓರ್ವ ಸೈನಿಕನಾದ ಮೊಹ್ಮದ್​ ಮನುಷ್ಯರನ್ನ ಕೊಲ್ಲಲು ಸಾಧ್ಯವಿಲ್ಲ. ಆತ ಮಾನವೀಯತೆಯ ಕರುಣಾಜನಕ. ಆದರೆ ನೀವೂ ಜೈಷ್​-ಎ-ಶೈತಾನ್​​ ಆಗಿದ್ದೀರಿ.ನೀನು ದೆವ್ವದ ಅನುಯಾಯಿ. ಪಾಕಿಸ್ತಾನದ ನರಿ ಬುದ್ಧಿ ಇದೇ ಮೊದಲೇನಲ್ಲ.ಈ ಹಿಂದೆ ಪಠಾಣ್​​ಕೋಟ್​​,ಉರಿ ಇದೀಗ ಪುಲ್ವಾಮಾ. ಪ್ರಧಾನಿ ಮೋದಿ ನಿಮ್ಮ ಮುಗ್ಧತೆಯ ಮುಖವಾಡ ತೆಗೆದು ಹೊರಹಾಕಿ ಎಂದು ವಾಗ್ದಾಳಿ ನಡೆಸಿದ್ದರು.
ನಮ್ಮ ಸುದ್ಧಿ ವೀಕ್ಷಿಸಲು ಲಿಂಕ್ ಬಳಸಿ https://youtu.be/5ATw2o6XY1c

Wednesday, February 20, 2019

ಆನಂದ್ ಸಿಂಗ್ ಹಲ್ಲೆ ಪ್ರಕರಣ: ತಲೆಮರೆಸಿಕೊಂಡಿದ್ದ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಬಂಧನ

ಜನಜಾಗೃತಿ ಸುದ್ಧಿವಾಹಿನಿ

ಬೆಂಗಳೂರು : ಶಾಸಕ ಆನಂದ್ ಸಿಂಗ್ ಹಲ್ಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಕಂಪ್ಲಿ ಶಾಸಕ ಜೆ.ಎನ್ .ಗಣೇಶ್ ಬಂಧನವಾಗಿದೆ.

ರಾಮನಗರ ಪೊಲೀಸರು ಶಾಸಕ ಕಂಪ್ಲಿ ಗಣೇಶ್​​ರನ್ನು ಹೊರರಾಜ್ಯದಲ್ಲಿ ಅರೆಸ್ಟ್ ಮಾಡಿರುವುದು ಪಕ್ಕಾ. ಆದ್ರೆ, ಯಾವ ಸ್ಥಳದಲ್ಲಿ ಬಂಧಿಸಿದ್ದಾರೆ ಎನ್ನುವುದು ಖಚಿತ ಮಾಹಿತಿ ಇಲ್ಲ. ಇಂದು ರಾತ್ರಿ ವೇಳೆಗೆ ಗಣೇಶ್​​ರನ್ನು ರಾಮನಗರಕ್ಕೆ ಕರೆತರುವ ಸಾಧ್ಯತೆ ಇದೆ. ಬಳಿಕ, ಕೋರ್ಟ್​​ ಮುಂದೆ ಹಾಜರುಪಡಿಸುತ್ತಾರೆ ಎಂದು ತಿಳಿದುಬಂದಿದೆ.


ಜ. 20 ರಂದು ಈಗಲ್ಟನ್ ರೆಸಾರ್ಟ್‌ನಲ್ಲಿ ಕಂಪ್ಲಿ ಶಾಸಕ ಗಣೇಶ್ ಅವರು ವಿಜಯನಗರ (ಹೊಸಪೇಟೆ)  ಶಾಸಕ ಆನಂದ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದರು.

ಘಟನೆಯ ನಂತ್ರ, ಗಣೇಶ್​ ತಲೆ ಮರೆಸಿಕೊಂಡಿದ್ದರು. ಈ ನಡುವೆ, ನಿನ್ನೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್​​​ನಲ್ಲಿ ತಮ್ಮ ವಕೀಲರ ಮೂಲಕ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಾಪಸ್​ ತೆಗೆದುಕೊಂಡಿದ್ದರು.

ನಮ್ಮ ಸುದ್ಧಿ ವೀಕ್ಷಿಸಲು ಲಿಂಕ್ ಬಳಸಿ https://youtu.be/VW7cgrd6_ms

Tuesday, February 19, 2019

ಅಪಘಾತಕ್ಕಿಡಾದವರನ್ನ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಸಚಿವ ರಾಜಶೇಖರ ಪಾಟೀಲ್

ಜನಜಾಗೃತಿ ಸುದ್ಧಿವಾಹಿನಿ


ಹುಮನಾಬಾದ್ ಹಳ್ಳಿಖೇಡ.(ಬಿ) :

ನಿನ್ನೆ ರಾತ್ರಿ ರಾಜ್ಯ ಹೆದ್ದಾರಿ ಮೇಲೆ ಅಪಘಾತಕ್ಕಿಡಾಗಿ ನೆರೆಳುತ್ತಿರುವ ಇಬ್ಬರು ಗಾಯಾಳುಗಳಿಗೆ ಗಣಿ ಮತ್ತು ಭೂ ವಿಜ್ಞಾನ ಮುಜುರಾಯೀ ಸಚಿವ ಮತ್ತು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ರಾಜಶೇಖರ.ಬಿ ಪಾಟೀಲ ತಮ್ಮ ವಾಹನ ವನ್ನು ನಿಲ್ಲಿಸಿ ಘಟನೆ ಯನ್ನು ಕುರಿತು ವಿಚಾರಿಸಿ ತಕ್ಷಣವೇ ಅಪಘಾತಕ್ಕಿಡಾದ ವ್ಯಕ್ತಿ ಗಳನ್ನ ಆಸ್ಪತ್ರೆಗೆ ರವಾನಿಸಿ ಮಾನವೀಯತೆ ಮೆರೆದಿದ್ದಾರೆ.
ನಮ್ಮ ಸುದ್ಧಿ ಗಳನ್ನ ವೀಕ್ಷಿಸಲು ಲಿಂಕ್ ಬಳಸಿ https://youtu.be/Yaz2RMFjMZE

🍷ತರಗತಿಯಲ್ಲಿಯೇ ಮದ್ಯ ಸೇವಿಸಿದ ಹೈಸ್ಕೂಲ್ ವಿದ್ಯಾರ್ಥಿನಿಯರು!

ಜನಜಾಗೃತಿ ಸುದ್ಧಿವಾಹಿನಿ
ತಂಪು ಪಾನೀಯದ ಬಾಟಲಿಯಲ್ಲಿ ಲಿಕ್ಕರ್‌ ಬೆರಿಸಿ ತಂದಿದ್ದ ವಿದ್ಯಾರ್ಥಿನಿಯರು, ಶಿಕ್ಷಕರು ಪಾಠ ಮಾಡುತ್ತಿರುವ ನಡುವೆಯೇ ಗುಟುಕರಿಸಿದ್ದರು.
ಹೈದಾರಾಬಾದ್‌: ಒಂಬತ್ತನೇ ತರಗತಿ ವಿದ್ಯಾರ್ಥಿನಿಯರಿಬ್ಬರು ತರಗತಿ ನಡೆಯುತ್ತಿರುವಾಗಲೇ ಮದ್ಯ ಸೇವನೆ ಮಾಡಿ ಸಿಕ್ಕಿಬಿದ್ದ ಆಘಾತಕಾರಿ ಘಟನೆ ಆಂಧ್ರಪ್ರದೇಶದ ಸರಕಾರಿ ಶಾಲೆಯೊಂದರಲ್ಲಿ ಮಂಗಳವಾರ ನಡೆದಿದೆ.

ತಂಪು ಪಾನೀಯದ ಬಾಟಲಿಯಲ್ಲಿ ಲಿಕ್ಕರ್‌ ಬೆರಿಸಿ ತಂದಿದ್ದ ವಿದ್ಯಾರ್ಥಿನಿಯರು, ಶಿಕ್ಷಕರು ಪಾಠ ಮಾಡುತ್ತಿರುವ ನಡುವೆಯೇ ಗುಟುಕರಿಸಿದ್ದರು. ನಿಧಾನವಾಗಿ ಆ ವಿದ್ಯಾರ್ಥಿನಿಯರು ಕುಳಿತಲ್ಲಿಯೇ ಜೋಲಿ ಹೊಡೆದು, ಯದ್ವಾತದ್ವ ಮಾತಾಡಲು ಶುರು ಮಾಡಿದಾಗ ಅನುಮಾನಗೊಂಡ ಶಿಕ್ಷಕರು, ಪಾನೀಯ ಬಾಟಲನ್ನು ಕಿತ್ತುಕೊಂಡು ಮೂಸಿದಾಗ ಮದ್ಯದ ವಾಸನೆ ರಾಚಿತ್ತು. ತಕ್ಷಣ ಆ ವಿದ್ಯಾರ್ಥಿನಿಯರಿಬ್ಬರನ್ನು ಶಾಲೆಯಿಂದ ಅಮಾನತುಗೊಳಿಸಲಾಯಿತು. ಬಳಿಕ ಈ ಕುರಿತು ವಿವರ ನೀಡಿದ ಮುಖ್ಯೋಪಾಧ್ಯಾಯ ಬಿಟ್ಟು ಸುರೇಶ್‌ ಕುಮಾರ್‌, ''ಇದು ವಿದ್ಯಾರ್ಥಿನಿಯರ ಮದ್ಯಪಾನದ ಮೊದಲ ಪ್ರಕರಣವೇನು ಅಲ್ಲ. ಈ ಹಿಂದೆಯೂ ಇಂತಹ ಘಟನೆಗಳು ನಡೆದಿವೆ,'' ಎಂದಿದ್ದಾರೆ.

