Thursday, February 28, 2019

ನಾಳೆ ವಿಂಗ್​ ಕಮಾಂಡರ್​​ ಬಿಡುಗಡೆ: ಪಾಕ್​ ಪ್ರಧಾನಿ ಇಮ್ರಾನ್ ಖಾನ್ ಘೋಷಣೆ

ಜನಜಾಗೃತಿ ಸುದ್ಧಿವಾಹಿನಿ

ಇಸ್ಲಮಾಬಾದ್​: ವಿಂಗ್​ ಕಮಾಂಡರ್​​ ಅವರನ್ನು ಸ್ನೇಹ ಸಂಬಂಧದ ಮೇಲೆ ನಾಳೆ ಬಿಡುಗಡೆ ಮಾಡುವುದಾಗಿ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಹೇಳಿದ್ದಾರೆ. ಇಂದು ಪಾಕ್​ ಸಂಸತ್ತನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಇಮ್ರಾನ್ ಖಾನ್, ನಮ್ಮ ಸೆರೆಯಲ್ಲಿರುವ ಭಾರತದ ಪೈಲಟ್ ವಿಂಗ್ ಕಮಾಂಡರ್ ಅವರನ್ನು ಶಾಂತಿ ದ್ಯೋತಕವಾಗಿ ಬಿಡುಗಡೆ ಮಾಡಲಾಗುತ್ತೆ ಅಂತಾ ತಿಳಿಸಿದ್ದಾರೆ.

ನಿನ್ನೆ ಭಾರತದ ಗಡಿ ಪ್ರವೇಶಿಸಿದ್ದ ಪಾಕ್​​ನ ಜೆಟ್​ ವಿಮಾನವನ್ನು ಭಾರತದ ವಿಮಾನಗಳು ಹೊಡೆದುರುಳಿಸಿದ್ದವು. ಈ ವೇಳೆ ಪಾಕ್​​ ದಾಳಿಗೆ ಸಿಲುಕಿದ್ದ ಮಿಗ್ 21 ವಿಮಾನವು ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ಹೋಗಿ ಬಿದ್ದಿತ್ತು. ಈ ವೇಳೆ, ಅಲ್ಲಿನ ಸೇನೆ ಅವರನ್ನು ಬಂಧಿಸಿ, ಅವರ ವೀಡಿಯೋ ಕೂಡ ಮಾಡಿತ್ತು. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಜಿನೇವಾ ಒಪ್ಪಂದವನ್ನು ಉಲ್ಲಂಘಿಸಿದೆ ಅನ್ನೋ ಬಲವಾದ ಆರೋಪ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೇಳಿ ಬಂದಿತ್ತು. ಇನ್ನೊಂದೆಡೆ ಭಾರತ ಕೂಡ, ಪಾಕಿಸ್ತಾನದ ಯಾವುದೇ ತಂತ್ರಗಳಿಗೂ ಮಣಿಯದೇ ಜಿನೇವಾ ಒಪ್ಪಂದದಂತೆ ನಮ್ಮ ವಿಂಗ್ ಕಮಾಂಡರ್ ಅವರನ್ನು ಬಿಡುಗಡೆ ಮಾಡಬೇಕು ಅಂತಾ ಬಲವಾಗಿ ಆಗ್ರಹಿಸಿತ್ತು. ಈ ಹಿನ್ನೆಲೆಯಲ್ಲಿ, ಕೊನೆಗೂ ಒಂದೆಡೆ ಭಾರತದ ಬಿಗಿ ಕ್ರಮ, ಇನ್ನೊಂದೆಡೆ ಅಂತಾರಾಷ್ಟ್ರೀಯ ಒತ್ತಡಕ್ಕೆ ಕೊನೆಗೂ ಮಣಿದಿರುವ ಪಾಕಿಸ್ತಾನ ವಿಂಗ್ ಕಮಾಂಡರ್ ಅವರನ್ನು ಬಿಡುಗಡೆ ಮಾಡುವುದಾಗಿ ಇಂದು ಘೋಷಣೆ

ನಮ್ಮ ಸುದ್ಧಿ ವೀಕ್ಷಿಸಲು ಲಿಂಕ್ ಬಳಸಿ https://youtu.be/jWz-MKDOEW4

No comments:

Post a Comment