ಜನಜಾಗೃತಿ ಸುದ್ಧಿವಾಹಿನಿ
15 jan 2019
ಬೆಂಗಳೂರು: ಕಾಂಗ್ರೆಸ್ ಕೈತಪ್ಪಿ ಹೋಗಿರುವ ಐದು ಜನ ಶಾಸಕರು ಯಾವ ಸಮಯದಲ್ಲಾದರೂ ರಾಜೀನಾಮೆ ಕೊಡಬಹುದು. ಆದರೆ ಅವರ ರಾಜೀನಾಮೆ ತಡೆಯಲು ಕಾಂಗ್ರೆಸ್ ಒಂದು ಮಾಸ್ಟರ್ ಪ್ಲಾನ್ ಸಿದ್ದಮಾಡಿಕೊಂಡಿದೆ.
ಕಾಂಗ್ರೆಸ್‌ನ ಐದು ಶಾಸಕರು ಈಗಾಗಲೇ ಕರ್ನಾಟಕದ ಗಡಿ ದಾಟಿ ಮುಂಬೈನಲ್ಲಿ ವಾಸ್ತವ್ಯ ಹೂಡಿದ್ದಾರೆ. ಅವರು ಇಂದು ಅಥವಾ ನಾಳೆ ಸ್ಪೀಕರ್ ರಮೇಶ್ ಕುಮಾರ್‌ಗೆ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ ಆದರೆ ಅವರು ರಾಜೀನಾಮೆ ನೀಡದಂತೆ ತಡೆಯಲು ಕಾಂಗ್ರೆಸ್ ತಂತ್ರವೊಂದನ್ನು ಹೂಡಲಿದೆ.
ಶಾಸಕರು ವಿಧಾನಸಭೆ ಸಭಾಧ್ಯಕ್ಷರಿಗೆ ರಾಜೀನಾಮೆ ಸಲ್ಲಿಸಲು ಅವಕಾಶವೇ ನೀಡದಂತೆ ಮಾಡಲು, ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಪ್ರವಾಸಕ್ಕೆ ಕಳಿಸಿಬಿಡುವ ಆಲೋಚನೆಯೂ ಕಾಂಗ್ರೆಸ್ ಮುಖಂಡರು ಮಾಡಿದ್ದಾರೆ.
ರಮೇಶ್ ಕುಮಾರ್ ಅವರನ್ನು ಪ್ರವಾಸಕ್ಕೆ ಕಳುಹಿಸಿದರೆ, ಅವರು ಮರಳುವವರೆಗೆ ತಮ್ಮ ರಾಜೀನಾಮೆ ಅಂಗೀಕಾರಗೊಳ್ಳುವುದಿಲ್ಲ.
ಇದು ಕಾಂಗ್ರೆಸ್‌ಗೆ ಸಮಯವಾಕಾಶ ದೊರಕಿಸಿಕೊಡುತ್ತದೆ. ಆ ಸಮಯದಲ್ಲಿ ಅತೃಪ್ತ ಶಾಸಕರ ಮನವೊಲಿಸಲು ಅಥವಾ ಬಿಜೆಪಿಯ ಶಾಸಕರನ್ನು ತಮ್ಮತ್ತ ಸೆಳೆದುಕೊಳ್ಳುವ ಯತ್ನ ಕಾಂಗ್ರೆಸ್ ಮಾಡಬಹುದಾಗಿದೆ.
ಸಭಾಧ್ಯಕ್ಷರು ಪಕ್ಷಾತೀತವಾಗಿರಬೇಕು
ರಮೇಶ್ ಕುಮಾರ್ ಒಪ್ಪುತ್ತಾರೆಯೇ?ಈ ಬಗ್ಗೆ ಇಂದಿನ ಕಾಂಗ್ರೆಸ್ ಸಭೆಯಲ್ಲಿ ಚರ್ಚಿಸಲಾಗಿದೆ ಎಂಬ ಮಾಹಿತಿ ಇದೆ. ಸಭಾಧ್ಯಕ್ಷರು ಪಕ್ಷಾತೀತವಾಗಿ ಕಾರ್ಯ ನಿರ್ವಹಿಸಬೇಕು ಎಂಬ ನಿಯಮ ಇದೆ ಹಾಗಾಗಿ, ಈ ರಾಜಕೀಯ ಆಟಕ್ಕೆ ರಮೇಶ್ ಕುಮಾರ್ ಒಪ್ಪಿಕೊಳ್ಳುತ್ತಾರೆಯೇ ಎಂಬ ಅನುಮಾನವೂ ಇದೆ.