''ಈಗ ಸಿಕ್ಕಿ ಬಿದ್ದಿರುವ ವಿದ್ಯಾರ್ಥಿನಿಯರು ತಮ್ಮ ಕೆಟ್ಟ ಹವ್ಯಾಸಕ್ಕೆ ತಂದೆಯರನ್ನು ಹೊಣೆ ಮಾಡಿದ್ದಾರೆ. ನಿತ್ಯ ಕುಡಿದು ಮನೆಗೆ ಬರುತ್ತಿದ್ದ ತಮ್ಮ ತಂದೆ, ಉಳಿಕೆ ಮದ್ಯದ ಬಾಟಲುಗಳನ್ನು ಮನೆಯಲ್ಲಿ ಇರಿಸುತ್ತಿದ್ದರು. ಯಾರೂ ಇಲ್ಲದಾಗ ಅದರ ರುಚಿ ನೋಡಿ, ಕೊನೆಗೆ ಅದು ಹವ್ಯಾಸವಾಗಿ ಬೆಳೆಯಿತೆಂದು ವಿವರಿಸಿದ್ದಾರೆ,'' ಎಂದು ಸುರೇಶ್‌ ಕುಮಾರ್‌ ತಿಳಿಸಿದ್ದಾರೆ.
ನಮ್ಮ ಸುದ್ಧಿ ನೋಡಲು ಲಿಂಕ್ ಬಳಸಿ https://youtu.be/Yaz2RMFjMZE

Monday, February 18, 2019

ಮಸಣವಾಯಿತು ಮದುವೆ ಮನೆ: ಪಾರ್ಟಿಗೆ ನುಗ್ಗಿದ ಲಾರಿ, 13 ಮಂದಿ ಸಾವು

ಜನಜಾಗೃತಿ ಸುದ್ಧಿವಾಹಿನಿ 
ರಾಜಸ್ಥಾನದ ಪ್ರತಾಪಘಡ ಜಿಲ್ಲೆಯ ಚೌಟರಿಯೊಂದರಲ್ಲಿ ಮದುವೆ ಮನೆಯ ಸಂತಸ ಎದ್ದು ಕಾಣುತ್ತಿತ್ತು. ಬೆಳಗ್ಗೆಯಷ್ಟೇ ವಿವಾಹ ಕಾರ್ಯಕ್ರಮ ಮುಗಿಸಿಕೊಂಡು ಅದ್ದೂರಿ ಪಾರ್ಟಿಯಲ್ಲಿ ತೊಡಗಿದ್ದವರು, ಹಾಡು ಹೇಳುತ್ತಾ ಕುಣಿದು ಕುಪ್ಪಳಿಸುತ್ತಿದ್ದರು. ಆಗ, ಲಾರಿಯೊಂದು ಜವರಾಯನ ರೀತಿ ಎದುರಾಗಿತ್ತು. ನೋಡ ನೋಡುತ್ತಿದ್ದಂತೆ ಲಾರಿ ಪಾರ್ಟಿ ಹಾಲ್​ಗೆ ನುಗ್ಗಿತ್ತು.

ಕ್ಷಣಮಾತ್ರದಲ್ಲಿ ಮದುವೆ ಮನೆ, ಸ್ಮಶಾನವಾಗಿ ಬದಲಾಗಿತ್ತು.
ಹೀಗೊಂದು ಘಟನೆ ಚೋಟಿ ಸದ್ರಿ ಗ್ರಾಮದಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 113 ಪಕ್ಕದ ಚೌಟರಿಯಲ್ಲಿ ಆರತಕ್ಷತೆ ಏರ್ಪಡಿಸಲಾಗಿತ್ತು. ಈ ವೇಳೆ, ನಿಯಂತ್ರಣ ಕಳೆದುಕೊಂಡ ಲಾರಿ ಜನರು ನೆರೆದಿದ್ದ ಕಡೆ ನುಗ್ಗಿದೆ. ಲಾರಿಯ ಅಡಿಗೆ ಸಿಲುಕಿ 9 ಜನರು ಸ್ಥಳದಲ್ಲೇ ಮೃತಪಟ್ಟರೆ, ನಾಲ್ವರು ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದಿದ್ದಾರೆ.
ಇಬ್ಬರು ಸ್ಥಳದಲ್ಲೇ ಸಾವು
18 ಜನರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆಯಲ್ಲಿ ಏರಿಕೆ ಆಗುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಅಪಘಾತಕ್ಕೆ ಲಾರಿಯ ಬ್ರೇಕ್​ ಫೇಲ್​ ಆಗಿದ್ದು ಕಾರಣ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಈ ಬಗ್ಗೆ ಸರಿಯಾದ ತನಿಖೆ ನಡೆಸುವುದಾಗಿ ಪೊಲೀಸರು ಹೇಳಿದ್ದಾರೆ. ಚಾಲಕ ಪಾರ್ಟಿ ಲಾರಿ ಹಾಲ್​ಗೆ ನುಗ್ಗದಂತೆ ನೋಡಲು ಬಹಳ ಪ್ರಯತ್ನ ಪಟ್ಟಿದ್ದ. ಆದರೆ, ಲಾರಿ ಸಂಪೂರ್ಣ ನಿಯಂತ್ರಣ ಕಳೆದುಕೊಂಡಿದ್ದರಿಂದ ಆತನಿಗೆ ಬೆರೆ ಮಾರ್ಗವೇ ಇರಲಿಲ್ಲ. ಸದ್ಯ ಆತನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಮ್ಮ ಸುದ್ಧಿ ಯನ್ನು ವೀಕ್ಷಿಸಲು ಲಿಂಕ್ ಬಳಸಿ https://youtu.be/bXAmq2N6U40

ಬಿಜೆಪಿಯ ಕೀರ್ತಿ ಅಜಾದ್ ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆ!🤚🏻

ಜನಜಾಗೃತಿ ಸುದ್ಧಿವಾಹಿನಿ

ನವದೆಹಲಿ:ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಮ್ಮುಖದಲ್ಲಿ ಬಿಜೆಪಿಯ ಉಚ್ಚಾಟಿತ ಲೋಕಸಭಾ ಸದಸ್ಯ ಕೀರ್ತಿ ಅಜಾದ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.ಮಾಜಿ ಕ್ರಿಕೆಟ್ ಆಟಗಾರ ಹಾಗೂ ರಾಜಕಾರಣಿಯಾಗಿರುವ ಕೀರ್ತಿ ಅಜಾದ್,1983 ರಲ್ಲಿ ಟೀಂ ಇಂಡಿಯಾ ವಿಶ್ವ ಕಪ್ ಗೆದ್ದಾಗ ಕೀರ್ತಿ ಅಜಾದ್ ಕೂಡಾ ಟೀಂ ಇಂಡಿಯಾ ಆಟಗಾರರಾಗಿದ್ದರು.


ಬಿಹಾರದಲ್ಲಿನ ದರ್ಬಾಂಗಾ ಲೋಕಸಭಾ ಕ್ಷೇತ್ರದಿಂದ ಮೂರು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದು ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ ನಲ್ಲಿ ಭ್ರಷ್ಟಾಚಾರ, ಅಕ್ರಮ ಕುರಿತಂತೆ ಕೇಂದ್ರ ಸಚಿವ ಅರುಣ್ ಜೇಟ್ಲಿ ವಿರುದ್ಧ ಆರೋಪ ಮಾಡಿದ್ದರಿಂದ ಅವರನ್ನು ಡಿಸೆಂಬರ್ 3, 2015ರಿಂದ ಬಿಜೆಪಿಯಿಂದ ಉಚ್ಚಾಟಿಸಲಾಗಿತ್ತು.


ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ತಮ್ಮನ್ನು ಸಂಪ್ರದಾಯಿಕ ಮಿಥಿಲಾ ಶೈಲಿಯಲ್ಲಿ ಸನ್ಮಾನಿಸಲಾಯಿತು ಎಂದು ಕೀರ್ತಿ ಅಜಾದ್ ಟ್ವೀಟ್ ಮಾಡಿದ್ದಾರೆ.2014ರಲ್ಲಿ ಅವರು ಬಿಜೆಪಿ ಟಿಕೆಟ್ ಪಡೆದು ಚುನಾವಣೆಗೆ ಸ್ಪರ್ಧಿಸಿದ್ದು ಡಿಸೆಂಬರ್ 3, 2015ರಿಂದ ಬಿಜೆಪಿಯಿಂದ ಉಚ್ಚಾಟಿಸಲಾಗಿತ್ತು ಫೆಬ್ರವರಿ 15 ರಂದೇ ಅಜಾದ್ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ, ಪುಲ್ವಾಮಾ ಉಗ್ರರ ದಾಳಿ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು.ನಾಳೆ ಅಜಾದ್ ದೆಹಲಿಯ ಎಐಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಲಿದ್ದಾರೆ.

ನಮ್ಮ ಸುದ್ಧಿ ವೀಕ್ಷಿಸಲು ಲಿಂಕ್ ಬಳಸಿ https://youtu.be/y5NrJ6S-iYo

ವಿಶ್ವಕಪ್ ಬಳಿಕ ಏಕದಿನ ಕ್ರಿಕೆಟ್‌ನಿಂದ ಕ್ರಿಸ್ ಗೇಲ್ ನಿವೃತ್ತಿ🏏

ಜನಜಾಗೃತಿ ಸುದ್ಧಿವಾಹಿನಿ

ಮುಂಬೈ,ಫೆ.18:ವೆಸ್ಟ್‌ಇಂಡೀಸ್‌ನ ಸ್ಟಾರ್ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಮೇ ತಿಂಗಳಲ್ಲಿ ಇಂಗ್ಲೆಂಡ್‌ನಲ್ಲಿ ಆರಂಭವಾಗಲಿರುವ ವಿಶ್ವಕಪ್‌ನ ಬಳಿಕ ಏಕದಿನ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಲು ನಿರ್ಧರಿಸಿದ್ದಾರೆ.

