Thursday, December 27, 2018

ಮದ್ಯ ಕುಡಿಸಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ : ಹೋಟೆಲ್ ನೌಕರ ಬಂಧನ

          ಜನಜಾಗೃತಿ ಸುದ್ಧಿವಾಹಿನಿ


ಬೆಂಗಳೂರು: ಕೇರಳ ಮೂಲದ ವಿದ್ಯಾರ್ಥಿನಿಯೊಬ್ಬರಿಗೆ ಬಲವಂತವಾಗಿ ಮದ್ಯ ಕುಡಿಸಿ ಅತ್ಯಾಚಾರ ಎಸಗಿದ ಹೋಟೆಲ್​ ನೌಕರನನ್ನು ಅಶೋಕ ನಗರ ಪೊಲೀಸರು ಬಂಧಿಸಿದ್ದಾರೆ.


ಅಸ್ಸೋಂ ಮೂಲದ ಹಯಾನ್ ಡೈಮೇರಿ ಅಲಿಯಾಸ್ ಬಬುಲ್ ಬಂಧಿತ. ರಿಚ್ಮಂಡ್ ರಸ್ತೆಯ ಹೋಟೆಲ್‌ವೊಂದರಲ್ಲಿ ಹಯಾನ್​ ಕೆಲಸ ಮಾಡುತ್ತಿದ್ದ.


ಮುಂಬೈನ ಕಾಲೇಜಿನಲ್ಲಿ ಓದಿ, ಆರು ತಿಂಗಳ ಕಾಲ ಹೋಟೆಲ್​ನಲ್ಲಿ ತರಬೇತಿ ಪಡೆಯುತ್ತಿದ್ದ ವಿದ್ಯಾರ್ಥಿನಿಯನ್ನು ಹಯಾನ್​ ಪರಿಚಯ ಮಾಡಿಕೊಂಡಿದ್ದ. ಇತ್ತೀಚೆಗೆ ಆಸ್ಟಿನ್‌ ಟೌನ್‌ನ ತಮ್ಮ ಮನೆಯಲ್ಲಿ ನಡೆಯುತ್ತಿದ್ದ ಪಾರ್ಟಿಗೆ ಸಂತ್ರಸ್ತೆಯನ್ನೂ ಆಹ್ವಾನಿಸಿದ್ದ ಎನ್ನಲಾಗಿದೆ.


ಆ ದಿನ ರಾತ್ರಿ ನನಗೆ ಬಲವಂತವಾಗಿ ಮದ್ಯಪಾನ ಮಾಡಿಸಿ. ಅಲ್ಲೇ ಉಳಿದುಕೊಳ್ಳಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಿದ್ದ.


ನಾನು ನಿದ್ರೆ ಮಾಡುತ್ತಿದ್ದ ಸಮಯದಲ್ಲಿ ರಾತ್ರಿ 1.30ರ ಸುಮಾರಿಗೆ ಹಯಾನ್ ನನ್ನ ಕೊಠಡಿಗೆ ಬಂದಿದ್ದ. ಎಚ್ಚರಗೊಂಡು ಕಿರುಚಿದಾಗ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ. ನಂತರ ಅತ್ಯಾಚಾರವೆಸಗಿ ಮನೆಯಿಂದ ಹೊರಟು ಹೋದ ಎಂದು ಸಂತ್ರಸ್ತೆ ತಿಳಿಸಿದ್ದಾರೆ.


ನಂಬಿಕೆ ದ್ರೋಹವೆಸಗಿದ ಹಯಾನ್ ವಿರುದ್ಧ ಸೂಕ್ತ ಜರುಗಿಸಬೇಕು ಎಂದು ಸಂತ್ರಸ್ತೆ ದೂರಿನಲ್ಲಿ ಮನವಿ ಮಾಡಿದ್ದಾರೆ. ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡ ಪೊಲೀಸರು, ಆರೋಪಿಯನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.

visit Our Channel and subscribe now Youtube.com/c/janajagrutiTVNews

Follow us in facebook https://www.facebook.com/%E0%B2%9C%E0%B2%A8%E0%B2%9C%E0%B2%BE%E0%B2%97%E0%B3%83%E0%B2%A4%E0%B2%BF-%E0%B2%B8%E0%B3%81%E0%B2%A6%E0%B3%8D%E0%B2%A7%E0%B2%BF%E0%B2%B5%E0%B2%BE%E0%B2%B9%E0%B2%BF%E0%B2%A8%E0%B2%BF-474624809612940/

No comments:

Post a Comment