ಜನಜಾಗೃತಿ ಸುದ್ಧಿವಾಹಿನಿ
02 jan 2019
ಬಂಟ್ವಾಳ: ನಕಲಿ ಪರ್ಮಿಟ್ ಸೃಷ್ಟಿಸಿ ಅಕ್ರಮವಾಗಿ ಮರಳು ಸಾಗಾಟ ಮಾಡುವ ಜಾಲವನ್ನು ಬಂಟ್ವಾಳ ಗ್ರಾಮಾಂತರ ಎಸ್ಐ ಪ್ರಸನ್ನ ಪತ್ತೆ ಹಚ್ಚಿ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಘಟನೆ ನಡೆದಿದೆ. ಟಿಪ್ಪರ್ ಲಾರಿ ಚಾಲಕ ಅಬೂಬಕ್ಕರ್ ಸಿದ್ದಿಕ್ ಮತ್ತು ಅಬ್ದುಲ್ ಖಾದರ್ ಬಂಧಿತ ಆರೋಪಿಗಳು.
ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಲಾರಿ ಮಾಲಕ ಸೇರಿದಂತೆ ಆಶ್ರಪ್, ಜಾಬೀರ್ ಈ ಪ್ರಕರಣದಲ್ಲಿ ಆರೋಪಿ ಗಳಾಗುವ ಸಾಧ್ಯತೆ ಗಳಿವೆ ಎನ್ನಲಾಗಿದೆ. ವಿಚಾರಣೆಯ ವೇಳೆ ಇನ್ನಷ್ಟು ಮಾಹಿತಿಗಳು ಲಭ್ಯವಾಗುವ ಸಾಧ್ಯತೆ ಗಳಿದ್ದು ಇನ್ನಷ್ಟು ಆರೋಪಿ ಗಳ ಬಂಧನವಾಗುವ ಸಾಧ್ಯತೆಗಳಿದೆ.
ಬಂಟ್ವಾಳ ಗ್ರಾಮಾಂತರ ಪೋಲೀಸರು ಫರಂಗಿಪೇಟೆ ಜಂಕ್ಸನ್ ನಲ್ಲಿ ವಾಹನ ತಪಾಸಣೆ ಮಾಡುವ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ.
ಇನ್ನು ಅಕ್ರಮವಾಗಿ ಮರಳು ಸಾಗಾಟ ಮಾಡುವ ದಂಧೆ ಹಲವು ಸಮಯಗಳಿಂದ ಇವರು ಮಾಡುತ್ತಿದ್ದಾರೆ ಎನ್ನಲಾಗಿದ್ದು , ಇದರ ಹಿಂದೆ ರಾಜಕೀಯ ವ್ಯಕ್ತಿಯೋರ್ವರ ಕೈವಾಡ ಇದೆ ಎನ್ನಲಾಗಿದೆ.
ಈ ಬಗ್ಗೆ ಸೂಕ್ತ ತನಿಖೆ ನಡೆಸಿ ನಕಲಿ ದಾಖಲೆ ಪತ್ರಗಳನ್ನು ಮಾಡುವ ಜಾಗ ಮತ್ತು ಬಳಕೆ ಮಾಡುತ್ತಿದ್ದ ಸಾಮಾಗ್ರಿಗಳನ್ನು ಪೋಲೀಸರು ಇನ್ನಷ್ಟೇ ವಶಕ್ಕೆ ಪಡೆಯಬೇಕಾಗಿದೆ.
ನಮ್ಮ ಚಾನಲ್ ಗೆ ಭೇಟಿ ನೀಡಿ ಬೆಂಬಲಿಸಲು subscribe ಮಾಡಿ Youtube.com/c/janajagrutiTVNews
ಫೇಸ್ಬುಕ್ ನಲ್ಲಿ ಬೆಂಬಲಿಸಲು ಕ್ಲಿಕ್ ಮಾಡಿ https://www.facebook.com/%E0%B2%9C%E0%B2%A8%E0%B2%9C%E0%B2%BE%E0%B2%97%E0%B3%83%E0%B2%A4%E0%B2%BF-%E0%B2%B8%E0%B3%81%E0%B2%A6%E0%B3%8D%E0%B2%A7%E0%B2%BF%E0%B2%B5%E0%B2%BE%E0%B2%B9%E0%B2%BF%E0%B2%A8%E0%B2%BF-474624809612940/
No comments:
Post a Comment