ಬಾರ್ಬಡೊಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಗೆ ರವಿವಾರ ಅಭ್ಯಾಸ ಆರಂಭಿಸುವ ಮೊದಲು 39ರ ಹರೆಯದ ಎಡಗೈ ದಾಂಡಿಗ ಗೇಲ್ ಟ್ವಿಟರ್‌ನ ಮೂಲಕ ತನ್ನ ನಿವೃತ್ತಿಯ ಘೋಷಣೆ ಮಾಡಿದರು. ಗೇಲ್ ಇಂಗ್ಲೆಂಡ್ ವಿರುದ್ಧದ ಮೊದಲೆರಡು ಏಕದಿನ ಪಂದ್ಯಗಳಲ್ಲಿ ಆಡಲಿದ್ದಾರೆ.


ಜಮೈಕಾ ದಾಂಡಿಗ ಗೇಲ್ ಈತನಕ 284 ಏಕದಿನ ಪಂದ್ಯಗಳನ್ನು ಆಡಿದ್ದು, 37.12ರ ಸರಾಸರಿಯಲ್ಲಿ 23 ಶತಕ ಹಾಗೂ 49 ಅರ್ಧಶತಕಗಳ ಸಹಿತ ಒಟ್ಟು 9,727 ರನ್ ಕಲೆ ಹಾಕಿದ್ದಾರೆ.

 2015ರ ವಿಶ್ವಕಪ್‌ನಲ್ಲಿ ಝಿಂಬಾಬ್ವೆ ವಿರುದ್ಧ ಗರಿಷ್ಠ ವೈಯಕ್ತಿಕ ಸ್ಕೋರ್ 215 ಗಳಿಸಿದ್ದರು. ಇದು ವಿಶ್ವಕಪ್‌ನಲ್ಲಿ ದಾಖಲಾದ ಮೊದಲ ದ್ವಿಶತಕವಾಗಿದೆ. ಆ ಪಂದ್ಯದಲ್ಲಿ ಗೇಲ್ ಮರ್ಲಾನ್ ಸ್ಯಾಮುಯೆಲ್ಸ್‌ರೊಂದಿಗೆ 372 ರನ್ ಜೊತೆಯಾಟ ನಡೆಸಿದ್ದರು. ಇದು ವಿಶ್ವಕಪ್ ಇತಿಹಾಸದಲ್ಲಿ ಗರಿಷ್ಠ ರನ್ ಜೊತೆಯಾಟವಾಗಿದೆ.


ಗೇಲ್ ವಿಶ್ವ ಕ್ರಿಕೆಟ್‌ನಲ್ಲಿ ಟೆಸ್ಟ್‌ನಲ್ಲಿ ತ್ರಿಶತಕ, ಏಕದಿನದಲ್ಲಿ ದ್ವಿಶತಕ ಹಾಗೂ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಸಿಡಿಸಿರುವ ಏಕೈಕ ಆಟಗಾರ. ‘ಯುನಿವರ್ಸ್ ಬಾಸ್’ ಎಂದೇ ಖ್ಯಾತಿ ಪಡೆದಿರುವ ಗೇಲ್ ಈ ತನಕ 103 ಟೆಸ್ಟ್ ಹಾಗೂ 56 ಟ್ವೆಂಟಿ-20 ಪಂದ್ಯಗಳನ್ನು ಆಡಿದ್ದಾರೆ.

ಗೇಲ್ 2006ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದು, ಆ ಟೂರ್ನಿಯಲ್ಲಿ 3 ಶತಕ ಹಾಗೂ 8 ಅರ್ಧಶತಕಗಳ ಸಹಿತ ಒಟ್ಟು 474 ರನ್ ಗಳಿಸಿದ್ದರು. ಒಟ್ಟು 8 ವಿಕೆಟ್‌ಗಳನ್ನು ಉರುಳಿಸಿದ್ದರು.

ನಮ್ಮ ಸುದ್ಧಿ ವೀಕ್ಷಿಸಲು ಲಿಂಕ್ ಬಳಸಿ https://youtu.be/y5NrJ6S-iYo

Sunday, February 17, 2019

ಪುಲ್ವಾಮ ದಾಳಿಯ ಮಾಸ್ಟರ್ ಮೈಂಡ್ ನನ್ನು ಹತ್ಯೆಗೈದ ಭಾರತೀಯ ಸೇನೆ ?

ಜನಜಾಗೃತಿ ಸುದ್ಧಿವಾಹಿನಿ

ಶ್ರೀನಗರ, ಫೆ.18: ಕಳೆದ ಗುರುವಾರ ಪುಲ್ವಾಮದಲ್ಲಿ ನಡೆದ ಉಗ್ರನ ಆತ್ಮಾಹುತಿ ದಾಳಿಯ ಮಾಸ್ಟರ್‌ಮೈಂಡ್ ಎನ್ನಲಾದ ಜೈಶ್ ಉಗ್ರ ಸಂಘಟನೆಗೆ ಸೇರಿದ ರಶೀದ್ ಘಾಜಿ ಹಾಗೂ ಕಮ್ರಾನ್‌ನನ್ನು ಭಾರತೀಯ ಸೇನೆ ಸೋಮವಾರ ಬೆಳಗ್ಗೆ ನಡೆಸಿದ ದೀರ್ಘ ಕಾಲದ ಕಾರ್ಯಾಚರಣೆಯಲ್ಲಿ ಹತ್ಯೆಗೈದಿದೆ ಎನ್ನಲಾಗಿದೆ.


ಈ ಮೂಲಕ ಗುರುವಾರ ಭಾರತದ 40 ಯೋಧರ ಬಲಿ ಪಡೆದಿದ್ದ ದಾಳಿಯ ಸಂಚುಕೋರರನ್ನು ಸೇನೆ ಹೊಡೆದುರುಳಿಸಲು ಯಶಸ್ವಿಯಾಗಿದೆ ಎನ್ನಲಾಗಿದೆ. 9 ಗಂಟೆಗಳ ಕಾಲ ಜಮ್ಮು-ಕಾಶ್ಮೀರದ ಪುಲ್ವಾಮ ಜಿಲ್ಲೆಯ ಪಿಂಗ್ಲಾನ ಪ್ರದೇಶದಲ್ಲಿ ಉಗ್ರರ ವಿರುದ್ಧ ನಡೆದಿರುವ ಎನ್‌ಕೌಂಟರ್‌ನಲ್ಲಿ ಮೇಜರ್ ಸಹಿತ ಐವರು ಯೋಧರು ಹುತಾತ್ಮರಾಗಿದ್ದಾರೆ.

ಅಡಗಿ ಕುಳಿತ್ತಿರುವ ಇನ್ನೂ ಕೆಲವು ಉಗ್ರರ ಪತ್ತೆಗಾಗಿ ಸೇನೆಯ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗುತ್ತಿದೆ.

ನಮ್ಮ ಸುದ್ಧಿ ವೀಕ್ಷಿಸಲು ಲಿಂಕ್ ಬಳಸಿ https://youtu.be/y5NrJ6S-iYo

Saturday, February 16, 2019

ನಮ್ಮ ಸೈನಿಕರ ಕೊಡುಗೆಗಳಿಗೆ ಸರಕಾರವು ಯಾವತ್ತೂ ಬೆಲೆ ಕೊಟ್ಟಿಲ್ಲ ಹುತಾತ್ಮ ಯೋಧನ ಪತ್ನಿ


ನಮಗೆ ಮೋದಿ ಮತ್ತು ಅವರ ಸರಕಾರದಲ್ಲಿ ನಂಬಿಕೆಯಿಲ್ಲ: ಹುತಾತ್ಮ ಯೋಧನ ಪತ್ನಿ

ಹೊಸದಿಲ್ಲಿ, ಫೆ.16: ಪುಲ್ವಾಮದಲ್ಲಿ ಹುತಾತ್ಮರಾದ ಯೋಧರ ಬಲಿದಾನ ವ್ಯರ್ಥವಾಗುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಆದರೆ ನಾವು ಅವರನ್ನೂ ಅವರ ಸರಕಾರವನ್ನು ನಂಬುವುದಿಲ್ಲ” ಎಂದು ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧ ಪ್ರದೀಪ್ ಸಿಂಗ್ ರ ಪತ್ನಿ ಹೇಳಿದ್ದಾರೆ.


ಪ್ರದೀಪ್ ಸಿಂಗ್ ರ ಪತ್ನಿ ನೀರಜ್ ‘ಇಂಡಿಯಾ ಟುಡೆ’ ಜೊತೆ ಮಾತನಾಡಿದ್ದು, “ಕಾಶ್ಮೀರದಲ್ಲಿ ಈ ಹಿಂದೆಯೂ ಉಗ್ರ ದಾಳಿಗಳು ನಡೆದಿತ್ತು. ಆದರೆ ಭದ್ರತಾ ಪಡೆಗಳಿಗೆ ಸಂಪೂರ್ಣ ಅಧಿಕಾರ ಏಕೆ ನೀಡಲಿಲ್ಲ. ಕಾಶ್ಮೀರದಲ್ಲಿರುವ ಕಲ್ಲುತೂರಾಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಮ್ಮ ಸೈನಿಕರಿಗೆ ಅವಕಾಶ ನೀಡಬೇಕು. ನಮಗೆ ಮೋದಿ ಮತ್ತು ಅವರ ಸರಕಾರದ ಮೇಲೆ ನಂಬಿಕೆ ಇಲ್ಲ” ಎಂದು ಹೇಳಿದರು.


