Tuesday, February 19, 2019

🍷ತರಗತಿಯಲ್ಲಿಯೇ ಮದ್ಯ ಸೇವಿಸಿದ ಹೈಸ್ಕೂಲ್ ವಿದ್ಯಾರ್ಥಿನಿಯರು!

ಜನಜಾಗೃತಿ ಸುದ್ಧಿವಾಹಿನಿ
ತಂಪು ಪಾನೀಯದ ಬಾಟಲಿಯಲ್ಲಿ ಲಿಕ್ಕರ್‌ ಬೆರಿಸಿ ತಂದಿದ್ದ ವಿದ್ಯಾರ್ಥಿನಿಯರು, ಶಿಕ್ಷಕರು ಪಾಠ ಮಾಡುತ್ತಿರುವ ನಡುವೆಯೇ ಗುಟುಕರಿಸಿದ್ದರು.
ಹೈದಾರಾಬಾದ್‌: ಒಂಬತ್ತನೇ ತರಗತಿ ವಿದ್ಯಾರ್ಥಿನಿಯರಿಬ್ಬರು ತರಗತಿ ನಡೆಯುತ್ತಿರುವಾಗಲೇ ಮದ್ಯ ಸೇವನೆ ಮಾಡಿ ಸಿಕ್ಕಿಬಿದ್ದ ಆಘಾತಕಾರಿ ಘಟನೆ ಆಂಧ್ರಪ್ರದೇಶದ ಸರಕಾರಿ ಶಾಲೆಯೊಂದರಲ್ಲಿ ಮಂಗಳವಾರ ನಡೆದಿದೆ.

ತಂಪು ಪಾನೀಯದ ಬಾಟಲಿಯಲ್ಲಿ ಲಿಕ್ಕರ್‌ ಬೆರಿಸಿ ತಂದಿದ್ದ ವಿದ್ಯಾರ್ಥಿನಿಯರು, ಶಿಕ್ಷಕರು ಪಾಠ ಮಾಡುತ್ತಿರುವ ನಡುವೆಯೇ ಗುಟುಕರಿಸಿದ್ದರು. ನಿಧಾನವಾಗಿ ಆ ವಿದ್ಯಾರ್ಥಿನಿಯರು ಕುಳಿತಲ್ಲಿಯೇ ಜೋಲಿ ಹೊಡೆದು, ಯದ್ವಾತದ್ವ ಮಾತಾಡಲು ಶುರು ಮಾಡಿದಾಗ ಅನುಮಾನಗೊಂಡ ಶಿಕ್ಷಕರು, ಪಾನೀಯ ಬಾಟಲನ್ನು ಕಿತ್ತುಕೊಂಡು ಮೂಸಿದಾಗ ಮದ್ಯದ ವಾಸನೆ ರಾಚಿತ್ತು. ತಕ್ಷಣ ಆ ವಿದ್ಯಾರ್ಥಿನಿಯರಿಬ್ಬರನ್ನು ಶಾಲೆಯಿಂದ ಅಮಾನತುಗೊಳಿಸಲಾಯಿತು. ಬಳಿಕ ಈ ಕುರಿತು ವಿವರ ನೀಡಿದ ಮುಖ್ಯೋಪಾಧ್ಯಾಯ ಬಿಟ್ಟು ಸುರೇಶ್‌ ಕುಮಾರ್‌, ''ಇದು ವಿದ್ಯಾರ್ಥಿನಿಯರ ಮದ್ಯಪಾನದ ಮೊದಲ ಪ್ರಕರಣವೇನು ಅಲ್ಲ. ಈ ಹಿಂದೆಯೂ ಇಂತಹ ಘಟನೆಗಳು ನಡೆದಿವೆ,'' ಎಂದಿದ್ದಾರೆ.

''ಈಗ ಸಿಕ್ಕಿ ಬಿದ್ದಿರುವ ವಿದ್ಯಾರ್ಥಿನಿಯರು ತಮ್ಮ ಕೆಟ್ಟ ಹವ್ಯಾಸಕ್ಕೆ ತಂದೆಯರನ್ನು ಹೊಣೆ ಮಾಡಿದ್ದಾರೆ. ನಿತ್ಯ ಕುಡಿದು ಮನೆಗೆ ಬರುತ್ತಿದ್ದ ತಮ್ಮ ತಂದೆ, ಉಳಿಕೆ ಮದ್ಯದ ಬಾಟಲುಗಳನ್ನು ಮನೆಯಲ್ಲಿ ಇರಿಸುತ್ತಿದ್ದರು. ಯಾರೂ ಇಲ್ಲದಾಗ ಅದರ ರುಚಿ ನೋಡಿ, ಕೊನೆಗೆ ಅದು ಹವ್ಯಾಸವಾಗಿ ಬೆಳೆಯಿತೆಂದು ವಿವರಿಸಿದ್ದಾರೆ,'' ಎಂದು ಸುರೇಶ್‌ ಕುಮಾರ್‌ ತಿಳಿಸಿದ್ದಾರೆ.
ನಮ್ಮ ಸುದ್ಧಿ ನೋಡಲು ಲಿಂಕ್ ಬಳಸಿ https://youtu.be/Yaz2RMFjMZE

3 comments: