ಜನಜಾಗೃತಿ ಸುದ್ಧಿವಾಹಿನಿ
ನಾಸಿಕ್: ಮಹಾರಾಷ್ಟ್ರದ ನಾಸಿಕ್-ಪುಣೆ ಹೆದ್ದಾರಿಯಲ್ಲಿ ಟ್ರಕ್ಕೊಂದರ ಮೂಲಕ ಅಕ್ರಮವಾಗಿ ಸಾಗಿಸುತ್ತಿದ್ದ 26 ಲಕ್ಷ ರೂ. ಮೌಲ್ಯದ ಗುಟ್ಕಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪರಾರಿಯಾಗಿರುವ ಟ್ರಕ್ ಚಾಲಕನಿಗಾಗಿ ಶೋಧ ನಡೆಸಲಾಗುತ್ತಿದೆ.
ಖಚಿತ ಸುಳಿವಿನ ಮೇರೆಗೆ ಹೆದ್ದಾರಿಯ ನಾರಾಯಣ ಬಾಪು ನಗರ್ ಬಡಾವಣೆ ಬಳಿ ಪೊಲೀಸರು ಟ್ರಕ್ಕೊಂದನ್ನು ತಡೆದು ನಿಲ್ಲಿಸಿ ಪರಿಶೀಲಿಸಿದಾಗ ಅದರಲ್ಲಿ 68 ಚೀಲಗಳಲ್ಲಿ ಇದ್ದ ಅಕ್ರಮ ಗುಟ್ಕಾ ಪತ್ತೆಯಾಯಿತು ಎಂದು ಇನ್ಸ್‍ಪೆಕ್ಟರ್ ಪ್ರಭಾಕರ್ ರಾಯ್ಟೆ ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಗುಟ್ಕಾ ಮತ್ತು ಸುವಾಸಿತ ತಂಬಾಕು ತಯಾರಿಕೆ ಮತ್ತು ಮಾರಾಟದ ಮೇಲೆ ನಿಷೇಧ ವಿಧಿಸಲಾಗಿದೆ.
Visit our channel by link Youtube.com/c/janajagrutiTVNews
No comments:
Post a Comment