“ಈ ಘಟನೆಯ ನಂತರ ಸೇನೆಯು ಉಗ್ರರ ವಿರುದ್ಧ ಕ್ರಮ ಕೈಗೊಂಡರೂ ನನ್ನ ಪತಿ ಹಿಂದಿರುಗಿ ಬರುವುದಿಲ್ಲ. 40  ದಿನಗಳ ರಜೆಯಲ್ಲಿ ಬಂದಿದ್ದ ಅವರು ಫೆಬ್ರವರಿ 11ರಂದು ಕಾಶ್ಮೀರಕ್ಕೆ ತೆರಳಿದ್ದರು” ಎಂದವರು ಹೇಳಿದರು.


ಹುತಾತ್ಮ ಯೋಧ ಪ್ರದೀಪ್ ರ ತಂದೆ ಅಮರ್ ಸಿಂಗ್ ಮಾತನಾಡಿ, “ನಮ್ಮ ಸೈನಿಕರ ಕೊಡುಗೆಗಳಿಗೆ ಸರಕಾರವು ಯಾವತ್ತೂ ಬೆಲೆ ಕೊಟ್ಟಿಲ್ಲ. ಮೂರು ದಿನಗಳಲ್ಲೇ ಜನರು ನನ್ನ ಪುತ್ರನ ಕೊಡುಗೆಯನ್ನು ಮರೆಯುತ್ತಾರೆ. ಸರಕಾರವು ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಹೊಗಳುತ್ತಲೇ ಇದ್ದರೂ ಉಗ್ರ ಚಟುವಟಿಕೆಗಳು ನಡೆಯುತ್ತಲೇ ಇದೆ” ಎಂದು ಹೇಳಿದರು.

ನಮ್ಮ ಸುದ್ಧಿ ವೀಕ್ಷಿಸಲು ಲಿಂಕ್ ಬಳಸಿ https://youtu.be/47WLrf7Pu10

ಪುತ್ರಿಯ ಮದುವೆ ಔತಣ ರದ್ದು ಮಾಡಿ ಹುತಾತ್ಮ ಸೈನಿಕರ ಕುಟುಂಬಕ್ಕೆ 11 ಲಕ್ಷ ರೂ. ನೀಡಿದ ವ್ಯಕ್ತಿ

ಜನಜಾಗೃತಿ ಸುದ್ಧಿವಾಹಿನಿ 

   〰〰〰〰〰〰〰〰〰

ಸೂರತ್: ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸಿಆರ್‍ ಪಿಎಫ್ ಸಿಬ್ಬಂದಿಗೆ ದೇಶದ ವಿವಿಧೆಡೆಗಳಿಂದ ನೆರವಿನ ಮಹಾಪೂರ ಹರಿದುಬರುತ್ತಿದೆ. ಸೂರತ್ ಉದ್ಯಮಿಯೊಬ್ಬರು ತಮ್ಮ ಮಗಳ ಅದ್ದೂರಿ ವಿವಾಹಕ್ಕೆ ಕಡಿವಾಣ ಹಾಕಿ 11 ಲಕ್ಷ ರೂಪಾಯಿಗಳನ್ನು ಹುತಾತ್ಮರ ಪರಿಹಾರಕ್ಕೆ ಮತ್ತು 5 ಲಕ್ಷ ರೂಪಾಯಿಗಳನ್ನು ಭದ್ರತಾ ಏಜೆನ್ಸಿಗಳಿಗೆ ನೀಡಿದ್ದಾರೆ.


ದೇವಶಿ ಮನೇಕ್ ಎಂಬ ವಜ್ರೋದ್ಯಮಿ ತಮ್ಮ ಮಗಳು ಅಮಿ ವಿವಾಹದ ಸಂದರ್ಭದಲ್ಲಿ ನಡೆಯಬೇಕಿದ್ದ ಔತಣವನ್ನು ರದ್ದು ಮಾಡಿ, ಈ ಹಣವನ್ನು ಸಂತ್ರಸ್ತ ಕುಟುಂಬಗಳಿಗೆ ಹಣಕಾಸು ನೆರವು ಒದಗಿಸಲು ದೇಣಿಗೆ ನೀಡಿದರು.ಮನೇಕ್ ಅವರ ಪುತ್ರಿ ಅಮಿ ವಿವಾಹವು ಶುಕ್ರವಾರ ನಡೆಯಿತು. ಈ ವಿವಾಹದ ಔತಣ ಏರ್ಪಡಿಸುವ ಬದಲು ಈ ಹಣವನ್ನು ಉದ್ಯಮಿ ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಿದರು.


ದೇಶಾದ್ಯಂತ ಹಲವು ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಜನ ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಯೋಧರ ಕುಟುಂಬಗಳ ಬೆಂಬಲಕ್ಕೆ ನಿಂತಿದ್ದಾರೆ. ಭಾರತ ರಾಷ್ಟ್ರೀಯ ಕಾಂಗ್ರೆಸ್, ಜಿ20 ದೇಶಗಳ ರಾಯಭಾರಿಗಳ ಗೌರವಾರ್ಥ ಏರ್ಪಡಿಸಿದ್ದ ಔತಣವನ್ನು ರದ್ದುಪಡಿಸಿತ್ತು.

ನಮ್ಮ ಸುದ್ಧಿ ವೀಕ್ಷಿಸಲು ಲಿಂಕ್ ಬಳಸಿ https://youtu.be/47WLrf7Pu10

Friday, February 15, 2019

✉ಅವಶ್ಯವಿದ್ದರೆ ನಮ್ಮ ರಕ್ತ ಹರಿಸಲು ಸಿದ್ಧ... ಪ್ರಧಾನಿ ಮೋದಿಗೆ ಸಿದ್ದಾಪುರದ ವಿದ್ಯಾರ್ಥಿ ಮಹಮದ್ ಶಕೀಬ್ ಪತ್ರ

ಜನಜಾಗೃತಿ ಸುದ್ಧಿವಾಹಿನಿ

   〰〰〰〰〰〰〰〰〰

ಕಾರವಾರ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರು ನಡೆಸಿದ ಭೀಕರ ದಾಳಿಗೆ ದೇಶದ ಯೋಧರು ಹುತಾತ್ಮರಾಗಿದ್ದಾರೆ. ಇಂತಹ ಹೇಯ ಕೃತ್ಯ ನಡೆಸಿದ ಉಗ್ರರಿಗೆ ತಕ್ಕ ಪಾಠ ಕಲಿಸುವಂತೆ ವಿದ್ಯಾರ್ಥಿಯೋರ್ವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾನೆ. 

 ಮೂಲತಃ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಮಹಮದ್ ಶಕೀಬ್ ಸಾಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗ ಅಂತಿಮ ವರ್ಷದಲ್ಲಿ ಓದುತ್ತಿದ್ದಾನೆ. ಫೆ. 14ರಂದು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರು ನಡೆಸಿದ ದಾಳಿ ಬಗ್ಗೆ ತಿಳಿದಿದ್ದೇವೆ. 


ದೇಶದ 44ಕ್ಕೂ ಹೆಚ್ಚು ಯೋಧರು ತಮ್ಮ ಅಮೂಲ್ಯ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇಂತಹ ದುಷ್ಕೃತ್ಯವೆಸಗಿದ ಪಾಕಿಸ್ತಾನಿ ಉಗ್ರರಿಗೆ ತಕ್ಕ ಪಾಠ ಕಲಿಸಬೇಕು. ನಾನು ನಿಮಗೆ ಈ ಬಗ್ಗೆ ಕೈ ಮುಗಿದು ಬೇಡಿಕೊಳ್ಳುತ್ತೇನೆ. ಯೋಧರು ಮಾಡಿದ ತ್ಯಾಗ ವ್ಯರ್ಥವಾಗದಂತೆ ನೋಡಿಕೊಳ್ಳಿ. ಅವರಿಗೆ ಪಾಠ ಕಲಿಸಲು ನಾವು ಯಾವುದೇ ತ್ಯಾಗಕ್ಕೂ ಬದ್ಧರಿದ್ದೇವೆ. ಅವಶ್ಯವಿದ್ದರೆ ರಕ್ತವನ್ನು ಹರಿಸಲು ಸಿದ್ಧರಿದ್ದೇವೆ ಎಂದು ಬರೆದು ಮೇಲ್ ಮತ್ತು ಪೋಸ್ಟ್ ಮೂಲಕ ಪ್ರಧಾನಿ ಕಚೇರಿಗೆ ರವಾನಿಸಿದ್ದಾನೆ.

ನಮ್ಮ ಸುದ್ಧಿ ವೀಕ್ಷಿಸಲು ಲಿಂಕ್ ಬಳಸಿ https://youtu.be/47WLrf7Pu10


ವ್ಯಾಟ್ಸ್​ಆ್ಯಪ್​ನಲ್ಲಿ ಹೊಸ ಆಯ್ಕೆ: ಇನ್ಮುಂದೆ ನಿಮ್ಮ ಒಪ್ಪಿಗೆ ಇಲ್ಲದೆ ಗ್ರೂಪ್​ಗೆ ಆ್ಯಡ್ ಮಾಡುವಂತಿಲ್ಲ!

ಜನಜಾಗೃತಿ ಸುದ್ಧಿವಾಹಿನಿ


ನೀವು ವ್ಯಾಟ್ಸ್​ಆ್ಯಪ್ ಬಳಸುತ್ತಿದ್ದರೆ, ನಿಮಗೊಂದು ಗುಡ್​ ನ್ಯೂಸ್​ ಇದೆ. ನಿಮ್ಮ ಅನುಮತಿ ಇಲ್ಲದೆ ವ್ಯಾಟ್ಸ್​ಆ್ಯಪ್​ ಗ್ರೂಪ್​ಗಳಿಗೆ ಸೇರಿಸುವ ಆಯ್ಕೆಗೆ ಶೀಘ್ರದಲ್ಲೇ ಕಡಿವಾಣ ಬೀಳಲಿದೆ. ಸಾಮಾನ್ಯವಾಗಿ ನಿಮ್ಮ ನಂಬರ್ ಇದ್ದವರು ಯಾವುದೇ ವ್ಯಾಟ್ಸ್​ಆ್ಯಪ್​ ಗ್ರೂಪ್​ಗೂ ನಿಮ್ಮನ್ನು ಸೇರಿಸಬಹುದಿತ್ತು. ಇಲ್ಲಿ ನಿಮ್ಮ ಒಪ್ಪಿಗೆ ಪಡೆಯಬೇಕಾಗಿರಲಿಲ್ಲ. ಆದರೀಗ ವ್ಯಾಟ್ಸ್​ಆ್ಯಪ್​ ಪರಿಚಯಿಸಲಿರುವ ಹೊಸ ಅಪ್​ಡೇಟ್​ನಲ್ಲಿ ನಿಮ್ಮ ನಂಬರ್​ ಅನ್ನು ಗ್ರೂಪ್​ಗೆ ಸೇರಿಸಬೇಕಿದ್ದರೆ ನಿಮ್ಮ ಒಪ್ಪಿಗೆ ಇರಬೇಕಾಗುತ್ತದೆ. 


ಇದಕ್ಕಾಗಿ 'ಗ್ರೂಪ್​ ಇನ್​ವಿಟೇಷನ್' ಎಂಬ ಆಯ್ಕೆಯನ್ನು ಶೀಘ್ರದಲ್ಲೇ ವಾಟ್ಸ್​ಆ್ಯಪ್​ ಒದಗಿಸಲಿದ್ದು, ಈ ಅಪ್ಶನ್ ಬಳಸಿ ಇನ್ನು ಮುಂದೆ ಬಳಕೆದಾರರು ತಮ್ಮ ಇಚ್ಚೆಗೆ ಅನುಸಾರ ಗ್ರೂಪ್​ಗಳಿಗೆ ಸೇರಬಹುದಾಗಿದೆ. ವಾಟ್ಸ್​ಆ್ಯಪ್​ ಬೇಟಾ ಇನ್​ಫೋ ಮಾಹಿತಿ ಪ್ರಕಾರ, ಈಗಾಗಲೇ ಹೊಸ ಫೀಚರ್​ ಅನ್ನು ಐಒಎಸ್​ ಬೇಟಾ ಬಳಕೆದಾರರಿಗೆ ನೀಡಲಾಗಿದೆ. ಶೀಘ್ರದಲ್ಲೇ ಹೊಸ ಅಪ್​ಡೇಟ್​ ಆ್ಯಂಡ್ರಾಯ್ಡ್​ ಬಳಕೆದಾರಿಗೂ ಲಭ್ಯವಾಗಲಿದೆ. ಈ ನೂತನ ಫೀಚರ್​ ಅನ್ನು ಅಭಿವೃದ್ಧಿ ಪಡಿಸಲಾಗುತ್ತಿದ್ದು, ಹೀಗಾಗಿ ಮೊದಲ ಹಂತದಲ್ಲಿ ಎಲ್ಲಾ ಬಳಕೆದಾರಿರಿಗೆ ಈ ಅಪ್​ಡೇಟ್​ ಆಯ್ಕೆ ಲಭ್ಯವಾಗುವುದಿಲ್ಲ ಎಂದು ಕೂಡ ವಾಟ್ಸ್​ಆ್ಯಪ್​ ಬೇಟಾ ಇನ್ಫೋ ತಿಳಿಸಿದೆ. 


ಹೊಸ ಆಯ್ಕೆ ಹೇಗೆ?

 

 ವ್ಯಾಟ್ಸ್​ಆ್ಯಪ್​ನಲ್ಲಿ ನೀಡಲಾಗುವ ಹೊಸ ಆಯ್ಕೆಯನ್ನು ಸೆಟ್ಟಿಂಗ್ಸ್​ನಲ್ಲಿ ಪಡೆಯಬಹುದಾಗಿದೆ. setting > account > privacy settings > last seen, profile photo, about, status and groups ಆಯ್ಕೆ ಕಾಣಿಸಲಿದೆ. ಇಲ್ಲಿ ನೀವು ಗ್ರೂಪ್​ ಆಯ್ಕೆಯನ್ನು ಕ್ಲಿಕ್ ಮಾಡಿದರೆ Everyone, My contact and Nobody ಎಂಬ ಆಯ್ಕೆಗಳು ಲಭ್ಯವಾಗಲಿದೆ. ಇದರಲ್ಲಿ ನಿಮಗೆ ಬೇಕಾದ ಆಯ್ಕೆಯನ್ನು ಆರಿಸಿಕೊಳ್ಳಬಹುದು.

ನಮ್ಮ ಸುದ್ಧಿ ವೀಕ್ಷಿಸಲು ಲಿಂಕ್ ಬಳಸಿ https://youtu.be/sPi9H6mM2hE

ನಮ್ಮನ್ನು ಅಸ್ಥಿರಗೊಳಿಸಲು ಸಾಧ್ಯವಿಲ್ಲ: ಪಾಕಿಸ್ತಾನಕ್ಕೆ ಎಚ್ಚರಿಕೆ ರವಾನಿಸಿದ ಪ್ರಧಾನಿ

ಜನಜಾಗೃತಿ ಸುದ್ಧಿವಾಹಿನಿ

ಯೋಧರನ್ನು ಹತ್ಯೆ ಮಾಡಿ ತಪ್ಪು ಮಾಡಿದ್ದೀರಿ


ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಸಿಆರ್ ಪಿಎಫ್ ಯೋಧರ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ತೀವ್ರವಾಗಿ ಖಂಡಿಸಿ, ಭಾರತವನ್ನು ಅಸ್ಥಿರಗೊಳಿಸಬಹುದು ಎಂದು ನೆರೆಯ ದೇಶ ಭಾವಿಸಿದರೆ ಅದನ್ನು ಮರೆತು ಬಿಡಲಿ ಅದು ಸಾಧ್ಯವಿಲ್ಲ ಎಂದು  ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ.ಯೋಧರ ಮೇಲೆ ದಾಳಿ ನಡೆಸಿ ಉಗ್ರರು ಭಾರೀ ದೊಡ್ಡ ತಪ್ಪು ಮಾಡಿದ್ದಾರೆ, ಅದಕ್ಕೆ ತಕ್ಕ ಬೆಲೆಯನ್ನು ಅವರು ತೆರಬೇಕಾಗುತ್ತದೆ ಇಂತಹ ಕೃತ್ಯಗಳಿಂದ ಭಾರತವನ್ನು ಅಸ್ಥಿರಗೊಳಿಸಬಹುದು ಎಂದು ಭಾವಿಸಿದ್ದರೆ ಅದು ಸಾಧ್ಯವಿಲ್ಲ ಎಂದಿದ್ದಾರೆ.


ದೆಹಲಿಯಿಂದ ವಾರಣಾಸಿಗೆ ಸಂಚರಿಸುವ ಹೊಸ ಸೆಮಿ ಹೈ ಸ್ಪೀಡ್ ರೈಲು ವಂದೇ ಭಾರತ ಎಕ್ಸ್ ಪ್ರೆಸ್ ಗೆ ಹಸಿರು ನಿಶಾನೆ ತೋರಿಸಿ ಮಾತನಾಡಿದ ಮೋದಿಯವರು ರೈಲಿಗೆ ಚಾಲನೆ ನೀಡುವುದಕ್ಕೆ ಮುನ್ನ ನೆರೆದಿದ್ದ ಗಣ್ಯರು ನಿನ್ನೆ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಎರಡು ನಿಮಿಷಗಳ ಕಾಲ ಮೌನಾಚರಣೆ ಸಲ್ಲಿಸಿದರು.ಇದೊಂದು ಭಾವನಾತ್ಮಕ ಮತ್ತು ಸೂಕ್ಷ್ಮ ಸಮಯ. ಆಡಳಿತದಲ್ಲಿರಲಿ ಅಥವಾ ವಿರೋಧ ಪಕ್ಷದಲ್ಲಿರಲಿ ಈ ಸಂದರ್ಭದಲ್ಲಿ ನಾವು ರಾಜಕೀಯದಿಂದ ದೂರವುಳಿಯಬೇಕು. ದೇಶದ ಎಲ್ಲರೂ ಒಂದಾಗಬೇಕು ಎಂದು ಕರೆ ನೀಡಿದರು.

ನಮ್ಮ ಸುದ್ಧಿ ವೀಕ್ಷಿಸಲು ಲಿಂಕ್ ಬಳಸಿ https://youtu.be/sPi9H6mM2hE 


Thursday, February 14, 2019

ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸಿಆರ್‌ಪಿಎಫ್‌ ಯೋಧರ ಹೆಸರುಗಳು

ಜನಜಾಗೃತಿ ಸುದ್ಧಿವಾಹಿನಿ

    14 Feb 2019


ಜಮ್ಮು ಕಾಶ್ಮೀರ, :  ಜಮ್ಮು ಕಾಶ್ಮೀರದ ಪುಲ್ವಾಮಾ ದಲ್ಲಿ ಉಗ್ರರು ಸಿಆರ್‌ಫಿಎಫ್‌ ಯೋಧರ ಮೇಲೆ ನಡೆಸಿದ ದಾಳಿಯಲ್ಲಿ ಹುತಾತ್ಮರಾದ ಯೋಧರ ಸಂಖ್ಯೆ 40ಕ್ಕೆ ಏರಿದೆ.

