Monday, January 21, 2019

ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು : ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯಾಧ್ಯಕ್ಷ

ಜನಜಾಗೃತಿ ಸುದ್ಧಿವಾಹಿನಿ

ಸಿದ್ದಗಂಗಾ ಶ್ರೀಗಳ ನಿಧನಕ್ಕೆ ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯಾಧ್ಯಕ್ಷ ಮುಹಮ್ಮದ್ ಅತರುಲ್ಲಾ ಷರೀಫ್ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.

ಸಿದ್ದಗಂಗಾ ಶ್ರೀಗಳು ಓರ್ವ ವ್ಯಕ್ತಿ ಎಂಬುದಕ್ಕಿಂತ ಒಂದು ಶಕ್ತಿಯಾಗಿ ಬದುಕಿದವರು. ಅನೇಕಾರು ಶಾಲಾ ಕಾಲೇಜುಗಳನ್ನು ಸ್ಥಾಪಿಸಿ ಸಮಾಜಕ್ಕೆ ಅರ್ಪಿಸಿದವರು. ಧರ್ಮಸ್ಥಳದಲ್ಲಿ ನಡೆದ ಸರ್ವ ಧರ್ಮ ಸಮ್ಮೇಳನದ ಅಧ್ಯಕ್ಷ ಸ್ಥಾನ ವಹಿಸಿಕೊಂಡಿರುವುದೇ ಧಾರ್ಮಿಕ ಸೌಹಾರ್ದತೆಯ ಮೇಲೆ ಅವರಿಗಿದ್ದ ಬದ್ಧತೆಗೆ ಸಾಕ್ಷಿ. ಅವರು ಜಾತಿ ಧರ್ಮದ ಗೋಡೆಯನ್ನು ಮೀರಿ ಬೆಳೆದವರು. ಸಮಾಜವನ್ನು ಜನರ ಕೂಟ ಎಂದು ನೋಡಿರುವರೇ ಹೊರತು ಹಿಂದೂ ಮುಸ್ಲಿಂ ಆಗಿ ಒಮ್ಮೆಯೂ ಭಾವಿಸಿಲ್ಲ. ಈ ಗುಣವೇ ಅವರನ್ನು ಅನನ್ಯಗೊಳಿಸಿದೆ. ಅವರ ನಿಧನವು ಈ ಸಮಾಜಕ್ಕೆ ಬಹುದೊಡ್ಡ ನಷ್ಟ. ಅವರು ಪ್ರತಿಪಾದಿಸಿದ ಸೌಹಾರ್ದ ಸಮಾಜ ಕಾರ್ಯರೂಪಕ್ಕೆ ಬರಲಿ ಮತ್ತು ಅವರ ಪರಿವಾರ, ಅಭಿಮಾನಿ ವರ್ಗಕ್ಕೆ ಅವರ ಅನುಪಸ್ಥಿತಿಯನ್ನು ಸಹಿಸುವ ಸಾಮರ್ಥ್ಯವನ್ನು ದೇವನು ದಯಪಾಲಿಸಲಿ ಎಂದರು.


ಅವರೊಂದು ಸರ್ಕಾರದಂತೆ ಕಾರ್ಯನಿರ್ವಹಿಸಿದರು. ಅನ್ನದಾನ ಮತ್ತು ವಿದ್ಯಾದಾನದ ಮೂಲಕ ಲಕ್ಷಾಂತರ ಮಂದಿ ಹೊಟ್ಟೆಯ ಹಸಿವು ಮತ್ತು ಮೆದುಳಿನ ಹಸಿವನ್ನು ತಣಿಸಿದರು. ಆದ್ದರಿಂದ ಭಾರತ ಸರಕಾರವು ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಬೇಕೆಂದು ಮುಹಮ್ಮದ್ ಅತರುಲ್ಲಾ ಷರೀಫ್ ವಿನಂತಿಸಿದ್ದಾರೆ.

ನಮ್ಮ ಸುದ್ಧಿ ವೀಕ್ಷಿಸಲು ಲಿಂಕ್ ಬಳಸಿ https://youtu.be/jcz6XKhO-GY

No comments:

Post a Comment