ಜನಜಾಗೃತಿ ಸುದ್ಧಿವಾಹಿನಿ
15 jan 2019
ಬೆಳಗಾವಿ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕಾಲುವೆಗೆ ಉರುಳಿ ಬಿದ್ದ ಪರಿಣಾಮ ಕಾರಿನಲ್ಲಿದ್ದ ಒಂದೇ ಕುಟುಂಬದ ಐವರು ಜಲಸಮಾಧಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿಯ ಕಡಬಿ ಗ್ರಾಮದ ಬಳಿ ನಡೆದಿದೆ.
ಸೋಮವಾರ ರಾತ್ರಿ ಘಟಪ್ರಭಾ ಎಡದಂಡೆ ನಾಲೆಗೆ ಕಾರು ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದ್ದು, ಐವರು ಸಾವನ್ನಪ್ಪಿದ್ದಾರೆ. ಮೃತರನ್ನು ಪಕ್ಕೀರವ್ವ ಪೂಜಾರಿ (29), ಹನುಮಂತ ಪೂಜಾರಿ (60), ಲಗಮಣ್ಣ ಪೂಜಾರಿ (38), ಪಾರವ್ವ ಪೂಜಾರಿ (50), ಲಕ್ಷ್ಮೀ ಪೂಜಾರಿ (40) ಎಂದು ಗುರುತಿಸಲಾಗಿದೆ.ಮೃತರೆಲ್ಲ ಕಡಬಿ ಗ್ರಾಮದವರು ಎಂದು ತಿಳಿದುಬಂದಿದೆ. ಘಟನೆ ಸಂಬಂಧ ಮುರುಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಮ್ಮ ಚಾನಲ್ ಗೆ ಭೇಟಿ ನೀಡಿ Subscribe ಮಾಡಿ Youtube.com/c/janajagrutiTVNews
No comments:
Post a Comment