ದಾಳಿಗೆ ಸಂಬಂಧಿಸಿದಂತೆ ಈಗಾಗಲೇ ಎನ್‌ಐಎ ಸಭೆ ನಡೆಸಿದ್ದು, ಅದೇ ಸಂಸ್ಥೆಯು ಘಟನೆಯ ಬಗ್ಗೆ ತನಿಖೆ ಕೈಗೊಳ್ಳಲಿದೆ. ಮೃತಪಟ್ಟಿರುವ ಅಷ್ಟೂ ಜನ ಯೋಧರ ಹೆಸರು ಈಗಾಗಲೇ ಬಹಿರಂಗಗೊಳಿಸಲಾಗಿದೆ.

ಒಬ್ಬ ಕಮ್ಯಾಂಡರ್, ಒಬ್ಬ ವಾಹನ ಚಾಲಕ, ನಾಲ್ವರು ಎಸ್ಕಾರ್ಟ್‌ ಸಿಬ್ಬಂದಿ ಸೇರಿ ಒಟ್ಟು 42 ಮಂದಿ ಯೋಧರು ಮೃತಪಟ್ಟಿದ್ದಾರೆ. ಯೋಧರ ಹೆಸರುಗಳು ಇಂತಿವೆ.


1 ಜೈಮಲ್ ಸಿಂಗ್ (ಡ್ರೈವರ್)

2 ನಸೀರ್ ಅಹ್ಮದ್ (ಕಮಾಂಡರ್)

3 ಸುಖವೀಂದರ್ ಸಿಂಗ್ (ಎಸ್ಕಾರ್ಟ್‌)

4 ರೋಹಿತಾಶ್ ಲಂಬಾ (ಎಸ್ಕಾರ್ಟ್‌)

5 ತಿಲಕ್ ರಾಜ್ (ಎಸ್ಕಾರ್ಟ್‌)

6 ಭಗೀರತ ಸಿಂಗ್

7 ಭಿರೇಂದ್ರ ಸಿಂಗ್

8 ಅವ್ದೇಶ್ ಕುಮಾರ್ ಯಾದವ್

9 ನಿತಿನ್ ಸಿಂಗ್ ರಾಥೋರ್

10 ರತನ್ ಕುಮಾರ್ ಠಾಕೂರ್

11 ಸುರೇಂದ್ರ ಯಾದವ್

12 ಸಂಜಯ್ ಕುಮಾರ್ ಸಿಂಗ್

13 ರಾಮವಾಕಿಲ್

14 ಧರ್ಮಚಂದ್ರ

15 ಬೆಲ್ಕಾರ್ ಟಾಕಾ

16 ಶ್ಯಾಂ ಬಾಬು

17 ಅಜಿತ್ ಕುಮಾರ್ ಆಜಾದ್

18 ಪ್ರದೀಪ್ ಸಿಂಗ್

19 ಸಂಜಯ್ ರಜಪೂತ್

20 ಕುಶಾಲ್ ಕುಮಾರ್ ರಾವತ್

21 ಜೀತ್ ರಾಮ್

22 ಅಮಿತ್ ಕುಮಾರ್

23 ಬಿಜಯ್ ಕುಮಾರ್ ಮೋಯಾ

24 ಕುಲ್ವಿಂದರ್ ಸಿಂಗ್

25 ವಿಜಯ್ ಸುರೇಂಗ್

26 ವಸಂತ್ ಕುಮಾರ್ ವಿವಿ

27 ಗುರು ಎಚ್

28 ಶುಭಂ ಅನಿರಂಗ್ ಜಿ

29 ಅಮರ್ ಕುಮಾರ್

30 ಅಜಯ್ ಕುಮಾರ್

31 ಮನೀಂದರ್ ಸಿಂಗ್

32 ರಮೇಶ್ ಯಾದವ್

33 ಪ್ರಶನ್ನ ಕುಮಾರ್ ಸಾಹು

34 ಹೇಮರಾಜ್ ಮೀನಾ

35 ಬಬ್ಲಾ ಶಂತ್ರಾ

36 ಅಶ್ವಿನ್ ಕುಮಾರ್ ಕೊಚ್ಚಿ

37 ಪ್ರದೀಪ್ ಕುಮಾರ್

38 ಸುಧೀರ್ ಕುಮಾರ್ ಬನ್ಸಲ್

39 ರವೀಂದ್ರ ಸಿಂಗ್

40 ಎಂ ಬಾಶುಮತರಾಯ್

41 ಮಹೇಶ್ ಕುಮಾರ್

42 ಎನ್‌ಎಲ್ ಗುರ್ಜರ್‌

Wednesday, February 13, 2019

ಬಿಸಿಯೂಟ ಸೇವಿಸಿ 17 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

ಜನಜಾಗೃತಿ ಸುದ್ಧಿವಾಹಿನಿ

 Feb 14 / 2019

ಚಿಕ್ಕಮಗಳೂರು: ಶಾಲೆಯಲ್ಲಿ ಮಕ್ಕಳಿಗೆ ನೀಡಿದ್ದ ಬಿಸಿಯೂಟ ಸೇವಿಸಿ, ಹಾಲು ಕುಡಿದ 17 ಮಕ್ಕಳು ಅಸ್ವಸ್ಥಗೊಂಡು ಆಸ್ಪತ್ರೆ ಸೇರಿರುವ ಘಟನೆ ತಾಲೂಕಿನ ಶಿರವಾಸೆಯಲ್ಲಿ ನಡೆದಿದೆ.

ಶಿರವಾಸೆ ಗ್ರಾಮದಲ್ಲಿರುವ ವಿವೇಕಾನಂದ ಶಾಲೆಯಲ್ಲಿ ಮಧ್ಯಾಹ್ನ ಊಟದ ಬಳಿಕ ಮಕ್ಕಳು ಊಟ ಮಾಡಿ ಹಾಲು ಕುಡಿಯುತ್ತಿದ್ದಂತೆ ತಲೆಸುತ್ತು, ವಾಂತಿ ಹಾಗೂ ಹೊಟ್ಟೆನೋವಿನಿಂದ ಬಳಲಿದ್ದಾರೆ. ಕೂಡಲೇ ಎಚ್ಚೆತ್ತ ಶಿಕ್ಷಕರು ಮಕ್ಕಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಬಳಿಕ ಅಲ್ಲಿಂದ ಎಲ್ಲ ಮಕ್ಕಳನ್ನು ಚಿಕ್ಕಮಗಳೂರಿನ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾ ಪಂಚಾಯತ್ ಸದಸ್ಯರು ಹಾಗೂ ತಹಶೀಲ್ದಾರ್ ಆಸ್ಪತ್ರೆಗೆ ಭೇಟಿ ನೀಡಿ, ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ.ಮಕ್ಕಳು ತಿಂದಿದ್ದ ಪುಳಿಯೊಗರೆ, ಹಾಲು ಮತ್ತು ನೀರನ್ನು ಹೆಚ್ಚಿನ ಪರೀಕ್ಷೆಗೆಂದು ಲ್ಯಾಬ್ ಗೆ ಕಳುಹಿಸಲಾಗಿದೆ.
ನಮ್ಮ ಸುದ್ಧಿ ಗಳನ್ನ ವೀಕ್ಷಿಸಲು ಲಿಂಕ್ ಬಳಸಿ https://youtu.be/EkNJBR144Q8

ಟಿಪ್ಪು ಸುಲ್ತಾನ್ ಹಿಂದೂಗಳ‌ ಮಾನ ರಕ್ಷಕ’ ಆರೂವರೆ ದಶಕದ ಹಿಂದಿನ‌ ನಾಟಕದ ಕರಪತ್ರ ವೈರಲ್!

ಜನಜಾಗೃತಿ ಸುದ್ಧಿವಾಹಿನ
ಫೆ.12,2019: ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರ, ಅಪ್ಪಟ ಕನ್ನಡಿಗ ಟಿಪ್ಪು ಸುಲ್ತಾನ್ ಅವರ ದೇಶಪ್ರೇಮವನ್ನು ಕೊಂಡಾಡಿ ನಾಟಕ ಪ್ರದರ್ಶನದ ನಡೆಸಿದ ಹಳೆಯ ಕಾಲದ ಕರಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದೆ. ಹಾಲ ಸಿದ್ದೇಶ್ವರ ಸಂಗೀತ ನಾಟಕ ಮಂಡಳಿ ಹಲಗೇರಿ ತಂಡ 1951ರಲ್ಲಿ ತಮ್ಮ ನಾಟಕದ ಪ್ರದರ್ಶನಕ್ಕಾಗಿ ಹಂಚಿದ ಕರಪತ್ರದ ಎರಡು ಪುಟಗಳು ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದ್ದು, ಹಿರಿಯ ಸಾಹಿತಿ ಮುಹಮ್ಮದ್ ಅಲಿ ಕಮ್ಮರಾಡಿಯವರು ಆರೂವರೆ ದಶಕಗಳ ಹಿಂದಿನ‌ ಈ ಕರಪತ್ರದ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

  1. ಟಿಪ್ಪು ಸುಲ್ತಾನ್ ಹಿಂದೂಗಳ‌ ಮಾನ ರಕ್ಷಕ’ ಆರೂವರೆ ದಶಕದ ಹಿಂದಿನ‌ ನಾಟಕದ ಕರಪತ್ರ ವೈರಲ್!ಟಿಪ್ಪು ಸುಲ್ತಾನ್ ಹಿಂದೂಗಳ‌ ಮಾನ ರಕ್ಷಕ’ ಆರೂವರೆ ದಶಕದ ಹಿಂದಿನ‌ ನಾಟಕದ ಕರಪತ್ರ ವೈರಲ್!

