ಜನಜಾಗೃತಿ ಸುದ್ಧಿವಾಹಿನಿ
04 jan 2019
ಮೈಸೂರು: ಗ್ರಾಮಾಂತರ ಭಾಗದ ಪಿಲ್ಲಳ್ಳಿ, ವರಕೂಡು ಮತ್ತು ಮೂಡಲ ಹಳ್ಳಿ ಪ್ರದೇಶದಲ್ಲಿ ಹುಚ್ಚು ನಾಯಿಯೊಂದು ಸಿಕ್ಕ ಸಿಕ್ಕವರಿಗೆ ಕಡಿದು ಆತಂಕಕ್ಕೆ ಕಾರಣವಾಗಿದೆ.
15 ಕ್ಕೂ ಹೆಚ್ಚು ಜನರು ಹುಚ್ಚು ನಾಯಿಯಿಂದ ದಾಳಿಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಡಿತಕ್ಕೊಳಗಾದವರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆ, ಜಿಲ್ಲಾ ಸಾಂಕ್ರಾಮಿಕ ರೋಗಿಗಳ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಹುಚ್ಚು ನಾಯಿ ನಾಗರಿಕರಿಗೆ ಮಾತ್ರವಲ್ಲದೆ ಇತರ ಹಲವು ಜಾನುವಾರೂಗಳಿಗೂ ಕಡಿದಿರುವ ಬಗ್ಗೆ ತಿಳಿದು ಬಂದಿದ್ದು, ಗ್ರಾಮಾದಲ್ಲಿ ಆತಂಕಕಾರಿ ವಾತಾವರಣ ನಿರ್ಮಾಣವಾಗಿದೆ.
ನಮ್ಮ ಚಾನಲ್ ಗೆ ಭೇಟಿ ನೀಡಿ https://youtu.be/sSiNFL-BgBc
No comments:
Post a Comment