Monday, January 21, 2019

ಸಿದ್ದಗಂಗಾ ಮಠದ ಸ್ವಾಮೀಜಿ ವಿಧಿವಶ ಶಾಲಾ-ಕಾಲೇಜುಗಳಿಗೆ ರಜೆ ಫೋಷಣೆ

ಜನಜಾಗೃತಿ ಸುದ್ಧಿವಾಹಿನಿ

ತುಮಕೂರು: ನಡೆದಾಡುವ ದೇವರೆಂದೆ ಖ್ಯಾತರಾದ ಡಾ. ಶಿವಕುಮಾರ ಸ್ವಾಮೀಜಿಗಳು ಇಂದು ವಿಧಿವಶರಾಗಿದ್ದಾರೆ. ಇಂದು ಬೆಳಗ್ಗೆ 11:44ಕ್ಕೆ ಸ್ವಾಮೀಜಿಗಳು ಕೊನೆಯುಸಿರೆಳೆದರೆಂದು ತಿಳಿದುಬಂದಿದೆ. ಶ್ರೀಗಳಿಗೆ 111 ವರ್ಷ ವಯಸ್ಸಾಗಿದ್ದು,  ಅಸಂಖ್ಯಾತ ಭಕ್ತಾದಿಗಳನ್ನು ಅಗಲಿದ್ದಾರೆ. ಸಿದ್ದಗಂಗಾ ಮಠದ ಶಾಲಾ-ಕಾಲೇಜುಗಳಿಗೆ ರಜೆ ಫೋಷಣೆ ಮಾಡಲಾಗಿದೆ.


ಏಪ್ರಿಲ್​ 1, 1907 ರಂದು ಜನಿಸಿದ ಸಿದ್ದಗಂಗಾ ಶ್ರೀಗಳು ಇತ್ತೀಚೆಗೆ ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದರು. ಜೊತೆಗೆ ವಯೋಸಹಜವಾಗಿಯೂ ಅವರ ಆರೋಗ್ಯ ಕ್ಷೀಣಿಸಿತ್ತು. ಶ್ರೀಗಳನ್ನು ನಗರದ ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ತಮ್ಮ ಕೊನೆಯ ಕ್ಷಣಗಳನ್ನು ಮಠದಲ್ಲೇ ಕಳೆಯಬೇಕು ಎಂಬ ಅವರ ಒತ್ತಾಸೆಯ ಮೇರೆಗೆ ಶ್ರೀಗಳನ್ನು ಹಳೆಯ ಮಠಕ್ಕೆ ಕರೆತರಲಾಗಿತ್ತು.


ಶ್ವಾಸಕೋಶದ ಸೋಂಕಿನ ಸಂಬಂಧ ಚೆನ್ನೈನ ರೇಲಾ ಆಸ್ಪತ್ರೆಯಲ್ಲಿ ಶ್ರೀಗಳಿಗೆ ಕಳೆದ ತಿಂಗಳು ಸರ್ಜರಿ ಮಾಡಲಾಗಿತ್ತು. ಸರ್ಜರಿ ಬಳಿಕ ಶ್ರೀಗಳು ಬಹು ಬೇಗನೇ ಚೇತರಿಸಿಕೊಂಡಿದ್ದರು. ಆದ್ರೆ ಸೋಂಕು ಮಾತ್ರ ನಿವಾರಣೆಯಾಗಿರಲಿಲ್ಲ. ಅಲ್ಲದೇ ಶ್ರೀಗಳಿಗೆ ಉಸಿರಾಟದ ತೊಂದರೆ ಇತ್ತು. ನಾಳೆ ಸಂಜೆ 4.30ಕ್ಕೆ ಸ್ವಾಮೀಜಿಗಳ ಅಂತಿಮ ವಿಧಿವಿಧಾನ ನೆರವೇರಿಸಲಾಗುತ್ತದೆ.

ನಮ್ಮ ಸುದ್ಧಿ ವೀಕ್ಷಿಸಲು ಲಿಂಕ್ ಬಳಸಿ https://youtu.be/QWnSxVvFs7I

No comments:

Post a Comment