ಕರ್ನಾಟಕ ಸ್ವಾತಂತ್ರ್ಯಕ್ಕಾಗಿ ಆತ್ಮರ್ಪಣೆ ಮಾಡಿದ, ಶ್ರೀರಂಗನ ಪರಮ ಭಕ್ತ, ಮಹಮ್ಮದೀಯ ಬಾಂಧವ, ಹಿಂದೂಗಳ ಮಾನ ರಕ್ಷಣೆಗಾಗಿ ತನ್ನ ಮಕ್ಕಳನ್ನು ಒತ್ತೆಯಿಟ್ಟ, ಇಂಗ್ಲೀಷರು ಈ ದೇಶದಿಂದ ಬಿಟ್ಟು ಹೋಗಬೇಕೆಂದು ಹೋರಾಡಿದ ವೀರ, ಶಸ್ತ್ರಾಸ್ತ್ರನಾದರೂ ಹೆಬ್ಬುಲಿಯನ್ನು ಬರೀಗೈಯಲ್ಲಿ ಸೀಳಿ ಒಗೆದ ಧೀರ, ಶೂರ, ಇವರ ನಾಟಕವನ್ನು ನೋಡಿ ಆನಂದಿಸಿರಿ ಎಂಬ ಬರಹವಿರುವ ಕರಪತ್ರ 1951ರ ಇಸವಿಯಲ್ಲಿ ಹಂಚಲ್ಪಟ್ಟಿತ್ತು. ಈ ನಾಟಕ ಮೂಡಬಿದಿರೆಯ ಮಹಾವೀರ ಥಿಯೇಟರ್‌‌ನಲ್ಲಿ‌ ನಡೆದಿದೆ ಎಂಬುದಕ್ಕೆ ಕರಪತ್ರ ಸಾಕ್ಷಿಯಾಗಿದೆ.
ಟಿಪ್ಪು ಸುಲ್ತಾನ್ ನಿಜವಾದ ದೇಶಭಕ್ತ ಮತ್ತು ಹಿಂದೂಗಳ ಪಾಲಿನ ಆಪ್ತಮಿತ್ರ ಎಂಬುದನ್ನು ಸಾರಿ ಸಾರಿ ಹೇಳುವಂತಿದೆ ಆ ಕರಪತ್ರ . ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹಿರಿಯ ಸಾಹಿತಿ ಮುಹಮ್ಮದ್ ಅಲಿ ಕಮ್ಮರಾಡಿ ಹಂಚಿಕೊಂಡ ಕರಪತ್ರ ಸಕ್ಕತ್ ಸೌಂಡು ಮಾಡುತ್ತಿದೆ. ಮತ್ತು ಟಿಪ್ಪು ಸುಲ್ತಾನ್‌ರನ್ನು ಕಡೆ ಗಣಿಸುವ ಜನರ ಮುಖಕ್ಕೆ ಹೊಡೆದು ಹೇಳುವಂತಿದೆ.
ನಮ್ಮ ಸುದ್ಧಿಗಳನ್ನ ವೀಕ್ಷಿಸಲು ಲಿಂಕ್ ಬಳಸಿ https://youtu.be/EkNJBR144Q8

Tuesday, February 12, 2019

⭕ಫೇಸ್‌ಬುಕ್‌ ಗೆಳತಿಯರ ಕಾಟ :ಜೇವರ್ಗಿ ವಿದ್ಯಾರ್ಥಿ ಸಾವು❗

ಜನಜಾಗೃತಿ ಸುದ್ಧಿವಾಹಿನಿ

ಬೆಂಗಳೂರು: ಫೇಸ್‌ಬುಕ್‌ ಗೆಳತಿಯರ ಕಾಟ ತಾಳಲಾರದೆ ಖಾಸಗಿ ಕಾಲೇಜಿನ ಎಂಜಿನಿಯರಿಂಗ್‌ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಾರತ್‌ಹಳ್ಳಿ ಸಮೀಪದ ಕರಿಯಮ್ಮನ ಅಗ್ರಹಾರದ ಪಿಜಿಯಲ್ಲಿ ನಡೆದಿದೆ.


ಕಲಬುರ್ಗಿ ಜಿಲ್ಲೆ ಜೇವರ್ಗಿ ತಾಲೂಕಿನ ಅತೀಶ್‌ ಎಸ್‌.ನಾಯಕ್‌ (19) ಮೃತ ದುರ್ದೈವಿ. ಶನಿವಾರ ಬೆಳಗ್ಗೆ ಕಾಲೇಜಿಗೆ ತೆರಳದೆ ಪಿಜಿಯಲ್ಲಿದ್ದ ಅತೀಶ್‌ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮಧ್ಯಾಹ್ನ ಮೃತನ ಸಹಪಾಠಿಗಳು ಪಿಜಿಗೆ ಮರಳಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.


ಫೇಸ್‌ಬುಕ್‌ ಗೆಳತಿಯರಿಗೆ ತಲಾಶ್‌: ಮೃತ ಅತೀಶ್‌, ಮಾರತ್‌ಹಳ್ಳಿ ಹತ್ತಿರದ ಖಾಸಗಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದಲ್ಲಿ ಪ್ರಥಮ ವರ್ಷದ ವ್ಯಾಸಂಗ ಮಾಡುತ್ತಿದ್ದ.


ಕಾಲೇಜು ಸಮೀಪದ ಗೋಪಾಲರೆಡ್ಡಿ ಎಂಬುವರಿಗೆ ಸೇರಿದ ಪಿಜಿಯಲ್ಲಿ ಆತ ನೆಲೆಸಿದ್ದ. ಕಾಲೇಜಿನಲ್ಲಿ ಸಭ್ಯ ವಿದ್ಯಾರ್ಥಿಯಾಗಿದ್ದ ಎಂದು ಮೃತನ ಉಪನ್ಯಾಸಕರು ಹಾಗೂ ಸಹಪಾಠಿಗಳು ಹೇಳಿಕೆ ನೀಡಿದ್ದಾರೆ. ಇತ್ತೀಚಿಗೆ ಅತೀಶ್‌ ವಿಪರೀತವಾಗಿ ಮೊಬೈಲ್‌ ಬಳಸುತ್ತಿದ್ದು, ಸದಾ ಸಾಮಾಜಿಕ ಜಾಲ ತಾಣಗಳಲ್ಲಿ ಸಕ್ರಿಯವಾಗಿದ್ದ ಸಂಗತಿ ಗೊತ್ತಾಗಿದೆ ಎಂದು ಪೊಲೀಸರು ಹೇಳಿದ್ದಾರೆ.


ಶುಕ್ರವಾರ ಸಹಪಾಠಿಗಳು ಕಾಲೇಜಿಗೆ ತೆರಳಿದ ಬಳಿಕ ಅತೀಶ್‌ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮಧ್ಯಾಹ್ನ ಕಾಲೇಜಿನಿಂದ ಮರಳಿದ ಮೃತನ ಗೆಳೆಯರು, ಕೊಠಡಿಗೆ ಬಾಗಿಲು ಬಡಿದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದರಿಂದ ಆತಂಕಗೊಂಡ ಅವರು ಕೂಡಲೇ ಪಿಜಿ ಮಾಲಿಕರಿಗೆ ವಿಷಯ ತಿಳಿಸಿದ್ದರು. ಆನಂತರ ಕೊಠಡಿ ಬಾಗಿಲು ಒಡೆದು ಒಳ ಪ್ರವೇಶಿಸಿದ ನೇಣಿನ ಕುಣಿಕೆಯಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.


ಕೆಲ ದಿನಗಳ ಹಿಂದೆ ಫೇಸ್‌ಬುಕ್‌ನಲ್ಲಿ ಆತನಿಗೆ ಸೋನಿಯಾ ಹಾಗೂ ಪ್ರಕೃತಿ ಎಂಬ ಹೆಸರಿನ ಯುವತಿಯರು ಪರಿಚಯವಾಗಿತ್ತು. ಬಳಿಕ ಅವರು ನಡುವೆ ಮೊಬೈಲ್‌ ಸಂಖ್ಯೆ ವಿನಿಮಯವಾಗಿ ಮಾತುಕತೆ ಶುರುವಾಗಿತ್ತು. ನಡು ರಾತ್ರಿವರೆಗೆ ಫೇಸ್‌ಬುಕ್‌ ಗೆಳೆಯತಿಯರ ಜತೆ ಅತೀಶ್‌ನ ಮೊಬೈಲ್‌ ಸಂಭಾಷಣೆ ಹಾಗೂ ಚಾಟಿಂಗ್‌ ನಡೆದಿವೆ. ಆದರೆ ಆ ಗೆಳೆತಿಯರನ್ನು ಆತ ಭೇಟಿಯಾಗಿದ್ದ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಹೀಗಾಗಿ ಸಿಡಿಆರ್‌ (ಮೊಬೈಲ್‌ ಕರೆಗಳ) ಅನ್ನು ಪರಿಶೀಲಿಸಿ ಮೃತನ ಅದೃಶ್ಯ ಸ್ನೇಹಿತೆಯರನ್ನು ವಿಚಾರಣೆ ಕರೆಯಲಾಗುತ್ತದೆ.


ಹಲವು ದಿನಗಳ ಹಿಂದೆಯೇ ಸೋನಿಯಾ ಹಾಗೂ ಪ್ರಕೃತ ಎಂಬ ಹುಡುಗಿಯರು ಹಿಂಸೆ ಕೊಡುತ್ತಿದ್ದಾರೆ. ದುಡ್ಡು ಕೊಡುವಂತೆ ಪೀಡಿಸುತ್ತಿದ್ದಾರೆ ಎಂದು ಪುತ್ರ ಹೇಳಿಕೊಂಡಿದ್ದ. ಆತನ ಸಾವಿಗೆ ಆ ಹುಡುಗಿಯರೇ ಕಾರಣವಾಗಿದ್ದಾರೆ ಎಂದು ಮೃತನ ಪೋಷಕರು ದೂರು ಕೊಟ್ಟಿದ್ದಾರೆ. ಅದರನ್ವಯ ದೂರಿನ ಮೇರೆಗೆ ಆತ್ಮಹತ್ಯೆಗೆ ಪ್ರಚೋದನೆ (ಐಪಿಸಿ 306)ರಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಮಾರತ್‌ಹಳ್ಳಿ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ.

