Friday, February 15, 2019

ವ್ಯಾಟ್ಸ್​ಆ್ಯಪ್​ನಲ್ಲಿ ಹೊಸ ಆಯ್ಕೆ: ಇನ್ಮುಂದೆ ನಿಮ್ಮ ಒಪ್ಪಿಗೆ ಇಲ್ಲದೆ ಗ್ರೂಪ್​ಗೆ ಆ್ಯಡ್ ಮಾಡುವಂತಿಲ್ಲ!

ಜನಜಾಗೃತಿ ಸುದ್ಧಿವಾಹಿನಿ


ನೀವು ವ್ಯಾಟ್ಸ್​ಆ್ಯಪ್ ಬಳಸುತ್ತಿದ್ದರೆ, ನಿಮಗೊಂದು ಗುಡ್​ ನ್ಯೂಸ್​ ಇದೆ. ನಿಮ್ಮ ಅನುಮತಿ ಇಲ್ಲದೆ ವ್ಯಾಟ್ಸ್​ಆ್ಯಪ್​ ಗ್ರೂಪ್​ಗಳಿಗೆ ಸೇರಿಸುವ ಆಯ್ಕೆಗೆ ಶೀಘ್ರದಲ್ಲೇ ಕಡಿವಾಣ ಬೀಳಲಿದೆ. ಸಾಮಾನ್ಯವಾಗಿ ನಿಮ್ಮ ನಂಬರ್ ಇದ್ದವರು ಯಾವುದೇ ವ್ಯಾಟ್ಸ್​ಆ್ಯಪ್​ ಗ್ರೂಪ್​ಗೂ ನಿಮ್ಮನ್ನು ಸೇರಿಸಬಹುದಿತ್ತು. ಇಲ್ಲಿ ನಿಮ್ಮ ಒಪ್ಪಿಗೆ ಪಡೆಯಬೇಕಾಗಿರಲಿಲ್ಲ. ಆದರೀಗ ವ್ಯಾಟ್ಸ್​ಆ್ಯಪ್​ ಪರಿಚಯಿಸಲಿರುವ ಹೊಸ ಅಪ್​ಡೇಟ್​ನಲ್ಲಿ ನಿಮ್ಮ ನಂಬರ್​ ಅನ್ನು ಗ್ರೂಪ್​ಗೆ ಸೇರಿಸಬೇಕಿದ್ದರೆ ನಿಮ್ಮ ಒಪ್ಪಿಗೆ ಇರಬೇಕಾಗುತ್ತದೆ. 


ಇದಕ್ಕಾಗಿ 'ಗ್ರೂಪ್​ ಇನ್​ವಿಟೇಷನ್' ಎಂಬ ಆಯ್ಕೆಯನ್ನು ಶೀಘ್ರದಲ್ಲೇ ವಾಟ್ಸ್​ಆ್ಯಪ್​ ಒದಗಿಸಲಿದ್ದು, ಈ ಅಪ್ಶನ್ ಬಳಸಿ ಇನ್ನು ಮುಂದೆ ಬಳಕೆದಾರರು ತಮ್ಮ ಇಚ್ಚೆಗೆ ಅನುಸಾರ ಗ್ರೂಪ್​ಗಳಿಗೆ ಸೇರಬಹುದಾಗಿದೆ. ವಾಟ್ಸ್​ಆ್ಯಪ್​ ಬೇಟಾ ಇನ್​ಫೋ ಮಾಹಿತಿ ಪ್ರಕಾರ, ಈಗಾಗಲೇ ಹೊಸ ಫೀಚರ್​ ಅನ್ನು ಐಒಎಸ್​ ಬೇಟಾ ಬಳಕೆದಾರರಿಗೆ ನೀಡಲಾಗಿದೆ. ಶೀಘ್ರದಲ್ಲೇ ಹೊಸ ಅಪ್​ಡೇಟ್​ ಆ್ಯಂಡ್ರಾಯ್ಡ್​ ಬಳಕೆದಾರಿಗೂ ಲಭ್ಯವಾಗಲಿದೆ. ಈ ನೂತನ ಫೀಚರ್​ ಅನ್ನು ಅಭಿವೃದ್ಧಿ ಪಡಿಸಲಾಗುತ್ತಿದ್ದು, ಹೀಗಾಗಿ ಮೊದಲ ಹಂತದಲ್ಲಿ ಎಲ್ಲಾ ಬಳಕೆದಾರಿರಿಗೆ ಈ ಅಪ್​ಡೇಟ್​ ಆಯ್ಕೆ ಲಭ್ಯವಾಗುವುದಿಲ್ಲ ಎಂದು ಕೂಡ ವಾಟ್ಸ್​ಆ್ಯಪ್​ ಬೇಟಾ ಇನ್ಫೋ ತಿಳಿಸಿದೆ. 


ಹೊಸ ಆಯ್ಕೆ ಹೇಗೆ?

 

 ವ್ಯಾಟ್ಸ್​ಆ್ಯಪ್​ನಲ್ಲಿ ನೀಡಲಾಗುವ ಹೊಸ ಆಯ್ಕೆಯನ್ನು ಸೆಟ್ಟಿಂಗ್ಸ್​ನಲ್ಲಿ ಪಡೆಯಬಹುದಾಗಿದೆ. setting > account > privacy settings > last seen, profile photo, about, status and groups ಆಯ್ಕೆ ಕಾಣಿಸಲಿದೆ. ಇಲ್ಲಿ ನೀವು ಗ್ರೂಪ್​ ಆಯ್ಕೆಯನ್ನು ಕ್ಲಿಕ್ ಮಾಡಿದರೆ Everyone, My contact and Nobody ಎಂಬ ಆಯ್ಕೆಗಳು ಲಭ್ಯವಾಗಲಿದೆ. ಇದರಲ್ಲಿ ನಿಮಗೆ ಬೇಕಾದ ಆಯ್ಕೆಯನ್ನು ಆರಿಸಿಕೊಳ್ಳಬಹುದು.

ನಮ್ಮ ಸುದ್ಧಿ ವೀಕ್ಷಿಸಲು ಲಿಂಕ್ ಬಳಸಿ https://youtu.be/sPi9H6mM2hE

No comments:

Post a Comment