ರಮೇಶ್ ಕುಮಾರ್ ಅನ್ನು ಪ್ರವಾಸಕ್ಕೆ ಕಳುಹಿಸುವ ತಂತ್ರ?
ಸಭಾಧ್ಯಕ್ಷರಿಗೆ ರಾಜೀನಾಮೆ ಸಲ್ಲಿಸಬೇಕುನಿಯಮದ ಪ್ರಕಾರ ಶಾಸಕರು ರಾಜೀನಾಮೆಯನ್ನು ಸಭಾಧ್ಯಕ್ಷರಿಗೆ ಸಲ್ಲಿಸಬೇಕು. ಸಭಾಧ್ಯಕ್ಷರು ಅಂಕಿತ ಹಾಕುವವರೆಗೂ ರಾಜೀನಾಮೆ ಅಂಗೀಕಾರಗೊಳ್ಳುವುದಿಲ್ಲ. ಇದರ ಲಾಭವನ್ನು ಕಾಂಗ್ರೆಸ್ ಪಡೆದುಕೊಳ್ಳಲು ರಮೇಶ್ ಕುಮಾರ್ ಅವರನ್ನು ಪ್ರವಾಸಕ್ಕೆ ಕಳುಹಿಸುವ ಯತ್ನ ಮಾಡಲಿದೆ ಎನ್ನಲಾಗಿದೆ.
ರಾಜೀನಾಮೆ ಸಲ್ಲಿಸುವ ಸಾಧ್ಯತೆ ಐದು ಶಾಸಕರು ಮುಂಬೈನಲ್ಲಿರಮೇಶ್ ಜಾರಕಿಹೊಳಿ, ಉಮೇಶ್ ಜಾದವ್, ಶ್ರೀಮಂತ ಪಾಟೀಲ್ ಸೇರಿ ಇನ್ನೂ ಕೆಲವರು ಈಗಾಗಲೇ ಮುಂಬೈನಲ್ಲಿದ್ದಾರೆ ವಾಸ್ತವ್ಯ ಹೂಡಿದ್ದಾರೆ ಎನ್ನಲಾಗಿದೆ. ಇವರು ಬಿಜೆಪಿ ಸಂಪರ್ಕದಲ್ಲಿದ್ದು, ಯಾವಾಗ ಬೇಕಾದರೂ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ.
ವಾಪಸ್ ಕರೆತರಲು ತಂತ್ರ
ಮುಂಬೈಗೆ ತೆರಳಲಿರುವ ಡಿಕೆಶಿ
ಅತೃಪ್ತ ಶಾಸಕರ ಮನವೊಲಿಸಲು ಸಚಿವ ಡಿ.ಕೆ.ಶಿವಕುಮಾರ್ ಅವರು ಮುಂಬೈಗೆ ತೆರಳಲಿದ್ದಾರೆ. ಸಮ್ಮೇಳನವೊಂದರಲ್ಲಿ ಭಾಗವಹಿಸುವ ಉದ್ದೇಶದಿಂದ ಔರಂಗಾಬಾದ್‌ಗೆ ಹೋಗುತ್ತಿದ್ದೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರಾದರೂ ಅವರು ಮುಂಬೈನಲ್ಲಿ ತಂಗಿರುವ ತಮ್ಮ ಪಕ್ಷದ ಶಾಸಕರನ್ನು ವಾಪಸ್ ಕರೆತರಲು ಮುಂಬೈಗೆ ಹೋಗುತ್ತಿದ್ದಾರೆ ಎನ್ನಲಾಗಿದೆ.
ನಮ್ಮ ಸುದ್ಧಿಗಳನ್ನು ವೀಕ್ಷಿಸಲು ಕ್ಲಿಕ್ ಮಾಡಿ https://youtu.be/YrKYQ4HlZeA
No comments:
Post a Comment