ನಮ್ಮ ಸುದ್ಧಿ ವೀಕ್ಷಿಸಲು ಲಿಂಕ್ ಬಳಸಿ https://youtu.be/EkNJBR144Q8

ಬಿ.ಎಸ್. ಯಡಿಯೂರಪ್ಪಗೆ `ಬಿಜೆಪಿ ಹೈಕಮಾಂಡ್' ನೀಡಿದೆ ಈ ಖಡಕ್ ಸಂದೇಶ❗

ಜನಜಾಗೃತಿ ಸುದ್ಧಿವಾಹಿನಿ

ಬೆಂಗಳೂರು: ಆಪರೇಷನ್ ಕಮಲ ಆಡಿಯೋ ವಿವಾದ ಜೋರಾಗಿದ್ದು, ಬಿಜೆಪಿ ಹೈಕಮಾಂಡ್ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಖಡಕ್ ಸಂದೇಶವನ್ನು ರವಾನೆ ಮಾಡಿದೆ.


ಸದ್ಯಕ್ಕೆ ಆಪರೇಷನ್ ಕಮಲಕ್ಕೆ ಬ್ರೇಕ್ ಹಾಕಿ 2019 ರ ಲೋಕಸಭೆ ಚುನಾವಣೆಯತ್ತ ಗಮನ ಕೊಡಲು ಬಿ.ಎಸ್. ಯಡಿಯೂರಪ್ಪ ಸೇರಿದಂತೆ ರಾಜ್ಯ ಬಿಜೆಪಿ ನಾಯಕರಿಗೆ ಅಮಿತ್ ಶಾ ಸೂಚನೆ ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.


ರಾಜ್ಯದಲ್ಲಿ ದೋಸ್ತಿ ಸರ್ಕಾರವನ್ನು ಉರುಳಿಸಲು ಆಪರೇಷನ್ ಕಮಲ ನಡೆಸಿದ್ದಾರೆ ಎಂಬ ಆರೋಪ ಬೆನ್ನಲ್ಲೇ ಸಿಎಂ ಕುಮಾರಸ್ವಾಮಿ ಅವರು ಆಡಿಯೋ ಬಿಡುಗಡೆ ಮಾಡಿರುವುದು ರಾಷ್ಟ್ರಮಟ್ಟದಲ್ಲಿ ಬಿಜೆಪಿಗೆ ಹಿನ್ನೆಡೆಯಾಗುವಂತೆ ಮಾಡಿದೆ. ಆಡಿಯೋವನ್ನೇ ಬಿಜೆಪಿ ವಿರುದ್ಧ ಅಸ್ತ್ರವಾಗಿ ಪ್ರಯೋಗ ಮಾಡಿದ್ದ ಕಾಂಗ್ರೆಸ್ ಹೈಕಮಾಂಡ್ ದೆಹಲಿಯಲ್ಲಿ ಕೂಡ ಆಡಿಯೋ ಬಿಡುಗಡೆ ಮಾಡಿ ಬಿಜೆಪಿಯನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿತ್ತು.

ನಮ್ಮ ಸುದ್ಧಿ ಗಳನ್ನ ವೀಕ್ಷಿಸಲು ಲಿಂಕ್ ಬಳಸಿ https://youtu.be/EkNJBR144Q8

ಕೊನೆಗೂ ಬೆಂಗಳೂರಿಗೆ ಬಂದ ಅತೃಪ್ತ ಶಾಸಕರು : ಅಧಿವೇಶನಕ್ಕೆ ಹಾಜರ್❓

ಜನಜಾಗೃತಿ ಸುದ್ಧಿವಾಹಿನಿ


ಬೆಂಗಳೂರು: ಕಳೆದ ಕೆಲ ತಿಂಗಳಿನಿಂದ ಮುಂಬೈನಲ್ಲಿದ್ದ ಕಾಂಗ್ರೆಸ್ ನ ನಾಲ್ವರು ಅತೃಪ್ತಶಾಸಕರು ಬೆಂಗಳೂರಿಗೆ ಆಗಮಿಸಿದ್ದಾರೆ ಎಂದು ತಿಳಿದುಬಂದಿದೆ.


ಕಾಂಗ್ರೆಸ್ ವಿರುದ್ಧ ಅಸಮಾಧಾನಗೊಂಡಿದ್ದ ನಾಲ್ವರು ಅತೃಪ್ತ ಶಾಸಕರಾದ ರಮೇಶ್ ಜಾರಕಿಹೊಳಿ, ಉಮೇಶ್ ಜಾಧವ್, ಮಹೇಶ್ ಕಮಟಳ್ಳಿ ಮತ್ತು ಬಿ. ನಾಗೇಂದ್ರ ತಡರಾತ್ರಿ ಬೆಂಗಳೂರಿಗೆ ಆಗಮಿಸಿದ್ದಾರೆ ಎನ್ನಲಾಗುತ್ತಿದೆ.


ಇನ್ನು ಅತೃಪ್ತ ಶಾಸಕರೊಂದಿಗೆ ಸಂಪರ್ಕದಲ್ಲಿದ್ದ ಎಂಬ ವದಂತಿ ಇದ್ದ ಜೆಡಿಎಸ್ ಶಾಸಕ ನಾರಾಯಣ ಗೌಡ ಬೆಂಗಳೂರಿಗೆ ಆಗಮಿಸಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರಕ್ಕೆ ಸ್ನೇಹಿತರು, ಕುಟುಂಬ ಸದಸ್ಯರನ್ನು ನೋಡಲು ಹೋದಾಗ ಅಸ್ವಸ್ಥಗೊಂಡಿದ್ದೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಮುಂಬೈನಲ್ಲೇ ಚಿಕಿತ್ಸೆ ಪಡೆಯುತ್ತಿದೆ ಎಂದು ಹೇಳಿದ್ದಾರೆ.

ಬೆಂಗಳೂರಿಗೆ ಆಗಮಿಸಿರುವ ಅತೃಪ್ತ ಕೈ ಶಾಸಕರು ಇಂದು ನಡೆಯಲಿರುವ ಅಧಿವೇಶನಕ್ಕೆ ಹಾಜರಾಗ್ತಾರಾ ಇಲ್ಲವಾ ಎನ್ನವುದು ಇನ್ನೂ ಖಚಿತವಾಗಿಲ್ಲ. ಅನರ್ಹತೆಯ ಭೀತಿ ಎದುರಿಸುತ್ತಿರುವ ನಾಲ್ವರು ಅತೃಪ್ತರು ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ನಮ್ಮ ಸುದ್ಧಿ ವೀಕ್ಷಿಸಲು ಲಿಂಕ್ ಬಳಸಿ https://youtu.be/EkNJBR144Q8

Wednesday, February 6, 2019

🚨ರಾತ್ರೋ ರಾತ್ರಿ ರೌಡಿಗಳ ಚಳಿ ಬಿಡಿಸಿದ ಡಿಸಿಪಿ ರವಿ ಚೆನ್ನಣ್ಣನವರ್

ಜನಜಾಗೃತಿ ಸುದ್ಧಿವಾಹಿನಿ

Feb 07 / 2019


ಬೆಂಗಳೂರು: ದಕ್ಷಿಣ ವಿಭಾಗದ ಬಳಿಕ ಪಶ್ಚಿಮ ವಲಯದ ಪೊಲೀಸರು, ಮಂಗಳವಾರ ರಾತ್ರಿ ದಿಢೀರನೇ ರೌಡಿಗಳ ಮನೆಗಳ ಮೇಲೆ ದಾಳಿ ನಡೆಸಿ ಬಿಸಿ ಮುಟ್ಟಿಸಿದ್ದಾರೆ.


ಪಶ್ಚಿಮ ವಿಭಾಗದ ಸುಮಾರು 300 ಕ್ಕೂ ಹೆಚ್ಚಿನ ರೌಡಿ ಗಳನ್ನು ವಿಚಾರಣೆಗೊಳಪಡಿಸಿದ ಪೊಲೀಸರು, ಪಾತಕಿಗಳ ಆದಾಯ ಮೂಲದ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ.


ಅಲ್ಲದೆ, ಪ್ರತಿಯೊಬ್ಬರ ಮೊಬೈಲ್ ಸಂಖ್ಯೆ ಪಡೆದ ಪೊಲೀಸರು, ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದರೆ ಮುಲಾಜಿಲ್ಲದೆ ಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.


ರಾತ್ರಿ 1 ಗಂಟೆ ಬಳಿಕ ತಮ್ಮ ವಿಭಾಗದ ಎಸಿಪಿ ಮತ್ತು ಇನ್ಸ್‌ಪೆಕ್ಟರ್‌ಗಳ ಜತೆ ಡಿಸಿಪಿ ರವಿ.ಡಿ.ಚೆನ್ನಣ್ಣನವರ್ ಕಾರ್ಯಾಚರಣೆ ನಡೆಸಿದ್ದಾರೆ. ಕೆಲ ದಿನಗಳ ಹಿಂದಷ್ಟೆ ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ, ರೌಡಿಗಳಿಗೆ ಚುರುಕು ಮುಟ್ಟಿಸಿದ್ದರು.

ನಮ್ಮ ಸುದ್ಧಿ ವೀಕ್ಷಿಸಲು ಲಿಂಕ್ ಬಳಸಿ https://youtu.be/mwF7DPEYnZc